Stuart Broad Profile:ವೃತ್ತಿ ಬದುಕಿನಲ್ಲಿ ಸೋತು ಕುಸಿದಾಗ ಒಮ್ಮೆ ನೆನಪಿಸಿಕೊಳ್ಳಬೇಕು ಸ್ಟುವರ್ಟ್‌ ಬ್ರಾಡ್‌ ಅವರ ಕ್ರಿಕೆಟ್‌ ಬದುಕು..
ಕನ್ನಡ ಸುದ್ದಿ  /  ಕ್ರೀಡೆ  /  Stuart Broad Profile:ವೃತ್ತಿ ಬದುಕಿನಲ್ಲಿ ಸೋತು ಕುಸಿದಾಗ ಒಮ್ಮೆ ನೆನಪಿಸಿಕೊಳ್ಳಬೇಕು ಸ್ಟುವರ್ಟ್‌ ಬ್ರಾಡ್‌ ಅವರ ಕ್ರಿಕೆಟ್‌ ಬದುಕು..

Stuart Broad Profile:ವೃತ್ತಿ ಬದುಕಿನಲ್ಲಿ ಸೋತು ಕುಸಿದಾಗ ಒಮ್ಮೆ ನೆನಪಿಸಿಕೊಳ್ಳಬೇಕು ಸ್ಟುವರ್ಟ್‌ ಬ್ರಾಡ್‌ ಅವರ ಕ್ರಿಕೆಟ್‌ ಬದುಕು..

Stuart Broad Profile: ಸ್ಟುವರ್ಟ್‌ ಬ್ರಾಡ್‌ ಎಂಬ ಹೆಸರು ಕೇಳಿದ ಕೂಡಲೇ ನೆನಪಾಗುವುದು ಯುವರಾಜ್‌ ಸಿಂಗ್‌. ಹೌದು, ಆರು ಎಸೆತ ಆರು ಸಿಕ್ಸರ್.‌ ಅಷ್ಟಾಗ್ಯೂ, ಅವರು ಸುದೀರ್ಘ ಒಂದೂವರೆ ವರ್ಷಕ್ಕೂ ಅಧಿಕ ಕಾಲ ಬದ್ಧತೆಯೊಂದಿಗೆ ಕ್ರಿಕೆಟ್‌ ಆಡಿ ಕಳೆದ ವಾರಾಂತ್ಯದಲ್ಲಿ ಕ್ರಿಕೆಟ್‌ಗೆ ವಿದಾಯ ಹೇಳಿದರು. ಈ ಸಲ ವ್ಯಕ್ತಿ ವ್ಯಕ್ತಿತ್ವದಲ್ಲಿ ಸ್ಟುವರ್ಟ್‌ ಬ್ರಾಡ್‌ ಪರಿಚಯ.

ವ್ಯಕ್ತಿ ವ್ಯಕ್ತಿತ್ವದಲ್ಲಿ ಸ್ಟುವರ್ಟ್‌ ಬ್ರಾಡ್‌ ಪರಿಚಯ
ವ್ಯಕ್ತಿ ವ್ಯಕ್ತಿತ್ವದಲ್ಲಿ ಸ್ಟುವರ್ಟ್‌ ಬ್ರಾಡ್‌ ಪರಿಚಯ

ನಿಮಗೆ ನೆನಪಿದೆಯಾ.. 2007ರ ಸೆಪ್ಟೆಂಬರ್‌ 19. ಡರ್ಬನ್‌ನಲ್ಲಿ ನಡೆದ ಟಿ20 ವಿಶ್ವಕಪ್‌ನ ಇಂಗ್ಲೆಂಡ್‌ ವರ್ಸಸ್‌ ಇಂಡಿಯಾ ಮ್ಯಾಚ್‌ ಮತ್ತು ಯುವರಾಜ್‌ ಸಿಂಗ್‌ ಆರು ಎಸೆತಗಳಲ್ಲಿ ಸತತ ಆರು ಸಿಕ್ಸರ್‌ ಬಾರಿಸಿದ ಕ್ಷಣ.

ಟಿ20 ವಿಶ್ವಕಪ್‌ ಮತ್ತು ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಮೊದಲ ಬಾರಿಗೆ ಒಂದು ಓವರ್‌ನ ಸತತ ಆರು ಎಸೆತಗಳನ್ನು ಸಿಕ್ಸರ್‌ ಬಾರಿಸಿದ ಮೊದಲ ಬ್ಯಾಟ್ಸ್‌ಮನ್‌ ಎಂಬ ಕೀರ್ತಿಗೆ ಯುವರಾಜ್‌ ಸಿಂಗ್‌ ಅಂದು ಭಾಜನರಾಗಿದ್ದರು. ಆ ಪಂದ್ಯದಲ್ಲಿ 19ನೇ ಓವರ್‌ನಲ್ಲಿ ಯುವರಾಜ್ ಸಿಂಗ್‌ ಟೀಂ ಇಂಡಿಯಾದ ಸ್ಕೋರ್‌ ಅನ್ನು 200 ರನ್‌ಗಳ ಗಡಿದಾಟಿಸಿದ್ದರು.

ಆಯಿತು, ಮುಗಿದೇ ಹೋಯಿತು ಆ ಬೌಲರ್‌ನ ಕ್ರಿಕೆಟ್‌ ಬದುಕು ಎಂದೆಲ್ಲ ಕ್ರಿಕೆಟ್‌ ಪ್ರೇಮಿಗಳು ಮಾತನಾಡಿಕೊಂಡದ್ದು ಇತ್ತು. ಆದರೆ, ಹಾಗಾಗಲಿಲ್ಲ. ಆ ಬೌಲರ್‌ ಕ್ರಿಕೆಟ್‌ ಲೋಕದ ಐತಿಹಾಸಿಕ ದಾಖಲೆಯ ಕ್ಷಣದ ನಂತರ ಮತ್ತೂ ಒಂದೂವರೆ ದಶಕದ ಸುದೀರ್ಘ ಕ್ರಿಕೆಟ್‌ ಆಟವನ್ನು ಇಂಗ್ಲೆಂಡ್‌ ಪರವಾಗಿ ಆಡಿದರು.

ಹೌದು ಆ ಓವರ್‌ ಎಸೆದುದು ಬೇರಾರೂ ಅಲ್ಲ, ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಇತ್ತೀಚೆಗೆ ನಿವೃತ್ತಿ ಘೋಷಿಸಿದ ಇಂಗ್ಲೆಂಡ್‌ನ ಆಲ್‌ರೌಂಡರ್‌ ಆಟಗಾರ ಸ್ಟುವರ್ಟ್‌ ಬ್ರಾಡ್‌.

ಈ ಸಂದರ್ಭದಲ್ಲಿ ಅವರು ಯುವರಾಜ್‌ ಸಿಂಗ್‌ ಸಿಕ್ಸರ್‌ ಅನ್ನು ನೆನಪಿಸಿಕೊಂಡು, ಅಂದು ಆ ಘಟನೆ ತನ್ನ ಮನಸ್ಸಿನ ಮೇಲೆ ಉಂಟುಮಾಡಿದ ಪರಿಣಾಮ ಏನು ಎಂಬುದನ್ನು ಮೊದಲ ಬಾರಿಗೆ ಮನಬಿಚ್ಚಿ ಮಾತನಾಡಿದರು.

ದಕ್ಷಿಣ ಆಫ್ರಿಕಾದ ಡರ್ಬನ್‌ನಲ್ಲಿ ಅಂದು ಇಂಗ್ಲೆಂಡಿನ ಇನ್ನೊಬ್ಬ ಆಟಗಾರ ಆಂಡ್ರ್ಯೂ ಪ್ಲಿಂಟಾಫ್‌ ಜತೆಗೆ ಕಿರಿಕ್‌ ಮಾಡಿಕೊಂಡಿದ್ದ ಯುವರಾಜ್‌, ಅದೇ ಸಿಟ್ಟಿನಲ್ಲಿ ಸ್ಟುವರ್ಟ್‌ ಬ್ರಾಡ್‌ ಅವರ ಆ ಒಂದು ಓವರ್‌ನ ಪ್ರತಿ ಎಸೆತವನ್ನು ಒಂದಾದ ಮೇಲೆ ಒಂದರಂತೆ ಸಿಕ್ಸರ್‌ಗೆ ಎತ್ತಿದ್ದರು. ಮೊದಲ ಎಸೆತ ಸಿಕ್ಸ್‌ ಬಾರಿಸಿದಾಗ ಏನೋ ಆಕಸ್ಮಿಕವಾಗಿರಬಹುದು ಎಂದುಕೊಂಡ ಸ್ಟುವರ್ಟ್‌ ಬ್ರಾಡ್‌, ಎರಡನೇ ಎಸೆತ, ಮೂರನೇ ಎಸೆತವೂ ಅದೇ ದಾರಿಯಲ್ಲಿ ಹೋದಾಗ ಒಂದು ಕ್ಷಣ ಕಂಗಾಲಾಗಿದ್ದರು. ಆ ನಂತರದ ಮೂರು ಎಸೆತವನ್ನೂ ಯುವರಾಜ್‌ ಸಿಕ್ಸರ್‌ ಎತ್ತಿದಾಗ, ಅರೆ ನನಗೆ ಬೌಲಿಂಗ್‌ ಮಾಡೋದಕ್ಕೆ ಬರೋದಿಲ್ವಾ ಹಾಗಾದರೆ ಎಂದು ಬ್ರಾಡ್‌ ಗರಬಡಿದವರಂತೆ ಚೆಂಡನ್ನೇ ನಿಂತು ನೋಡಿದ್ದರು.

ಭಾರತೀಯ ಕ್ರಿಕೆಟ್‌ ಪ್ರೇಮಿಗಳಿಗೆ ಅದು ರಸ ಕ್ಷಣವಾಗಿತ್ತಾದರೂ, ಬ್ರಾಡ್‌ ಪಾಲಿಗೆ ದೊಡ್ಡ ಆಘಾತ. ಮಹಾಪತನದಂತೆ ಭಾಸವಾಗಿತ್ತು. ಆದರೆ ಹಾಗಾಗಲಿಲ್ಲ. ಬ್ರಾಡ್‌ ತನ್ನ ಕ್ರಿಕೆಟ್‌ ಬದುಕು ಮುಗಿದೇ ಹೋಯಿತೆಂದು ಕೂರಲಿಲ್ಲ. ಮತ್ತೂ ಸರಿ ಸುಮಾರು 16+ ವರ್ಷ ಆಲ್‌ರೌಂಡರ್‌ ಆಟಗಾರರಾಗಿ ಇಂಗ್ಲೆಂಡ್‌ ತಂಡದ ವಿಶ್ವಾಸ ಉಳಿಸಿಕೊಳ್ಳುವಂತೆ ಕ್ರಿಕೆಟ್‌ ಆಡಿದರು. ಟೆಸ್ಟ್‌ ಕ್ರಿಕೆಟ್‌ನ ಸಾಧಕರಾಗಿ ಕ್ರಿಕೆಟ್‌ ಲೋಕದಲ್ಲಿ ಗುರುತಿಸಲ್ಪಟ್ಟಿದ್ದಾರೆ.

ಸ್ಟುವರ್ಟ್‌ ಬ್ರಾಡ್‌ ಅವರ ಕೊನೆಯ ಪಂದ್ಯದ ಕ್ಷಣಗಳು...

ಬ್ರಾಡ್ ಅವರು ಕ್ರಿಕೆಟ್‌ ಅಂಗಣದ ತನ್ನ ಅತ್ಯುತ್ತಮ ಸಂಗಾತಿ ಮತ್ತು ಬೌಲಿಂಗ್ ಪಾಲುದಾರ ಜೇಮ್ಸ್ ಆಂಡರ್ಸನ್ ಅವರ ಜತೆಗೂಡಿ ಭಾನುವಾರ ಓವಲ್‌ನಲ್ಲಿ ಭಾವುಕತೆಯಿಂದ ಕೂಡಿದ ರೋಮಾಂಚನಕಾರಿ ಪ್ರಶಂಸಾತ್ಮಕ ಬೀಳ್ಕೊಡುಗೆ ಗೌರವ ಪಡೆದುಕೊಂಡರು. ಆಸ್ಟ್ರೇಲಿಯನ್ನರು ಕೂಡ ಈ ಹಿರಿಯ ಕ್ರಿಕೆಟಿಗನಿಗೆ ಗೌರವ ಸಲ್ಲಿಸಿದರು. ಕ್ರೀಡಾಂಗಣದಲ್ಲಿನ ಚಪ್ಪಾಳೆ ಸದ್ದು ಮುಗಿಲುಮುಟ್ಟಿತ್ತು.

ಬ್ರಾಡ್ ಮತ್ತು ಆಂಡರ್ಸನ್ ತಮ್ಮ 138 ನೇ ಪಂದ್ಯವನ್ನು ಒಟ್ಟಿಗೆ ಆಡಿದರು. ಓವಲ್ ಆಶಸ್ ಟೆಸ್ಟ್ ತನ್ನ ಕೊನೆಯ ಪಂದ್ಯ ಎಂದು ಬ್ರಾಡ್ ಶನಿವಾರ ಘೋಷಿಸುವುದರೊಂದಿಗೆ ಕ್ರಿಕೆಟ್ ಮೈದಾನದಲ್ಲಿ ಈ ಜೋಡಿಯು ಕೊನೆಯ ಬಾರಿಗೆ ಕಾಣಿಸಿಕೊಂಡಿತು.

ಸಾಮಾನ್ಯವಾಗಿ ಕ್ರಿಕೆಟಿಗರ ವೃತ್ತಿಬದುಕು ಗಾಯ ಅಥವಾ ಫಾರ್ಮ್ ಕೊರತೆಯ ಕಾರಣ, ಅವರ ಮೂವತ್ತರ ವಯಸ್ಸಿನ ಆಸುಪಾಸಿನಲ್ಲಿ ದಿಢೀರ್‌ ಆಗಿ ಕೊನೆಗೊಳ್ಳುತ್ತವೆ. ಕೆಲವು ಶ್ರೇಷ್ಠ ಆಟಗಾರರು ಇದಕ್ಕೆ ಹೊರತಾಗಿ ಆಟವಾಡುತ್ತಾರೆ. ಬ್ರಾಡ್‌ ಅವರ ಆಟ ಇನ್ನೂ ಕಳೆಗುಂದಿರಲಿಲ್ಲ, ಅವರ ಶಾರೀರಿಕ ಆರೋಗ್ಯವೂ ಕೆಟ್ಟಿರಲಿಲ್ಲ, ಫಿಟ್‌ ಆಗಿತ್ತು. ಇಂತಹ ಸಂದರ್ಭದಲ್ಲೇ ಅವರು ನಿವೃತ್ತಿ ಘೋಷಿಸಿರುವಂಥದ್ದು. ಅಂದ ಹಾಗೆ ಅವರಿಗೆ ಈಗ ವಯಸ್ಸು 37.

ಸ್ಟುವರ್ಟ್‌ ಬ್ರಾಡ್‌ ಎಂಬ ಕ್ರಿಕೆಟಿಗನ ವೈಯಕ್ತಿಕ ಮಾಹಿತಿ

ಪೂರ್ಣ ಹೆಸರು - ಸ್ಟುವರ್ಟ್‌ ಕ್ರಿಸ್ಟೋಫರ್‌ ಜಾನ್‌ ಬ್ರಾಡ್‌

ಜನ್ಮ ದಿನಾಂಕ - 24.06.1986

ಹುಟ್ಟೂರು - ನಾಟಿಂಗ್‌‌ಹ್ಯಾಮ್

ಕ್ರೀಡೆ - ಕ್ರಿಕೆಟ್‌

ಆಡಿದ ಟೀಮ್‌ - ಇಂಗ್ಲೆಂಡ್‌, ಇಂಗ್ಲೆಂಡ್ ಎ, ಇಂಗ್ಲೆಂಡ್ ಇಲೆವೆನ್, ಲೀಸೆಸ್ಟರ್‌ಶೈರ್, ನಾಟಿಂಗ್‌ಹ್ಯಾಮ್‌ಶೈರ್, ಪಂಜಾಬ್ ಕಿಂಗ್ಸ್, ಇಂಗ್ಲೆಂಡ್ ಅಂಡರ್-19, ಹೋಬರ್ಟ್ ಹರಿಕೇನ್ಸ್, ಮೇರಿಲ್ಬೋನ್ ಕ್ರಿಕೆಟ್ ಕ್ಲಬ್

ಬ್ಯಾಟಿಂಗ್‌ - ಎಡಗೈ

ಬೌಲಿಂಗ್‌ - ಬಲಗೈ ಮಧ್ಯವೇಗಿ

ಕ್ರಿಕೆಟ್‌ ಅಂಗಣದಲ್ಲಿ ಸ್ಟುವರ್ಟ್‌ ಬ್ರಾಡ್‌ ಸಾಗಿ ಬಂದ ಹಾದಿ..

ಪ್ರಸ್ತುತ ಐಸಿಸಿ ಮ್ಯಾಚ್ ರೆಫರಿ ಕ್ರಿಸ್ ಬ್ರಾಡ್ ಅವರ ಮಗ, ಸ್ಟುವರ್ಟ್ ಬ್ರಾಡ್ ಒಬ್ಬ ಬಲಗೈ ಮಧ್ಯಮ ವೇಗಿಯಾಗಿದ್ದು, ಇಂಗ್ಲೆಂಡ್ ತಂಡದಲ್ಲಿ ತನ್ನದೇ ಆದ ಛಾಪು ಹೊಂದಿದ್ದಾರೆ. ಹಲವು ಏರಿಳಿತಗಳ ನಡುವೆ ಅವರ ಸ್ಫೋಟಕ ಸಾಧನೆಯ ಕಾರಣ ಆಯ್ಕೆದಾರರು ಅವರನ್ನು ಒಂದು ಸಮಯದಲ್ಲಿ ಇಂಗ್ಲೆಂಡ್ T20 ನಾಯಕನನ್ನಾಗಿ ನೇಮಿಸಲು ಕಾರಣವಾಯಿತು. ಆದರೆ ಅದು ಹೆಚ್ಚು ಕಾಲ ಉಳಿಯಲಿಲ್ಲ.

ಅವರ ತಂದೆಯಂತೆ, ಸ್ಟುವರ್ಟ್ ಬ್ರಾಡ್ ಕ್ರಿಕೆಟ್‌ ಬದುಕಿನ ಆರಂಭದಲ್ಲಿ ಓಪನಿಂಗ್‌ ಬ್ಯಾಟ್ಸ್‌ಮನ್ ಆಗಿ ಕ್ರಿಕೆಟ್ ಆಡಲು ಸಾಹಸ ಮಾಡಿದರು. ಆದರೆ, ಮೈದಾನದಲ್ಲಿ ದಿನವಿಡೀ ನಿಲ್ಲಲು ಇಷ್ಟವಿಲ್ಲದ ಕಾರಣ ಬೌಲಿಂಗ್‌ಗೆ ಮೊರೆ ಹೋದರು. U-19 ಮಟ್ಟದಲ್ಲಿ ಪ್ರಭಾವಶಾಲಿ ಪ್ರದರ್ಶನಗಳನ್ನು ಅನುಸರಿಸಿ, ಬ್ರಾಡ್ 2006 ರಲ್ಲಿ ಪಾಕಿಸ್ತಾನದ ವಿರುದ್ಧ T20 ಪಂದ್ಯದಲ್ಲಿ ಆಡಲು ಆಯ್ಕೆಯಾದರು. ಬ್ರಾಡ್ ಆ ಪಂದ್ಯದಲ್ಲಿ ಹ್ಯಾಟ್ರಿಕ್ ದಾಖಲೆ ನಿರ್ಮಿಸುವ ಅವಕಾಶ ಕಳೆದುಕೊಂಡರೂ, ಉತ್ತಮ ಪ್ರದರ್ಶನವನ್ನು ನೀಡಿದರು.

ಸ್ಟುವರ್ಟ್‌ ಬ್ರಾಡ್‌ ಕ್ರಿಕೆಟ್‌ ಬದುಕಿನ ಪ್ರಮುಖ ಮೈಲಿಗಲ್ಲುಗಳು

  1. ಸಿಂಹಳೀಸ್ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಶ್ರೀಲಂಕಾ ವಿರುದ್ಧ ಚೊಚ್ಚಲ ಟೆಸ್ಟ್ 2007ರ ಡಿಸೆಂಬರ್ 09.
  2. ಎಮಿರೇಟ್ಸ್ ಓಲ್ಡ್ ಟ್ರಾಫರ್ಡ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಕೊನೆಯ ಟೆಸ್ಟ್ 2023ರ ಜುಲೈ 19.
  3. ಸೋಫಿಯಾ ಗಾರ್ಡನ್ಸ್‌ನಲ್ಲಿ ಪಾಕಿಸ್ತಾನ ವಿರುದ್ಧ ಚೊಚ್ಚಲ ಅಂತಾರಾಷ್ಟ್ರೀಯ ಏಕದಿನ ಪಂದ್ಯ 2006ರ ಆಗಸ್ಟ್ 30
  4. ನ್ಯೂಲ್ಯಾಂಡ್ಸ್‌ನಲ್ಲಿ ದಕ್ಷಿಣಾ ಆಫ್ರಿಕಾ ವಿರುದ್ಧ ಕೊನೆಯ ಏಕದಿನ ಪಂದ್ಯ 2016ರ ಫೆಬ್ರವರಿ 14
  5. ಕೌಂಟಿ ಗ್ರಾಂಡ್‌ನಲ್ಲಿ ಪಾಕಿಸ್ತಾನದ ವಿರುದ್ಧ ಚೊಚ್ಚಲ ಟಿ20 ಪಂದ್ಯ 2006ರ ಆಗಸ್ಟ್‌ 28
  6. ಜಹುರ್ ಅಹ್ಮದ್ ಚೌಧರಿ ಕ್ರೀಡಾಂಗಣದಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧ ಕೊನೆಯ ಟಿ20 ಪಂದ್ಯ 2014ರ ಮಾರ್ಚ್ 31

ಸ್ಟುವರ್ಟ್‌ ಬ್ರಾಡ್‌ ಕ್ರಿಕೆಟ್‌ ರ್ಯಾಂಕಿಂಗ್‌

 ಟೆಸ್ಟ್‌ ಪಂದ್ಯ (Test Match)ಏಕದಿನ ಪಂದ್ಯ (ODI)ಟಿ20 (T20)
ಬ್ಯಾಟಿಂಗ್---
ಬೌಲಿಂಗ್14--

ಇನ್ನು ಸ್ಟುವರ್ಟ್‌ ಬ್ರಾಡ್‌ ಅವರು ಟೆಸ್ಟ್‌ ಕ್ರಿಕೆಟ್‌ನಲ್ಲಿ 10 ಸಲ, ಏಕದಿನ ಪಂದ್ಯದಲ್ಲಿ 3 ಮತ್ತು ಟಿ20 ಕ್ರಿಕೆಟ್‌ನಲ್ಲಿ ಒಮ್ಮೆ ಪಂದ್ಯದ ಪುರುಷೋತ್ತಮ (Man of the Match) ಪ್ರಶಸ್ತಿ ಭಾಜನರಾಗಿದ್ದರು.

ಕ್ರಿಕೆಟ್‌ನ ವಿವಿಧ ಮಾದರಿಯಲ್ಲಿ ಸ್ಟುವರ್ಟ್‌ ಬ್ರಾಡ್‌ ಅವರ ಬ್ಯಾಟಿಂಗ್‌ ಸಾಧನೆ

ಸ್ಟುವರ್ಟ್‌ ಬ್ರಾಡ್‌ ಅವರ ಬ್ಯಾಟಿಂಗ್‌ ಸಾಧನೆ

 ಮ್ಯಾಚ್‌/ಇನ್ನಿಂಗ್ಸ್ರನ್‌ಗರಿಷ್ಠ ಸ್ಕೋರ್ಶತಕಅರ್ಧಶತಕಬೌಂಡರಿ (4 ರನ್‌)ಸಿಕ್ಸರ್‌ (6ರನ್‌)
ಟೆಸ್ಟ್167/2343559ಪಾಕ್‌ ವಿರುದ್ಧ 169 ರನ್‌11342854
ಅಂತಾರಾಷ್ಟ್ರೀಯ ಏಕದಿನ ಪಂದ್ಯ121/68529ಭಾರತದ ವಿರುದ್ಧ ಅಜೇಯ 45 ರನ್--3510
ವಿಶ್ವಕಪ್‌10/618ಬಾಂಗ್ಲಾ ವಿರುದ್ಧ 9‌ ರನ್--‌ -1
ಅಂತಾರಾಷ್ಟ್ರೀಯ ಟಿ20 56/26118ಆಸ್ಟ್ರೇಲಿಯಾ ವಿರುದ್ಧ ಅಜೇಯ 18--73

ವಿವಿಧ ಕ್ರಿಕೆಟ್‌ ಮಾದರಿಗಳಲ್ಲಿ ಸ್ಟುವರ್ಟ್‌ ಬ್ರಾಡ್‌ ಅವರ ಬೌಲಿಂಗ್‌ ಸಾಧನೆ

ಸ್ಟುವರ್ಟ್‌ ಬ್ರಾಡ್‌ ಬೌಲಿಂಗ್‌ ಸಾಧನೆ

 ಮ್ಯಾಚ್‌/ಇನ್ನಿಂಗ್ಸ್ವಿಕೆಟ್‌ಗಳುಬೆಸ್ಟ್‌ ಬೌಲಿಂಗ್‌ ಇನ್ನಿಂಗ್ಸ್ (ಬಿಬಿಐ)ಬೆಸ್ಟ್‌ ಬೌಲಿಂಗ್‌ ಮ್ಯಾಚಸ್‌(ಬಿಬಿಎಂ)ಎಕಾನಮಿ
ಟೆಸ್ಟ್‌ 167/3096028/1511/1212.98
ಏಕದಿನ ಪಂದ್ಯ121/1211785/235/235.27
ಟಿ2056/55654/244/247.63

ಸ್ಟುವರ್ಟ್‌ ಬ್ರಾಡ್‌ ಬದುಕಿನಿಂದ ಕಲಿಯಬೇಕಾದ ಪಾಠ

ಇಂಗ್ಲೆಂಡ್‌ ಕ್ರಿಕೆಟ್‌ನ ಮಟ್ಟಿಗೆ ಸ್ಟುವರ್ಟ್‌ ಬ್ರಾಡ್‌ ಎಂಬ ಆಕ್ಷನ್‌ ಮ್ಯಾನ್‌, ಬೌಲಿಂಗ್‌ ಹೀರೋ ಒಬ್ಬ ಕ್ರೌಡ್ ಪುಲ್ಲರ್‌. ಅವರು ಕ್ರಿಕೆಟ್‌ನ ಕಠಿಣ ಸಹಿಷ್ಣುತೆಯ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ಒಂದೂವರೆ ದಶಕಕ್ಕೂ ಕಾಲ ತಮ್ಮ ತಂಡಕ್ಕೆ ಅಚಲವಾದ ಸಂಕಲ್ಪದೊಂದಿಗೆ ಸೇವೆ ಸಲ್ಲಿಸಿದರು.

ಸೋಲು ಕೂಡ ಗೆಲುವಿನಂತೆಯೇ ಬದುಕಿನ ಒಂದು ಭಾಗ ಎಂಬುದನ್ನು ಅರಿತು, ಕ್ರೀಡೆಯ ಫಲಿತಾಂಶವನ್ನು ಕ್ರೀಡಾಸ್ಪೂರ್ತಿಯಿಂದಲೇ ತೆಗೆದುಕೊಂಡು ಬದುಕಿನ ಪ್ರೇರಣಾದಾಯಿ ಪಾಠವನ್ನು ಜಗತ್ತಿಗೆ ಸಾರಿದರು.

ಸ್ಟುವರ್ಟ್‌ ಬ್ರಾಡ್‌ ಅವರ ಸೋಷಿಯಲ್‌ ಮೀಡಿಯಾ ಕನೆಕ್ಟ್‌

ಟ್ವಿಟರ್‌ ಹ್ಯಾಂಡಲ್‌ - @StuartBroad8

ಫೇಸ್‌ಬುಕ್‌ ಪೇಜ್‌ - @stuartbroad8

ಉಮೇಶ್‌ ಕುಮಾರ್‌ ಶಿಮ್ಲಡ್ಕ

(ಸ್ಟುವರ್ಟ್‌ ಬ್ರಾಡ್‌ ಅವರ ವ್ಯಕ್ತಿ ಚಿತ್ರಣದ ಲೇಖನದ ಬಗ್ಗೆ ನಿಮ್ಮ ಸಲಹೆ, ಅಭಿಪ್ರಾಯಗಳನ್ನು ಸ್ವಾಗತಿಸುತ್ತೇವೆ. ನಿಮ್ಮ ಪ್ರತಿಕ್ರಿಯೆಯೇ ನಮ್ಮ ಬರಹಗಳಿಗೆ ಜೀವಾಳ. umesh.s@htdigital.in ಅಥವಾ ht.kannada@htdigital.in ಗಳಿಗೆ ಪ್ರತಿಕ್ರಿಯೆ ಇ-ಮೇಲ್​ ಕಳುಹಿಸಬಹುದು.)

ಇನ್ನಷ್ಟು ಅಂಕಣ ಬರಹಗಳನ್ನು ಓದುವುದಕ್ಕಾಗಿ ಇಲ್ಲಿ ಕ್ಲಿಕ್‌ ಮಾಡಿ

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.