RCB 2023: ಆರ್‌ಸಿಬಿ ತಂಡದಲ್ಲಿ ದೊಡ್ಡ ಬದಲಾವಣೆ; ಮೈಕ್ ಹೆಸನ್-ಸಂಜಯ್ ಬಂಗಾರ್ಗೆ ಗುಡ್ಬೈ ಹೇಳಲು ಫ್ರಾಂಚೈಸಿ ನಿರ್ಧಾರ
RCB 2023: ಐಪಿಎಲ್ 2023ರಲ್ಲಿ 6ನೇ ಸ್ಥಾನಕ್ಕೆ ತೃಪ್ತಿಪಟ್ಟ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕ್ರಿಕೆಟ್ ಕಾರ್ಯಾಚರಣೆಗಳ ನಿರ್ದೇಶಕ ಮೈಕ್ ಹೆಸನ್ ಮತ್ತು ಮುಖ್ಯ ಕೋಚ್ ಸಂಜಯ್ ಬಂಗಾರ್ ಅವರನ್ನು ಕೈಬಿಡಲು ನಿರ್ಧರಿಸಿದೆ.

ಟ್ರೋಫಿ ಗೆಲ್ಲದಿದ್ದರೂ ವಿಶ್ವಮಟ್ಟದಲ್ಲಿ ಹೆಸರು ಪಡೆದಿರುವ ಇಂಡಿಯನ್ ಪ್ರೀಮಿಯರ್ ಲೀಗ್ನ (IPL 2023) ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡದ ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿಯೊಂದು ಹೊರ ಬಿದ್ದಿದೆ. ತಂಡದಲ್ಲಿ ಮೇಜರ್ ಸರ್ಜರಿಗೆ ಆರ್‌ಸಿಬಿ ಫ್ರಾಂಚೈಸಿ ಮುಂದಾಗಿದೆ. ಹೌದು, ಟೀಮ್ ಮ್ಯಾನೇಜ್ಮೆಂಟ್ನಲ್ಲಿ (Team Management) ಭಾರಿ ದೊಡ್ಡ ಬದಲಾವಣೆಗೆ ನಿಶ್ಚಯಿಸಿದೆ.
ಟ್ರೆಂಡಿಂಗ್ ಸುದ್ದಿ
ಹೆಸನ್-ಬಂಗಾರ್ಗೆ ಗೇಟ್ಪಾಸ್
ಐಪಿಎಲ್ 2023ರಲ್ಲಿ 6ನೇ ಸ್ಥಾನಕ್ಕೆ ತೃಪ್ತಿಪಟ್ಟ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕ್ರಿಕೆಟ್ ಕಾರ್ಯಾಚರಣೆಗಳ ನಿರ್ದೇಶಕ ಮೈಕ್ ಹೆಸನ್ ಮತ್ತು ಮುಖ್ಯ ಕೋಚ್ ಸಂಜಯ್ ಬಂಗಾರ್ (Mike Hesson Sanjay Bangar) ಅವರನ್ನು ಕೈಬಿಡಲು ನಿರ್ಧರಿಸಿದೆ. ಈ ಇಬ್ಬರೊಂದಿಗಿನ ಒಪ್ಪಂದವನ್ನು ಮುಂದುವರಿಸದಿರಲು ಚಿಂತನೆ ನಡೆಸಿದೆ. ಈಗಾಗಲೇ ನೂತನ ಕೋಚಿಂಗ್ ಸಿಬ್ಬಂದಿ ನೇಮಿಸಿಕೊಳ್ಳಲು ತಲಾಶ್ ನಡೆಸಿದೆ.
ಕೋಚ್ ಸಂಜಯ್ ಬಂಗಾರ್ ಮತ್ತು ನಿರ್ದೇಶಕ ಮೈಕ್ ಹೆಸನ್ ಅವರ ಒಪ್ಪಂದವು ಸೆಪ್ಟೆಂಬರ್ನಲ್ಲಿ ಮುಕ್ತಾಯಗೊಳ್ಳಲಿದೆ. ಆದರೆ, ಅವರನ್ನು ಮುಂದುವರೆಸಲು ಇಚ್ಛಿಸಿದ ಫ್ರಾಂಚೈಸಿ, ಟೀಮ್ ಮ್ಯಾನೇಜ್ಮೆಂಟ್ನಲ್ಲಿ ಕೋಚಿಂಗ್ ಸಿಬ್ಬಂದಿಯನ್ನು ಕಾಣಲು ಒಲವು ತೋರಿದೆ. ಈ ಸಲುವಾಗಿ ಸಂಜಯ್ ಬಂಗಾರ್, ಮೈಕ್ ಹೆಸನ್ ಅವರ ಒಪ್ಪಂದ ನವೀಕರಿಸದಿರಲು ಫ್ರಾಂಚೈಸಿ ಚಿಂತನೆ ನಡೆಸಿದೆ.
ಪ್ರತಿಕ್ರಿಯಿಸಿಲ್ಲ ಇಬ್ಬರೂ
ಈ ಸ್ಥಾನಗಳಿಗೆ ನೂತನ ಸಿಬ್ಬಂದಿಯನ್ನು ನೇಮಿಸಲು ಹಲವರನ್ನು ಫ್ರಾಂಚೈಸಿ ಸಂಪರ್ಕಿಸಿದೆ ಎಂಬ ಮಾಹಿತಿಯೂ ಲಭ್ಯವಾಗಿದೆ. ಸದ್ಯ ಇಎಸ್‌ಪಿಎನ್‌ಕ್ರಿಕ್‌ಇನ್‌ಫೋ ಸೇರಿದಂತೆ ಮಾಧ್ಯಮಗಳು ಈ ಬಗ್ಗೆ ವರದಿ ಮಾಡಿವೆ. ಈ ಕುರಿತು ಸ್ಪಷ್ಟನೆ ಕೇಳಲು ಇಎಸ್ಪಿಎನ್ ಕ್ರಿಕ್ಇನ್ಫೋ, ಹೆಸನ್ ಮತ್ತು ಬಂಗಾರ್ ಅವರನ್ನು ಸಂಪರ್ಕಿಸಿತು. ಆದರೆ, ಆರ್‌ಸಿಬಿ ಮಾಹಿತಿ ನೀಡಿದೆಯೇ ಇಲ್ಲವೇ ಎಂಬುದನ್ನು ಖಚಿತಪಡಿಸಲು ಇಬ್ಬರೂ ಪ್ರತಿಕ್ರಿಯಿಸಲಿಲ್ಲ.
ಮತ್ತೊಂದೆಡೆ ಆರ್‌ಸಿಬಿ ಫ್ರಾಂಚೈಸಿ ಈ ಹೇಳಿಕೆ ನೀಡಿದೆ. ಆರ್‌ಸಿಬಿ ಜೊತೆಗಿನ ಒಪ್ಪಂದ ಇನ್ನೂ ಹಾಗೆಯೇ ಇದೆ ಎಂದು ಫ್ರಾಂಚೈಸಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ತಂಡವು ಇನ್ನೂ ಪರಿಶೀಲನೆಯ ಹಂತದಲ್ಲಿದೆ. ತಂಡದಲ್ಲಿನ ಬದಲಾವಣೆಗಳ ಕುರಿತು ಯಾವುದೇ ಪ್ರಕಟಣೆ ಬಂದರೆ ಮಾಹಿತಿ ನೀಡುತ್ತೇವೆ ಎಂದು ಸ್ಪಷ್ಟಪಡಿಸಿದೆ ಎಂದು ವರದಿ ಮಾಡಿದೆ. ಸದ್ಯ ತಾಜಾ ಕೋಚ್ಗಳ ಹುಡುಕಾಟದಲ್ಲಿದೆ ಎಂಬುದು ಖಚಿತ ಮೂಲಗಳು ಸ್ಪಷ್ಟಪಡಿಸಿವೆ.
ಪ್ಲೇ ಆಫ್ಗೇರುವ ಅವಕಾಶ ಕೈಚೆಲ್ಲಿದ ಬೆಂಗಳೂರು
ರಾಯಲ್ ಚಾಲೆಂಜರ್ಸ್ ಬೆಂಗಳೂರು ಸತತ 4ನೇ ಬಾರಿಗೆ ಪ್ಲೇ ಆಫ್ ಪ್ರವೇಶಿಸುವ ಅವಕಾಶವನ್ನು ಸುಲಭವಾಗಿ ಕೈಚೆಲ್ಲಿತ್ತು. ಆಡಿದ 14 ಪಂದ್ಯಗಳಲ್ಲಿ 7 ರಲ್ಲಿ ಗೆದ್ದು, 7ರಲ್ಲಿ ಸೋಲು ಕಂಡಿತು. ಅಂಕಪಟ್ಟಿಯಲ್ಲಿ 6ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಆದರೆ 4ನೇ ಸ್ಥಾನಕ್ಕೇರುವ ಅವಕಾಶ ಆರ್‌ಸಿಬಿ ಮುಂದಿದ್ದರೂ, ಅದನ್ನು ಸದುಪಯೋಗ ಮಾಡಿಕೊಳ್ಳಲಿಲ್ಲ. ಲೀಗ್ನ ಕೊನೆಯ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಎದುರು ಗೆಲುವು ಸಾಧಿಸಿದ್ದರೆ, ಮುಂಬೈ ಇಂಡಿಯನ್ಸ್ ಬದಲಿಗೆ (ನೆಟ್ ರನ್ರೇಟ್ ಆಧಾರದಲ್ಲಿ) ಆರ್‌ಸಿಬಿ ಅವಕಾಶ ಪಡೆಯುತ್ತಿತ್ತು.
ಇವರ ಮಾರ್ಗದರ್ಶನದಲ್ಲಿ ಆರ್‌ಸಿಬಿ ಪ್ರದರ್ಶನ
2019ರಲ್ಲಿ ಮೈಕ್ ಹೆಸನ್ ಆರ್‌ಸಿಬಿ ಟೀಮ್ ಸೇರಿದರು. ಮೊದಲು ಕೋಚ್ ಆಗಿದ್ದ ಹೆಸನ್, ನಂತರ ತಂಡದ ನಿರ್ದೇಶಕರಾಗಿ ನೇಮಕಗೊಂಡರು. 2021ರಲ್ಲಿ ಸಂಜಯ್ ಬಂಗಾರ್ ನೇಮಕಗೊಂಡಿದ್ದರು. ಹೆಸ್ಸನ್ ಕೋಚ್ ಆಗಿದ್ದಾಗ 2020ರಲ್ಲಿ ಆರ್‌ಸಿಬಿ ಎಲಿಮಿನೇಟರ್ ಪ್ರವೇಶಿಸಿತ್ತು. ಈ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಸೋತು ಹೊರ ನಡೆದಿತ್ತು. ಬಳಿಕ 2021ರಲ್ಲಿ ಹೆಸನ್ ತಂಡದ ಡೈರೆಕ್ಟರ್ ಆಗಿ ನೇಮಕಗೊಂಡರು.
2021ರಲ್ಲಿ ನೂತನ ಹೆಡ್ಕೋಚ್ ಆಗಿ ನೇಮಕಗೊಂಡ ಸಂಜಯ್ ಬಂಗಾರ್ (ಸೈಮನ್ ಕ್ಯಾಟಿಚ್) ಮಾರ್ಗದರ್ಶನದಲ್ಲೂ ಆರ್‌ಸಿಬಿ ಪ್ಲೇಆಫ್ಗೆ ಅರ್ಹತೆ ಪಡೆದಿತ್ತು. ಆದರೆ, ಎಲಿಮಿನೇಟರ್ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಎದುರು ಶರಣಾಗಿತ್ತು. 2022ರಲ್ಲೂ ಎಲಿಮಿನೇಟರ್ಗೆ ಪ್ರವೇಶಿಸಿದ ಬೆಂಗಳೂರು ಈ ಪಂದ್ಯದಲ್ಲಿ ಗೆದ್ದು 2ನೇ ಕ್ವಾಲಿಫೈಯರ್ಗೆ ಎಂಟ್ರಿಕೊಟ್ಟಿತ್ತು. ಆದರೆ, ರಾಜಸ್ಥಾನ್ ರಾಯಲ್ಸ್ ವಿರುದ್ಧ ಹೀನಾಯ ಸೋಲು ಕಂಡಿತ್ತು. ಆದರೆ ಈ ಬಾರಿ ಪ್ಲೇ ಆಫ್ ಪ್ರವೇಶಿಸಲು ವಿಫಲವಾಯಿತು.
ಮಹಿಳಾ ತಂಡಕ್ಕೆ ನಿರ್ದೇಶಕನಾಗುವ ಸಾಧ್ಯತೆ?
ಆರ್‌ಸಿಬಿ 2009, 2011 ಮತ್ತು 2016ರಲ್ಲಿ ಮೂರು ಬಾರಿ ಐಪಿಎಲ್ ಫೈನಲ್‌ಗೆ ಪ್ರವೇಶಿಸಿದೆ. ಆದರೆ ಪ್ರಶಸ್ತಿ ಗೆದ್ದಿಲ್ಲ. ಸದ್ಯ ಲಕ್ನೋ ಸೂಪರ್ ಜೈಂಟ್ಸ್ ಆಂಡಿ ಫ್ಲವರ್ ಬದಲಿಗೆ ಜಸ್ಟಿನ್ ಲ್ಯಾಂಗರ್ ಅವರನ್ನು ಮುಖ್ಯ ತರಬೇತುದಾರರನ್ನಾಗಿ ನೇಮಿಸಿದ ನಂತರ, ಐಪಿಎಲ್ 2023ರಿಂದ ತನ್ನ ತಂಡದ ನಿರ್ವಹಣೆಯಲ್ಲಿ (ಟೀಮ್ ಮ್ಯಾನೇಜ್ಮೆಂಟ್) ಬದಲಾವಣೆ ಮಾಡಲಿರುವ ಆರ್‌ಸಿಬಿ 2ನೇ ಫ್ರಾಂಚೈಸ್ ಆಗಬಹುದು.
ಹೆಸ್ಸನ್ ಅವರು ಪುರುಷರ ಆರ್‌ಸಿಬಿ ತಂಡದೊಂದಿಗೆ ಬೇರ್ಪಟ್ಟರೆ, ಮಹಿಳಾ ತಂಡದ ಸಹಾಯಕ ಸಿಬ್ಬಂದಿಯಾಗಿ ಸೇವೆ ಸಲ್ಲಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಉದ್ಘಾಟನಾ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಹೆಸನ್ ತಂಡದ ನಿರ್ದೇಶಕರಾಗಿದ್ದರು. ಆದರೆ ಮಹಿಳಾ ತಂಡವು 4ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.
ಸಂಬಂಧಿತ ಲೇಖನ