ಕನ್ನಡ ಸುದ್ದಿ  /  Sports  /  Cricket News Mumbai Indians Have Won The Toss Have Opted To Field Against Gujarat Titans In Ipl 2023 Qualifier 2 Prs

GT vs MI Qualifier 2: ಸೆಮಿಫೈನಲ್​​ನಲ್ಲಿ ಗುಜರಾತ್ ವಿರುದ್ಧ ಟಾಸ್ ಗೆದ್ದ ಮುಂಬೈ ಬೌಲಿಂಗ್​ ಆಯ್ಕೆ; ಗೆದ್ದವರು ಫೈನಲ್​ಗೆ, ಸೋತವರು ಮನೆಗೆ

ಅಹ್ಮದಾಬಾದ್​​ನಲ್ಲಿ ನಡೆಯುತ್ತಿರುವ ರಣರೋಚಕ ಕ್ವಾಲಿಫೈಯರ್​​ -2ರ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​ ಮತ್ತು ಗುಜರಾತ್​ ಟೈಟಾನ್ಸ್​​ ತಂಡಗಳು ಮುಖಾಮುಖಿಯಾಗುತ್ತಿವೆ. ಹಾಗಾದರೆ ಆಡುವ 11ರ ಬಳಗದಲ್ಲಿ ಯಾರೆಲ್ಲಾ ಅವಕಾಶ ಪಡೆದಿದ್ದಾರೆ ಎಂಬುದನ್ನು ಈ ಮುಂದೆ ನೋಡೋಣ.

ಹಾರ್ದಿಕ್​ ಪಾಂಡ್ಯ ಮತ್ತು ರೋಹಿತ್​ ಶರ್ಮಾ
ಹಾರ್ದಿಕ್​ ಪಾಂಡ್ಯ ಮತ್ತು ರೋಹಿತ್​ ಶರ್ಮಾ

16ನೇ ಆವೃತ್ತಿಯ ಐಪಿಎಲ್​ನ ಕ್ವಾಲಿಫೈಯರ್-2ರ ಪಂದ್ಯದಲ್ಲಿ ಗುಜರಾತ್​ ಟೈಟಾನ್ಸ್​ ಮತ್ತು ಮುಂಬೈ ಇಂಡಿಯನ್ಸ್​ ತಂಡಗಳು ಮುಖಾಮುಖಿಯಾಗುತ್ತಿವೆ. ಅಹ್ಮದಾಬಾದ್​​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಹೈವೋಲ್ಟೇಜ್​​ ಪಂದ್ಯದಲ್ಲಿ ಮುಂಬೈ ಟಾಸ್​ ಗೆದ್ದಿದ್ದು, ಮೊದಲು ಬೌಲಿಂಗ್​​​ ಆಯ್ಕೆ ಮಾಡಿಕೊಂಡಿದೆ. ಅದರಂತೆ ತವರಿನ ಮೈದಾನದಲ್ಲಿ ಮೊದಲು ಬ್ಯಾಟಿಂಗ್​ ನಡೆಸಲಿರುವ ಗುಜರಾತ್​ ದೊಡ್ಡ ಗುರಿ ಕಲೆ ಹಾಕುವ ಲೆಕ್ಕಾಚಾರದಲ್ಲಿದೆ.

ಮಳೆಯ ಕಾರಣ 45 ನಿಮಿಷಗಳ ಕಾಲ ಟಾಸ್​ ವಿಳಂಬವಾಯಿತು. ಸರಿಯಾಗಿ 7 ಗಂಟೆಗೆ ಆಗಿದ್ದ ಟಾಸ್​, 7.45ಕ್ಕೆ ಆರಂಭಗೊಂಡಿತು. ಉಭಯ ತಂಡಗಳು ಮಹತ್ವದ ಬದಲಾವಣೆ ಆಗಿದೆ. ಮುಂಬೈ ತಂಡದಲ್ಲಿ ಒಂದು ಬದಲಾವಣೆ ಕಂಡಿದ್ದು, ಹೃತೀಕ್​ ಶೋಕೀನ್​ ಬದಲಿಗೆ ಕುಮಾರ್​ ಕಾರ್ತಿಕೇಯ ಬಂದಿದ್ದಾರೆ. ಗುಜರಾತ್​ ತಂಡದಲ್ಲಿ ಎರಡು ಬದಲಾವಣೆ ಮಾಡಲಾಗಿದೆ. ದರ್ಶನ್​ ನಲ್ಕಂಡೆ, ದಸುನ್​ ಶನಕ ಬದಲಿಗೆ ಸಾಯಿ ಸುದರ್ಶನ್ ಮತ್ತು ಜೋಶುವಾ ಲಿಟಲ್​ ತಂಡದಲ್ಲಿ ಅವಕಾಶ ಪಡೆದಿದ್ದಾರೆ.

ಗುಜರಾತ್ ತಂಡಕ್ಕೆ 2ನೇ ಅವಕಾಶ

2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್ ಗೆಲುವು ಸಾಧಿಸಿದರೆ, ಸತತ 2ನೇ ಬಾರಿಗೆ ಫೈನಲ್​ ಪ್ರವೇಶಿಸಲಿದೆ. ಆ ಮೂಲಕ ಈ ಸಾಧನೆ ಮಾಡಿದ 3ನೇ ತಂಡ ಎನಿಸಲಿದೆ. ಸಿಎಸ್​ಕೆ, ಮುಂಬೈ ತಂಡಗಳು ಹೊರತುಪಡಿಸಿದರೆ ಬೇರೆ ಯಾವ ತಂಡಗಳು ಈ ಸಾಧನೆ ಮಾಡಿಲ್ಲ. ಗುಜರಾತ್ ಇದೇ ಮೊದಲ ಬಾರಿಗೆ ಕ್ವಾಲಿಫೈಯರ್​​-2 ಆಡುತ್ತಿದೆ. ಕಳೆದ ಬಾರಿ ಮೊದಲ ಕ್ವಾಲಿಫೈಯರ್​ನಲ್ಲೇ ಗೆದ್ದು ಫೈನಲ್​ ಪ್ರವೇಶಿಸಿತ್ತು.

ಮುಂಬೈ ತಂಡಕ್ಕೆ 7ನೇ ಅವಕಾಶ

ಗುಜರಾತ್​ ವಿರುದ್ಧ ಗೆಲುವು ಸಾಧಿಸಿದರೆ, 7ನೇ ಬಾರಿಗೆ ಫೈನಲ್​ ಪ್ರವೇಶ ಮಾಡಲಿದೆ. ಇದಕ್ಕೂ ಮುನ್ನ 2010ರಲ್ಲಿ ರನ್ನರ್​ ಅಪ್​ ಆಗಿತ್ತು. 2012, 2015, 2017, 2019, 2020ರಲ್ಲಿ ಚಾಂಪಿಯನ್​ ಆಗಿತ್ತು. ಮುಂಬೈ ಈ ಹಿಂದೆ 3 ಬಾರಿ ಕ್ವಾಲಿಫೈಯರ್​ ಪಂದ್ಯಗಳನ್ನಾಡಿದ್ದು, ಎರಡಲ್ಲಿ ಗೆದ್ದು, ಒಂದರಲ್ಲಿ ಸೋಲು ಕಂಡಿದೆ. ಕಳೆದ ಆವೃತ್ತಿಯ ಐಪಿಎಲ್​ನಲ್ಲಿ ಲೀಗ್​ ಹಂತದಿಂದಲೇ ಹೊರ ಬಿದ್ದಿತ್ತು.

ಉಭಯ ತಂಡಗಳ ಮುಖಾಮುಖಿ

ಮುಂಬೈ ಮತ್ತು ಗುಜರಾತ್​ ಉಭಯ ತಂಡಗಳು ಒಟ್ಟು 3 ಬಾರಿ ಪರಸ್ಪರ ಮುಖಾಮುಖಿಯಾಗಿವೆ. ಇದರಲ್ಲಿ ರೋಹಿತ್​ ಪಡೆ 2 ಸಲ, ಹಾರ್ದಿಕ್​ ಪಡೆ 1 ಗೆದ್ದಿದೆ. ಪ್ಲೇ ಆಫ್​ ಹಂತದಲ್ಲಿ ಇದೇ ಮೊದಲ ಬಾರಿಗೆ ಉಭಯ ತಂಡಗಳು ಎದುರಾಗುತ್ತಿವೆ. ಈ ಬಾರಿಯ ಲೀಗ್​ ಹಂತದಲ್ಲಿ 2 ಬಾರಿ ಎದುರಾಗಿದ್ದು, ತಲಾ 1ರಲ್ಲಿ ಗೆದ್ದಿವೆ.

ಪಿಚ್​ ರಿಪೋರ್ಟ್​

ಅಹಮದಾಬಾದ್‌ನ ಪಿಚ್ ಬ್ಯಾಟಿಂಗ್​ಗೆ ನೆರವಾಗಲಿದೆ. ಉತ್ತಮ ಮೊತ್ತ ಕಲೆ ಹಾಕಲು ಈ ಪಿಚ್​ ಸಹಾಯವಾಗಲಿದೆ. ವೇಗಿಗಳೂ ಅದ್ಭುತ ಪ್ರದರ್ಶನ ನೀಡಲಿದ್ದಾರೆ. ಭುವನೇಶ್ವರ್​ ಕುಮಾರ್​ ಪಂದ್ಯವೊಂದರಲ್ಲಿ 5 ವಿಕೆಟ್​ ಉರುಳಿಸಿದ್ದರು. ಟಾಸ್​​ ಗೆದ್ದ ತಂಡವು ಚೇಸಿಂಗ್​ಗೆ ಹೆಚ್ಚು ಆದ್ಯತೆ ನೀಡಲಿದೆ. ಪಂದ್ಯ ಮುಂದುವರೆದಂತೆ ಇಬ್ಬನಿ ಕಾಡಲಿದೆ.

ಗುಜರಾತ್ ಟೈಟಾನ್ಸ್​​ ತಂಡ

ವೃದ್ಧಿಮಾನ್ ಸಾಹ (ವಿಕೆಟ್​ ಕೀಪರ್), ಶುಭ್ಮನ್ ಗಿಲ್, ಸಾಯಿ ಸುದರ್ಶನ್​, ಹಾರ್ದಿಕ್ ಪಾಂಡ್ಯ (ನಾಯಕ), ವಿಜಯ್ ಶಂಕರ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ನೂರ್ ಅಹ್ಮದ್, ಮೊಹಮ್ಮದ್ ಶಮಿ, ಜೋಶುವಾ ಲಿಟಲ್.

ಮುಂಬೈ ಇಂಡಿಯನ್ಸ್​​ ತಂಡ

ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್ (ವಿಕೆಟ್​ ಕೀಪರ್​), ಕ್ಯಾಮರೂನ್​ ಗ್ರೀನ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ನೆಹಾಲ್ ವಧೇರಾ, ಟಿಮ್ ಡೇವಿಡ್, ಕ್ರಿಸ್ ಜೋರ್ಡಾನ್, ಪಿಯೂಷ್ ಚಾವ್ಲಾ, ಆಕಾಶ್ ಮಧ್ವಲ್, ಕುಮಾರ್ ಕಾರ್ತಿಕೇಯ, ಜೇಸನ್ ಬೆಹ್ರೆಂಡಾರ್ಫ್.