ಭಯೋತ್ಪಾದನೆ ನಿಲ್ಲಿಸಿದರೆ ಮಾತ್ರ ಇಂಡೋ-ಪಾಕ್ ದ್ವಿಪಕ್ಷೀಯ​ ಸರಣಿ; ಕ್ರೀಡಾ ಸಚಿವ ಅನುರಾಗ್ ಠಾಕೂರ್​ ಸ್ಪಷ್ಟನೆ
ಕನ್ನಡ ಸುದ್ದಿ  /  ಕ್ರೀಡೆ  /  ಭಯೋತ್ಪಾದನೆ ನಿಲ್ಲಿಸಿದರೆ ಮಾತ್ರ ಇಂಡೋ-ಪಾಕ್ ದ್ವಿಪಕ್ಷೀಯ​ ಸರಣಿ; ಕ್ರೀಡಾ ಸಚಿವ ಅನುರಾಗ್ ಠಾಕೂರ್​ ಸ್ಪಷ್ಟನೆ

ಭಯೋತ್ಪಾದನೆ ನಿಲ್ಲಿಸಿದರೆ ಮಾತ್ರ ಇಂಡೋ-ಪಾಕ್ ದ್ವಿಪಕ್ಷೀಯ​ ಸರಣಿ; ಕ್ರೀಡಾ ಸಚಿವ ಅನುರಾಗ್ ಠಾಕೂರ್​ ಸ್ಪಷ್ಟನೆ

IND vs PAK, Anurag Thakur: ಗಡಿ ಆಚೆ ನಡೆಸುವ ಭಯೋತ್ಪಾದನೆ (Terrorism) ಮತ್ತು ಭಾರತದೊಳಗೆ ಅಕ್ರಮವಾಗಿ ಒಳನುಸುಳುವಿಕೆ ನಿಲ್ಲಿಸುವವರೆಗೆ ಪಾಕಿಸ್ತಾನ ತಂಡದೊಂದಿಗೆ ಯಾವುದೇ ದ್ವಿಪಕ್ಷೀಯ ಕ್ರಿಕೆಟ್ ಸರಣಿಗಳು ನಡೆಯುವುದಿಲ್ಲ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಖಡಕ್ ಆಗಿ ಸ್ಪಷ್ಟಪಡಿಸಿದ್ದಾರೆ.

ಭಯೋತ್ಪಾದನೆ ನಿಲ್ಲಿಸಿದರೆ ಮಾತ್ರ ಇಂಡೋ-ಪಾಕ್ ದ್ವಿಪಕ್ಷೀಯ​ ಸರಣಿ; ಕ್ರೀಡಾ ಸಚಿವ ಅನುರಾಗ್ ಠಾಕೂರ್​ ಸ್ಪಷ್ಟನೆ.
ಭಯೋತ್ಪಾದನೆ ನಿಲ್ಲಿಸಿದರೆ ಮಾತ್ರ ಇಂಡೋ-ಪಾಕ್ ದ್ವಿಪಕ್ಷೀಯ​ ಸರಣಿ; ಕ್ರೀಡಾ ಸಚಿವ ಅನುರಾಗ್ ಠಾಕೂರ್​ ಸ್ಪಷ್ಟನೆ.

ಭಾರತ-ಪಾಕಿಸ್ತಾನ (India vs Pakistan) ತಂಡಗಳ ನಡುವೆ ದ್ವಿಪಕ್ಷಿಯ ಸರಣಿ ನಡೆದು ಸುಮಾರು 10 ವರ್ಷಗಳಾಗಿದೆ. 2012-13ರ ಅವಧಿಯಲ್ಲಿ ಕೊನೆಯದಾಗಿ ದ್ವಿಪಕ್ಷಿಯ ಸರಣಿಯಲ್ಲಿ ಮುಖಾಮುಖಿಯಾಗಿದ್ದವು. ಅಂದಿನಿಂದ ಈವರೆಗೂ ಐಸಿಸಿ ಟೂರ್ನಿ, ಏಷ್ಯಾಕಪ್​ನಲ್ಲಿ ಮಾತ್ರ ಸೆಣಸಾಟ ನಡೆಸುತ್ತಿವೆ. ಇದೀಗ ಈ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದ್ದು, ಭಾರತ ಕ್ರೀಡಾ ಸಚಿವ ಅನುರಾಗ್ ಠಾಕೂರ್ (Anurag Thakur) ಉತ್ತರ ಕೊಟ್ಟಿದ್ದಾರೆ. ಭಯೋತ್ಪಾದನೆ ನಿಲ್ಲಿಸಿದರೆ ಮಾತ್ರ ದ್ವಿಪಕ್ಷೀಯ ಸರಣಿ ನಡೆಸುವುದಾಗಿ ಹೇಳಿದ್ದಾರೆ.

ಗಡಿ ಆಚೆ ನಡೆಸುವ ಭಯೋತ್ಪಾದನೆ (Terrorism) ಮತ್ತು ಭಾರತದೊಳಗೆ ಅಕ್ರಮವಾಗಿ ಒಳನುಸುಳುವಿಕೆ ನಿಲ್ಲಿಸುವವರೆಗೆ ಪಾಕಿಸ್ತಾನ ತಂಡದೊಂದಿಗೆ ಯಾವುದೇ ದ್ವಿಪಕ್ಷೀಯ (IND vs PAK) ಕ್ರಿಕೆಟ್ ಸರಣಿಗಳು ನಡೆಯುವುದಿಲ್ಲ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಖಡಕ್ ಆಗಿ ಸ್ಪಷ್ಟಪಡಿಸಿದ್ದಾರೆ. ಮುಂಬೈ ದಾಳಿಯ ನಂತರ ಪಾಕಿಸ್ತಾನ ಮತ್ತು ಭಾರತ ನಡುವಿನ ದ್ವಿಪಕ್ಷೀಯ ಕ್ರಿಕೆಟ್ ಸರಣಿಗಳನ್ನು ಸ್ಥಗಿತ ಮಾಡಲಾಗಿತ್ತು.

ಪಾಕಿಸ್ತಾನ ಮೊದಲು ಗಡಿಯಾಚೆಗಿನ ಭಯೋತ್ಪಾದನೆ ನಿಲ್ಲಿಸಬೇಕು. ಮತ್ತು ಭಾರತ ದೇಶದೊಳಗೆ ಅಕ್ರಮವಾಗಿ ನುಸುಳುವುದನ್ನು ನಿಲ್ಲಿಸಬೇಕು. ಆಗ ಮಾತ್ರ ಉಭಯ ದೇಶಗಳ ನಡುವೆ ದ್ವಿಪಕ್ಷೀಯ ಕ್ರಿಕೆಟ್​ ಸರಣಿ ಆಯೋಜನೆಗೆ ಸಾಧ್ಯವಾಗುತ್ತದೆ. ಈ ಬಗ್ಗೆ ಬಿಸಿಸಿಐ ಬಹಳ ವರ್ಷಗಳ ಹಿಂದೆಯೇ ನಿರ್ಧರಿಸಿದೆ. ಅಲ್ಲದೆ, ಇದು ದೇಶದ ಪ್ರತಿಯೊಬ್ಬ ಸಾಮಾನ್ಯ ನಾಗರಿಕನ ಭಾವನೆ ಎಂದು ನಾನು ಭಾವಿಸುತ್ತೇನೆ. ಇದರಲ್ಲಿ ಯಾವುದೇ ರಾಜಿ ಇಲ್ಲ ಎಂದು ಸಚಿವ ಹೇಳಿದ್ದಾರೆ.

ಪಾಕ್​ಗೆ ಹೋಗಿದ್ದ ಬಿಸಿಸಿಐ ಅಧ್ಯಕ್ಷ

ಪ್ರಸ್ತುತ ಮುಕ್ತಾಯದ ಹಂತ ತಲುಪಿರುವ ಏಷ್ಯಾಕಪ್​ ಟೂರ್ನಿಯಲ್ಲಿ ಪಾಕಿಸ್ತಾನದಲ್ಲಿ ನಡೆದ ಪಂದ್ಯಗಳಿಗೆ ಬಿಸಿಸಿಐ ಅಧ್ಯಕ್ಷ ರೋಜರ್​ ಬಿನ್ನಿ ಮತ್ತು ಉಪಾಧ್ಯಕ್ಷ ರಾಜೀವ್ ಶುಕ್ಲಾ ಪಾಕ್​ಗೆ ತೆರಳಿದ್ದರು. ಸೆಪ್ಟೆಂಬರ್​ 4 ರಂದು ವಾಘಾ ಗಡಿಯ ಮೂಲಕ ಪಾಕಿಸ್ತಾನಕ್ಕೆ ಹೋಗಿದ್ದ ಅವರು, 3 ದಿನಗಳ ನಂತರ ಭಾರತಕ್ಕೆ ಮರಳಿದ್ದರು. ಈ ಬೆನ್ನಲ್ಲೇ ಉಭಯ ತಂಡಗಳ ನಡುವೆ ದ್ವಿಪಕ್ಷೀಯ ಸರಣಿಗಳು ಆರಂಭವಾಗಲಿವೆ ಎಂದು ವರದಿಯಾಗಿತ್ತು. ಆದರೆ ಸಚಿವರು​ ಈ ವಿಚಾರವನ್ನು ತಳ್ಳಿಹಾಕಿದ್ದಾರೆ.

17 ವರ್ಷಗಳ ಬಳಿಕ ಪಾಕ್​ಗೆ ಪ್ರಯಾಣ

ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಆಹ್ವಾನದ ಮೇರೆಗೆ ಬಿನ್ನಿ ಮತ್ತು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಏಷ್ಯಾ ಕಪ್ ಪಂದ್ಯಗಳನ್ನು ವೀಕ್ಷಿಸಿದ ನಂತರ ಅಟ್ಟಾರಿ-ವಾಘಾ ಗಡಿಯ ಮೂಲಕ ಭಾರತಕ್ಕೆ ಮರಳಿದರು. 17 ವರ್ಷಗಳ ಬಳಿಕ ಇಬ್ಬರು ಬಿಸಿಸಿಐ ಪದಾಧಿಕಾರಿಗಳು ಪಾಕಿಸ್ತಾನಕ್ಕೆ ತೆರಳಿದ್ದು, ಇದೇ ಮೊದಲ ನಿದರ್ಶನ.

ದ್ವಿಪಕ್ಷೀಯ ಸರಣಿಗೆ ಭರವಸೆ ಇದೆ ಎಂದಿದ್ದ ಬಿನ್ನಿ

ಪಾಕಿಸ್ತಾನ ಭೇಟಿಯ ನಂತರ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ, ಉಭಯ ದೇಶಗಳ ನಡುವೆ ದ್ವಿಪಕ್ಷೀಯ ಸರಣಿ ನಡೆಯಲಿದೆ. ಈ ಭೇಟಿ ಆಶಾದಾಯಕ ಮೂಡಿಸಿದೆ ಎಂದು ಹೇಳಿದ್ದರು. ಅವರು ನಮ್ಮನ್ನು ಚೆನ್ನಾಗಿ ನೋಡಿಕೊಂಡರು. ಉತ್ತಮ ಆತಿಥ್ಯ ಅದಾಗಿತ್ತು. ಎರಡು ದೇಶಗಳ ನಡುವೆ ದ್ವಿಪಕ್ಷೀಯ ಸರಣಿಗಳ ಆಯೋಜನೆಗೆ ಇದೊಂದು ಉತ್ತಮ ಹೆಜ್ಜೆ ಎಂದು ಅವರು ಹೇಳಿದ್ದರು. ಇದೀಗ ಕ್ರೀಡಾ ಸಚಿವರು ಈ ಹೇಳಿಕೆಯನ್ನು ತಿರಸ್ಕರಿಸಿದ್ದು, ಭಯೋತ್ಪಾದನೆ ನಿಲ್ಲಿಸಿದರೆ ಮಾತ್ರ ಇದು ಸಾಧ್ಯ ಎಂದು ಹೇಳಿದ್ದಾರೆ.