Twitter Blue Tick: ಕ್ರೀಡಾಕ್ಷೇತ್ರಕ್ಕೂ ತಟ್ಟಿದ ಬ್ಲೂಟಿಕ್ ಬಿಸಿ; ಕೊಹ್ಲಿ, ಧೋನಿ, ಸಚಿನ್ ಸೇರಿ ಪ್ರಮುಖರ ಖಾತೆಯಿಂದಲೇ ನೀಲಿ ಚಿಹ್ನೆ ಮಾಯ
Twitter Blue Tick: ಕ್ರಿಕೆಟಿಗರಾದ ವಿರಾಟ್ ಕೊಹ್ಲಿ (Virat Kohi), ರೋಹಿತ್ ಶರ್ಮಾ, ಸಚಿನ್ ತೆಂಡೂಲ್ಕರ್, ಎಂಎಸ್ ಧೋನಿ (MS Dhoni) ಸೇರಿದಂತೆ ಕ್ರಿಕೆಟಿಗರ ಖಾತೆಗಳಿಂದ ನೀಲಿ ಚಿಹ್ನೆಯ ಬ್ಯಾಡ್ಜ್‌ಗಳನ್ನು ಟ್ವಿಟರ್ ರಾತ್ರೋರಾತ್ರಿ ಕಿತ್ತಾಕಿದೆ.
ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟರ್ (Twitter) ಭಾರತದ ಸೆಲೆಬ್ರೆಟಿಗಳಿಗೆ ಅಚ್ಚರಿ ನೀಡಿದೆ. ದೇಶದ ಚಲನಚಿತ್ರ, ಕ್ರೀಡಾ ಮತ್ತು ರಾಜಕೀಯ ಸೇರಿ ವಿವಿಧ ಕ್ಷೇತ್ರಗಳ ಸೆಲೆಬ್ರಿಟಿಗಳ ಟ್ವಿಟರ್ ಖಾತೆಗಳ ಬ್ಲೂ ಟಿಕ್ (Twitter Blue Tick) ತೆಗೆದು ಹಾಕಿದೆ. ಸೆಲೆಬ್ರಿಟಿಗಳ ಖಾತೆಗಳನ್ನು ಗುರುತಿಸಲು ಉಪಯುಕ್ತವಾಗಿದ್ದ ನೀಲಿ ಚಿಹ್ನೆ ತೆಗೆದು ಹಾಕಿದ್ದು, ಚಂದಾದಾರಿಕೆ ಪಡೆಯಲು ಸೂಚಿಸಿದೆ.
ಅದರಂತೆ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ (Virat Kohi), ರೋಹಿತ್ ಶರ್ಮಾ, ಸಚಿನ್ ತೆಂಡೂಲ್ಕರ್, ಎಂಎಸ್ ಧೋನಿ (MS Dhoni) ಸೇರಿದಂತೆ ಕ್ರಿಕೆಟಿಗರ ಖಾತೆಗಳಿಂದ ನೀಲಿ ಚಿಹ್ನೆಯ ಬ್ಯಾಡ್ಜ್‌ಗಳನ್ನು ಕಿತ್ತಾಕಿದೆ. ಇದಕ್ಕೆ ಪ್ರಮುಖ ಕಾರಣ ಟ್ವಿಟರ್ನ ಹೊಸ ನಿಯಮ. ಬ್ಲೂ ಟಿಕ್ ಬ್ಯಾಡ್ಜ್ ಉಳಿಸಿಕೊಳ್ಳಬೇಕಾದರೆ ಬಳಕೆದಾರರು ಚಂದಾದಾರಿಕೆ ಪಡೆಯಬೇಕು. ಇದು ಸಾಮಾನ್ಯ ಜನರು ಪಾವತಿಸಿದರೆ ಕೂಡ ಬ್ಲೂ ಟಿಕ್ ಪಡೆಯಬಹುದಾಗಿದೆ.
ಪ್ರಸ್ತುತ ಪಾವತಿ ಮಾಡದವರ ಖಾತೆಗಳಿಂದ ಬ್ಲೂ ಟಿಕ್ ಮಾರ್ಕ್ ತೆಗೆಯುವ ಪ್ರಕ್ರಿಯೆಯನ್ನೂ ಟ್ವಿಟರ್ ಆರಂಭಿಸಿದೆ. ಅಮೆರಿಕದ ಕ್ಯಾಲಿಫೋರ್ನಿಯಾ ಕಾಲಮಾನದ ಪ್ರಕಾರ ಗುರುವಾರ ಬೆಳಗ್ಗೆಯಿಂದ ಬ್ಲೂ ಟಿಕ್ ಮಾರ್ಕ್ ತೆಗೆಯುವ ಪ್ರಕ್ರಿಯೆ ಪ್ರಾರಂಭಿಸಿದೆ. ಹಾಗಾಗಿ ಭಾರತದ ರಾಹುಲ್ ಗಾಂಧಿ, ಅರವಿಂದ್ ಕೇಜ್ರಿವಾಲ್, ಯೋಗಿ ಆದಿತ್ಯನಾಥ್, ಎಂಎಸ್ ಧೋನಿ, ವಿರಾಟ್ ಕೊಹ್ಲ, ಸಚಿನ್ ತೆಂಡೂಲ್ಕರ್, ಪಿವಿ ಸಿಂಧು, ಅಮಿತಾಬ್ ಬಚ್ಚನ್, ಶಾರೂಖ್ ಖಾನ್, ಪ್ರಿಯಾಂಕ ಚೋಪ್ರಾ, ರಜನಿಕಾಂತ್ ಸೇರಿದಂತೆ ಎಲ್ಲಾ ಕ್ಷೇತ್ರಗಳ ಗಣ್ಯರ ಟ್ವಿಟರ್ ಖಾತೆಗಳಲ್ಲಿ ಬ್ಲೂಟಿಕ್ ಕಿತ್ತು ಹಾಕಲಾಗಿದೆ.
ನಿಜವಾದ ಸೆಲೆಬ್ರಿಟಿಗಳನ್ನು ಗುರುತಿಸಲು ನೀಲಿ ಟಿಕ್ ಮಾರ್ಕ್ ನೀಡಲಾಗುತ್ತದೆ. ರಾಜಕೀಯ ನಾಯಕರು, ಕ್ರೀಡಾಪಟುಗಳು, ಪತ್ರಕರ್ತರು ಮತ್ತು ಸಾರ್ವಜನಿಕ ವ್ಯಕ್ತಿಗಳನ್ನು ಸುಲಭವಾಗಿ ಗುರುತಿಸಲು ಈ ಪರಿಶೀಲನೆಯು ಉಪಯುಕ್ತವಾಗಿದೆ. ಆದರೆ, ಪ್ರಸ್ತುತ ಬ್ಲೂಟಿಕ್ ಸಾಮಾನ್ಯ ಬಳಕೆದಾರರಿಗೂ ಲಭ್ಯವಿರುವುದು ವಿಶೇಷ. ಟ್ವಿಟರ್ ಖಾತೆಗೆ ಲಿಂಕ್ ಮಾಡಲಾದ ಫೋನ್ ಸಂಖ್ಯೆಯೊಂದಿಗೆ ಪರಿಶೀಲನೆ ಪೂರ್ಣಗೊಳಿಸಿ ಚಂದಾದಾರಿಕೆ ಪಡೆದರೆ ಬ್ಲೂಟಿಕ್ ಮಾರ್ಕ್ ಬರುತ್ತದೆ.
ಟ್ವಿಟ್ಟರ್ ಸಂಸ್ಥೆಯನ್ನು ಎಲಾನ್ ಮಸ್ಕ್ ಖರೀದಿಸಿದ ನಂತರ ಕೆಲವೊಂದು ನಿಯಮಗಳನ್ನು ಬದಲಿಸಿದ್ದು. ಅದರಲ್ಲಿ ಬ್ಲೂಟಿಕ್ ನಿಯಮ ಕೂಡಾ ಬದಲಾವಣೆ ಆಗಿದೆ. ಇದೀಗ ಬ್ಲೂಟಿಕ್ ಬೇಕೆಂದರೆ ಹಣ ಕಟ್ಟಬೇಕು. ತಿಂಗಳಿಗೆ 900 ರೂಪಾಯಿ ಹಣ ಪಾವತಿಸಬೇಕು. ಅಥವಾ ವರ್ಷಕ್ಕೆ 9400 ರೂಪಾಯಿ ಪಾವತಿಸಬೇಕಿದೆ. ಬ್ಲೂಟಿಕ್ ಮಾಯವಾಗಿರುವುದರಿಂದ ಇದೀಗ ಯಾರದ್ದು ಅಸಲಿ ಖಾತೆ, ಯಾರ ಖಾತೆ ನಕಲಿ ಎಂದು ಕಂಡುಹಿಡಿಯುವುದು ಕಷ್ಟವಾಗಿದೆ.
ಇಂದಿನ ಕ್ರೀಡಾ ಸುದ್ದಿಗಳು
Anil Kumble, Rahul Dravid: 2018ರಲ್ಲಿ ಪಕ್ಷ ಸೇರುವಂತೆ ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ ಸಂಪರ್ಕಿಸಿದ್ದ ಬಿಜೆಪಿ
ಹೌದು. ಅದು 2018. ಕರ್ನಾಟಕದ ವಿಧಾನಸಭಾ ಚುನಾವಣೆಗೆ (Karnataka Elections) ರಾಜ್ಯ ಬಿಜೆಪಿ ಘಟಕ ಸಿದ್ಧತೆ ನಡೆಸಿತ್ತ. ಆ ವೇಳೆ ಕರ್ನಾಟಕದ ದಿಗ್ಗಜ ಕ್ರಿಕೆಟಿಗರನ್ನು ಭಾರತೀಯ ಜನತಾ ಪಾರ್ಟಿ (Bharatiya Janata Party) ಸಂಪರ್ಕಿಸಿತ್ತು. ಅಂದಿನ ವಿಧಾನಸಭಾ ಚುನಾವಣೆಯಲ್ಲಿ ಯುವಕರನ್ನು ಸೆಳೆಯುವ ಮತ್ತು ರಾಜ್ಯದಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರವನ್ನು ಉರುಳಿಸುವ ಪ್ರಯತ್ನವಾಗಿತ್ತು. ಹಾಗಾಗಿ ಕರ್ನಾಟಕದ ಸೂಪರ್ ಸ್ಟಾರ್ ಆಟಗಾರರಾದ ಅನಿಲ್ ಕುಂಬ್ಳೆ (Anil Kumble) ಮತ್ತು ರಾಹುಲ್ ದ್ರಾವಿಡ್ (Rahul Dravid) ಅವರನ್ನು ಪಕ್ಷಕ್ಕೆ ಸೇರುವಂತೆ ಬಿಜೆಪಿ ಸಂಪರ್ಕಿಸಿತ್ತು. ಇದರ ಸಂಪೂರ್ಣ ಸುದ್ದಿಗಾಗಿ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ.