ಕನ್ನಡ ಸುದ್ದಿ  /  Sports  /  Cricket News Pakistan To Travel India For Odi World Cup 2023 Pakistan Cricket Board Confirms To Icc Prs

ODI World Cup: ಏಕದಿನ ವಿಶ್ವಕಪ್​​ ಟೂರ್ನಿಗೆ ಭಾರತಕ್ಕೆ ಬರಲು ಕೊನೆಗೂ ಒಪ್ಪಿದ ಪಾಕಿಸ್ತಾನ; ಐಸಿಸಿಗೆ ದೃಢಪಡಿಸಿದ ಪಿಸಿಬಿ

ಏಷ್ಯಾಕಪ್-2023 (Asia Cup 2023) ಟೂರ್ನಿಯಲ್ಲಿ ಭಾರತ ಪಾಲ್ಗೊಳ್ಳುವಿಕೆಗೆ ಸಂಬಂಧಿಸಿ ಪಾಕಿಸ್ತಾನ ಮತ್ತು ಬಿಸಿಸಿಐ (BCCI) ಜಗಳವಾಡುತ್ತಿರುವ ಸಮಯದಲ್ಲಿ ಈ ಮಹತ್ವದ ಬೆಳವಣಿಗೆ ನಡೆದಿರುವುದು ವಿಶೇಷ.

ಏಕದಿನ ವಿಶ್ವಕಪ್​ ಟೂರ್ನಿಗೆ ಭಾರತಕ್ಕೆ ಬರಲು  ಒಪ್ಪಿಗೆ ನೀಡಿರುವ ಪಾಕಿಸ್ತಾನ
ಏಕದಿನ ವಿಶ್ವಕಪ್​ ಟೂರ್ನಿಗೆ ಭಾರತಕ್ಕೆ ಬರಲು ಒಪ್ಪಿಗೆ ನೀಡಿರುವ ಪಾಕಿಸ್ತಾನ

ಐಸಿಸಿ ಏಕದಿನ ವಿಶ್ವಕಪ್ 2023 ಟೂರ್ನಿಗೆ (ICC ODI World Cup 2023) ಭಾರತಕ್ಕೆ ಪ್ರಯಾಣಿಸುವುದಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ (Pakistan Cricket Board) ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್​ಗೆ (International Cricket Board) ದೃಢಪಡಿಸಿದೆ. ಏಷ್ಯಾಕಪ್ 2023 (Asia Cup 2023) ಟೂರ್ನಿಯಲ್ಲಿ ಭಾರತ ಪಾಲ್ಗೊಳ್ಳುವಿಕೆಗೆ ಸಂಬಂಧಿಸಿ ಪಾಕಿಸ್ತಾನ ಮತ್ತು ಬಿಸಿಸಿಐ (BCCI) ಜಗಳವಾಡುತ್ತಿರುವ ಸಮಯದಲ್ಲಿ ಈ ಮಹತ್ವದ ಬೆಳವಣಿಗೆ ನಡೆದಿರುವುದು ವಿಶೇಷ.

ಪ್ರಸಕ್ತ ಸಾಲಿನ ಏಷ್ಯಾಕಪ್​ ಟೂರ್ನಿಯ ಆತಿಥ್ಯ ಪಾಕಿಸ್ತಾನ ತಂಡಕ್ಕೆ ಸಿಕ್ಕಿದೆ. ಆದರೆ ಭಾರತವು, ಪಾಕ್​ಗೆ ಪ್ರಯಾಣಿಸುವುದಿಲ್ಲ ಎಂದು ಕಡ್ಡಿ ತುಂಡು ಮಾಡಿದಂತೆ ಹೇಳಿದೆ. ಇದೇ ಕಾರಣಕ್ಕೆ ಏಷ್ಯಾಕಪ್​ಗೆ ಟೀಮ್​ ಇಂಡಿಯಾ (Team India) ನಮ್ಮ ದೇಶಕ್ಕೆ ಬಂದರೆ ಮಾತ್ರ, ನಾವು ಏಕದಿನ ವಿಶ್ವಕಪ್​ಗೆ ಭಾರತಕ್ಕೆ ಬರುತ್ತೇವೆ ಎಂದು ಪಾಕಿಸ್ತಾನ ಹೇಳಿತ್ತು. ಇದೀಗ ಪಾಕಿಸ್ತಾನ ತಂಡವು ಈಗ ಭಾರತಕ್ಕೆ ಪ್ರಯಾಣಿಸಲು ಒಪ್ಪಿಗೆ ಸೂಚಿಸಿದೆ.

ಪಾಕಿಸ್ತಾನದ ಸ್ಥಳೀಯ ಮಾಧ್ಯಮಗಳು ಪಿಸಿಬಿಯ ಈ ನಿರ್ಧಾರವನ್ನು ಶೇಕಡಾ ನೂರಕ್ಕೆ ನೂರು ನಿಜ ಎಂದು ದೃಢಪಡಿಸಿವೆ. ಮೇ 27ರಂದು ಬಿಸಿಸಿಐನ ವಿಶೇಷ ಸಾಮಾನ್ಯ ಸಭೆ (Special General Meeting) ನಡೆಯಲಿದೆ. 2023ರ ಏಕದಿನ ವಿಶ್ವಕಪ್ ಮತ್ತು 2023ರ ಏಷ್ಯಾಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ (Ind vs Pak 2023) ಮುಖಾಮುಖಿಗೆ ಸಂಬಂಧಿಸಿದ ವಿಷಯದ ಮೇಲೆ ಚರ್ಚೆಯ ಪ್ರಾಥಮಿಕ ಅಂಶವಾಗಿರಲಿದೆ ಎಂದು ನಿರೀಕ್ಷಿಸಲಾಗಿದೆ.

ಮೇ 27ರಂದು ಏಕದಿನ ವಿಶ್ವಕಪ್ ವೇಳಾಪಟ್ಟಿ (ODI World Cup Schedule) ಪ್ರಕಟ ಮತ್ತು ಏಷ್ಯಾಕಪ್​​​ ಆತಿಥ್ಯದ ಸ್ಥಳವೂ ಅಂತಿಮಗೊಳ್ಳುವ ನಿರೀಕ್ಷೆ ಇದೆ. ವರದಿಗಳ ಪ್ರಕಾರ, ಏಕದಿನ ವಿಶ್ವಕಪ್ ಅಕ್ಟೋಬರ್ 5 ರಂದು ಪ್ರಾರಂಭವಾಗಿ ನವೆಂಬರ್ 19 ರಂದು ಕೊನೆಗೊಳ್ಳುವ ನಿರೀಕ್ಷೆಯಿದೆ. ಈ ಮೆಗಾ ಟೂರ್ನಿಗಾಗಿ ಬಿಸಿಸಿಐ 12 ಸ್ಥಳಗಳನ್ನು ಆಯ್ಕೆ ಮಾಡಿದೆ. ಅಹಮದಾಬಾದ್​​ನ ನರೇಂದ್ರ ಮೋದಿ ಸ್ಟೇಡಿಯಂ (Narendra Modi Stadium) ಉದ್ಘಾಟನಾ ಮತ್ತು ಫೈನಲ್​ ಪಂದ್ಯಗಳಿಗೆ ಆತಿಥ್ಯ ವಹಿಸಲಿದೆ.

ಅಷ್ಟೇ ಅಲ್ಲ, ಪಾಕಿಸ್ತಾನ ಮತ್ತು ಭಾರತದ ನಡುವಿನ ಪಂದ್ಯವು ಅಹಮದಾಬಾದ್​ನಲ್ಲೇ ಆಯೋಜನೆಯಾಗಲಿದೆ ಎಂದೂ ಹೇಳಲಾಗುತ್ತಿದೆ. ಆದರೆ ಪಿಸಿಬಿ ಅಧ್ಯಕ್ಷ ನಜಮ್ ಸೇಥಿ (PCB Cheif Najam Sethi) ಹಿಂದೇಟು ಹಾಕಿದ್ದಾರೆ. ಮತ್ತೊಂದೆಡೆ ಶಾಹೀದ್​ ಅಫ್ರಿದಿ, ಏಕದಿನ ವಿಶ್ವಕಪ್​ಗೆ ಪಾಕಿಸ್ತಾನವು ಭಾರತಕ್ಕೆ ಪ್ರಯಾಣ ಬೆಳೆಸಬೇಕೆಂದು ಸೂಚಿಸಿದ್ದಾರೆ.

ಇನ್ನು ಕೆಲವು ಪಾಕಿಸ್ತಾನದ ಮಾಜಿ ಆಟಗಾರರು, ಭಾರತದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಏಷ್ಯಾಕಪ್​ಗೆ ಪಾಕ್​ಗೆ ಬರಲು ಹಿಂದೇಟು ಹಾಕುತ್ತಿರುವ ಭಾರತದ ನಡೆಯನ್ನು ಟೀಕಿಸಿದ್ದಾರೆ. ಭದ್ರತಾ ಸಮಸ್ಯೆಯ ನೆಪ ಹೇಳಿ ಏಷ್ಯಾಕಪ್​ಗೆ ಬರಲು ಹಿಂದೆ ಹೆಜ್ಜೆ ಇಡುತ್ತಿರುವುದು ಸರಿಯಲ್ಲ ಎಂದು ಕಿಡಿಕಾರಿದ್ದರು.

ಭಾರತ - ಪಾಕಿಸ್ತಾನ (India vs Pakistan) ತಂಡಗಳ ನಡುವೆ ಟೆಸ್ಟ್​ ಪಂದ್ಯದ ಕಾದಾಟಕ್ಕೆ ಮತ್ತೆ ವೇದಿಕೆ ಸಜ್ಜಾಗುತ್ತಾ? ಹೀಗೊಂದು ಪ್ರಶ್ನೆ ಕ್ರಿಕೆಟ್​ ವಲಯದಲ್ಲಿ ಹರಿದಾಡುತ್ತಿದೆ. ಇಂಡೋ-ಪಾಕ್​ ಕದನಕ್ಕೆ ರಣರೋಚಕ ಸಮರ ಇಡೀ ವಿಶ್ವವೇ ಕಾದು ಕುಳಿತಿರುತ್ತದೆ. ಟೀಮ್​ ಇಂಡಿಯಾವನ್ನು ಪಾಕಿಸ್ತಾನಕ್ಕೆ ಕರೆತರಲು ಸಾಕಷ್ಟು ಕಸರತ್ತು ನಡೆಸುತ್ತಿರುವ ಶತ್ರುರಾಷ್ಟ್ರ, ಈಗ ಬಿಸಿಸಿಐ (BCCI) ಮುಂದೆ ಮತ್ತೊಂದು ಆಫರ್​ ಅನ್ನು ಇಟ್ಟಿದೆ. ಈ ಕುರಿತ ಸಂಪೂರ್ಣ ಸುದ್ದಿಗೆ ಈ ಲಿಂಕ್​ ಮೇಲೆ ಕ್ಲಿಕ್​ ಮಾಡಿ.