ಕನ್ನಡ ಸುದ್ದಿ  /  Sports  /  Cricket News Virender Sehwag Savage Reply To Shoaib Akhtar On Have More Money Than You Have Hair Statement Prs

Virender Sehwag: ನಿಮ್ಮ ಬೋಳು ತಲೆಯ ಮೇಲಿರುವ ಕೂದಲಿಗಿಂತ ನನ್ನಲ್ಲಿರುವ ದುಡ್ಡೇ ಜಾಸ್ತಿ; ಹೀಗಂದಿದ್ದ ಅಖ್ತರ್​ಗೆ ಸೆಹ್ವಾಗ್ ತಿರುಗೇಟು

ನಿಮ್ಮ ಬೋಳು ತಲೆಯ ಮೇಲಿರುವ ಕೂದಲಿಗಿಂತ ನನ್ನಲ್ಲಿರುವ ದುಡ್ಡೇ ಜಾಸ್ತಿ ಎಂದು ಹೇಳಿದ್ದ ಶೋಯೆಬ್​ ಅಖ್ತರ್​ಗೆ (Shoaib Akhtar) ವೀರೇಂದ್ರ ಸೆಹ್ವಾಗ್ (Virender Sehwag)​ ಖಡಕ್​ ತಿರುಗೇಟು ನೀಡಿದ್ದಾರೆ.

ಶೋಯೆಬ್​ ಅಖ್ತರ್​ಗೆ ತಿರುಗೇಟು ಕೊಟ್ಟ ವೀರೇಂದ್ರ ಸೆಹ್ವಾಗ್​
ಶೋಯೆಬ್​ ಅಖ್ತರ್​ಗೆ ತಿರುಗೇಟು ಕೊಟ್ಟ ವೀರೇಂದ್ರ ಸೆಹ್ವಾಗ್​

ಟೀಮ್​ ಇಂಡಿಯಾ ಪರ ಟೆಸ್ಟ್‌ನಲ್ಲಿ ಎರಡು ತ್ರಿಶತಕ ಬಾರಿಸಿದ ಏಕೈಕ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ವೀರೇಂದ್ರ ಸೆಹ್ವಾಗ್ (Virender Sehwag), ಮುಲ್ತಾನ್‌ನಲ್ಲಿ ಪಾಕಿಸ್ತಾನದ ವಿರುದ್ಧ ತ್ರಿಶತಕ ಬಾರಿಸುವ ಮೂಲಕ 'ಮುಲ್ತಾನ್ ಕಾ ಸುಲ್ತಾನ್' ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇತ್ತೀಚೆಗಷ್ಟೇ ಅವರು ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ (Shoaib Akhtar) ಜೊತೆಗಿನ ಸ್ನೇಹ ಮತ್ತು ಬಾಂಧವ್ಯವನ್ನು ಬಹಿರಂಗಪಡಿಸಿದ್ದಾರೆ.

ಇತ್ತೀಚೆಗಷ್ಟೇ ‘ಬ್ರೇಕ್ ಫಾಸ್ಟ್ ವಿತ್ ಚಾಂಪಿಯನ್ಸ್’ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವೀರೇಂದ್ರ ಸೆಹ್ವಾಗ್​ಗೆ ಭಾರತ ಮತ್ತು ಪಾಕಿಸ್ತಾನ ಆಟಗಾರರ ನಡುವೆ ಸ್ನೇಹ ಇತ್ತೇ? ಎಂಬ ಪ್ರಶ್ನೆ ಹುಟ್ಟಿಕೊಂಡಿತು. ಪ್ರೀತಿ ಇರುವಲ್ಲಿ ಯುದ್ಧವೂ ಇರುತ್ತದೆ. ಸ್ನೇಹದಲ್ಲಿ ಸಂಘರ್ಷಗಳಿವೆ. ನಿಜ ಹೇಳಬೇಕೆಂದರೆ, ಶೋಯೆಬ್ ಅಖ್ತರ್ ಮತ್ತು ನಾನು 2003-04ರವರೆಗೆ ಉತ್ತಮ ಸ್ನೇಹಿತರಾಗಿದ್ದೆವು. ನಾವು 2 ಬಾರಿ ಪಾಕಿಸ್ತಾನಕ್ಕೆ ಹೋಗಿದ್ದೆವು, ಅವರು ಇಲ್ಲಿಗೆ 2 ಬಾರಿ ಬಂದಿದ್ದರು ಎಂದು ಸೆಹ್ವಾಗ್​ ಹೇಳಿದ್ದಾರೆ.

ನಮ್ಮ ಸ್ನೇಹವು ಪರಿಹಾಸ್ಯ ಮತ್ತು ವಿಡಂಬನೆಯನ್ನು ಒಳಗೊಂಡಿತ್ತು. ಒಬ್ಬರಿಗೊಬ್ಬರು ಕಾಲು ಎಳೆಯುತ್ತೇವೆ. ಆದರೆ ಒಂದು ದಿನ, ನಿಮ್ಮ ಬೋಳು ತಲೆಯ ಮೇಲಿರುವ ಕೂದಲಿಗಿಂತ ನನ್ನಲ್ಲಿರುವ ದುಡ್ಡೇ ಜಾಸ್ತಿ ಎಂದು ಸೆಹ್ವಾಗ್​ಗೆ ಶೋಯೆಬ್​ ಅಖ್ತರ್​ ಪ್ರತಿಕ್ರಿಯಿಸಿದ್ದರಂತೆ. ಅಂದು ನಾನು ಏನು ಹೇಳಿರಲಿಲ್ಲ. ಈಗ ನಾನು ಹೇಳುತ್ತಿದ್ದಂತೆ ನಿನ್ನಲ್ಲಿರುವ ನೋಟುಗಳಿಂತ ನನ್ನ ತಲೆ ಮೇಲಿರುವ ಕೂದಲೇ ಹೆಚ್ಚಿದೆ ಎಂದು ಖಡಕ್​ ಉತ್ತರ ನೀಡಿದ್ದಾರೆ ಸೆಹ್ವಾಗ್.

2016ರಲ್ಲಿ ಶೋಯೆಬ್ ಅಖ್ತರ್, ಯುವ ಭಾರತೀಯ ಕ್ರಿಕೆಟಿಗರನ್ನೂ ಹೊಗಳುತ್ತಾ ಯೂಟ್ಯೂಬ್‌ ವಿಡಿಯೋ ಮಾಡುವುದನ್ನು ಪ್ರಾರಂಭಿಸಿದ್ದರು. ವೀರೇಂದ್ರ ಸೆಹ್ವಾಗ್‌ ಅವರು ಈ ಬಗ್ಗೆ ಕೆಂಡಕಾರಿದ್ದರು . ‘ನಮಗೆ ನಮ್ಮ ಆಟಗಾರರ ಬಗ್ಗೆ ಗೊತ್ತು. ನಿಮ್ಮವರು ಹೇಗೆ ಆಡುತ್ತಿದ್ದಾರೆ ಎಂಬುದನ್ನು ನೋಡಿಕೊಳ್ಳಿ. ಹಣಕ್ಕಾಗಿ ಯಾವ ಮಟ್ಟಕ್ಕಾದರೂ ಇಳಿದು ಬಿಡುತ್ತೀರಾ ಎಂದು ಪ್ರತಿಕ್ರಿಯಿಸಿದ್ದೆ ಎಂದರು ವೀರು.

ಇದಕ್ಕೆ 2020ರಲ್ಲಿ ಉತ್ತರ ಕೊಟ್ಟಿದ್ದ ಅಖ್ತರ್​, ನನ್ನ ಬಳಿ ನಿನ್ನ ತಲೆ ಮೇಲಿರುವ ಕೂದಲಿಗಿಂತಲೂ ಹೆಚ್ಚು ನನ್ನ ಬಳಿ ದುಡ್ಡಿದೆ ಎಂದಿದ್ದರು. ನನಗೆ ತುಂಬಾ ಫಾಲೋವರ್ಸ್ ಇದ್ದಾರೆ ಎಂಬ ಕಾರಣಕ್ಕೆ ನೀವು ಉರಿದುಕೊಳ್ಳುತ್ತೀರಾ ಎಂದು ಅರ್ಥವಾಗುತ್ತಿದೆ. ನಾನು ಈ ಮಟ್ಟಕ್ಕೆ ಏರಲು 15 ವರ್ಷ ಬೇಕಾಯಿತು ಎಂದು ಶೋಯೆಬ್ ಅಖ್ತರ್ ಪ್ರತಿಕ್ರಿಯಿಸಿದ್ದರೆಂದು ಸೆಹ್ವಾಗ್​ ಹೇಳಿದ್ದಾರೆ.

ಇತ್ತೀಚೆಗಷ್ಟೇ ಅಮೆರಿಕದ ಭೇಟಿಯ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ನೀಡಿದ್ದ ಹೇಳಿಕೆಯನ್ನು ಭಾರತದ ಮಾಜಿ ಕ್ರಿಕೆಟಿಗ, ವೀಕ್ಷಕ ವಿಶ್ಲೇಷಣೆಕಾರ ಆಕಾಶ್ ಚೋಪ್ರಾ (Aakash Chopra) ಟೀಕಿಸಿದ್ದಾರೆ. ಕ್ಯಾಲಿಫೋರ್ನಿಯಾದ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾನಿಯದಲ್ಲಿ ನಡೆದ ಸಂವಾದಾತ್ಮಕ ಅಧಿವೇಶನದಲ್ಲಿ ರಾಹುಲ್, ಭಾರತ ಸರ್ಕಾರ ಮತ್ತು ಬಿಜೆಪಿ ಅನುಸರಿಸುತ್ತಿರುವ ನೀತಿಗಳು ಹಾಗೂ ದೇಶದಲ್ಲಿ ಉಂಟಾಗುತ್ತಿರುವ ಅರಾಜಕತೆಯ ಕುರಿತು ಮಾತನಾಡಿದ್ದರು. ಈ ಕುರಿತ ಸಂಪೂರ್ಣ ಸುದ್ದಿಗಾಗಿ ಈ ಲಿಂಕ್​ ಮೇಲೆ ಕ್ಲಿಕ್​ ಮಾಡಿ.