Sourav Ganguly: ಏಕದಿನ ವಿಶ್ವಕಪ್‌ಗೆ ಈತನನ್ನು ಆಯ್ಕೆ ಮಾಡದಿದ್ದರೆ ನಿಮಗೆ ನಷ್ಟ; ರೋಹಿತ್-ದ್ರಾವಿಡ್ಗೆ ಸಂದೇಶ ರವಾನಿಸಿದ ಸೌರವ್ ಗಂಗೂಲಿ
Sourav Ganguly: ಮುಂಬರುವ ಏಕದಿನ ವಿಶ್ವಕಪ್‌ನಲ್ಲಿ ಯಶಸ್ವಿ ಜೈಸ್ವಾಲ್ (Yashasvi Jaiswal) ಆಡುವುದನ್ನು ನೋಡಲು ನಾನು ಬಯಸುತ್ತೇನೆ. ನಾನು ಅವರನ್ನು ಐಪಿಎಲ್ ಸಮಯದಲ್ಲಿ ಹತ್ತಿರದಿಂದ ನೋಡಿದ್ದೇನೆ ಎಂದು ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಹೇಳಿದ್ದಾರೆ.

ಅಕ್ಟೋಬರ್-ನವೆಂಬರ್ನಲ್ಲಿ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಟೂರ್ನಿಗೆ (ODI World Cup 2023) ಯಶಸ್ವಿ ಜೈಸ್ವಾಲ್ (Yashasvi Jaiswal) ಅವರನ್ನು ಆಯ್ಕೆ ಮಾಡಬೇಕು ಎಂದು ಭಾರತದ ಮಾಜಿ ನಾಯಕ, ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ (Sourav Ganguly) ಸಲಹೆ ನೀಡಿದ್ದಾರೆ. ಯುವ ಆಟಗಾರರನ್ನು ಹಾಡಿ ಹೊಗಳುವ ಮೂಲಕ ಆತನನ್ನು ಆಯ್ಕೆ ಅತ್ಯಗತ್ಯ ಎಂದು ನಾಯಕ ರೋಹಿತ್ ಶರ್ಮಾ (Rohit Sharma), ಕೋಚ್ ರಾಹುಲ್ ದ್ರಾವಿಡ್ಗೆ (Rahul Dravid) ಸಂದೇಶ ರವಾನಿಸಿದ್ದಾರೆ.
ಟ್ರೆಂಡಿಂಗ್ ಸುದ್ದಿ
ಏಕದಿನ ವಿಶ್ವಕಪ್‌ಗೆ ಭರ್ಜರಿ ತಯಾರಿ ನಡೆಯುತ್ತಿದೆ. ಈ ಬಗ್ಗೆ ನಾಯಕ ರೋಹಿತ್ ಶರ್ಮಾ ಮತ್ತು ಕೋಚ್ ರಾಹುಲ್ ದ್ರಾವಿಡ್ ಅವರೊಂದಿಗೆ ಚರ್ಚಿಸಲು ನೂತನ ಚೀಫ್ ಸೆಲೆಕ್ಟರ್ ಅಜಿತ್ ಅಗರ್ಕರ್ (Ajit Agarkar) ವೆಸ್ಟ್ ಇಂಡೀಸ್ಗೆ (West Indies) ಪ್ರಯಾಣ ಬೆಳೆಸಲು ಸಜ್ಜಾಗಿದ್ದಾರೆ. ಯಾರು ಲಭ್ಯ, ಅಲಭ್ಯ ಫಿಟ್ನೆಸ್ ಸೇರಿದಂತೆ ಹಲವು ವಿಷಯಗಳ ಕುರಿತು ಈ ವೇಳೆ ಆಟಗಾರರ ಮಾಹಿತಿ ಪಡೆಯಲಿದ್ದಾರೆ. ಸೆಪ್ಟೆಂಬರ್ ಮೊದಲ ವಾರದೊಳಗೆ ಏಕದಿನ ವಿಶ್ವಕಪ್ ತಂಡವನ್ನು ಘೋಷಿಸಬೇಕಿದೆ.
ಭವಿಷ್ಯದ ಸೂಪರ್ ಮೇಲೆ ಎಲ್ಲರ ಕಣ್ಣು
ಸದ್ಯ ವೆಸ್ಟ್ ಇಂಡೀಸ್ನಲ್ಲಿ ಇರುವ ಭಾರತ ತಂಡವು, 2ನೇ ಟೆಸ್ಟ್ ಪಂದ್ಯಕ್ಕೆ ಸಿದ್ಧವಾಗುತ್ತಿದೆ. ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ (Team India) ಇನ್ನಿಂಗ್ಸ್ ಗೆಲುವು ದಾಖಲಿಸಿತ್ತು. ಈ ಪಂದ್ಯದಲ್ಲಿ ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಚೊಚ್ಚಲ ಪಂದ್ಯದಲ್ಲೇ ಶತಕ ಸಿಡಿಸಿ ಅಮೋಘ, ಅದ್ಭುತ ಪ್ರದರ್ಶನ ತೋರಿದ್ದರು. ಆ ಮೂಲಕ ಹಲವು ದಾಖಲೆಗಳ ಒಡೆಯನಾಗಿ ಜಗತ್ತಿನ ಗಮನ ಸೆಳೆದರು. ಇದೀಗ ಭವಿಷ್ಯದ ಸೂಪರ್ ಸ್ಟಾರ್ ಎಂದು ಕರೆಸಿಕೊಳ್ಳುತ್ತಿದ್ದಾರೆ.
ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶುಭ್ಮನ್ ಗಿಲ್ , ರವೀಂದ್ರ ಜಡೇಜಾ ಸೇರಿ ಕೆಲವರು ಆಡುವುದು ಖಚಿತವಾಗಿದೆ. ಅದರಲ್ಲೂ ಆರಂಭಿಕ ಆಟಗಾರರ ಸಂಯೋಜನೆಗೆ ರೋಹಿತ್-ಗಿಲ್ ಎಂಬುದು ಆಯ್ಕೆದಾರರ ನಿಲುವು ಸ್ಪಷ್ಟವಾಗಿತ್ತು. ಆದರೀಗ ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಹೊರಹೊಮ್ಮಿದ್ದು, ಅನುಭವಿಗಳು ಮತ್ತು ವಿಶ್ಲೇಷಕರು ಆತನನ್ನೂ ವಿಶ್ವಕಪ್ ತಂಡಕ್ಕೆ ಆಯ್ಕೆ ಮಾಡುವಂತೆ ಪಟ್ಟು ಹಿಡಿದಿದ್ದಾರೆ.
ಆಯ್ಕೆ ಅತ್ಯಗತ್ಯ
ಟೆಲಿಗ್ರಾಫ್ ಜೊತೆಗಿನ ಸಂವಾದದಲ್ಲಿ ಮಾತನಾಡಿದ ಸೌರವ್ ಗಂಗೂಲಿ, ಚೊಚ್ಚಲ ಪಂದ್ಯದಲ್ಲೇ ನೂರು ಸ್ಕೋರ್ ಮಾಡುವುದು ಯಾವಾಗಲೂ ದೊಡ್ಡ ವಿಷಯ. ಸ್ಮರಣೀಯ. ನಾನೂ ಸಹ ಮೊದಲ ಪಂದ್ಯದಲ್ಲೇ ಶತಕ ಸಿಡಿಸಿದ್ದೇನೆ. ಆ ಶತಕವು ಎಷ್ಟು ವಿಶೇಷ ಎಂಬುದು ನನಗೆ ತಿಳಿದಿದೆ. ಸದ್ಯ ಜೈಸ್ವಾಲ್ ಬ್ಯಾಟಿಂಗ್ ತಂತ್ರ ಗಮನಿಸಿದರೆ, ಅದ್ಭುತವಾಗಿದೆ. ಮತ್ತೊಂದು ಸಂಗತಿ ಅಂದರೆ, ತಂಡದಲ್ಲಿ ಎಡಗೈ ಬ್ಯಾಟ್ಸ್‌ಮನ್ ಉಪಸ್ಥಿತಿಯು ಯಾವಾಗಲೂ ನೆರವಾಗುತ್ತದೆ. ಹಾಗಾಗಿ ಆತನನ್ನು ಏಕದಿನ ವಿಶ್ವಕಪ್ ತಂಡಕ್ಕೆ ಆಯ್ಕೆ ಮಾಡುವುದು ಅತ್ಯಗತ್ಯ ಎಂದು ಗಂಗೂಲಿ ಒತ್ತಿ ಹೇಳಿದ್ದಾರೆ.
ಮುಂಬರುವ ಏಕದಿನ ವಿಶ್ವಕಪ್‌ನಲ್ಲಿ ಜೈಸ್ವಾಲ್ ಆಡುವುದನ್ನು ನೋಡಲು ನಾನು ಬಯಸುತ್ತೇನೆ. ನಾನು ಅವರನ್ನು ಐಪಿಎಲ್ ಸಮಯದಲ್ಲಿ ಹತ್ತಿರದಿಂದ ನೋಡಿದ್ದೇನೆ. ಆದರೆ ರೆಡ್ ಬಾಲ್ ಕ್ರಿಕೆಟ್ ವಿಭಿನ್ನವಾಗಿದೆ. ಅಲ್ಲಿಯೂ ತನ್ನ ಸಾಮರ್ಥ್ಯ ಪ್ರೂವ್ ಮಾಡಿದ್ದಾರೆ. ಭಾರತೀಯ ಕ್ರಿಕೆಟ್‌ಗೆ ದೀರ್ಘಕಾಲದವರೆಗೆ ಸೇವೆ ಸಲ್ಲಿಸುವ ಗುಣವಿದೆ ಎಂದು ನಾನು ಭಾವಿಸುತ್ತೇನೆ. ನಾನು ಯಾವಾಗಲೂ ಅಗ್ರ ಕ್ರಮಾಂಕದಲ್ಲಿ ಎಡಗೈ-ಬಲಗೈ ಸಂಯೋಜನೆಗಳ ಪರವಾಗಿರುತ್ತೇನೆ ಎಂದು ಹೇಳಿದ್ದಾರೆ.
ಬೌಲರ್‌ಗಳು ತಮ್ಮ ಲೈನ್ ಅಂಡ್ ಲೆಂತ್‌ಗೆ ಅನುಗುಣವಾಗಿ ನಿರಂತರವಾಗಿ ಬದಲಾಗುವ ಕಾರಣ, ಬಲಗೈ-ಎಡಗೈ ಬ್ಯಾಟ್ಸ್‌ಮನ್ ಕಾಂಬಿನೇಷನ್ ಅಲ್ಲಿ ಆರಂಭಿಕರಾಗಿ ಕಣಕ್ಕಿಳಿದರೆ, ಪ್ರತಿಸ್ಪರ್ಧಿ ದಾಳಿಯನ್ನು ಸ್ವಲ್ಪ ತೊಂದರೆಗೆ ಒಳಪಡಿಸುತ್ತದೆ. ಜೈಸ್ವಾಲ್ರನ್ನು ಏಷ್ಯನ್ ಗೇಮ್ಸ್ ತಂಡದಲ್ಲಿ ಹೆಸರಿಸಲಾಗಿದ್ದರೂ, ವಿಶ್ವಕಪ್‌ಗೆ ಆತನನ್ನು ಆ ಟೂರ್ನಿಯಿಂದ ಹೆಸರು ತೆಗೆದುಹಾಕಿ ವಿಶ್ವಕಪ್‌ಗೆ ಪರಿಗಣಿಸಬೇಕು ಎಂದು ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ.
ಇದು ಆಗದ ಕೆಲಸ
ಸದ್ಯ ಮಾಜಿ ಕ್ರಿಕೆಟಿಗರು, ವಿಶ್ಲೇಷಕರು ಮತ್ತು ತಜ್ಞರು ಜೈಸ್ವಾಲ್ ಅವರು ಏಕದಿನ ವಿಶ್ವಕಪ್‌ನಲ್ಲಿ ಆಡಬೇಕೆಂದು ಬಯಸುತ್ತಿದ್ದಾರೆ. ಆದರೆ ಯಶಸ್ವಿ ಅವರನ್ನು ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೆ ಆಯ್ಕೆ ಮಾಡಿಲ್ಲ ಎಂಬುದನ್ನು ಗಮನಿಸಬೇಕು. ವಾಸ್ತವವಾಗಿ ಏಷ್ಯನ್ ಗೇಮ್ಸ್ ತಂಡಕ್ಕೆ ಸೇರಿಸಲಾಗಿದೆ. ಇದು ಮೂಲತಃ ವಿಶ್ವಕಪ್‌ಗೆ ಸ್ಪರ್ಧಿಸದ ಆಟಗಾರರನ್ನು ಒಳಗೊಂಡಿರುವ ವೇಳಾಪಟ್ಟಿಯಂತೆ. ಈ ಟೂರ್ನಿ ಏಕದಿನ ವಿಶ್ವಕಪ್‌ಗೆ ಘರ್ಷಣೆಯಾಗುವ ಸಾಧ್ಯತೆ ಇದೆ. ಹಾಗಾಗಿ ಜೈಸ್ವಾಲ್ ಅವರನ್ನು ತಂಡಕ್ಕೆ ಆಯ್ಕೆ ಮಾಡುವುದು ಕಷ್ಟಕರ.
ಸಂಬಂಧಿತ ಲೇಖನ