ಕನ್ನಡ ಸುದ್ದಿ  /  Sports  /  Cricket News Ravindra Jadeja Is Bjp Karyakarta He Helped Csk Win Ipl 2023 Final K Annamalai Controversial Statement Prs

Ravindra Jadeja: ರವೀಂದ್ರ ಜಡೇಜಾ ಬಿಜೆಪಿ ಕಾರ್ಯಕರ್ತ; ಅವರ ಸಹಾಯದಿಂದ ಸಿಎಸ್​ಕೆ ಐಪಿಎಲ್ ಟ್ರೋಫಿ​ ಗೆದ್ದಿದ್ದು; ಅಣ್ಣಾಮಲೈ ಸಂಚಲನ ಹೇಳಿಕೆ

ಆಲ್​ರೌಂಡರ್ ರವೀಂದ್ರ ಜಡೇಜಾ (Ravindra Jadeja) ಬಿಜೆಪಿ ಕಾರ್ಯಕರ್ತ. ಆತನ ನೆರವಿನಿಂದಲೇ ಚೆನ್ನೈ ಸೂಪರ್ ಕಿಂಗ್ಸ್​ ಐಪಿಎಲ್​ ಫೈನಲ್​ನಲ್ಲಿ ಟ್ರೋಫಿ ಜಯಿಸಿದೆ ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ ಅಣ್ಣಾಮಲೈ (Tamil Nadu BJP president K Annamalai) ಸಂಚಲನ ಹೇಳಿಕೆ ನೀಡಿದ್ದಾರೆ.

ಬಿಜೆಪಿ ಕಾರ್ಯಕರ್ಯ ರವೀಂದ್ರ ಜಡೇಜಾ ಅವರಿಂದ ಸಿಎಸ್​ಕೆ ಟ್ರೋಫಿ ಗೆದ್ದಿದೆ ಎಂದ ಅಣ್ಣಾಮಲೈ
ಬಿಜೆಪಿ ಕಾರ್ಯಕರ್ಯ ರವೀಂದ್ರ ಜಡೇಜಾ ಅವರಿಂದ ಸಿಎಸ್​ಕೆ ಟ್ರೋಫಿ ಗೆದ್ದಿದೆ ಎಂದ ಅಣ್ಣಾಮಲೈ

16ನೇ ಆವೃತ್ತಿಯ ಐಪಿಎಲ್​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (Channai Super Kings)​ ಗೆದ್ದು ದಾಖಲೆಯ ಟ್ರೋಫಿ ಮುಡಿಗೇರಿಸಿಕೊಂಡಿದೆ. ಅದರಲ್ಲೂ ಗುಜರಾತ್​ ಟೈಟಾನ್ಸ್ (Gujarat Titans)​ ಎದುರಿನ ಫೈನಲ್​ ಪಂದ್ಯದ ಕೊನೆಯ ಓವರ್​​ನ ಅಂತಿಮ ಎಸೆತದಲ್ಲಿ ರವೀಂದ್ರ ಜಡೇಜಾ ಬೌಂಡರಿ ಸಿಡಿಸಿ ಸ್ಮರಣಿಯ ಗೆಲುವು ತಂದು ಕೊಟ್ಟರು. ಆದರೆ, ಈ ಗೆಲುವು ತಂದುಕೊಟ್ಟಿದ್ದು ಒಬ್ಬ ಬಿಜೆಪಿ (BJP) ಕಾರ್ಯಕರ್ತನಂತೆ. ಹೀಗಂತ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ ಅಣ್ಣಾಮಲೈ (Tamil Nadu BJP president K Annamalai) ಅವರು ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ.

ಜಡೇಜಾ ಬಿಜೆಪಿ ಕಾರ್ಯಕರ್ತ

ಫೈನಲ್ ಪಂದ್ಯದಲ್ಲಿ ರವೀಂದ್ರ ಜಡೇಜಾ ಚೆನ್ನೈ ತಂಡವನ್ನು ಗೆದ್ದುಕೊಂಡಿದ್ದು ಗೊತ್ತೇ ಇದೆ. ಈ ಹಿನ್ನೆಲೆಯಲ್ಲಿ ಅಣ್ಣಾಮಲೈ ನೇತೃತ್ವದ ತಮಿಳುನಾಡು ಬಿಜೆಪಿ ಬುಧವಾರ ಟ್ವೀಟ್ ಮಾಡಿದೆ. ಅದರಲ್ಲಿ 'ಜಡೇಜಾ ಬಿಜೆಪಿ ಕಾರ್ಯಕರ್ತ. ಅವರ ಪತ್ನಿ ರಿವಾಬಾ ಜಡೇಜಾ (Rivaba Jadeja) ಗುಜರಾತ್‌ನ ಜಾಮ್‌ನಗರ ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕರಾಗಿದ್ದಾರೆ. ಅವರು (ಜಡೇಜಾ) ಗುಜರಾತಿ. ಬಿಜೆಪಿ ಕಾರ್ಯಕರ್ತ ಜಡೇಜಾ ಮಾತ್ರ ಸಿಎಸ್‌ಕೆಗೆ ಗೆಲುವು ತಂದುಕೊಟ್ಟಿದ್ದಾರೆ ಎಂದು ಬರೆದಿದೆ.

ಟೆಲಿವಿಷನ್ ಚಾನೆಲ್‌ನ ನಿರೂಪಕರೊಬ್ಬರಿಗೆ ಅಣ್ಣಾಮಲೈ ಅವರು ಪ್ರತಿಕ್ರಿಯೆ ನೀಡುವ ಸಂದರ್ಭದಲ್ಲಿ ಚೆನ್ನೈ ತಂಡವು ಪ್ರಶಸ್ತಿ ಗೆದ್ದಿದ್ದಕ್ಕೆ ಹೆಮ್ಮೆ ಪಡುತ್ತಿದ್ದೇವೆ. ಆದರೆ ಗುಜರಾತ್ ಟೈಟಾನ್ಸ್​​ ತಂಡದಲ್ಲಿ ಸಿಎಸ್‌ಕೆಗಿಂತ ಹೆಚ್ಚು ತಮಿಳು ಆಟಗಾರರು ಇರುವುದರಿಂದ ಜನರು ಜಿಟಿ ಆಟವನ್ನೂ ಸಂಭ್ರಮಿಸಬೇಕು ಎಂದು ಹೇಳಿದ್ದಾರೆ. ಅಣ್ಣಾಮಲೈ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಹಿಗ್ಗಾಮುಗ್ಗಾ ಜಾಡಿಸುತ್ತಿದ್ದಾರೆ.

ಧೋನಿಯಿಂದ ಬೇರೆಯವರನ್ನು ಬೆಂಬಲಿಸುತ್ತಿದ್ದೇವೆ

ತಮಿಳಿನ ಆಟಗಾರ (ಸಾಯಿ ಸುದರ್ಶನ್) 96 ರನ್ ಗಳಿಸಿದರು. ನಾವು ಚೆನ್ನೈ ಕಪ್​ ಗೆಲುವಿನ ಜೊತೆಗೆ ಆತನ ಆಟವನ್ನೂ ಸಹ ಆಚರಿಸುತ್ತೇವೆ. ಯಾವುದೇ ತಮಿಳರು ಚೆನ್ನೈ ತಂಡಕ್ಕಾಗಿ ಫೈನಲ್ ಆಡಿಲ್ಲ. ಆದರೆ, ಧೋನಿಯಿಂದಾಗಿ ನಾವು ತಂಡದಲ್ಲಿರುವ ಬೇರೆ ಆಟಗಾರರನ್ನೂ ಬೆಂಬಲಿಸುತ್ತೇವೆ. ಬಿಜೆಪಿ ಕಾರ್ಯಕರ್ತನೊಬ್ಬ ಗೆಲುವಿನ ಹಾದಿಯಲ್ಲಿರುವುದು ನಮಗೆ ಹೆಮ್ಮೆ ತಂದಿದೆ ಎಂದಿದ್ದಾರೆ.

ಜಡೇಜಾ ಪತ್ನಿ ಬಿಜೆಪಿ ಶಾಸಕಿ

ಮತ್ತೊಂದೆಡೆ, ಜಡೇಜಾ ಅಧಿಕೃತವಾಗಿ ಬಿಜೆಪಿಗೆ ಸೇರಿದ್ದಾರೆಯೇ ಎಂಬುದು ಸ್ಪಷ್ಟವಾಗಿಲ್ಲವಾದರೂ, 2019 ರಲ್ಲಿ ಪಕ್ಷವನ್ನು ಬೆಂಬಲಿಸುವುದಾಗಿ ಅವರು ಟ್ವೀಟ್ ಮಾಡಿದ್ದರು. ಸದ್ಯ ಅವರ ಪತ್ನಿ ಜಾಮ್​ ನಗರ ಕ್ಷೇತ್ರದ ಬಿಜೆಪಿ ಪಕ್ಷದ ಶಾಸಕಿಯಾಗಿದ್ದಾರೆ. ಕಳೆದ ವರ್ಷ ನಡೆದ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. ಈ ವೇಳೆ ಜಡೇಜಾ ಸಹ ಪತ್ನಿಯ ಜೊತೆ ಪ್ರಚಾರದಲ್ಲಿ ಭಾಗಿಯಾಗಿದ್ದರು.

ಪಂದ್ಯದ ಚಿತ್ರಣ

ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 214 ರನ್ ಗಳಿಸಿತು. ಗುಜರಾತ್ ಪರ ಸಾಯಿ ಸುದರ್ಶನ್ 47 ಎಸೆತಗಳಲ್ಲಿ 96 ರನ್ ಗಳಿಸಿ ತಂಡದ ಗರಿಷ್ಠ ಸ್ಕೋರ್ ಗಳಿಸಿದ್ದರು. ಚೆನ್ನೈನ ಬ್ಯಾಟಿಂಗ್ ಇನ್ನಿಂಗ್ಸ್‌ಗೆ ಮಳೆ ಅಡ್ಡಿಪಡಿಸಿದ್ದರಿಂದ ಪಂದ್ಯವನ್ನು 15 ಓವರ್‌ಗಳಿಗೆ ಕಡಿತಗೊಳಿಸಲಾಯಿತು. ಚೆನ್ನೈಗೆ 15 ಓವರ್‌ಗಳಲ್ಲಿ 171 ರನ್‌ಗಳ ಗುರಿ ನೀಡಲಾಯಿತು. ಡೆವೊನ್ ಕಾನ್ವೆ 47, ಶಿವಂ ದುಬೆ 32, ಮಿಂಚಿದರು. ಕೊನೆಯ ಓವರ್​ನ ಕೊನೆಯ ಎರಡು ಎಸೆತಗಳಲ್ಲಿ ಚೆನ್ನೈಗೆ 10 ರನ್‌ಗಳ ಅಗತ್ಯವಿತ್ತು. ಆಗ ಜಡೇಜಾ ಸಿಕ್ಸರ್​​ ಮತ್ತು ಬೌಂಡರಿ ಗಳಿಸಿ ಚೆನ್ನೈ ತಂಡಕ್ಕೆ 5ನೇ ಟ್ರೋಫಿ ಗೆಲ್ಲಲು ನೆರವಾದರು.