Kohli in CTR Hotel: ಬೆಂಗಳೂರಿನ ಮಲ್ಲೇಶ್ವರಂ ಸಿಟಿಆರ್ ಹೋಟೆಲ್ನಲ್ಲಿ ಮಸಾಲೆದೋಸೆ ಸವಿದ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ, ವಿಡಿಯೋ ನೋಡಿ
ಬೆಂಗಳೂರಿನ ಹೆಸರಾಂತ ಮಲ್ಲೇಶ್ವರಂನ ಸಿಟಿಆರ್ ಹೋಟೆಲ್ನಲ್ಲಿ ಆರ್ಸಿಬಿ ತಂಡದ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ಮತ್ತು ಪತ್ನಿ ಅನುಷ್ಕಾ ಶರ್ಮಾ ಮಸಾಲೆ ದೋಸೆ (CTR Hotel Masala Dosa) ಸವಿದು ಗಮನ ಸೆಳೆದಿದ್ದಾರೆ.

16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ (Indian Premier League) ಧಮಾಕ ಸೃಷ್ಟಿಸುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (Virat Kohli) ಮತ್ತು ಪತ್ನಿ ಅನುಷ್ಕಾ ಶರ್ಮಾ (Anushka Sharma) ಅವರು ಬೆಂಗಳೂರಿನ ವಿಶೇಷ ಸ್ಥಳವೊಂದಕ್ಕೆ ಭೇಟಿ ನೀಡಿದ್ದಾರೆ. ಚಿನ್ನಸ್ವಾಮಿ ಮೈದಾನದಲ್ಲಿ (Chinnaswamy Stadium) ರಾಜಸ್ಥಾನ್ ರಾಯಲ್ಸ್ (Rajasthan Royals) ಎದುರಿನ ಪಂದ್ಯಕ್ಕೂ ಮುನ್ನಾ ದಿನ ಈ ಸ್ಟಾರ್ ದಂಪತಿ ಇಂದು ಬೆಳಗ್ಗೆ ಹೆಸರಾಂತ ಮಲ್ಲೇಶ್ವರಂನ ಸಿಟಿಆರ್ ಹೋಟೆಲ್ನಲ್ಲಿ ಮಸಾಲೆ ದೋಸೆ (CTR Hotel Masala Dosa) ಸವಿದು ಗಮನ ಸೆಳೆದಿದ್ದಾರೆ.
ವಿಶಿಷ್ಟ ಶೈಲಿಯ ಆಹಾರದಿಂದಲೇ ಗಮನ ಸೆಳೆದಿರುವ ಬೆಂಗಳೂರಿನ ಮಲ್ಲೇಶ್ವರಂನ 7ನೇ ಕ್ರಾಸ್ನಲ್ಲಿರುವ ಸೆಂಟ್ರಲ್ ಟಿಫನ್ ಸೆಂಟರ್ (Shre Sagar Central Tiffin Room in Malleshwaram) ಹೋಟೆಲ್ ಮಸಾಲೆ ದೋಸೆಗೆ ಹೆಚ್ಚು ಪ್ರಸಿದ್ಧಿ. ಬೆಂಗಳೂರಿನ ಹಲವಾರು ಹಳೆಯ ಹೊಟೇಲ್‌ಗಳ ಪೈಕಿ ಇದು ಒಂದು. ಅತ್ಯಂತ ರುಚಿಕರ, ಆಹ್ಲಾದಕರ ದೋಸೆ ಇಲ್ಲಿ ದೊರೆಯುತ್ತದೆ. ಹೀಗಾಗಿಯೇ ಬೆಂಗಳೂರಿಗೆ ಆಗಮಿಸುವ ಗಣ್ಯರು ಈ ಹೋಟೆಲ್‌ಗೆ ತಪ್ಪದೇ ಭೇಟಿ ನೀಡುತ್ತಾರೆ.
ಇದೀಗ ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರ ಪತ್ನಿ ಅನುಷ್ಕಾ ಶರ್ಮಾ ಅವರೊಂದಿಗೆ ಭೇಟಿ ನೀಡಿ ಮಸಾಲೆ ದೋಸೆ ಸವಿದು ಗಮನ ಸೆಳೆದಿದ್ದಾರೆ. ಈ ವಿಡಿಯೋ ಇದೀಗ ಸಖತ್ ವೈರಲ್ ಆಗುತ್ತಿದೆ. ಮಸಾಲೆ ದೋಸೆ ಸವಿಯಲು ಸಿಟಿಆರ್ ಹೋಟೆಲ್‌ಗೆ ಬಂದಿದ್ದ ಕೊಹ್ಲಿಯನ್ನು ಕಣ್ತುಂಬಿಕೊಳ್ಳಲು ಜನಸಾಗರವೇ ಹರಿದು ಬಂದಿತ್ತು. ಒಂದೇ ಒಂದು ಸೆಲ್ಫಿ ತೆಗೆದುಕೊಳ್ಳಲು ಮುಗಿ ಬಿದ್ದರು. ಆದರೆ ಭಾರಿ ಭದ್ರತೆಯಿದ್ದ ಕಾರಣ, ಅಭಿಮಾನಿಗಳಿಗೆ ನಿರಾಸೆಯಾಯಿತು.
ಆರ್ಸಿಬಿ.. ಆರ್ಸಿಬಿ.. ಘೋಷಣೆ
ಕೊಹ್ಲಿ-ಅನುಷ್ಕಾ ಹೋಟೆಲ್ನಿಂದ ಬರುವಿಕೆಗೆ ಹೊರೆಗ ಕಾಯುತ್ತಿದ್ದ ಅಭಿಮಾನಿಗಳು ವಿಡಿಯೋ, ಫೋಟೋಗೆ ತೆಗೆದುಕೊಂಡರು. ಹಾಗೆಯೇ ಇದೇ ವೇಳೆ ಆರ್ಸಿಬಿ, ಆರ್ಸಿಬಿ ಎಂದು ಕೂಗಿದರು. ಹಾಗೆಯೇ ಸ್ಟಾರ್ ದಂಪತಿಗೆ ಜೈಕಾರ ಹಾಕಿದರು. ಅನುಷ್ಕಾ ಕಾರು ಹತ್ತುವಾಗ ಅಭಿಮಾನಿಯೊಬ್ಬರು ಸೆಲ್ಫಿಗೆ ಮುಗಿ ಬಿದ್ದರು. ಆದರೆ ಬೇಡ ಎಂದು ಕೊಹ್ಲಿ ಹೇಳಿದ್ದನ್ನು ವೈರಲ್ ವಿಡಿಯೋದಲ್ಲಿ ಕಾಣಬಹುದು. ಪ್ರಸ್ತುತ ಐಪಿಎಲ್ನಲ್ಲಿ ಕೊಹ್ಲಿ 4 ಅರ್ಧಶತಕಗಳ ನೆರವಿನಿಂದ 279 ರನ್ ಗಳಿಸಿ ಆರೆಂಜ್ ಕ್ಯಾಪ್ ರೇಸ್ನಲ್ಲಿದ್ದಾರೆ. ಬಹಳ ದಿನಗಳ ನಂತರ ಕಳೆದ ಪಂದ್ಯದಲ್ಲಿ ಕ್ಯಾಪ್ಟನ್ ಆಗಿದ್ದರು.
ಸಿಟಿಆರ್ ಮಸಾಲೆ ದೋಸೆ ಮಿಸ್ ಮಾಡಿಕೊಳ್ತಿದ್ದೇನೆ: ಎಬಿ ಡಿವಿಲಿಯರ್ಸ್
ಇತ್ತೀಚೆಗೆ ಆರ್ಸಿಬಿ ಇನ್ಸೈಡರ್ ಶೋನಲ್ಲಿ ಮಾತನಾಡಿದ್ದ ಎವಿ ಡಿವಿಲಿಯರ್ಸ್, ಮಲ್ಲೇಶ್ವರಂನ ಸಿಟಿಆರ್ ಹೋಟೆಲ್ನ ಮಸಾಲೆ ದೋಸೆ ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದರು. ಸಿಟಿಆರ್ನಲ್ಲಿ ಮಸಾಲೆ ದೋಸೆ (CTR Masala Dosa) ಅಂದರೆ ಎಲ್ಲಿಲ್ಲದ ಪ್ರೀತಿ. ಆದರೆ ಅದಕ್ಕೂ ದೂರವಾಗಿದ್ದೇನೆ. ಅತ್ಯಂತ ರುಚಿಯಾಗಿರುತ್ತದೆ ಎಂದು ಎಬಿಡಿ ಹೇಳಿದ್ದರು.
ಹಾಗೆಯೇ ಮಲ್ಲೇಶ್ವರಂ ಸಾಯಿರಾಮ್ ಚಾಟ್ಸ್ನಲ್ಲಿ ಮಸಾಲೆ ಪೂರಿ (Malleshwaram Sai Ram Chats Masala Puri) ತಿನ್ನುವುದನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ. ಮಸಾಲೆಪೂರಿ ತುಂಬಾ ಅದ್ಭುತವಾಗಿರುತ್ತದೆ. ಜೊತೆಗೆ ಆ ರಸ್ತೆಯಲ್ಲಿ ಹೂವುಗಳ ಸುವಾಸನೆ ಇಷ್ಟ ಆಗುತ್ತದೆ. ಅಷ್ಟೇ ಅಲ್ಲ, ಜಯನಗರದ ಕೂಲ್ ಜಾಯಿಂಟ್‌ನಲ್ಲಿ ಲೈಮ್ ಜ್ಯೂಸ್ (Laim Juice Cool Joint in Jayanagar) ಕುಡಿಯುವುದು ಬಹಳ ಇಷ್ಟ ಎಂದು ಬೆಂಗಳೂರಿನ ನಂಟಿನ ಬಗ್ಗೆ ಮಾತನಾಡಿದ್ದಾರೆ ಆರ್ಸಿಬಿ ಮಾಜಿ ಆಟಗಾರ.

ವಿಭಾಗ