ಕನ್ನಡ ಸುದ್ದಿ  /  ಕ್ರೀಡೆ  /  Sanju Samson: ಪ್ರತಿಭಾವಂತ ಕ್ರಿಕೆಟಿಗರ ಕೈಹಿಡಿದ ಸಹೃದಯಿ ಸಂಜು ಸ್ಯಾಮ್ಸನ್; ತನ್ನ 15 ಕೋಟಿಯ ಪ್ರತಿ ಐಪಿಎಲ್​ ವೇತನದಲ್ಲಿ 2 ಕೋಟಿ ನೆರವು

Sanju Samson: ಪ್ರತಿಭಾವಂತ ಕ್ರಿಕೆಟಿಗರ ಕೈಹಿಡಿದ ಸಹೃದಯಿ ಸಂಜು ಸ್ಯಾಮ್ಸನ್; ತನ್ನ 15 ಕೋಟಿಯ ಪ್ರತಿ ಐಪಿಎಲ್​ ವೇತನದಲ್ಲಿ 2 ಕೋಟಿ ನೆರವು

ರಾಜಸ್ಥಾನ್​ ರಾಯಲ್ಸ್​ ತಂಡದಲ್ಲಿ ತನ್ನ ಸೌಮ್ಯ ಸ್ವಭಾವದ ನಾಯಕತ್ವದ ಜೊತೆಗೆ ಬ್ಯಾಟಿಂಗ್​​ನಲ್ಲೂ ಸಂಜು ಸ್ಯಾಮ್ಸನ್​​ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಪ್ರತಿ ಆವೃತ್ತಿಯ ಐಪಿಎಲ್​​ನಲ್ಲೂ 15 ಕೋಟಿ ಪಡೆಯುತ್ತಿರುವ ಕೇರಳದ ಬ್ಯಾಟ್ಸ್​ಮನ್,​ ಮತ್ತೊಂದು ವಿಷಯದಲ್ಲೂ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ.

ರಾಜಸ್ಥಾನ್ ರಾಯಲ್ಸ್​ ತಂಡದ ನಾಯಕ ಸಂಜು ಸ್ಯಾಮ್ಸನ್​
ರಾಜಸ್ಥಾನ್ ರಾಯಲ್ಸ್​ ತಂಡದ ನಾಯಕ ಸಂಜು ಸ್ಯಾಮ್ಸನ್​

ಇಂಡಿಯನ್​ ಪ್ರೀಮಿಯರ್ ಲೀಗ್​​ನಲ್ಲಿ (IPL) ಕೂಲ್​ ನಾಯಕತ್ವದಿಂದಲೇ ಗಮನ ಸೆಳೆದಿರುವ ಸಂಜು ಸ್ಯಾಮ್ಸನ್ (Sanju Samson)​, ಈ ಬಾರಿ ರಾಜಸ್ಥಾನ್ ರಾಯಲ್ಸ್ (Rajastan Royals)​ ತಂಡವನ್ನು ಪ್ಲೇ ಆಫ್​ಗೇರಿಸುವಲ್ಲಿ ವಿಫಲರಾದರು. 15ನೇ ಆವೃತ್ತಿಯ ಐಪಿಎಲ್​ನಲ್ಲಿ ತಂಡವನ್ನು ಫೈನಲ್​​ಗೇರಿಸಿದ್ದ ಹೆಗ್ಗಳಿಕೆ ಹೊಂದಿದ್ದ ಸಂಜು ಪಡೆ, ಈ ಬಾರಿ 5ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. 2021ರ ಸೀಸನ್‌ನಲ್ಲಿ ರಾಜಸ್ಥಾನ್​ ತಂಡದ ನಾಯಕತ್ವ ವಹಿಸಿಕೊಂಡಿದ್ದರು.

ಟ್ರೆಂಡಿಂಗ್​ ಸುದ್ದಿ

2023ರ ಆವೃತ್ತಿಯಲ್ಲಿ 5 ಪಂದ್ಯಗಳಲ್ಲಿ 4 ಗೆಲುವಿನೊಂದಿಗೆ ಟೇಬಲ್ ಟಾಪರ್‌ ಆಗಿ ಟೂರ್ನಿ ಪ್ರಾರಂಭಿಸಿದ ರಾಜಸ್ಥಾನ್ ರಾಯಲ್ಸ್, ನಂತರ ಸತತ ಸೋಲಿನೊಂದಿಗೆ ಪ್ಲೇ ಆಫ್‌ಗಳ ಅವಕಾಶ ಕಳೆದುಕೊಂಡಿತು. 7 ಪಂದ್ಯಗಳನ್ನು ಗೆದ್ದ ರಾಜಸ್ಥಾನ್ ಐದನೇ ಸ್ಥಾನದಲ್ಲಿದೆ. ಆನ್​ ಫೀಲ್ಡ್​​ನಲ್ಲಿ ಸದಾ ಕೂಲ್​​, ತಾಳ್ಮೆಯಿಂದ ಕಾಣುವ ಸಂಜು ಸ್ಯಾಮ್ಸನ್​ ಅವರ ಈ ನಡೆ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.

ಪ್ರತಿಭೆಗಳ ನೆರವಿಗೆ ನಿಂತ ಸಂಜು

ರಾಜಸ್ಥಾನ್​ ತಂಡದಲ್ಲಿ ತನ್ನ ಸೌಮ್ಯ ಸ್ವಭಾವದ ನಾಯಕತ್ವದ ಜೊತೆಗೆ ಬ್ಯಾಟಿಂಗ್​​ನಲ್ಲೂ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಪ್ರತಿ ಆವೃತ್ತಿಯ ಐಪಿಎಲ್​​ನಲ್ಲೂ 15 ಕೋಟಿ ಪಡೆಯುತ್ತಿರುವ ಕೇರಳದ ಬ್ಯಾಟ್ಸ್​ಮನ್,​ ಮತ್ತೊಂದು ವಿಷಯದಲ್ಲೂ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಟೀಮ್​ ಇಂಡಿಯಾದಲ್ಲಿ ಅವಕಾಶ ಪಡೆಯಲು ಪರದಾಟ ನಡೆಸುತ್ತಿರುವ ಸಂಜು, ಯುವ ಪ್ರತಿಭೆಗಳ ನೆರವಿಗೆ ನಿಂತಿದ್ದಾರೆ.

2013ರಲ್ಲಿ ರಾಜಸ್ಥಾನ್ ತಂಡಕ್ಕೆ ಸೇರ್ಪಡೆಯಾದ ಸ್ಯಾಮ್ಸನ್, ಸದ್ಯ ಗಳಿಸುತ್ತಿರುವ 15 ಕೋಟಿಯ ವೇತನದಲ್ಲಿ ಯುವ ಮತ್ತು ಪ್ರತಿಭಾವಂತ ಕ್ರಿಕೆಟಿಗರಿಗೆ 2 ಕೋಟಿ ನೆರವಿನ ಹಸ್ತ ಚಾಚುತ್ತಿದ್ದಾರೆ ಎಂದು ಸ್ಯಾಮ್ಸನ್ ತರಬೇತುದಾರ ಇತ್ತೀಚೆಗೆ ಬಹಿರಂಗಪಡಿಸಿದ್ದಾರೆ. ರಾಜಸ್ಥಾನ ಫ್ರಾಂಚೈಸಿಯ ಫಿಟ್ನೆಸ್ ತರಬೇತುದಾರರಾದ ರಾಜಮಣಿ ಪ್ರಭು (Rajamani Prabhu) ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ರಾಜಸ್ಥಾನ ತೊರೆಯಲ್ಲ ಎಂದ ಸಂಜು

ಐಪಿಎಲ್​ 2021ರ ಆವೃತ್ತಿಯ ಬಳಿಕ ನಾನು ಸಂಜು ಸ್ಯಾಮ್ಸನ್​ ಜೊತೆ ಮಾತನಾಡಿದೆ. ರಾಜಸ್ಥಾನ ತೊರೆದು, ಮುಂಬೈ ಇಂಡಿಯನ್ಸ್​, ಚೆನ್ನೈ ಸೂಪರ್ ಕಿಂಗ್ಸ್​, ರಾಯಲ್​ ಚಾಲೆಂಜರ್ಸ್​ನಂತ ದೊಡ್ಡ ತಂಡಗಳ ಪರ ಆಡಿದರೆ ಹೆಚ್ಚೆಚ್ಚು ಅವಕಾಶಗಳು ದೊರೆಯುತ್ತದೆ. ನೇಮ್​ ಫೇಮ್ ಜೊತೆಗೆ ಬೇಕಾದಷ್ಟು ಹಣವೂ ಸಿಗುತ್ತದೆ ಎಂದು ಹೇಳಿದ್ದೆ. ಆದರೆ ಸಂಜು ಇದನ್ನು ಒಂದು ಕ್ಷಣವೂ ಯೋಚಿಸದೆ ನಿರಾಕರಿಸಿದರು ಎಂದು ರಾಜಮಣಿ ಪ್ರಭು ತಿಳಿಸಿದ್ದಾರೆ.

ಆರ್​ಆರ್ ಅನ್ನೇ ದೊಡ್ಡ ತಂಡ ಮಾಡ್ತೇನೆ

ರಾಜಸ್ಥಾನ್ ತೊರೆಯುವ ಸಲಹೆಯನ್ನು ನಿರಾಕರಿಸಿದ ಸ್ಯಾಮ್ಸನ್​, ನಾನು ದೊಡ್ಡ ತಂಡದ ಪರ ಆಡುವುದು ಅಲ್ಲ, ರಾಜಸ್ಥಾನ್ ರಾಯಲ್ಸ್​ ತಂಡವನ್ನೇ ದೊಡ್ಡವನ್ನಾಗಿ ಬದಲಿಸುತ್ತೇನೆ ಎಂದಿದ್ದರು. ಹೇಳಿದಂತೆ ಚಹಲ್, ಆರ್ ಅಶ್ವಿನ್​, ಯುಜುವೇಂದ್ರ ಚಹಲ್, ಟ್ರೆಂಟ್ ಬೋಲ್ಟ್​ ಸೇರಿದಂತೆ ಪ್ರಮುಖ ಆಟಗಾರರನ್ನು ತಂಡಕ್ಕೆ ಕರೆ ತಂದರು. ತಂಡದ ದೂರ ದೃಷ್ಟಿಗೆ ಹೆಚ್ಚಿನ ಒತ್ತು ಕೊಡುತ್ತಾರೆ ಎಂದು ಫಿಟ್ನೆಸ್​ ಟ್ರೈನರ್​ ಅಪರೂಪದ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ.

ಆಫರ್ ಬಂದಿತ್ತು

2022ರ ಐಪಿಎಲ್​​ಗೂ ಮುನ್ನ ಸಂಜು ಸ್ಯಾಮ್ಸನ್​ ಅವರನ್ನು ಮೂರು ದೊಡ್ಡ ತಂಡಗಳು ಸಂಪರ್ಕಿಸಿದ್ದವು. ದೊಡ್ಡ ಮಟ್ಟದ ಆಫರ್​​​ಗಳನ್ನೂ ನೀಡಿದ್ದವು. ನಾಯಕನ ಜೊತೆಗೆ ಹೆಚ್ಚಿನ ಮೊತ್ತ ಪಾವತಿಸುವುದಾಗಿ ಹೇಳಿದ್ದವು. ಆದರೆ ಆತ ಮಾತ್ರ ರಾಜಸ್ಥಾನ್ ತಂಡವನ್ನು ತೊರೆಯಲ್ಲ ಎಂದು ಹೇಳಿದ್ದರು. ಸಂಜುಗೆ ಬಂದಂತೆ ಬೇರೆ ಆಟಗಾರರಿಗೆ ಈ ರೀತಿಯ ಆಫರ್ ಸಿಕ್ಕಿದ್ದರೆ, ಇಷ್ಟೊತ್ತಿಗೆ ತಂಡ ತೊರೆಯುತ್ತಿದ್ದರು ಎಂಬ ಅಂಶವನ್ನೂ ರಾಜಮಣಿ ಪ್ರಭು ಬಹಿರಂಗಪಡಿಸಿದ್ದಾರೆ.

2 ಕೋಟಿ ನೆರವು

ಆದರೆ, ಸಂಜು ಸ್ಯಾಮ್ಸನ್​ ತಂಡದ ಮೇಲಿನ ವಿಶ್ವಾಸದ ಮೇಲೆ ಸಂಜು ರಾಜಸ್ಥಾನ್​ನಲ್ಲೇ ಉಳಿದುಕೊಂಡರು. ಎಲ್ಲರಿಗೂ ಗೊತ್ತಿರುವಂತೆ ಪ್ರತಿ ಸೀಸನ್​​ನಲ್ಲಿ 15 ಕೋಟಿ ಪಡೆಯುತ್ತಾರೆ. ಈ ವೇತನದಲ್ಲಿ 2 ಕೋಟಿ ಮೊತ್ತವನ್ನು ದೇಶೀಯ ಟೂರ್ನಿಗಳಲ್ಲಿ ಉತ್ತಮವಾಗಿ ಆಡುವ ಯುವ ಕ್ರಿಕೆಟಿಗರಿಗೆ ನೆರವು ನೀಡುತ್ತಿದ್ದಾರೆ. ಆರ್ಥಿಕ ಸಮಸ್ಯೆ ಎದುರಿಸುತ್ತಿರುವ ಪ್ರತಿಭಾವಂತ ಕ್ರಿಕೆಟಿಗರಿಗೆ ಹಣಕಾಸಿನ ನೆರವು ನೀಡುತ್ತಿದ್ದಾರೆ. ಪ್ರತಿಭಾವಂತ ಮಕ್ಕಳಿಗೂ ಈ ಸಹಾಯ ಮಾಡುತ್ತಿದ್ದಾರೆ. ಯಾವುದೇ ದೊಡ್ಡ ಆಟಗಾರ ಕೂಡ ಇದನ್ನು ಮಾಡುತ್ತಿಲ್ಲ ಎಂದು ರಾಜಮಣಿ ಪ್ರಭು ತಿಳಿಸಿದ್ದಾರೆ.

ಸಂಜು ಸ್ಯಾಮ್ಸನ್ ಉತ್ತಮ ಬ್ಯಾಟ್ಸ್‌ಮನ್ ಮಾತ್ರವಲ್ಲ, ಒಳ್ಳೆಯ ಹೃದಯವಂತ ಕೂಡ. ಹಾಗಾಗಿಯೇ ಅವರಿಗೆ ಇಷ್ಟೊಂದು ಫ್ಯಾನ್ ಫಾಲೋಯಿಂಗ್ ಇದೆ ಎಂದು ರಾಜಸ್ಥಾನ ರಾಯಲ್ಸ್ ತಂಡದ ತರಬೇತುದಾರ ರಾಜಮಣಿ ಪ್ರಭು ಪ್ರತಿಕ್ರಿಯಿಸಿದ್ದಾರೆ.