ಕನ್ನಡ ಸುದ್ದಿ  /  ಕ್ರೀಡೆ  /  Justin Langer: ನೂತನ ಹೆಡ್ ಕೋಚ್ ಆಗಿ ಜಸ್ಟಿನ್ ಲ್ಯಾಂಗರ್ ನೇಮಿಸಿದ ಲಖನೌ ಸೂಪರ್ ಜೈಂಟ್ಸ್

Justin Langer: ನೂತನ ಹೆಡ್ ಕೋಚ್ ಆಗಿ ಜಸ್ಟಿನ್ ಲ್ಯಾಂಗರ್ ನೇಮಿಸಿದ ಲಖನೌ ಸೂಪರ್ ಜೈಂಟ್ಸ್

ಆಸ್ಟ್ರೇಲಿಯಾದ ಮುಖ್ಯ ಕೋಚ್‌ ಆಗಿ ಸೇವೆ ಸಲ್ಲಿಸಿದ್ದ‌ ಜಸ್ಟಿನ್ ಲ್ಯಾಂಗರ್, ಐಪಿಎಲ್‌ನ ಮುಂದಿನ ಋತುವಿನಲ್ಲಿ ಎಲ್‌ಎಸ್‌ಜಿ ಕೋಚ್‌ ಆಗಲಿದ್ದಾರೆ.

ಜಸ್ಟಿನ್ ಲ್ಯಾಂಗರ್
ಜಸ್ಟಿನ್ ಲ್ಯಾಂಗರ್ (REUTERS)

ಲಖನೌ ಸೂಪರ್ ಜೈಂಟ್ಸ್ (Lucknow Super Giants) ಫ್ರಾಂಚೈಸಿಯು ಜಸ್ಟಿನ್ ಲ್ಯಾಂಗರ್ (Justin Langer) ಅವರನ್ನು ನೂತನ ಮುಖ್ಯ ಕೋಚ್ ಆಗಿ ನೇಮಕ ಮಾಡಿದೆ. ಈ ಬಗ್ಗೆ ಖುದ್ದು ಐಪಿಎಲ್‌ ಫ್ರಾಂಚೈಸಿಯು ದೃಢಪಡಿಸಿದೆ. ಆಸ್ಟ್ರೇಲಿಯಾ ಕ್ರಿಕೆಟ್‌ ತಂಡದ ಮುಖ್ಯ ತರಬೇತುದಾರರಾಗಿಯೂ ಸೇವೆ ಸಲ್ಲಿಸಿರುವ ಆಸ್ಟ್ರೇಲಿಯಾ ತಂಡದ ಮಾಜಿ ಆರಂಭಿಕ ಆಟಗಾರ, ಐಪಿಎಲ್‌ನ ಮುಂದಿನ ಸೀಸನ್‌ನಲ್ಲಿ ಎಲ್‌ಎಸ್‌ಜಿ ತಂಡದ ಕೋಚ್‌ ಆಗಿ ಕಾರ್ಯನಿರ್ವಹಿಸಲಿದ್ದಾರೆ.

ಟ್ರೆಂಡಿಂಗ್​ ಸುದ್ದಿ

“ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಹಾಗೂ ಕೋಚ್ ಜಸ್ಟಿನ್ ಲ್ಯಾಂಗರ್ ಅವರನ್ನು ಲಖನೌ ಸೂಪರ್ ಜೈಂಟ್ಸ್ ಫ್ರಾಂಚೈಸಿಯು ತಮ್ಮ ತಂಡದ ಮುಖ್ಯ ಕೋಚ್ ಆಗಿ ನೇಮಿಸಿದೆ. ಆಂಡಿ ಫ್ಲವರ್‌ ಅವರ ಎರಡು ವರ್ಷಗಳ ಒಪ್ಪಂದವು ಅಂತ್ಯಗೊಳ್ಳುತ್ತಿದ್ದಂತೆ, ಲಖನೌ ಸೂಪರ್‌ಜೈಂಟ್ಸ್ ಆಂಡಿ ಫ್ಲವರ್ ಅವರ ಕೊಡುಗೆಗೆ ಧನ್ಯವಾದಗಳನ್ನು ಅರ್ಪಿಸುತ್ತದೆ” ಎಂದು ಎಲ್‌ಎಸ್‌ಜಿ ಪ್ರಕಟಣೆಯಲ್ಲಿ ತಿಳಿಸಿದೆ.

ಐಪಿಎಲ್‌ನ ಸತತ ಎರಡು ಋತುಗಳಿಗೆ ತಂಡದ ಹೆಡ್‌ ಕೋಚ್‌ ಆಗಿದ್ದ ಫ್ಲವರ್‌ಗೆ ಫ್ರಾಂಚೈಸಿಯು ಧನ್ಯವಾದ ಹೇಳಿದೆ. “ಆತ್ಮೀಯ ಆಂಡಿ, ಇಂದು ವಿದಾಯ ಅಷ್ಟೇ. ಹಾಗಾಂತಾ ಎಂದಿಗೂ ಗುಡ್‌ ಬೈ ಹೇಳುವುದಿಲ್ಲ. ಏಕೆಂದರೆ ನೀವು ಯಾವಾಗಲೂ ನಮ್ಮವರಾಗಿರುತ್ತೀರಿ. ಎಲ್ಲದಕ್ಕೂ ಧನ್ಯವಾದಗಳು” ಎಂದು ಫ್ರಾಂಚೈಸ್ ತನ್ನ ಟ್ವಿಟರ್ ಖಾತೆಯಲ್ಲಿ ಪೋಸ್ಟ್‌ ಮಾಡಿದೆ.

ಈ ಬೆಳವಣಿಗೆಯು ತಂಡದ ಮೆಂಟರ್ ಆಗಿರುವ ಗೌತಮ್ ಗಂಭೀರ್ ಅವರ ಭವಿಷ್ಯದ ಬಗ್ಗೆಯೂ ಅನುಮಾನ ಮೂಡಿಸಿದೆ.

ತಂಡಕ್ಕೆ ಮುಖ್ಯ ತರಬೇತುದಾರರಾಗಿ ಸೇರ್ಪಡೆಗೊಂಡ ನಂತರ ಮಾತನಾಡಿದ ಲ್ಯಾಂಗರ್, "ಲಖನೌ ಸೂಪರ್ ಜೈಂಟ್ಸ್ ತಂಡವು ಐಪಿಎಲ್‌ನಲ್ಲಿ ಒಂದೊಳ್ಳೆ ಕಥೆಯನ್ನು ಹುಟ್ಟುಹಾಕುವ ಪ್ರಯಾಣದಲ್ಲಿದೆ. ಆ ಪ್ರಯಾಣದಲ್ಲಿ ನಮ್ಮೆಲ್ಲರ ಪಾತ್ರವಿದೆ. ತಂಡದ ಭಾಗವಾಗಲು ನಾನು ಉತ್ಸುಕನಾಗಿದ್ದೇನೆ," ಎಂದು ಅವರು ಹೇಳಿದ್ದಾರೆ.

ಕೆಎಲ್ ರಾಹುಲ್ ನೇತೃತ್ವದ ತಂಡಕ್ಕೆ ಮುಂದಿನ ಋತುವಿನಿಂದ ಲ್ಯಾಂಗರ್ ಕೋಚಿಂಗ್‌ ನೀಡಲಿದ್ದಾರೆ. ಅವರ ಮಾರ್ಗದರ್ಶನದಲ್ಲಿ, ಆಸ್ಟ್ರೇಲಿಯಾ ತಂಡವು 2021ರಲ್ಲಿ ಟಿ20 ವಿಶ್ವಕಪ್ ಗೆದ್ದಿತ್ತು.

ಎಲ್‌ಎಸ್‌ಜಿ ಫ್ರಾಂಚೈಸಿಯು ಮತ್ತೊಂದು ಟ್ವೀಟ್ ಅನ್ನು ಪೋಸ್ಟ್ ಮಾಡಿತು. ಆದರೆ ಒಂದು ಗಂಟೆಯ ನಂತರ ಲ್ಯಾಂಗರ್ ಅವರು ಮುಖ್ಯ ತರಬೇತುದಾರ ಎಂದು ದೃಢೀಕರಿಸಿತು. ಅದಾದ ನಿಮಿಷಗಳ ನಂತರ ಮತ್ತೊಂದು ಟ್ವೀಟ್ ಮೂಲಕ ಅದನ್ನು ದೃಢಪಡಿಸಿತು.

ಸೂಪರ್ ಜೈಂಟ್ಸ್‌ನ ಮೆಂಟರ್‌ ಆಗಿರುವ ಗೌತಮ್ ಗಂಭೀರ್ ಅವರೊಂದಿಗೆ ಕೆಲಸ ಮಾಡಿದ ಫ್ಲವರ್, ತಂಡದ ಯಶಸ್ವಿ ಅಭಿಯಾನದ ಭಾಗವಾಗಿದ್ದರು. ಎರಡೂ ಋತುಗಳಲ್ಲಿಯೂ ತಂಡ ಪ್ಲೇಆಫ್‌ಗೆ ಪ್ರವೇಶಿಸಿತು. 2022ರಲ್ಲಿ ಚೊಚ್ಚಲ ಪ್ರಯತ್ನದಲ್ಲೇ ಮೂರನೇ ಸ್ಥಾನ ಪಡೆದ ತಂಡವು, 2023ರಲ್ಲಿ, ಎಲಿಮಿನೇಟರ್‌ನಲ್ಲಿ ಹೊರಬಿದ್ದಿತು.

ಏಷ್ಯಾಕಪ್‌ ಹಾಗೂ ಏಕದಿನ ವಿಶ್ವಕಪ್‌ ಇರುವ ಮಹತ್ವದ ವರ್ಷದಲ್ಲಿ ಭಾರತ ಕ್ರಿಕೆಟ್‌ ತಂಡವು ಸರಣಿಯ ಮೇಲೆ ಸರಣಿಗಳಲ್ಲಿ ಆಡಬೇಕಿದೆ. ಅಕ್ಟೋಬರ್‌ ಹಾಗೂ ನವೆಂಬರ್‌ ತಿಂಗಳಲ್ಲಿ‌ ತವರಿನ ಆತಿಥ್ಯದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ ಬಳಿಕ ಭಾರತವು ದಕ್ಷಿಣ ಆಫ್ರಿಕಾ ಪ್ರವಾಸ (India tour of South Africa) ಕೈಗೊಳ್ಳಲಿದೆ. ಈ ಪ್ರವಾಸದ ವೇಳಾಪಟ್ಟಿಯನ್ನು ಬಿಸಿಸಿಐ ಪ್ರಕಟಿಸಿದೆ. ವಿವರಗಳಿಗೆ ಇಲ್ಲಿ ಕ್ಲಿಕ್‌ ಮಾಡಿ