ಕನ್ನಡ ಸುದ್ದಿ  /  Sports  /  Cricket News Is There A Reserve Day For Ipl Final What Happens If Rain Washes Out Csk Vs Gt Summit Clash On Sunday Prs

CSK vs GT Final: ನಿಲ್ಲುತ್ತಿಲ್ಲ ಮಳೆ, ಫೈನಲ್​ ಪಂದ್ಯ ವಾಶ್​ಔಟ್​ ಆದರೆ ಮರುಪಂದ್ಯ ಇದೆಯೇ? ಐಪಿಎಲ್​ ನಿಯಮ ಏನು ಹೇಳುತ್ತದೆ?

ಮಳೆಯಿಂದ ಪಂದ್ಯ ರದ್ದಾದರೆ ಮುಂದೇನು ಎಂಬ ಪ್ರಶ್ನೆ ಕಾಡುವುದು ಸಹಜ. ಮಳೆ ಬಂದರೆ ಮುಂದಿನ ಕ್ರಮ ಏನು ಎಂಬುದಕ್ಕೆ ಸಂಬಂಧಿಸಿ ಬಿಸಿಸಿಐ ಕೆಲವು ನಿಯಮಗಳನ್ನು ರೂಪಿಸಿದೆ. ಹಾಗಾದರೆ ಫೈನಲ್​ ಪಂದ್ಯದ ಭವಿಷ್ಯ ಏನು? ಈ ಮುಂದೆ ನೋಡೋಣ.

ನರೇಂದ್ರ ಮೋದಿ ಕ್ರೀಡಾಂಗಣ
ನರೇಂದ್ರ ಮೋದಿ ಕ್ರೀಡಾಂಗಣ

16ನೇ ಆವೃತ್ತಿಯ ಐಪಿಎಲ್​ ಫೈನಲ್​ ಪಂದ್ಯಕ್ಕೆ ಮಳೆ ಅಡಚಣೆಯಾಗಿದೆ. ಅಹ್ಮದಾಬಾದ್​ನಲ್ಲಿ ನಡೆಯುತ್ತಿರುವ ಪ್ರಶಸ್ತಿ ಸುತ್ತಿನ ಹೋರಾಟದಲ್ಲಿ ಜೋರು ಮಳೆಯಾಗುತ್ತಿದೆ. ತುಂಬಾ ಭಿನ್ನ ವಿಭಿನ್ನವಾಗಿ 16ನೇ ಆವೃತ್ತಿಯ ಐಪಿಎಲ್​​ಗೆ ಅದ್ಧೂರಿಯಾಗಿ ಬೀಳ್ಕೊಡುಗೆ ನೀಡಲು ಬಿಸಿಸಿಐ ನಿರ್ಧರಿಸಿತ್ತು. ಹಾಗಾಗಿ ಸಮಾರೋಪ ಸಮಾರಂಭದಲ್ಲಿ ಪ್ರದರ್ಶನ ನೀಡಲು ಖ್ಯಾತ ರ್ಯಾಪರ್​​ಗಳನ್ನೇ ಕರೆಸಿತ್ತು. ಇದೀಗ ಟಾಸ್​​ ಕೂಡ ವಿಳಂಬವಾಗಿದೆ.

ಅಹ್ಮದಾಬಾದ್​​ನಲ್ಲಿ ಮಳೆ ಬರುವ ಕುರಿತು ಮೊದಲೇ ಮಾಹಿತಿ ಇತ್ತು. ಸದ್ಯ ಮಳೆಯಿಂದ ಮೈದಾನದಲ್ಲಿ ನೆರೆದಿದ್ದ ಒಂದು ಲಕ್ಷಕ್ಕೂ ಅಧಿಕ ಪ್ರೇಕ್ಷಕರಿಗೆ ಭಾರಿ ನಿರಾಸೆಯಾಗಿದೆ. ಸದ್ಯ ಮಳೆಯಿಂದ ಪಂದ್ಯ ರದ್ದಾದರೆ ಮುಂದೇನು ಎಂಬ ಪ್ರಶ್ನೆ ಕಾಡುವುದು ಸಹಜ. ಮಳೆ ಬಂದರೆ ಮುಂದಿನ ಕ್ರಮ ಏನು ಎಂಬುದಕ್ಕೆ ಸಂಬಂಧಿಸಿ ಬಿಸಿಸಿಐ ಕೆಲವು ನಿಯಮಗಳನ್ನು ರೂಪಿಸಿದೆ. ಹಾಗಾದರೆ ಫೈನಲ್​ ಪಂದ್ಯದ ಭವಿಷ್ಯ ಏನು? ಈ ಮುಂದೆ ನೋಡೋಣ.

ನಿಯಮಗಳು ಏನು ಹೇಳುತ್ತವೆ?

ಮೊದಲಿಗೆ ಮಳೆ ನಿಲ್ಲುವವರೆಗೂ ಕಾಯಲಾಗುತ್ತದೆ. ಬೇಗನೇ ಮಳೆ ನಿಂತರೆ ಯಾವುದೇ ಓವರ್​ ಕಡಿತಗೊಳಿಸಲ್ಲ. ಒಂದು ವೇಳೆ ಮಳೆ ತುಂಬಾ ಹೊತ್ತು ಬಂದು ನಿಂತರೆ ಆಗ ಪಂದ್ಯದಲ್ಲಿ ಓವರ್​​ಗಳ ಕಡಿತ ಮಾಡಲಾಗುತ್ತದೆ. ಒಂದೊಮ್ಮೆ ಇದಕ್ಕೂ ಮಳೆ ಅವಕಾಶ ನೀಡದಿದ್ದರೆ, ಆಗ ರಾತ್ರಿ 1.20 ವರೆಗೆ ಕಾದು ಸೂಪರ್​ ಓವರ್​ ಮೂಲಕ ಪಂದ್ಯದ ಫಲಿತಾಂಶಕ್ಕೆ ಮೊರೆ ಹೋಗಲಾಗುತ್ತದೆ. ಒಂದು ವೇಳೆ ಇದು ಸಹ ಸಾಧ್ಯವಾಗದೇ ಇದ್ದರೆ ಮೀಸಲು ದಿನವಾದ 29ನೇ ತಾರೀಖಿಗೆ ಪಂದ್ಯ ಮುಂದೂಡಿಕೆ ಮಾಡಲಾಗುತ್ತದೆ.

ಒಂದು ವೇಳೆ ಭಾನುವಾರ ಟಾಸ್​ ಗೆದ್ದು ಪಂದ್ಯ ನಡೆದಿದ್ದರೆ, ಮೀಸಲು ದಿನ ಹೊಸದಾಗಿ ಟಾಸ್​ ಪ್ರಕ್ರಿಯೆ ಮೂಲಕ ಪಂದ್ಯ ಆರಂಭವಾಗಲಿದೆ. ಮತ್ತೊಂದು ನಿಯಮದ ಪ್ರಕಾರ ಭಾನುವಾರ ಒಂದು ತಂಡ ಬ್ಯಾಟಿಂಗ್​ ನಡೆಸುತ್ತಿದ್ದಾಗ ಮಳೆ ಅಡ್ಡಿಪಡಿಸಿದರೆ ಅಂತಿಮ ನಿಗದಿತ ಸಮಯದಲ್ಲೂ ಪಂದ್ಯ ರದ್ದಾದರೆ, ಆಗ ರಿಸರ್ವ್​ ದಿನದಂದು ಹಿಂದಿನ ದಿನ ಎಷ್ಟು ಓವರ್​ಗೆ ಪಂದ್ಯ ನಿಂತಿತ್ತೋ ಅಲ್ಲಿಂದಲೇ ಪಂದ್ಯ ಮರು ಆರಂಭವಾಗಲಿದೆ.

ಮೀಸಲು ದಿನವೂ ಮಳೆ ಬಂದರೆ?

ಒಂದು ವೇಳೆ ಮೀಸಲು ದಿನವೂ ಮಳೆಯಿಂದ ಸಂಪೂರ್ಣ ಪಂದ್ಯ ನಡೆಯದೇ ರದ್ದುಗೊಂಡರೆ ಆಗ ಲೀಗ್​ ಹಂತದಲ್ಲಿ ಅಗ್ರಸ್ಥಾನ ಪಡೆದ ತಂಡವನ್ನು ಚಾಂಪಿಯನ್​ ಎಂದು ಘೋಷಿಸಲಾಗುತ್ತದೆ. ಈ ಘಟನೆ ಸಂಭವಿಸಿದರೆ ಸತತ 2ನೇ ಬಾರಿಗೆ ಗುಜರಾತ್​ ತಂಡವು ಐಪಿಎಲ್​ ಟ್ರೋಫಿಗೆ ಮುತ್ತಿಕ್ಕಲಿದೆ. ಲೀಗ್​ ಹಂತದಲ್ಲಿ ಗುಜರಾತ್ 10 ಪಂದ್ಯ ಗೆದ್ದು 20 ಅಂಕ ಗಳಿಸಿ ಟಾಪ್​ನಲ್ಲಿದೆ.

ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್​, ಗುಜರಾತ್​ ಟೈಟಾನ್ಸ್​ ವಿರುದ್ಧ ಗೆದ್ದು ನೇರವಾಗಿ ಫೈನಲ್​ ಪ್ರವೇಶಿಸಿತ್ತು. ಸೋತ ಗುಜರಾತ್​, 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​ ವಿರುದ್ಧ ಗೆದ್ದು ಸತತ 2ನೇ ಸಲ ಫೈನಲ್​ಗೇರಿದೆ. ಎಲಿಮಿನೇಟರ್​ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್​ ವಿರುದ್ಧ ಗೆದ್ದ ಮುಂಬೈ 2ನೇ ಕ್ವಾಲಿಫೈಯರ್​ಗೆ ಅರ್ಹತೆ ಪಡೆದುಕೊಂಡಿತ್ತು.

ಚೆನ್ನೈ ಸೂಪರ್‌ ಕಿಂಗ್ಸ್‌ ಸಂಭಾವ್ಯ ತಂಡ

ಡೆವೋನ್ ಕಾನ್ವೇ, ಋತುರಾಜ್ ಗಾಯಕ್ವಾಡ್, ಅಜಿಂಕ್ಯ ರಹಾನೆ, ಅಂಬಟಿ ರಾಯುಡು, ಮೊಯೀನ್ ಅಲಿ, ಶಿವಂ ದುಬೆ, ರವೀಂದ್ರ ಜಡೇಜಾ, ಎಂಎಸ್ ಧೋನಿ (ನಾಯಕ & ವಿಕೆಟ್​ ಕೀಪರ್), ದೀಪಕ್ ಚಹರ್, ತುಷಾರ್ ದೇಶಪಾಂಡೆ, ಮಹೇಶ್ ತೀಕ್ಷಣ.

ಇಂಪ್ಯಾಕ್ಟ್ ಪ್ಲೇಯರ್​; ಮತೀಷ ಪತಿರಾಣ

ಗುಜರಾತ್‌ ಟೈಟನ್ಸ್ ಸಂಭಾವ್ಯ ತಂಡ

ಶುಭಮನ್ ಗಿಲ್, ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಸಾಯಿ ಸುದರ್ಶನ್, ಹಾರ್ದಿಕ್ ಪಾಂಡ್ಯ (ನಾಯಕ), ವಿಜಯ್ ಶಂಕರ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯ, ಮೋಹಿತ್ ಶರ್ಮಾ, ರಶೀದ್ ಖಾನ್, ಮೊಹಮ್ಮದ್ ಶಮಿ, ನೂರ್ ಅಹ್ಮದ್.