ಕನ್ನಡ ಸುದ್ದಿ  /  Sports  /  Cricket News Stop Targeting Pbks All Rounder Sam Curran For His 18 Crore 50 Lakhs Price Tag Mohammad Kaif To Critics Prs

Kaif on Sam Curran: 18 ಕೋಟಿ 50 ಲಕ್ಷ ಕೊಟ್ಟರೆಂದು ಪ್ರಾಣವನ್ನೇ ಪಣಕ್ಕಿಟ್ಟು ಆಡಬೇಕಾ; ಸ್ಯಾಮ್​ ಕರನ್​​ ಟೀಕಿಸಿದವರ ವಿರುದ್ಧ ಕೈಫ್ ಗರಂ

18.50 ಕೋಟಿ ಪಡೆದು ನಿರಾಸೆ ಮೂಡಿಸಿದ್ದಾರೆಂದು ಅಭಿಮಾನಿಗಳು, ಮಾಜಿ ಕ್ರಿಕೆಟರ್​​ಗಳು, ಟೀಕಾಕಾರರು ಸ್ಯಾಮ್​ ಕರನ್​ರನ್ನು ಟೀಕಿಸುವ ಕೆಲಸ ಮಾಡಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಭಾರತದ ಮಾಜಿ ಕ್ರಿಕೆಟಿಗ ಮೊಹಮ್ಮದ್​ ಕೈಪ್ (Mohammad Kaif)​, ಟೀಕಿಸುವವರಿಗೆ ಚಾಟಿ ಬೀಸಿದ್ದು, ಸ್ಯಾಮ್​​ ಕರನ್​ ಬೆಂಬಲಕ್ಕೆ ನಿಂತಿದ್ದಾರೆ.

ಸ್ಯಾಮ್​​ ಕರನ್​ಗೆ ಬೆಂಬಲ ನೀಡಿದ ಮೊಹಮ್ಮದ್​ ಕೈಫ್​
ಸ್ಯಾಮ್​​ ಕರನ್​ಗೆ ಬೆಂಬಲ ನೀಡಿದ ಮೊಹಮ್ಮದ್​ ಕೈಫ್​

ಇಂಗ್ಲೆಂಡ್ ತಂಡದ ಆಲ್​ರೌಂಡರ್​ ಸ್ಯಾಮ್​ ಕರನ್​ (Sam Curran) ಅವರಿಗೆ ಪಂಜಾಬ್​ ಕಿಂಗ್ಸ್​​ (Punjab Kings), 18.50 ಕೋಟಿ ನೀಡಿ ಖರೀದಿಸಿತು. ಇದು ಇಂಡಿಯನ್​ ಪ್ರೀಮಿಯರ್ ಲೀಗ್ (Indian Premier League 2023)​​​ ಇತಿಹಾಸದಲ್ಲೇ ಆಟಗಾರನೊಬ್ಬ ಪಡೆದ ದುಬಾರಿ ಮೊತ್ತ ಎಂಬ ದಾಖಲೆಯೂ ಆಗಿದೆ. ಆದರೆ ಸ್ಯಾಮ್​ ಕರನ್​ ಪಡೆದ ದುಡ್ಡಿಗೆ ನ್ಯಾಯ ಒದಗಿಸಲಿಲ್ಲ ಎಂಬ ಟೀಕೆಯೂ ಕೇಳಿ ಬರುತ್ತಿದೆ.

ಐಪಿಎಲ್ ಹರಾಜಿನ (IPL Auction) ಇತಿಹಾಸದಲ್ಲಿ ಗರಿಷ್ಠ ಬೆಲೆಗೆ ಮಾರಾಟವಾದ ಸ್ಯಾಮ್ ಕರನ್, 2023ರ ಆವೃತ್ತಿಯಲ್ಲಿ ತನ್ನ ಮೇಲೆ ಇಟ್ಟಿದ್ದ ನಿರೀಕ್ಷೆಗೆ ತಕ್ಕಂತೆ ಆಡುವಲ್ಲಿ ವಿಫಲರಾದರು. ಇಡೀ ವಿಶ್ವವೇ ಆತನ ಮೇಲೆ ವಿಶ್ವಾಸ ಇಟ್ಟುಕೊಂಡಿತ್ತು. ಆದರೆ ಆಗಿದ್ದೇ ಬೇರೆ. 14 ಪಂದ್ಯಗಳಲ್ಲಿ ಬ್ಯಾಟಿಂಗ್​​ನಲ್ಲಿ 276 ರನ್​, ಬೌಲಿಂಗ್​​ನಲ್ಲಿ 10 ವಿಕೆಟ್ ಪಡೆದಿದ್ದಾರೆ.

16ನೇ ಆವೃತ್ತಿಯ ಐಪಿಎಲ್​ನಲ್ಲಿ ಒಂದೇ ಒಂದು ಅರ್ಧಶತಕ ಬಾರಿಸಿದ ಸ್ಯಾಮ್​​, ಬೌಲಿಂಗ್​​ನಲ್ಲಿ ದುಬಾರಿ ಎನಿಸಿಕೊಂಡಿದ್ದಾರೆ. ಪ್ರತಿ ಓವರ್​ನಲ್ಲಿ​ ಬರೋಬ್ಬರಿ 10.11ರ ಎಕಾನಮಿಯಲ್ಲಿ ರನ್​ ಬಿಟ್ಟುಕೊಟ್ಟಿದ್ದಾರೆ. ಆದರೆ ಸ್ಯಾಮ್​ಗಿಂತ​ ಶೇ. 10ರಷ್ಟು ಕಡಿಮೆ ಪಡೆಯುತ್ತಿರುವ ಬೌಲರ್​​​ಗಳು ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ ಎಂಬುದು ಹಲವರ ವಾದ​​​.

ಸ್ಯಾಮ್​ ಬೆಂಬಲಕ್ಕೆ ನಿಂತ ಕೈಫ್​

18.50 ಕೋಟಿ ಪಡೆದು ನಿರಾಸೆ ಮೂಡಿಸಿದ್ದಾರೆಂದು ಅಭಿಮಾನಿಗಳು, ಮಾಜಿ ಕ್ರಿಕೆಟರ್​​ಗಳು, ಟೀಕಾಕಾರರು ಸ್ಯಾಮ್​ ಕರನ್ ವಿರುದ್ಧ ವಾಗ್ದಾಳಿ ನಡೆಸುವುದನ್ನೇ ಕೆಲಸ ಮಾಡಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಭಾರತದ ಮಾಜಿ ಕ್ರಿಕೆಟಿಗ ಮೊಹಮ್ಮದ್​ ಕೈಪ್ (Team India Former Cricketer Mohammad Kaif)​, ಟೀಕಿಸುವವರಿಗೆ ಚಾಟಿ ಬೀಸಿದ್ದು, ಸ್ಯಾಮ್​​ ಕರನ್​ ಬೆಂಬಲಕ್ಕೆ ನಿಂತಿದ್ದಾರೆ.

ಪ್ರೈಸ್​ ಟ್ಯಾಗ್​​​ ಹೆಸರಿನಲ್ಲಿ ಆಟಗಾರರ ಪ್ರದರ್ಶನವನ್ನು ಲೆಕ್ಕಿಸುವುದು ಸರಿಯಲ್ಲ. ಅಂತಾರಾಷ್ಟ್ರೀಯ ಕ್ರಿಕೆಟ್​​​ನಲ್ಲಿ ಸ್ಯಾಮ್​ ನೀಡಿರುವ ಪ್ರದರ್ಶನ ಕಾರಣಕ್ಕಾಗಿ ಆತನ ಮೇಲೆ ಪಂಜಾಬ್​ ಕಿಂಗ್ಸ್​ ದೊಡ್ಡ ಮೊತ್ತವನ್ನು ಸುರಿದಿದೆ. 18.50 ಪಡೆಯುತ್ತಿದ್ದೇವೆಂದು ಪ್ರಾಣವನ್ನೇ ಪಣಕ್ಕಿಟ್ಟು ಆಡೋಕೆ ಹೇಳಿದರೆ ಹೇಗೆ ಎಂದು ಪ್ರಶ್ನಿಸಿದ್ದಾರೆ.

ಯಾವೊಬ್ಬ ಆಟಗಾರ ಕೂಡ ನನಗೆ ಇಷ್ಟೇ ಹಣ ಬೇಕೆಂದು ಯಾರಲ್ಲೂ ಕೇಳುವುದಿಲ್ಲ. ಆತನ ಹಿಂದಿನ ಪ್ರದರ್ಶನದ ಆಧಾರದ ಮೇಲೆ ಫ್ರಾಂಚೈಸಿಗಳು ದುಡ್ಡು ಸುರಿಯುತ್ತವೆ. ಇದರಲ್ಲಿ ಆಟಗಾರರ ತಪ್ಪೇನಿದೆ. ಇಂಟರ್​ನ್ಯಾಷನಲ್​ ಮತ್ತು ಐಪಿಎಲ್​ ಎರಡೂ ಒಂದೇ ಅಲ್ಲ. ಇದನ್ನು ಮೊದಲು ತಿಳಿಯಿರಿ ಎಂದು ಸೂಚಿಸಿದ್ದಾರೆ.

ಆದರೆ ಪಂಜಾಬ್​ ಕಿಂಗ್ಸ್​​​ ತಂಡದಲ್ಲಿರುವ ಸಮಸ್ಯೆ ಕುರಿತು ತಲೆ ಕೆಡಿಸಿಕೊಂಡಿಲ್ಲ. ಅನುಭವಿ ವೇಗದ ಬೌಲರ್​ ಕಗಿಸೋ ರಬಾಡ (Kagiso Rabada) ಅಟ್ಟರ್​ ಫ್ಲಾಪ್​ ಶೋ ನೀಡಿದ್ದಾರೆ. ಇದು ತಂಡದ ಹಿನ್ನಡೆಗೆ ಕಾರಣ. ಆದರೆ ಈ ಸಮಸ್ಯೆ ಯಾರಿಗೂ ಗೊತ್ತಾಗುತ್ತಿಲ್ಲ. ಆದರೆ 18.50 ಕೋಟಿ ಪಡೆದ ಎಂಬ ಕಾರಣಕ್ಕೆ ಆತನ ಮೇಲೆ ವಾಗ್ದಾಳಿ ನಡೆಸುತ್ತಿದ್ದಾರೆ ಎಂದಿದ್ದಾರೆ ಟೀಮ್​ ಇಂಡಿಯಾ ಮಾಜಿ ಕ್ರಿಕೆಟಿಗ.

ಐಪಿಎಲ್​ನಿಂದ ಹೊರ ಬಿದ್ದ ಪಂಜಾಬ್​

16ನೇ ಆವೃತ್ತಿಯ ಐಪಿಎಲ್​ನ ಲೀಗ್​ ಹಂತದಿಂದ ಪಂಜಾಬ್​ ಕಿಂಗ್ಸ್​ ಹೊರ ಬಿದ್ದಿದೆ. ಡೆಲ್ಲಿ ಕ್ಯಾಪಿಟಲ್ಸ್ (Delhi Capitals)​, ಸನ್​ರೈಸರ್ಸ್​ ಹೈದರಾಬಾದ್​ (Sunrisers Hyderabad) ತಂಡಗಳ ನಂತರ ಐಪಿಎಲ್​ನಿಂದ ಎಲಿಮಿನೇಟ್​ ಆದ 3ನೇ ತಂಡ ಎನಿಸಿಕೊಂಡಿದೆ. ಆಡಿದ 14 ಪಂದ್ಯಗಳಲ್ಲಿ ಕೇವಲ 6ರಲ್ಲಿ ಗೆದ್ದು, 8ರಲ್ಲಿ ಸೋತಿದೆ. ರಾತ್ರಿ ನಡೆದ ರಾಜಸ್ಥಾನ್​ ರಾಯಲ್ಸ್ (Rajasthan Royals)​ ವಿರುದ್ಧವೂ ಸೋಲು ಕಂಡಿತು.