ಕನ್ನಡ ಸುದ್ದಿ  /  Sports  /  Cricket News Why Go And Waste His Time Sunil Gavaskar Sehwag Blast Hardik Pandya For Disturbing Mohit In Last Over Prs

Hardik Pandya: ಕೊನೆಯ ಓವರ್​ನಲ್ಲಿ ಮೋಹಿತ್​ ಶರ್ಮಾ ರಿದಂ ಕಳೆದುಕೊಳ್ಳಲು ಕಾರಣವಾಗಿದ್ದೇ ಹಾರ್ದಿಕ್ ಪಾಂಡ್ಯ; ಗವಾಸ್ಕರ್​, ಸೆಹ್ವಾಗ್ ಕಿಡಿ

ಉತ್ತಮ ಬೌಲಿಂಗ್​ ಮಾಡುತ್ತಿದ್ದಾಗ ಮೋಹಿತ್​ ಶರ್ಮಾಗೆ ಹಾರ್ದಿಕ್​ ಪಾಂಡ್ಯ ಸಲಹೆ ನೀಡಿದ್ದೇ ಸೋಲಿಗೆ ಕಾರಣ ಎಂದು ಬ್ಯಾಟಿಂಗ್​ ದಿಗ್ಗಜ ಸುನಿಲ್ ಗವಾಸ್ಕರ್ ಹಾಗೂ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್​ ಕಿಡಿಕಾರಿದ್ದಾರೆ.

ಮೋಹಿತ್​ ಶರ್ಮಾಗೆ ಸಲಹೆ ಕೊಟ್ಟ ಹಾರ್ದಿಕ್​ ಪಾಂಡ್ಯ ವಿರುದ್ಧ ಕಿಡಿಕಾರಿದ ಸುನಿಲ್​ ಗವಾಸ್ಕರ್​, ವಿರೇಂದ್ರ ಸೆಹ್ವಾಗ್​,
ಮೋಹಿತ್​ ಶರ್ಮಾಗೆ ಸಲಹೆ ಕೊಟ್ಟ ಹಾರ್ದಿಕ್​ ಪಾಂಡ್ಯ ವಿರುದ್ಧ ಕಿಡಿಕಾರಿದ ಸುನಿಲ್​ ಗವಾಸ್ಕರ್​, ವಿರೇಂದ್ರ ಸೆಹ್ವಾಗ್​,

16ನೇ ಆವೃತ್ತಿಯ ಐಪಿಎಲ್​ನಲ್ಲಿ (IPL 2023) ಚೆನ್ನೈ ಸೂಪರ್ ಕಿಂಗ್ಸ್ (Chennai Super Kings)​ ಚಾಂಪಿಯನ್​ ಆಗಿದೆ. ಇದರೊಂದಿಗೆ ಐದು ಬಾರಿ ಟ್ರೋಫಿ ಗೆದ್ದಿದ್ದ ಮುಂಬೈ ಇಂಡಿಯನ್ಸ್​ ದಾಖಲೆಯನ್ನು ಸರಿಗಟ್ಟಿದೆ. ಆದರೆ ಸತತ ಎರಡನೇ ಬಾರಿಗೆ ಚಾಂಪಿಯನ್​ ಪಟ್ಟ ಅಲಂಕರಿಸುವ ಕನಸು ಹೊಂದಿದ್ದ ಗುಜರಾತ್​ ಟೈಟಾನ್ಸ್ (Gujarat Titans)​ ತಂಡವು ರನ್ನರ್​ಅಪ್​ಗೆ ತೃಪ್ತಿಪಟ್ಟುಕೊಂಡಿದೆ.

ಗುಜರಾತ್​ ಸೋತ ವಿಚಾರವಾಗಿಯೇ ಚರ್ಚೆಗಳು ಇನ್ನೂ ಮುಂದುವರೆದಿವೆ. ಗೆಲ್ಲಬಹುದಾಗಿದ್ದ ಪಂದ್ಯವನ್ನು ಗುಜರಾತ್​ ಕೈ ಚೆಲ್ಲಿದೆ ಎಂದು ಮಾಜಿ ಕ್ರಿಕೆಟರ್​ಗಳು ಕಿಡಿಕಾರುತ್ತಿದ್ದಾರೆ. ಅದರಲ್ಲೂ ಫೈನಲ್ ಪಂದ್ಯದಲ್ಲಿ ಗುಜರಾತ್ ತಂಡದ ನಾಯಕ ಹಾರ್ದಿಕ್​ ಪಾಂಡ್ಯ ನಡೆಯ ಬಗ್ಗೆ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ (Sunil Gavaskar) ಮತ್ತು ವಿರೇಂದ್ರ ಸೆಹ್ವಾಗ್ (Virender Sehwag)​ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊನೆಯ 2 ಎಸೆತಗಳಲ್ಲಿ ಸೋಲು

16ನೇ ಆವೃತ್ತಿಯ ಐಪಿಎಲ್​ ಫೈನಲ್​​ನಲ್ಲಿ ಮುಖಾಮುಖಿಯಾದ ಗುಜರಾತ್​ ಮತ್ತು ಚೆನ್ನೈ​ ನಡುವಿನ ಪಂದ್ಯವು ರೋಚಕ ಹೋರಾಟಕ್ಕೆ ಸಾಕ್ಷಿಯಾಗಿತ್ತು. ಕೊನೆಯ ಓವರ್​​ಗಳ ಚೆನ್ನೈ ಗೆಲುವಿಗೆ 13 ರನ್​ಗಳ ಅವಶ್ಯಕತೆ ಇತ್ತು. ಕ್ರೀಸ್​ನಲ್ಲಿ ರವೀಂದ್ರ ಜಡೇಜಾ (Ravindra Jadeja) ಮತ್ತು ಶಿವಂ ದುಬೆ (Shivam Dube) ಇದ್ದರು. ಬೌಲರ್​ ಆಗಿ ಕಣಕ್ಕಿಳಿದಿದ್ದ ಮೋಹಿತ್​ ಶರ್ಮಾ (Mohit Sharma), ಮೊದಲ 4 ಎಸೆತಗಳಲ್ಲಿ 3 ರನ್​ ನೀಡಿದ್ದರು.

ಮೊದಲ ನಾಲ್ಕು ಎಸೆತಗಳನ್ನು ಯಾರ್ಕರ್​ ಹಾಕಿದ ಮೋಹಿತ್​, ಕೊನೆಯ ಎರಡು ಎಸೆತಗಳಲ್ಲಿ ಆತ್ಮ ವಿಶ್ವಾಸ ಕಳೆದುಕೊಂಡರು. ಕ್ರೀಸ್​​ನಲ್ಲಿದ್ದ ಜಡೇಜಾ, ಕೊನೆಯ ಎರಡು ಎಸೆತಗಳಲ್ಲಿ ಸಿಕ್ಸರ್​ ಹಾಗೂ ಬೌಂಡರಿ ಬಾರಿಸಿ ಚೆನ್ನೈ ತಂಡಕ್ಕೆ ಅವಿಸ್ಮರಣೀಯ ಗೆಲುವು ತಂದುಕೊಟ್ಟರು. ಆದರೆ, ಕೊನೆಯ ಎಸೆತದವರೆಗೂ ಗುಜರಾತ್​ ಗೆಲುವು ಸಾಧಿಸುತ್ತದೆ ಎನ್ನಲಾಗಿದ್ದ ಲೆಕ್ಕಾಚಾರಗಳು ಉಲ್ಟಾ ಆದವು.

ಕೆಂಗಣ್ಣಿಗೆ ಗುರಿಯಾದ ಹಾರ್ದಿಕ್​

ಮೊದಲ ನಾಲ್ಕು ಎಸೆತಗಳನ್ನು ಎಸೆದಾಗ ಹಾರ್ದಿಕ್​ ಪಾಂಡ್ಯ (Hardik Pandya) ಮೋಹಿತ್​ ಶರ್ಮಾಗೆ ಯಾವುದೇ ರೀತಿಯ ಸಲಹೆ ಕೊಟ್ಟಿರಲಿಲ್ಲ. ಆದರೆ ಕೊನೆಯ 2 ಎಸೆತಗಳಲ್ಲಿ 10 ರನ್​ ಬೇಕಿದ್ದಾಗ ಮೋಹಿತ್​ಗೆ ಹಾರ್ದಿಕ್​ ಸಲಹೆ ನೀಡಿದರು. ಆಗ ಉಳಿದೆರಡೂ ಎಸೆತಗಳಲ್ಲಿ ಸಿಕ್ಸ್​ ಮತ್ತು ಫೋರ್ ಚಚ್ಚಿಸಿಕೊಂಡು ಸೋಲಿಗೆ ಕಾರಣರಾದರು. ಇದೇ ನೋಡಿ ಹಾರ್ದಿಕ್​ ಪಾಂಡ್ಯ ಮಾಜಿ ಕ್ರಿಕೆಟರ್​​ಗಳ ಕೆಂಗಣ್ಣಿಗೆ ಕಾರಣವಾಗಿರೋದು. ಈ ಕುರಿತು ಬ್ಯಾಟಿಂಗ್​ ದಿಗ್ಗಜ ಸುನಿಲ್ ಗವಾಸ್ಕರ್ ಪ್ರತಿಕ್ರಿಯಿಸಿದ್ದು, ಸೋಲಿಗೆ ಹಾರ್ದಿಕ್​ ಪಾಂಡ್ಯ ಕಾರಣ ಎಂದು ಆರೋಪಿಸಿದ್ದಾರೆ. ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್​ ಕೂಡ ಒಮ್ಮತ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಚರ್ಚಿಸುವ ಅಗತ್ಯವೇ ಇರಲಿಲ್ಲ

ಫೈನಲ್​​ ಪಂದ್ಯದ ಫೈನಲ್​ ಓವರ್​ನಲ್ಲಿ ಮೋಹಿತ್​ ಶರ್ಮಾ ಅದ್ಭುತ ಬೌಲಿಂಗ್​​ ಮಾಡುತ್ತಿದ್ದರು. ಯೋಜನಗೆ ತಕ್ಕಂತೆ ಬೌಲಿಂಗ್​ ಹಾಕುತ್ತಿದ್ದರು. ಮೊದಲ 4 ಎಸೆತಗಳಲ್ಲಿ ಕೇವಲ 3ರನ್​ ನೀಡಿದ್ದರು. ಆದರೆ ಕೊನೆಯ ಎಸೆತಗಳಲ್ಲಿ ಹಾರ್ದಿಕ್​ ಪಾಂಡ್ಯ, ಮೋಹಿತ್​ ಶರ್ಮಾ ಬಳಿಕ ಚರ್ಚಿಸುವ ಅಗತ್ಯವೇ ಇರಲಿಲ್ಲ. ಸಲಹೆ ಕೊಟ್ಟಿದ್ದಲ್ಲದೆ, ನೀರು ತರಿಸಿಕೊಟ್ಟರು. ಇದು ನನಗೆ ಅಚ್ಚರಿ ಮೂಡಿಸಿತು ಎಂದು ಗವಾಸ್ಕರ್​ ಹೇಳಿದ್ದಾರೆ.

ಬೌಲರ್​​ ಉತ್ತಮ ಲಯದಲ್ಲಿದ್ದಾಗ ಅವರು ಮಾನಸಿಕವಾಗಿ ದೃಢವಾಗಿರುತ್ತಾರೆ. ಹಾಗಂತ ಯಾರೂ ಏನನ್ನೂ ಹೇಳಿಕೊಡಬಾರದು. ಅಂದರೆ ಉತ್ತಮವಾಗಿ ಬೌಲಿಂಗ್ ಮಾಡುತ್ತಿದ್ದ ಬೌಲರ್​ ಬಳಿ ಹೋಗಿ ಹಾರ್ದಿಕ್ ಪಾಂಡ್ಯ ಚರ್ಚಿಸಿ ಸಲಹೆ ನೀಡಿದರು. ಅವರ ಲಯ ತಪ್ಪಲು ಕಾರಣವಾಯಿತು ಎಂದು ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ. ಸಲಹೆ ಕೊಟ್ಟ ಬಳಿಕ 5ನೇ ಸಿಕ್ಸರ್, 6ನೇ ಎಸೆತದಲ್ಲಿ ಜಡೇಜಾ ಫೋರ್ ಬಾರಿಸಿದರು.

ಸಮಯ ಹಾಳು ಮಾಡಿದ್ದೇ ಹಾರ್ದಿಕ್​

ಸುನಿಲ್ ಗವಾಸ್ಕರ್ ಮಾತ್ರವಲ್ಲ, ಕ್ರಿಕ್‌ಬಜ್‌ನಲ್ಲಿ ಚಾಟ್‌ನಲ್ಲಿ ಪಾಲ್ಗೊಂಡಿದ್ದ ವಿರೇಂದ್ರ ಸೆಹ್ವಾಗ್​ ಕೂಡ ಹಾರ್ದಿಕ್​ ಪಾಂಡ್ಯರನ್ನು ದೂಷಿಸಿದ್ದಾರೆ. ಮೋಹಿತ್ ತಮ್ಮ ಯೋಜನೆಗಳನ್ನು ಪರಿಪೂರ್ಣತೆಗೆ ತಕ್ಕಂತೆ ಕಾರ್ಯಗತಗೊಳಿಸಲು ಯಶಸ್ವಿಯಾಗಿದ್ದರು. ಆದರೆ ಮಧ್ಯ ಪ್ರವೇಶಿಸಿದ ನಾಯಕ ಹಾರ್ದಿಕ್ ಪಾಂಡ್ಯ ಸಮಯ ಹಾಳು ಮಾಡಿದರು ಎಂದು ಸೆಹ್ವಾಗ್​ ಕಿಡಿ ಕಾರಿದ್ದಾರೆ.

ಚೆನ್ನಾಗಿ ಬೌಲಿಂಗ್ ಮಾಡುತ್ತಿದ್ದ ಮೋಹಿತ್​ ಶರ್ಮಾಗೆ ನೀವು ಯಾಕೆ ಹೋಗಿ ಮಾತನಾಡಿದ್ದು. ನೀವು ಅವರ ಸಮಯ ವ್ಯರ್ಥ ಮಾಡಿದ್ದೇಕೆ? ರನ್​​ಗಳಿಗೆ ನಿಯಂತ್ರಣ ಹಾಕುತ್ತಿದ್ದಾಗ ಅಡ್ಡ ಹೋಗಬಾರದಿತ್ತು. ಒಂದು ವೇಳೆ ನಾನು ಮೈದಾನದಲ್ಲಿದ್ದು, ನಾಯಕನಾಗಿದ್ದರೆ ನಾನು ಆತನಿಗೆ ತೊಂದರೆ ಕೊಡುತ್ತಿರಲಿಲ್ಲ ಎಂದು ಪಂದ್ಯದ ನಂತರ ಸೆಹ್ವಾಗ್ ಹೇಳಿದ್ದಾರೆ.