ಕನ್ನಡ ಸುದ್ದಿ  /  Sports  /  Cricket News Mike Hessons Disappointed Message As Rcb Pick New Team Management Sanjay Bangar Andy Flower Ipl 2024 Prs

Mike Hesson: ಅಭಿಮಾನಿಗಳ ಕನಸಿನಂತೆ ಟ್ರೋಫಿ ಗೆಲ್ಲದಿರುವುದು ಬೇಸರ ತಂದಿದೆ; ಆರ್​ಸಿಬಿ ಫ್ರಾಂಚೈಸಿಗೆ ಧನ್ಯವಾದ ಹೇಳಿ, ಭಾವುಕರಾದ ಮೈಕ್ ಹೆಸನ್

Mike Hesson: ತಂಡದೊಂದಿಗೆ ಸಂಬಂಧ ಕಳೆದುಕೊಂಡಿರುವ ಮಾಜಿ ನಿರ್ದೇಶಕ ಮೈಕ್ ಹೆಸನ್, ತಮ್ಮ ಸಾಮಾಜಿಕ ಮಾಧ್ಯಮದ ಮೂಲಕ ಆರ್​ಸಿಬಿ ಫ್ರಾಂಚೈಸ್​ ಮತ್ತು ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.

ಆರ್​ಸಿಬಿ ತಂಡದ ಮಾಜಿ ನಿರ್ದೇಶಕ ಮೈಕ್​ ಹೆಸನ್.
ಆರ್​ಸಿಬಿ ತಂಡದ ಮಾಜಿ ನಿರ್ದೇಶಕ ಮೈಕ್​ ಹೆಸನ್.

2024ರ ಐಪಿಎಲ್​ಗೆ ಇನ್ನೂ ಹಲವು ತಿಂಗಳು ಬಾಕಿಯಿದೆ. ಆದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಈಗಿನಿಂದಲೇ ಸಿದ್ಧತೆ ಆರಂಭಿಸಿದೆ. ಅದರಂತೆ ಕೋಚಿಂಗ್​ ಸಿಬ್ಬಂದಿಯಲ್ಲಿ ಭಾರಿ ಬದಲಾವಣೆ ತಂದಿದೆ. ಮೇಜರ್ ಸರ್ಜರಿ ಮಾಡಿರುವ ಆರ್​ಸಿಬಿ, ತಂಡದ ನಿರ್ದೇಶಕ ಮೈಕ್ ಹೆಸನ್ (Mike Hesson), ಹೆಡ್​ಕೋಚ್​ ಸಂಜಯ್ ಬಂಗಾರ್ (Sanjay Bangar) ಅವರನ್ನು ಕೈ ಬಿಟ್ಟಿದೆ. ಈಗ ಕೋಚ್​ ಸ್ಥಾನಕ್ಕೆ ಆ್ಯಂಡಿ ಫ್ಲವರ್ (Andy Flower)​ ಅವರನ್ನು ನೇಮಿಸಿದೆ.

ಟ್ರೆಂಡಿಂಗ್​ ಸುದ್ದಿ

ಇದೀಗ ತಂಡದೊಂದಿಗೆ ಸಂಬಂಧ ಕಳೆದುಕೊಂಡಿರುವ ಮಾಜಿ ನಿರ್ದೇಶಕ ಮೈಕ್ ಹೆಸನ್, ತಮ್ಮ ಸಾಮಾಜಿಕ ಮಾಧ್ಯಮದ ಮೂಲಕ ಆರ್​ಸಿಬಿ ಫ್ರಾಂಚೈಸ್​ ಮತ್ತು ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ. ಭಾವನಾತ್ಮಕ ಸಂದೇಶ ರವಾನಿಸಿರುವ ಮೈಕ್​ ಹೆಸನ್, ಸುದೀರ್ಘ ಪೋಸ್ಟ್​ ಮೂಲಕ ಧನ್ಯವಾದ ಅರ್ಪಿಸಿದ್ದಾರೆ. 2021ರಿಂದ ಆರ್​​ಸಿಬಿ ತಂಡದ ಭಾಗವಾಗಿದ್ದರು. ಮೊದಲು ಕೋಚ್​​ ಆಗಿ ತಂಡಕ್ಕೆ ಪ್ರವೇಶ ಮಾಡಿದರು. ನಂತರ ತಂಡದ ಡೈರೆಕ್ಟರ್​ ಆಗಿದ್ದರು.

ಬೇಸರ ವ್ಯಕ್ತಪಡಿಸಿರುವ ಹೆಸ್ಸನ್

ಆರ್​​ಸಿಬಿ, ಐಪಿಎಲ್ ಪ್ರಶಸ್ತಿ ಗೆಲ್ಲುವಂತೆ ಕೋಚಿಂಗ್​ ನೀಡಲು ಸಾಧ್ಯವಾಗದಿರುವುದು ನಿರಾಸೆ ತಂದಿದೆ. ಕಳೆದ 4 ಸೀಸನ್‌ಗಳಲ್ಲಿ ನಾವು 3 ಬಾರಿ ಫ್ಲೇ ಆಫ್​ ಪ್ರವೇಶಿಸಿದ್ದೇವೆ. ಆದರೆ ಅಭಿಮಾನಿಗಳು, ಆಟಗಾರರು, ಸಿಬ್ಬಂದಿ ಇಷ್ಟಪಡುವ ಟ್ರೋಫಿ ಗೆಲ್ಲಲು ಸಾಧ್ಯವಾಗಲಿಲ್ಲ. ಆರ್​ಸಿಬಿ ತೊರೆಯುತ್ತಿರುವುದಕ್ಕೆ ಬೇಸರ ತಂದಿದೆ. ತಂಡದ ಒಳಗೆ ಮತ್ತು ಹೊರಗೆ ಅದ್ಭುತ ವ್ಯಕ್ತಿಗಳ ಜೊತೆಗೆ ಕೆಲಸ ಮಾಡಿದ ನೆನಪುಗಳನ್ನು ಹೊತ್ತು ತೊರೆಯುತ್ತಿದ್ದೇನೆ ಎಂದು ಭಾವನಾತ್ಮಕ ಸಂದೇಶ ನೀಡಿದ್ದಾರೆ.

ಅಭಿಮಾನಿಗಳಿಗೆ ಚಿರಋಣಿ

ತಂಡದಲ್ಲಿ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಟ್ಟ ಮ್ಯಾನೇಜ್​ಮೆಂಟ್​ಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಆರ್​ಸಿಬಿ ಕೋಚಿಂಗ್ ಸಿಬ್ಬಂದಿಗೆ ಮತ್ತು ಮುಂದಿನ ಆವೃತ್ತಿಗಳಿಗೆ ಶುಭ ಹಾರೈಸುತ್ತೇನೆ. ಅದ್ಭುತ, ಅಮೋಘ ಬೆಂಬಲ ತೋರಿದ ಆರ್​​ಸಿಬಿ ಅಭಿಮಾನಿಗಳಿಗೆ ಧನ್ಯವಾದ ಹೇಳಲು ಬಯಸುತ್ತೇನೆ ಎಂದು ತಮ್ಮ ಪೋಸ್ಟ್​​ನಲ್ಲಿ ಹೆಸನ್ ಬರೆದುಕೊಂಡಿದ್ದಾರೆ.

ಸಂತಸ ವ್ಯಕ್ತಪಡಿಸಿದ ಆರ್​ಸಿಬಿ ಕೋಚ್

ನೂತನ ಕೋಚ್​​ ಆಗಿ ಆಯ್ಕೆಯಾಗಿರುವ ಆ್ಯಂಡಿ ಫ್ಲವರ್, ಆರ್​ಸಿಬಿ ಸೇರುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಅಂತಾರಾಷ್ಟ್ರೀಯ, ಟಿ20 ಲೀಗ್ಸ್, ಐಪಿಎಲ್​​ನಲ್ಲಿ ಕೋಚಿಂಗ್​ ಕೊಟ್ಟ ಅನುಭವ ಹೊಂದಿರುವ ಆ್ಯಂಡಿ ಫ್ಲವರ್​ಗೆ ಕಪ್​ ಗೆಲ್ಲಿಸಿಕೊಡುವ ಜವಾಬ್ದಾರಿ ಹೆಗಲೇರಿದೆ. ಇನ್ನು ಈ ಬಗ್ಗೆ ಮಾತನಾಡಿರುವ ಆ್ಯಂಡಿ ಫ್ಲವರ್​, ಆರ್​ಸಿಬಿ ಸೇರುತ್ತಿರುವದಕ್ಕೆ ಹೆಮ್ಮೆಯಾಗುತ್ತಿದೆ. ಖುಷಿಯಾಗುತ್ತಿದೆ. ಆರ್​​ಸಿಬಿ ತಂಡವನ್ನು ಎತ್ತರಕ್ಕೆ ಕೊಂಡೊಯ್ಯಲು ಕೆಲಸ ಮಾಡುತ್ತೇನೆ ಎಂದು ಫ್ಲವರ್​ ಹೇಳಿದ್ದಾರೆ.

ನಿಜಾಂಶ ಏನೆಂದರೆ, ಮೈಕ್ ಹೆಸನ್ ಮತ್ತು ಸಂಜಯ್ ಬಂಗಾರ್ ಅಧಿಕಾರವಧಿ ಇದೇ ಸೆಪ್ಟೆಂಬರ್​ ಅಂತ್ಯಕ್ಕೆ ಮುಗಿಯಲಿದೆ. ಆದರೆ ಇಬ್ಬರಿಗೂ ತಂಡದಲ್ಲಿ ಮುಂದುವರೆಯುವ ಇರಾದೆ ಹೊಂದಿದ್ದರು. ಆದರೆ ಫ್ರಾಂಚೈಸಿ ಇಬ್ಬರನ್ನೂ ಉಳಿಸಿಕೊಳ್ಳಲು ಇಷ್ಟಪಡಲಿಲ್ಲ.

ಸಂಬಂಧಿತ ಲೇಖನ