Kannada News  /  Sports  /  Cricket News Kambli Had An Even Better Start Kapil Warns Shubman Gill Says Won T Put Him In Sachin Kohli S Bracket Prs

Kapil Dev on Gill: ಸಚಿನ್​ಗಿಂತಲೂ ಕಾಂಬ್ಳಿಗೇ ದೊಡ್ಡ ಹೆಸರು ಸಿಕ್ಕಿತ್ತು; ಕೊನೆಗೆ ಆಗಿದ್ದೇ ಬೇರೆ; ಶುಭ್ಮನ್​​ಗೆ ಎಚ್ಚರಿಸಿದ ಕಪಿಲ್ ದೇವ್

ಶುಭ್ಮನ್​​ ಗಿಲ್​ ಅವರಿಗೆ ಎಚ್ಚರಿಕೆಯ ಸಲಹೆ ನೀಡಿದ ಕಪಿಲ್ ದೇವ್
ಶುಭ್ಮನ್​​ ಗಿಲ್​ ಅವರಿಗೆ ಎಚ್ಚರಿಕೆಯ ಸಲಹೆ ನೀಡಿದ ಕಪಿಲ್ ದೇವ್

Kapil Dev on Shubman Gill: ಗುಜರಾತ್ ಟೈಟಾನ್ಸ್ ಆರಂಭಿಕ ಆಟಗಾರ ಶುಭ್ಮನ್​ ಗಿಲ್​ ಅವರನ್ನು ಶ್ರೇಷ್ಠ ಎಂದು ಪರಿಗಣಿಸಲು ಇನ್ನೂ ಒಂದೆರಡು ಋತುಗಳಲ್ಲಿ ಅದ್ಭುತ ಪ್ರದರ್ಶನ ನೀಡಬೇಕು ಎಂದು ಭಾರತ ಕ್ರಿಕೆಟ್​ ತಂಡದ ಮಾಜಿ ನಾಯಕ ಕಪಿಲ್​ ದೇವ್ ಹೇಳಿದ್ದಾರೆ.

ಟೀಮ್​ ಇಂಡಿಯಾದ ಹಾಗೂ ಗುಜರಾತ್​ ಟೈಟಾನ್ಸ್ ತಂಡದ ಆರಂಭಿಕ ಆಟಗಾರ ಶುಭ್​ಮನ್​ ಗಿಲ್​ (Shubman Gill) ಅವರಿಗೆ 1983ರ ಏಕದಿನ ವಿಶ್ವಕಪ್​ ವಿಜೇತ ತಂಡದ ನಾಯಕ, ಲೆಜೆಂಡ್​ ಕಪಿಲ್​​ ದೇವ್ (Kapil Dev)​ ಎಚ್ಚರಿಯ ಸಂದೇಶವನ್ನು ನೀಡಿದ್ದಾರೆ. ಗಿಲ್​ ಅವರನ್ನು ವಿರಾಟ್ ಕೊಹ್ಲಿ ಮತ್ತು ಸಚಿನ್​ ತೆಂಡೂಲ್ಕರ್​ಗೆ ಹೋಲಿಕೆ ಮಾಡುತ್ತಿರುವ ಬೆನ್ನಲ್ಲೇ ಕಪಿಲ್​ ದೇವ್,​ ವಿನೋದ್​ ಕಾಂಬ್ಳಿ (Vinod Kambli) ಕೂಡ ಸಚಿನ್ ತೆಂಡೂಲ್ಕರ್​​​​​ಗಿಂತಲೂ (Sachin Tendulkar) ಉತ್ತಮ ಆರಂಭ ಪಡೆದಿದ್ದರು. ಬಳಿಕ ಆಗಿದ್ದೇ ಬೇರೆ ಎಂದು ಗಿಲ್​ಗೆ ಎಚ್ಚರಿಕೆ ಕೊಟ್ಟಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಐಪಿಎಲ್​ನಲ್ಲಿ ಅಬ್ಬರ

ಪ್ರಸಕ್ತ ಐಪಿಎಲ್​ನಲ್ಲಿ ಶುಭ್ಮನ್​ ಗಿಲ್​, ಬೆಂಕಿ - ಬಿರುಗಾಳಿ ಆಟದ ಮೂಲಕ ಗಮನ ಸೆಳೆಯುತ್ತಿದ್ದಾರೆ. ಕಳೆದ 4 ಪಂದ್ಯಗಳಲ್ಲಿ ಭರ್ಜರಿ 3 ಶತಕ ಸಿಡಿಸಿ ಆರೇಂಜ್​ ಕ್ಯಾಪ್​​ ಒಡೆಯನಾಗಿದ್ದಾರೆ. ಅದ್ಭುತ, ಅಮೋಘ ಆಟದ ಮೂಲಕ ಗುಜರಾತ್​ ತಂಡದ ಬ್ಯಾಟಿಂಗ್​ ಶಕ್ತಿಯಾಗಿರುವ ಗಿಲ್​ ಬಗ್ಗೆಯೇ ಹೆಚ್ಚು ಚರ್ಚೆಯಾಗುತ್ತಿದೆ. ಕ್ರಿಕೆಟ್​ನ ದೇವರು ಸಚಿನ್ ತೆಂಡೂಲ್ಕರ್​, ಕ್ರಿಕೆಟ್​ನ ಕಿಂಗ್​ ವಿರಾಟ್​ ಕೊಹ್ಲಿ (Virat Kohli) ಈಗ ಕ್ರಿಕೆಟ್​ನ ಪ್ರಿನ್ಸ್​ ಶುಭ್ಮನ್​ ಗಿಲ್​ ಎನ್ನುತ್ತಿದ್ದಾರೆ ಫ್ಯಾನ್ಸ್​, ಮಾಜಿ ಕ್ರಿಕೆಟರ್ಸ್​.

ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲೂ ಮಿಂಚು

ಕೇವಲ ಐಪಿಎಲ್​ ಮಾತ್ರವಲ್ಲ ಅಂತಾರಾಷ್ಟ್ರೀಯ ಕ್ರಿಕೆಟ್​​​ನಲ್ಲೂ ರನ್​ ಮಳೆ ಹರಿಸುತ್ತಿದ್ದಾರೆ. ಬ್ಯಾಟಿಂಗ್​ನಲ್ಲಿ ಧೂಳೆಬ್ಬಿಸುತ್ತಿದ್ದಾರೆ. ಶತಕಗಳ ಮೇಲೆ ಶತಕ ಸಿಡಿಸಿ, ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿದ್ದಾರೆ. ಏಕದಿನ, ಟೆಸ್ಟ್​, ಟಿ20 ಕ್ರಿಕೆಟ್​ನಲ್ಲಿ ಭರ್ಜರಿ ಫಾರ್ಮ್​ನಲ್ಲಿರುವ ಶುಭ್ಮನ್​, ಮೂರು ಫಾರ್ಮೆಟ್​ನಲ್ಲೂ ರಾಜಕುಮಾರನಾಗಿ ಮೆರೆದಾಡುತ್ತಿದ್ದಾರೆ. ಗಿಲ್​ ಅವರನ್ನು ಹೊಗಳಿ ಅಟ್ಟಕ್ಕೇರಿಸುತ್ತಿರುವ ಬೆನ್ನಲ್ಲೇ ಕಪಿಲ್​ ದೇವ್ ಎಚ್ಚರದ ಹೆಜ್ಜೆಗಳನ್ನಿಡುವುದು ಅಗತ್ಯ ಎಂದಿದ್ದಾರೆ.

ಸಚಿನ್-ಕೊಹ್ಲಿಗೆ ಹೋಲಿಕೆ ಸರಿಯಲ್ಲ

23 ವರ್ಷದ ಶುಭ್ಮನ್ ರನ್‌ಗಳ ಹರಿವು ಸೃಷ್ಟಿಸುತ್ತಿದ್ದಂತೆ ಅಭಿಮಾನಿಗಳು ಸಚಿನ್ ಮತ್ತು ಕೊಹ್ಲಿಗೆ ಹೋಲಿಕೆ ಮಾಡುತ್ತಿದ್ದಾರೆ. ಆದರೆ, ಗಿಲ್ ಇನ್ನೂ ಆ ಹಂತಕ್ಕೆ ಬೆಳೆದಿಲ್ಲ ಎಂದು ಭಾರತದ ಮಾಜಿ ನಾಯಕ ಕಪಿಲ್ ಹೇಳಿದ್ದಾರೆ. ಆರಂಭಿಕ ಆಟಗಾರನನ್ನು ಶ್ರೇಷ್ಠ ಎಂದು ಪರಿಗಣಿಸಲು ಇನ್ನೂ ಒಂದೆರಡು ಋತುಗಳಲ್ಲಿ ಅದ್ಭುತ ಪ್ರದರ್ಶನ ನೀಡಬೇಕು ಎಂದು ಹೇಳಿದ್ದಾರೆ.

ದಿಗ್ಗಜರ ಸಾಲಿಗೆ ನಿಲ್ಲಿಸಲು ಸಾಧ್ಯವಿಲ್ಲ

ಗಿಲ್ ತಮ್ಮ ಸ್ಟ್ರೋಕ್‌ ಪ್ಲೇಯಿಂದ ಹೆಚ್ಚು ಪ್ರಭಾವಿತರಾಗಿದ್ದರೂ ಸುನಿಲ್ ಗವಾಸ್ಕರ್ (Sunil Gavaskar), ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ ಅವರ ಪಟ್ಟಿಗೆ ಸೇರಿಸಲು ಹಿಂದೇಟು ಹಾಕಿರುವ ಕಪಿಲ್​ ದೇವ್​, ಇನ್ನೂ ಎರಡು ಆವೃತ್ತಿಗಳನ್ನು ಆಡಿದರೆ ಮಾತ್ರ ಪರಿಗಣನೆಗೆ ಒಳಗಾಗುತ್ತಾರೆ. ಸುನಿಲ್ ಗವಾಸ್ಕರ್, ಸಚಿನ್ ತೆಂಡೂಲ್ಕರ್ ಬಂದರು, ನಂತರ ರಾಹುಲ್ ದ್ರಾವಿಡ್ (Rahul Dravid), ವಿವಿಎಸ್ ಲಕ್ಷ್ಮಣ್ (VVS Laxman), ವೀರೇಂದ್ರ ಸೆಹ್ವಾಗ್ (Virender Sehwag), ಕೊಹ್ಲಿ ಅವರ ಹೆಜ್ಜೆಗಳನ್ನು ಪ್ರಸ್ತುತ ಗಿಲ್ ಅನುಸರಿಸುತ್ತಿದ್ದಾರೆ. ಹಾಗಂತ ಅವರ ಸಾಲಿನಲ್ಲಿ ನಿಲ್ಲಿಸಲು ಬಯಸುವುದಿಲ್ಲ ಎಂದಿದ್ದಾರೆ.

ಅವರು ಖಂಡಿತವಾಗಿಯೂ ಪ್ರತಿಭೆಯನ್ನು ಹೊಂದಿದ್ದಾರೆ. ಆದರೆ ಸದ್ಯದ ಮಟ್ಟಿಗೆ ದೊಡ್ಡ ಹೋಲಿಕೆ ಮಾಡಲು ಇಷ್ಟಪಡುವುದಿಲ್ಲ. ಒಂದೆರಡು ಸೀಸನ್​ಗಳ ಬಳಿಕ ಬೌಲರ್​ಗಳು ನಿಮ್ಮ ಸಾಮರ್ಥ್ಯ ಮತ್ತು ದೌರ್ಬಲ್ಯ ತಿಳಿಯುತ್ತಾರೆ. ಮೂರು ಅಥವಾ ನಾಲ್ಕು ಉತ್ತಮ ಸೀನಸ್​ಗಳನ್ನು ಹೊಂದಿದ್ದರೆ ಆಗ ನಿಜವಾಗಿಯೂ ಶ್ರೇಷ್ಠ ಎಂದು ನಾವು ಹೇಳಬಹುದು ಎಂದು ಕಪಿಲ್ ಎಬಿಪಿ ನ್ಯೂಸ್‌ಗೆ ತಿಳಿಸಿದ್ದಾರೆ. ಜೊತೆಗೆ ಗಿಲ್​ಗೆ ವಿನೋದ್​ ಕಾಂಬ್ಳಿ ಅವರ ಉದಾಹರಣೆ ಕೂಡ ನೀಡಿದ್ದಾರೆ.

ಕಾಂಬ್ಳಿ ಉದಾಹರಣೆ ಕೊಟ್ಟ ಕಪಿಲ್​

ಗಿಲ್ ಅವರಿಗೆ ನಿಜವಾದ ಪರೀಕ್ಷೆ ಮುಂದಿದೆ. ಅವರು ಎಷ್ಟು ದಿನ ಹೀಗೆ ಮುಂದುವರಿಯುತ್ತಾರೆ ಎಂಬುದನ್ನು ನಾವು ನೋಡಬೇಕು. ಸೂರ್ಯ ಕುಮಾರ್​​ ಯಾದವ್​ ಅವರನ್ನು ಅದ್ಭುತ ಆಟದ ನಂತರವೂ ಆಸ್ಟ್ರೇಲಿಯಾ ವಿರುದ್ಧ ಮೂರು ಬಾರಿ ಗೋಲ್ಡನ್​ ಡಕ್​ ಆಗಿದ್ದರು. ಮತ್ತೆ ಬಲವಾಗಿ ಕಂಬ್ಯಾಕ್​ ಮಾಡಿದರು. ಹಾಗಾಗಿ ನೀವು ಮುಂದಿನ ಸೀಸನ್​ನಲ್ಲಿ ಯಾವ ರೀತಿ ಪ್ರದರ್ಶನ ನೀಡುತ್ತೀರಿ ಎಂಬುದು ಕುತೂಹಲ ಮೂಡಿಸಿದೆ ಎಂದಿದ್ದಾರೆ ಕಪಿಲ್​ ದೇವ್​.

ನನ್ನನ್ನು ತಪ್ಪಾಗಿ ಅರ್ಥಮಾಡಿಕೊಳ್ಳಬೇಡಿ. ಅವರ ಸಾಮರ್ಥ್ಯಗಳಲ್ಲಿ ನನಗೆ ಯಾವುದೇ ಸಂದೇಹವಿಲ್ಲ. ಆದರೆ ಹೋಲಿಕೆಗಳನ್ನು ಮಾಡದೆ, ನಾನು ಒಬ್ಬ ಕ್ರಿಕೆಟಿಗನ ಬಗ್ಗೆ ಮಾತನಾಡಲು ಬಯಸುತ್ತೇನೆ. ವಿನೋದ್ ಕಾಂಬ್ಳಿ ಅವರು ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ ಸಚನ್​ಗಿಂತಲೂ ಉತ್ತಮ ಆರಂಭ ಪಡೆದಿದ್ದರು. ಆದರೆ ಕೊನೆಗೆ ಆಗಿದ್ದೇ ಬೇರೆ. ಈ ದೊಡ್ಡ ಪ್ರಶ್ನೆ ಗಿಲ್‌ ಮುಂದಿದ್ದು, ಅತಿ ಚಿಕ್ಕ ವಯಸ್ಸಿನಲ್ಲಿ ಅವರು ಪಡೆಯುತ್ತಿರುವ ಖ್ಯಾತಿಯನ್ನು ನಿಭಾಯಿಸಬಲ್ಲರೇ ಎಂದು ಪ್ರಶ್ನಿಸಿದ್ದಾರೆ.