RCB vs CSK IPL 2024: ಆರ್‌ಸಿಬಿ ವಿರುದ್ಧದ ಪಂದ್ಯಕ್ಕೆ ಸಿಎಸ್‌ಕೆ ರಣತಂತ್ರ; ಚೆನ್ನೈ ಸೂಪರ್ ಕಿಂಗ್ಸ್ ಆಡುವ ಸಂಭಾವ್ಯ 11ರ ಬಳಗ ಹೀಗಿದೆ
ಹೈವೋಲ್ಟೇಜ್ ಪಂದ್ಯಕ್ಕೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಸಿದ್ಧವಾಗಿದ್ದು, ಆರ್‌ಸಿಬಿ ವಿರುದ್ಧದ ಪಂದ್ಯಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ಆಡುವ ಸಂಭಾವ್ಯ 11ರ ಬಳಗ ಹೇಗಿರಲಿದೆ ಅನ್ನೋದರ ವಿವರ ಇಲ್ಲಿದೆ.

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ಹಾಗೂ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ನಡುವಿನ ಹೈವೋಲ್ಟೇಜ್ ಪಂದ್ಯ ಇಂದು (ಮೇ 18, ಶನಿವಾರ) ಸಂಜೆ 7.30ಕ್ಕೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Bengaluru Chinnaswamy Stadium) ನಡೆಯಲಿದೆ. ಇದು 2024ರ ಐಪಿಎಲ್‌ನ ಲೀಗ್ (IPL 2024 League Matches) ಹಂತದ ಕೊನೆಯ ಪಂದ್ಯವಾಗಿದೆ. ಆದರೆ ಪ್ಲೇ-ಆಫ್‌ಗೆ (IPL 2024 Play Offs) ಪ್ರವೇಶಿಸಲು ಆರ್‌ಸಿಬಿಗೆ (RCB) ಈ ಪಂದ್ಯ ತುಂಬಾ ಮುಖ್ಯವಾಗಿದೆ. ಹೀಗಾಗಿ ಭಾರಿ ಕುತೂಹಲ ಮೂಡಿಸಿರುವ ಆರ್‌ಸಿಬಿ-ಸಿಎಸ್‌ಕೆ (RCB vs CSK) ಪಂದ್ಯವನ್ನು ವೀಕ್ಷಿಸಲು ಕೋಟಿ ಕೋಟಿ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ.
ಆರ್‌ಸಿಬಿ ಆಡಿರುವ 13 ಪಂದ್ಯಗಳಲ್ಲಿ 6 ಗೆಲುವು ಹಾಗೂ 7 ಸೋಲಿನೊಂದಿಗೆ 12 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ಸಿಎಸ್‌ಕೆ (CSK) ಆಡಿರುವ 13 ಪಂದ್ಯಗಳಲ್ಲಿ 7 ಗೆಲುವು ಹಾಗೂ 6 ಸೋಲಿನೊಂದಿಗೆ 14 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ರುತುರಾಜ್ ಗಾಯಕ್ವಾಡ್ ನೇತೃತ್ವದ ಚೆನ್ನೈ ತಂಡ ಪ್ಲೇ-ಆಫ್‌ಗೆ ಪ್ರವೇಶಿಸಬೇಕಾದರೆ ಆರ್‌ಸಿಬಿ ವಿರುದ್ಧದ ಒಂದು ಗೆಲುವು ಸಾಕು. ಆದರೆ ಫಾಫ್ ಡು ಪ್ಲೆಸ್ಸಿಸ್ ಪಡೆಯದ್ದು ಅಷ್ಟು ಸುಲಭವಾಗಿಲ್ಲ. ಸಿಎಸ್‌ಕೆ ವಿರುದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 18 ರನ್‌ಗಳ ಅಂತರದಿಂದ ಗೆಲ್ಲಬೇಕಿದೆ.
ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣ ಬ್ಯಾಟರ್ಸ್‌ಗಳ ಸ್ವರ್ಗ ಅಂತಲೇ ಕರೆಯಲಾಗುತ್ತದೆ. ಇಲ್ಲಿ ಯಾವುದೇ ತಂಡ ಆಡಿದರೂ ದೊಡ್ಡ ಮೊತ್ತವನ್ನು ಕಲೆಹಾಕುವ ಗುರಿಯೊಂದಿಗೆ ಕಣಕ್ಕಿಳಿಯುತ್ತದೆ. ಇವತ್ತು ಕೂಡ ಬೃಹತ್ ಮೊತ್ತವನ್ನು ನಿರೀಕ್ಷಿಸಲಾಗಿದೆ. ಆರ್‌ಸಿಬಿಯಲ್ಲಿ ಕಿಂಗ್ ಕೊಹ್ಲಿ ಅಮೋಘ ಫಾರ್ಮ್‌ನಲ್ಲಿದ್ದಾರೆ. ಅವರು ಈ ಆವೃತ್ತಿಯಲ್ಲಿ ಆಡಿರುವ 13 ಪಂದ್ಯಗಳಲ್ಲಿ 155.16 ಸ್ಟ್ರೈಕ್ ರೇಟ್‌ನೊಂದಿಗೆ 661 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ ಹಾಗೂ ಐದು ಶತಕಗಳು ಸೇರಿವೆ. ಆರೆಂಜ್ ಕ್ಯಾಪ್ ರೇಸ್‌ನಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಸಿಎಸ್‌ಕೆ ವಿರುದ್ಧದ ಪಂದ್ಯದಲ್ಲೂ ವಿರಾಟ್ ತಮ್ಮ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿ ಆರ್‌ಸಿಬಿಯ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸುವ ಚಿಂತನೆ ನಡೆಸಿದ್ದಾರೆ.
ಆರ್‌ಸಿಬಿ ವಿರುದ್ಧ ಸಿಎಸ್‌ಕೆ ಆಡುವ ಸಂಭಾವ್ಯ 11ರ ಬಳಗ
ರಚಿನ್ ರವೀಂದ್ರ, ರುತುರಾಜ್ ಗಾಯಕ್ವಾಡ್ (ನಾಯಕ), ಡೇರಿಲ್ ಮಿಚೆಲ್, ಶಿವಂ ದುಬೆ, ಸಮೀರ್ ರಿಜ್ವಿ, ರವೀಂದ್ರ ಜಡೇಡಾ, ಎಂಎಸ್ ಧೋನಿ (ವಿಕೆಟ್ ಕೀಪರ್), ಮಿಚೆಲ್ ಸ್ಯಾಂಟ್ನರ್, ಶಾರ್ದೂಲ್ ಠಾಕೂರ್, ತುಷಾರ್ ದೇಶಪಾಂಡೆ, ಸಿಮರ್ಜಿತ್ ಸಿಂಗ್,
ಸಂಭಾವ್ಯ ಇಂಪ್ಯಾಕ್ಟ್ ಆಟಗಾರ: ಅಜಿಂಕ್ಯಾ ರಹಾನೆ
ಸಿಎಸ್‌ಕೆ ವಿರುದ್ಧ ಆರ್‌ಸಿಬಿ ಆಡುವ ಸಂಭಾವ್ಯ 11ರ ಬಳಗ
ವಿರಾಟ್ ಕೊಹ್ಲಿ, ಫಾಫ್ ಡು ಪ್ಲಿಸಿಸ್ (ನಾಯಕ), ರಜತ್ ಪಾಟಿದಾರ್, ಗ್ಲೆನ್ ಮ್ಯಾಕ್ಸ್‌ವೆಲ್, ಕ್ಯಾಮೆರಾನ್ ಗ್ರೀನ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಮಹಿಪಾಲ್ ಲೊಮ್ರೋರ್, ಕರಣ್ ಶರ್ಮಾ, ಯಶ್ ದಯಾಳ್, ಮೊಹಮ್ಮದ್ ಸಿರಾಜ್, ಸ್ವಪ್ನಿಲ್ ಸಿಂಗ್
ಸಂಭಾವ್ಯ ಇಂಪ್ಯಾಕ್ಟ್ ಆಟಗಾರ: ಸುಯಶ್ ಪ್ರಭುದೇಸಾಯಿ
ಇತ್ತಂಡಗಳ ಮುಖಾಮುಖಿಯನ್ನು ನೋಡಿದಾರೆ ಆರ್‌ಸಿಬಿಯೇ ಗೆಲುವಿನ ನೆಚ್ಚಿನ ತಂಡವಾಗಿದೆ. ಗೂಗಲ್ ಪ್ರಿಡಿಕ್ಷನ್‌ನಲ್ಲೂ ಶೇಕಡಾ 52 ರಷ್ಟು ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆಲ್ಲುವ ಸಾಧ್ಯತೆಯನ್ನು ತಿಳಿಸಿದ್ದರೆ, ಸಿಎಸ್‌ಕೆಗೆ ಶೇಕಡಾ 48 ರಷ್ಟು ಅವಕಾಶ ಇದೆ ಎಂದು ಹೇಳಿದೆ.
ಈವರೆಗೆ ಆರ್‌ಸಿಬಿ ಮತ್ತು ಸಿಎಸ್‌ಕೆ ಒಟ್ಟು 32 ಬಾರಿ ಮುಖಾಮುಖಿಯಾಗಿದ್ದು, ಇದರಲ್ಲಿ 21 ಪಂದ್ಯಗಳನ್ನು ಆರ್‌ಸಿಬಿ ಗೆದ್ದುಕೊಂಡಿದ್ದರೆ, 10 ಪಂದ್ಯಗಳನ್ನು ಚೆನ್ನೈ ಸೂಪರ್ ಕಿಂಗ್ಸ್ ಗೆದ್ದುಕೊಂಡಿದೆ. 1 ಪಂದ್ಯದಲ್ಲಿ ಫಲಿತಾಂಶ ಲಭ್ಯವಾಗಿಲ್ಲ. ಬೆಂಗಳೂರಿನಲ್ಲಿ ಇಂದು (ಮೇ 18, ಶನಿವಾರ) ಮಳೆಯಾಗುವ ಸಾಧ್ಯತೆ ಹೆಚ್ಚಿದೆ. ಒಂದು ವೇಳೆ ವರುಣ ಕೃಪೆ ತೋರಿ ಸ್ವಲ್ಪ ಬಿಡುವು ಪಡೆದರೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ರನ್ ಮಳೆಯಾಗುವುದರಲ್ಲಿ ಅನುಮಾನೇ ಇಲ್ಲ.
