ಕನ್ನಡ ಸುದ್ದಿ  /  Sports  /  Cricket News Team India To Play Against Pakistan On October 15 In 2023 Odi World Cup At Narendra Modi Stadium Prs

Ind vs Pak: ಏಕದಿನ ವಿಶ್ವಕಪ್‌; ಭಾರತ-ಪಾಕಿಸ್ತಾನ ಹೈವೋಲ್ಟೇಜ್​ ಕದನಕ್ಕೆ ಡೇಟ್​ ಫಿಕ್ಸ್​​; ನಮ್ಮ ದೇಶಕ್ಕೆ ಬರಲು ಪಿಸಿಬಿ ಒಪ್ಪಿಗೆ

IND vs PAK, ODI World Cup 2023: ಅಕ್ಟೋಬರ್-ನವೆಂಬರ್‌ನಲ್ಲಿ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಕುರಿತು ಪ್ರಮುಖ ಅಪ್‌ಡೇಟ್ ಹೊರ ಬಿದ್ದಿದೆ. ಈ ಟೂರ್ನಿಯಲ್ಲಿ ಭಾರತ-ಪಾಕ್ (India vs Pakistan) ನಡುವಿನ ಮಹತ್ವದ ಪಂದ್ಯಕ್ಕೂ ದಿನಾಂಕ ನಿಗದಿಯಾಗಿದೆ.

ರೋಹಿತ್​ ಶರ್ಮಾ ಮತ್ತು ಬಾಬರ್ ಅಜಮ್​
ರೋಹಿತ್​ ಶರ್ಮಾ ಮತ್ತು ಬಾಬರ್ ಅಜಮ್​ (ICC Twitter)

ಅಕ್ಟೋಬರ್ - ನವೆಂಬರ್‌ನಲ್ಲಿ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ (ODI World Cup 2023) ಕುರಿತು ಪ್ರಮುಖ ಅಪ್‌ಡೇಟ್ ಹೊರ ಬಿದ್ದಿದೆ. ಏಷ್ಯಾಕಪ್ 2023ಕ್ಕೆ (Asia Cup) ಸಂಬಂಧಿಸಿದಂತೆ ಬಿಸಿಸಿಐ (BCCI) ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿ (Pakistan Cricket Board) ನಡುವೆ ನಡೆಯುತ್ತಿರುವ ವಿವಾದದ ನಡುವೆ ದೊಡ್ಡ ಸುದ್ದಿಯೊಂದು ಹೊರ ಬಿದ್ದಿದೆ. 

2023ರ ಏಕದಿನ ವಿಶ್ವಕಪ್‌ಗಾಗಿ ಭಾರತ ಪ್ರವಾಸ ಮಾಡಲು ಪಾಕಿಸ್ತಾನ ಕ್ರಿಕೆಟ್​ ಮಂಡಳಿ (PCB) ಒಪ್ಪಿಕೊಂಡಿದೆ. ಈ ಹಿಂದೆ ಟೂರ್ನಿಯನ್ನು ಬಹಿಷ್ಕರಿಸುವುದಾಗಿ ಬೆದರಿಕೆ ಹಾಕಿದ್ದ ಪಿಸಿಬಿ, ಬಿಸಿಸಿಐ ಮುಂದೆ ತಲೆಬಾಗಿದಂತಿದೆ. ಕ್ರಿಕ್‌ಬಜ್ ವರದಿಯ ಪ್ರಕಾರ, ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ರನ್ನರ್ ಅಪ್ ನ್ಯೂಜಿಲೆಂಡ್ ತಂಡಗಳು (England vs New Zealand) ಏಕದಿನ ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.

ಈ ಪಂದ್ಯ ಅಕ್ಟೋಬರ್ 5 ರಂದು ಅಹಮದಾಬಾದ್‌ನಲ್ಲಿ (Ind vs Pak Match in Ahmedabad) ನಡೆಯಲಿದೆ. ಭಾರತ ತಂಡ ತನ್ನ ಮೊದಲ ಪಂದ್ಯವನ್ನು ಆಸ್ಟ್ರೇಲಿಯಾ (India vs Australia) ವಿರುದ್ಧ ಆಡಲಿದೆ. ಚೆನ್ನೈನ ಚೆಪಾಕ್ ಸ್ಟೇಡಿಯಂ ಈ ಮಹತ್ವದ ಪಂದ್ಯಕ್ಕೆ ಆತಿಥ್ಯ ವಹಿಸಲಿದೆ ಎಂದು ವರದಿಯಾಗಿದೆ. ನವೆಂಬರ್ 19ರಂದು ಅಹಮದಾಬಾದ್‌ನಲ್ಲಿ ಫೈನಲ್ ಪಂದ್ಯ ನಡೆಯಲಿದೆ.

ಅಕ್ಟೋಬರ್ 15ರಂದು ಇಂಡೋ-ಪಾಕ್​ ಪಂದ್ಯ

ಇದರೊಂದಿಗೆ ಟೂರ್ನಿಯಲ್ಲಿ ಭಾರತ - ಪಾಕ್ (India vs Pakistan) ಪ್ರಮುಖ ಪಂದ್ಯಕ್ಕೂ ದಿನಾಂಕ ನಿಗದಿಯಾಗಿದೆ. ಸದ್ಯದ ವರದಿ ಪ್ರಕಾರ, ಅಕ್ಟೋಬರ್ 15ರಂದು ಸಾಂಪ್ರಾದಾಯಿಕ ಎದುರಾಳಿ ಎದುರು ಕಾದಾಟ ನಡೆಸಲಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್​ ಪಂದ್ಯ ಅಹಮದಾಬಾದ್‌ನಲ್ಲಿ ನಡೆಯಲಿದೆ. ಟೂರ್ನಿಯ ಸೆಮಿಫೈನಲ್ ಪಂದ್ಯ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿದೆ. 

ಮತ್ತೊಂದು ಸೆಮಿಫೈನಲ್ ಪಂದ್ಯ ಅಹಮದಾಬಾದ್ ಅಥವಾ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ನಲ್ಲಿ ನಡೆಯುವ ಸಾಧ್ಯತೆ ಇದೆ. ಪಾಕಿಸ್ತಾನಕ್ಕೆ ಸಂಬಂಧಿಸಿದ ಎಲ್ಲಾ ಪಂದ್ಯಗಳನ್ನು ಅಹಮದಾಬಾದ್, ಚೆನ್ನೈ, ಹೈದರಾಬಾದ್ ಮತ್ತು ಬೆಂಗಳೂರಿನಲ್ಲಿ ನಡೆಸಲು ನಿರ್ಧರಿಸಲಾಗಿದೆ. ಸದ್ಯದ ಮಾಹಿತಿ ಪ್ರಕಾರ ಅಕ್ಟೋಬರ್ 5ರಿಂದ ನವೆಂಬರ್ 19ರವರೆಗೆ ಏಕದಿನ ವಿಶ್ವಕಪ್ ನಡೆಯಬೇಕಿದ್ದು, ವೇಳಾಪಟ್ಟಿ ಅಂತಿಮಗೊಂಡಿಲ್ಲ. 

2019ರ ಏಕದಿನ ವಿಶ್ವಕಪ್​ನಲ್ಲಿ ಭಾರತಕ್ಕೆ ಗೆಲುವು

2019ರ ಏಕದಿನ ವಿಶ್ವಕಪ್​​ ಟೂರ್ನಿಯಲ್ಲಿ ಪಾಕ್​ ಎದುರು ಭಾರತ 89 ರನ್​ಗಳ ಅಂತರದಿಂದ ಗೆಲುವಿನ ಕೇಕೆ ಹಾಕಿತ್ತು. ಮೊದಲು ಬ್ಯಾಟಿಂಗ್​ ನಡೆಸಿದ್ದ ಭಾರತ, ರೋಹಿತ್​ ಶರ್ಮಾ ಅವರ ಭರ್ಜರಿ ಶತಕದ ನೆರವಿನಿಂದ 50 ಓವರ್​ಗಳಲ್ಲಿ 5 ವಿಕೆಟ್​ ನಷ್ಟಕ್ಕೆ 336 ರನ್​ ಗಳಿಸಿತ್ತು. ಆದರೆ ಈ ಗುರಿ ಬೆನ್ನತ್ತಿದ ಪಾಕ್​, 212 ರನ್​​​ಗಳಿಗೆ 6 ವಿಕೆಟ್​ ಕಳೆದುಕೊಂಡಿತ್ತು. ಮಳೆ ಬಂದು ಪಂದ್ಯ ಸ್ಥಗಿತಗೊಂಡಿತ್ತು. ಹಾಗಾಗಿ ಡಿಎಲ್​ಎಸ್​ ನಿಯಮದಡಿ 89 ರನ್​ಗಳಿಂದ ಭಾರತ ಗೆದ್ದಿತ್ತು.

2013ರ ಬಳಿಕ ಭಾರತಕ್ಕೆ

ಭಾರತಕ್ಕೆ ಪಾಕಿಸ್ತಾನ ತಂಡವು ಆಗಮಿಸಲು ಪಿಸಿಬಿ ಒಪ್ಪಿಕೊಂಡಿದೆ. ಆ ಮೂಲಕ 10 ವರ್ಷಗಳ ನಂತರ ಪಾಕ್​​, ಭಾರತ ನೆಲವನ್ನು ಸ್ಪರ್ಶಿಸಲಿದೆ. ಕೊನೆಯದಾಗಿ 2012ರ ಡಿಸೆಂಬರ್​ 25 ರಿಂದ 2013ರ ಜನವರಿ 6ರವರೆಗೂ ನಡೆದ ಏಕದಿನ ಸರಣಿಗೆ ಪ್ರವಾಸ ಕೈಗೊಂಡಿತ್ತು. ಆ ಬಳಿಕ ಉಭಯ ದೇಶಗಳ ಸಂಬಂಧ ಮತ್ತಷ್ಟು ಹಳಸಿದ ಕಾರಣ, ಮತ್ತೆ ಪ್ರವಾಸಕ್ಕೆ ಅವಕಾಶ ನೀಡಿರಲಿಲ್ಲ.