Rinku Singh: ಮಗ ಕೋಟಿಗಟ್ಟಲೆ ದುಡೀತಿದ್ದರೂ ಜೀವನಕ್ಕೆ ದಾರಿ ತೋರಿದ ಕೆಲಸ ಬಿಡ್ತಿಲ್ವಂತೆ ರಿಂಕು ಸಿಂಗ್​ ತಂದೆ; ಈಗಲೂ ಸಿಲಿಂಡರ್ ಸರಬರಾಜು-cricket news my father is still hawking cylinders says rinku singh india and kkr star wants father to relax prs ,ಕ್ರೀಡೆ ಸುದ್ದಿ
ಕನ್ನಡ ಸುದ್ದಿ  /  ಕ್ರೀಡೆ  /  Rinku Singh: ಮಗ ಕೋಟಿಗಟ್ಟಲೆ ದುಡೀತಿದ್ದರೂ ಜೀವನಕ್ಕೆ ದಾರಿ ತೋರಿದ ಕೆಲಸ ಬಿಡ್ತಿಲ್ವಂತೆ ರಿಂಕು ಸಿಂಗ್​ ತಂದೆ; ಈಗಲೂ ಸಿಲಿಂಡರ್ ಸರಬರಾಜು

Rinku Singh: ಮಗ ಕೋಟಿಗಟ್ಟಲೆ ದುಡೀತಿದ್ದರೂ ಜೀವನಕ್ಕೆ ದಾರಿ ತೋರಿದ ಕೆಲಸ ಬಿಡ್ತಿಲ್ವಂತೆ ರಿಂಕು ಸಿಂಗ್​ ತಂದೆ; ಈಗಲೂ ಸಿಲಿಂಡರ್ ಸರಬರಾಜು

Rinku Singh ಸದ್ಯ ಐಪಿಎಲ್​ನಲ್ಲಿ ಅದ್ಭುತ ಪ್ರದರ್ಶನ ನೀಡಿದ ರಿಂಕು ಸಿಂಗ್ ಟೀಮ್​ ಇಂಡಿಯಾಗೆ ಆಯ್ಕೆಯಾಗಿದ್ದಾರೆ. ಇಷ್ಟೆಲ್ಲಾ ಹೆಸರು-ಸಂಪಾದನೆ ಸಿಕ್ಕರೂ ರಿಂಕು ಸಿಂಗ್​ ತಂದೆ ತಮ್ಮ ಕೆಲಸವನ್ನು ಬಿಟ್ಟಿಲ್ಲವಂತೆ. ಸಿಲಿಂಡರ್​ ಸರಬರಾಜು ಮಾಡುವುದನ್ನೂ ಮುಂದುವರೆಸುತ್ತಿದ್ದಾರಂತೆ.

ಈಗಲೂ ಸಿಲಿಂಡರ್ ಸರಬರಾಜು ಮಾಡ್ತಿದ್ದಾರೆ ರಿಂಕು ಸಿಂಗ್ ತಂದೆ.
ಈಗಲೂ ಸಿಲಿಂಡರ್ ಸರಬರಾಜು ಮಾಡ್ತಿದ್ದಾರೆ ರಿಂಕು ಸಿಂಗ್ ತಂದೆ.

ರಿಂಕು ಸಿಂಗ್ (Rinku Singh)​.. 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​​​ನ (Indian Premier League) ಸೆನ್​ಸೇಷನ್. ಅದು ಕೂಡ ಒಂದೇ ಒಂದು ಇನ್ನಿಂಗ್ಸ್​ನಿಂದ. ಹೌದು, ಗುಜರಾತ್ ಟೈಟಾನ್ಸ್​​ (Gujarat Titans) ತಂಡದ ವಿರುದ್ಧ ಕೋಲ್ಕತ್ತಾ ನೈಟ್​ ನೈಡರ್ಸ್ (Kolkata Knight Riders)​ ತಂಡದ ರಿಂಕು ಸತತ 5 ಸಿಕ್ಸರ್​​ ಚಚ್ಚುವ ಮೂಲಕ ರೋಚಕ ಗೆಲುವು ತಂದುಕೊಟ್ಟಿದ್ದರು. ಅನಿರೀಕ್ಷಿತ, ಅವಿಸ್ಮರಣೀಯ ಜಯದ ಕೊಡುಗೆ ನೀಡಿದರು. ಈ ಒಂದು ಇನ್ನಿಂಗ್ಸ್​ನಿಂದ ರಾತ್ರೋರಾತ್ರಿ ದೊಡ್ಡ ಸ್ಟಾರ್​ ಆಗಿ ಹೊರಹೊಮ್ಮಿದರು.

ಈ ಅದ್ಭುತ, ಅಮೋಘ ಇನ್ನಿಂಗ್ಸ್​ನಿಂದ ಇಡೀ ವಿಶ್ವದ ಗಮನ ಸೆಳೆದರು. ಜೊತೆಗೆ ನೆಟ್ಟಿಗರು ಅವರು ಯಾರು? ತಂದೆ-ತಾಯಿ ಯಾರು? ಅವರ ಹಿನ್ನೆಲೆ ಏನು ಎಂಬುದನ್ನೆಲ್ಲಾ ಜಾಲಾಡಿಬಿಟ್ಟರು. ಆಗ ಗೊತ್ತಾಗಿದ್ದು ಏನೆಂದರೆ ಆತ ಸಿಲಿಂಡರ್​ ಮಾರುವ ಮಗ ಎಂಬುದಾಗಿ. ಐಪಿಎಲ್​ ಮೂಲಕ ತನ್ನ ಜೀವನದ ಗ್ರಾಫ್​ ಬದಲಾಯಿತು. ಇದೀಗ ಟೀಮ್​ ಇಂಡಿಯಾಗೂ ಆಯ್ಕೆಯಾಗಿದ್ದಾರೆ. ಇಷ್ಟೆಲ್ಲಾ ಹೆಸರು-ಸಂಪಾದನೆ ಸಿಕ್ಕರೂ ರಿಂಕು ಸಿಂಗ್​ ತಂದೆ ತಮ್ಮ ಕೆಲಸವನ್ನು ಬಿಟ್ಟಿಲ್ಲವಂತೆ. ಸಿಲಿಂಡರ್​ ಸರಬರಾಜು ಮಾಡುವುದನ್ನು ಈಗಲೂ ಮುಂದುವರೆಸುತ್ತಿದ್ದಾರಂತೆ.

ಕೆಲಸ ಬಿಟ್ಟಿಲ್ಲವಂತೆ ತಂದೆ

ಉತ್ತರ ಪ್ರದೇಶದ ಅಲಿಗಢ ಪ್ರದೇಶದಲ್ಲಿ ಜನಿಸಿದ ರಿಂಕು ಸಿಂಗ್ ಬಡ ಕುಟುಂಬದಿಂದ ಬಂದವರು. ರಿಂಕು ಸಿಂಗ್ ಅವರ ತಂದೆ ಖಾನ್ ಚಂದ್ರ ಅವರು ಮನೆ ಮನೆಗೆ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳನ್ನು ಸರಬರಾಜು ಮಾಡುವ ಮೂಲಕ ಕುಟುಂಬ ಪೋಷಿಸುತ್ತಿದ್ದರು. ರಿಂಕು ಸಿಂಗ್ ಆಟೋ ಚಾಲಕನಾಗಿ ಸೇವೆ ಸಲ್ಲಿಸುತ್ತಿದ್ದರು. ಐಪಿಎಲ್ 2022ರವರೆಗೆ, ರಿಂಕು ಸಿಂಗ್ ಕುಟುಂಬವು ಎಲ್​ಪಿಜಿ ಗ್ಯಾಸ್ ಸಿಲಿಂಡರ್ ವಿತರಣಾ ಕಂಪನಿ ನೀಡಿದ್ದ ಕ್ವಾರ್ಟರ್ಸ್‌ನಲ್ಲಿ ಸಣ್ಣ ಎರಡು ಕೊಠಡಿಗಳಲ್ಲಿ ವಾಸಿಸುತ್ತಿತ್ತು.

ಕಸಗುಡಿಸುವ ಕೆಲಸದಿಂದ ಕ್ರಿಕೆಟ್​ ಆಗಿದ್ದು

9ನೇ ತರಗತಿ ಫೇಲ್​ ಆಗಿರುವ ರಿಂಕು ಸಿಂಗ್, ತನ್ನ ವೃತ್ತಿಜೀವನದ ಪ್ರಾರಂಭದಲ್ಲಿ ಕಸ ಗುಡಿಸುವ ಕೆಲಸ ಪಡೆದಿದ್ದರು. ಆದರೆ ಕ್ರಿಕೆಟ್​ನತ್ತ ಗಮನ ಹರಿಸಿದ ರಿಂಕು ಸಿಂಗ್ ಆ ಕೆಲಸವನ್ನು ಕೈಬಿಟ್ಟರು. ಐಪಿಎಲ್‌ನ 3 ಸೀಸನ್‌ಗಳು ಮತ್ತು ಪ್ರಥಮ ದರ್ಜೆ ಕ್ರಿಕೆಟ್‌ ಆತನ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳಲು ಸಹಾಯ ಮಾಡಿತು. ಈಗ ಅವರೆಲ್ಲರೂ ಕ್ರಿಕೆಟಿಗನು ನಿರ್ಮಿಸಿದ ಮನೆಯಲ್ಲಿ ಒಟ್ಟಿಗೆ ಇದ್ದಾರೆ. ಐಪಿಎಲ್​ನಲ್ಲಿ ಧಮಾಕ ಸೃಷ್ಟಿಸಿದ ಹಿನ್ನೆಲೆ ಏಷ್ಯನ್ ಗೇಮ್ಸ್ ಹಾಗೂ ಐರ್ಲೆಂಡ್ ವಿರುದ್ಧದ ಟಿ20 ಸರಣಿಗೆ ಆಯ್ಕೆಯಾಗಿದ್ದಾರೆ.

ಇದು ನಮ್ಮೆಲ್ಲರ ಕನಸು

ಇದಕ್ಕೆ ಪ್ರತಿಕ್ರಿಯಿಸಿದ ರಿಂಕು ಸಿಂಗ್, 'ನನ್ನ ಪೋಷಕರು, ಸಹೋದರರು, ನನ್ನ ಬಾಲ್ಯದ ಕೋಚ್ ಮಸೂದ್ ಅಮಿನಿ ತುಂಬಾ ಖುಷಿಯಾಗಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಭಾರತ ತಂಡಕ್ಕೆ ಆಯ್ಕೆ ಆಗಿರುವುದು ನಮ್ಮೆಲ್ಲರ ಕನಸು. ನಾನು ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ನಂತರ, ನನ್ನ ತಂದೆಗೆ ಕೆಲಸ ಬಿಟ್ಟು ವಿಶ್ರಾಂತಿ ತೆಗೆದುಕೊಳ್ಳುವಂತೆ ಹೇಳಿದೆ. ಆದರೆ, ಅವರು ನನ್ನ ಮಾತು ಕೇಳಲಿಲ್ಲ. ಅವರು ಇನ್ನೂ ಸಿಲಿಂಡರ್‌ಗಳನ್ನು ಸರಬರಾಜು ಮಾಡುತ್ತಿದ್ದಾರೆ. ನಮ್ಮ ತಂದೆಯವರಿಗೆ ತನ್ನ ಪಾಡಿಗೆ ಕೆಲಸ ಮಾಡಿಕೊಂಡು ಇರುವುದು ಇಷ್ಟ. ಅದು ನನಗೆ ಅರ್ಥವಾಗುತ್ತದೆ. ತಕ್ಷಣವೇ ಕೆಲಸ ಬಿಡುವಂತೆ ಹೇಳಿದರೆ, ಮನೆಯಲ್ಲೂ ಅವರಿಗೆ ಬೋರ್​ ಆಗುತ್ತದೆ ಎಂದು ರಿಂಕು ಹೇಳಿದ್ದಾರೆ.

‘ವಿಶ್ರಾಂತಿ ಪಡೆಯುವವರೆಗೂ ಕೆಲಸ ಮಾಡಲಿ’

ತಮ್ಮ ತಂದೆಯವರಿಗೇ ಸಾಕು, ಇನ್ನು ವಿಶ್ರಾಂತಿ ಪಡೆಯಬೇಕು ಎನ್ನುವವರೆಗೂ ಕೆಲಸ ಮಾಡುತ್ತಲೇ ಇರಲಿ. ಕೆಲಸ ಬಿಡಿ ಎಂದು ಹೇಳುವುದು ಸಹ ತುಂಬಾ ಕಷ್ಟ ಎಂದು ರಿಂಕು ಪ್ರತಿಕ್ರಿಯಿಸಿದ್ದಾರೆ. ಐಪಿಎಲ್ 2018ರಲ್ಲಿ ರಿಂಕು ಸಿಂಗ್ ಅವರನ್ನು 80 ಲಕ್ಷ ರೂಪಾಯಿಗೆ ಖರೀದಿಸಿದ ಕೋಲ್ಕತ್ತಾ ನೈಟ್ ರೈಡರ್ಸ್, ಐಪಿಎಲ್ 2022 ಮೆಗಾ ಹರಾಜಿನಲ್ಲಿ 55 ಲಕ್ಷ ರೂಪಾಯಿಗೆ ಅವರನ್ನು ಮರಳಿ ಖರೀದಿಸಿತು. ಐಪಿಎಲ್ 2023ರ ನಂತರ ರಿಂಕು ಸಿಂಗ್ ಕೂಡ ಕೆಲವು ಬ್ರಾಂಡ್‌ಗಳಿಗೆ ಪ್ರಚಾರ ಮಾಡುತ್ತಿದ್ದಾರೆ. ಅಲಿಗಢದಲ್ಲಿ ಪುಟ್ಟ ಹಾಸ್ಟೆಲ್ ನಿರ್ಮಿಸುತ್ತಿದ್ದಾರೆ.

‘ಹಾಸ್ಟೆಲ್ ನಿರ್ಮಿಸುತ್ತಿದ್ದೇನೆ’

ನಾನು ಹಾಸ್ಟೆಲ್ ನಿರ್ಮಿಸುತ್ತಿದ್ದೇನೆ ಮತ್ತು ಕ್ರಿಕೆಟ್ ಮೈದಾನವು ಅದರ ಪಕ್ಕದಲ್ಲಿದೆ. ಆದ್ದರಿಂದ ಮಕ್ಕಳಿಗೆ ಇದು ಸುಲಭವಾಗುತ್ತದೆ, ಯಾರೋ ತಿಳಿದವರು, ಈ ಮಕ್ಕಳಿಗೆ ಏನಾದರೂ ಯೋಜನೆ ಮಾಡೋಣ. ಹಾಸ್ಟೆಲ್ ನಿರ್ಮಿಸೋಣ ಎಂದು ನನಗೆ ಹೇಳಿದರು. ಅವರು ಹಣಕಾಸು ಮಾಡಿದರು. ನಾನು ಉಳಿದ ಅರ್ಧವನ್ನು ಪಾವತಿಸಲು ನಿರ್ಧರಿಸಿದೆ ಎಂದು ರಿಂಕು ಹೇಳಿದ್ದಾರೆ. ಇದನ್ನೇ ಹೈಪ್​ ಮಾಡಿಕೊಳ್ಳು ಇಷ್ಟವಿಲ್ಲ ಎಂದು ಅವರು ಹೇಳಿದ್ದಾರೆ.

ಪ್ರಸಕ್ತ ಆವೃತ್ತಿಯಲ್ಲಿ ಕೋಲ್ಕತ್ತಾ ನೈಟ್​ ರೈಡರ್ಸ್​ ತಂಡದ ಪರ ಅದ್ಭುತ ಪ್ರದರ್ಶನ ತೋರಿದ ರಿಂಕು ಸಿಂಗ್​, ತಂಡದ ಪರ ಗರಿಷ್ಠ ಸ್ಕೋರರ್ ಎನಿಸಿದರು. ಒಟ್ಟು 14 ಪಂದ್ಯಗಳಲ್ಲಿ ಕಣಕ್ಕಿಳಿದ ಅವರು, 59.25ರ ಸರಾಸರಿಯಲ್ಲಿ 474 ರನ್ ಗಳಿಸಿದ್ದಾರೆ. ಆದರೆ, ಜನಮನ್ನಣೆ ಪಡೆದಿದ್ದು, ಯಶ್ ದಯಾಳ್ ಬೌಲಿಂಗ್​​ನಲ್ಲಿ 5 ಸಿಕ್ಸರ್​​ ಚಚ್ಚಿದ್ದರಿಂದ ಎಂಬುದು ವಿಶೇಷ.

mysore-dasara_Entry_Point
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.