ಕನ್ನಡ ಸುದ್ದಿ  /  Sports  /  Cricket News Wtc Final 2023 Match Officials Chris Gaffaney Richard Illingworth Richard Kettleborough Kumardharmasena Prs

WTC Umpires: ಐಸಿಸಿ ಫೈನಲ್​​​, ಸೆಮಿಫೈನಲ್​ಗಳಲ್ಲಿ ಟೀಮ್​ ಇಂಡಿಯಾಗೆ ಕಾಡಿದ್ದ ಅಂಪೈರ್​​ಗಳೇ ಡಬ್ಲ್ಯುಟಿಸಿ ಅಂತಿಮ ಕದನಕ್ಕೂ ಸೇವೆ

ಐಸಿಸಿ ಟೂರ್ನಮೆಂಟ್​​ಗಳಲ್ಲಿ ಟೀಮ್​ ಇಂಡಿಯಾ (Team India) ಸೋತಿರುವ ನಾಕೌಟ್​​​ ಪಂದ್ಯಗಳಿಗೆ ಕಾರ್ಯನಿರ್ಹಹಿಸಿದ ಅಂಪೈರ್​​ಗಳ ತಂಡವೇ ಕಾಕತಾಳೀಯ ಎಂಬಂತೆ ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯಕ್ಕೂ (ICC World Test Championship Final 2023) ನೇಮಕವಾಗಿದೆ.

ಡಬ್ಲ್ಯುಟಿಸಿ ಫೈನಲ್​ ಪಂದ್ಯಕ್ಕೆ ಆಯ್ಕೆಯಾದ ಅಂಪೈರ್​ಗಳು
ಡಬ್ಲ್ಯುಟಿಸಿ ಫೈನಲ್​ ಪಂದ್ಯಕ್ಕೆ ಆಯ್ಕೆಯಾದ ಅಂಪೈರ್​ಗಳು (ICC Twitter)

ಭಾರತ ಮತ್ತು ಆಸ್ಟ್ರೇಲಿಯಾ (India vs Australia) ಮಧ್ಯೆ ಇಂದಿನಿಂದ (ಜೂನ್ 7 ರಿಂದ) ಓವಲ್‌ನಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ (ICC World Test Championship Final 2023) ನಡೆಯಲಿದೆ. ಆದರೆ, ಭಾರತಕ್ಕೆ ಅಂಪೈರ್​​​ಗಳದ್ದೇ ಚಿಂತೆಯಾಗಿದೆ. ಐಸಿಸಿ ಫೈನಲ್​​​, ಸೆಮಿಫೈನಲ್​ಗಳಲ್ಲಿ ಟೀಮ್​ ಇಂಡಿಯಾಗೆ ಕಾಡಿದ್ದ ಅಂಪೈರ್​​ಗಳೇ ಡಬ್ಲ್ಯುಟಿಸಿ ಅಂತಿಮ ಕದನಕ್ಕೂ ಸೇವೆ ಸಲ್ಲಿಸಲಿದ್ದಾರೆ.

ನ್ಯೂಜಿಲೆಂಡ್‌ನ ಕ್ರಿಸ್ ಗಫ್ನಿ (Chris Gaffaney), ಇಂಗ್ಲೆಂಡ್‌ನ ರಿಚರ್ಡ್ ಇಲ್ಲಿಂಗ್‌ವರ್ತ್ (Richard Illingworth) ಆನ್-ಫೀಲ್ಡ್ ಅಂಪೈರ್‌ಗಳಾಗಿ ನೇಮಕವಾಗಿದ್ರೆ, ಇಂಗ್ಲೆಂಡ್‌ನ ರಿಚರ್ಡ್ ಕೆಟಲ್‌ಬರೋ (Richard Kettleborough) ಟಿವಿ ಅಂಪೈರ್ ಆಗಿ ನೇಮಕವಾಗಿದ್ದಾರೆ. ಶ್ರೀಲಂಕಾದ ಕುಮಾರ್ ಧರ್ಮಸೇನಾ (KumarDharmasena) 4ನೇ ಅಂಪೈರ್ ಆಗಿ ಸೇವೆ ಸಲ್ಲಿಸಲಿದ್ದಾರೆ. ವೆಸ್ಟ್ ಇಂಡೀಸ್‌ ರಿಚಿ ರಿಚರ್ಡ್‌ಸನ್ (Richie Richardson) ಮ್ಯಾಚ್ ರೆಫರಿಯಾಗಿದ್ದಾರೆ.

ನಾಕೌಟ್​ಗಳನ್ನೇ ಸೋಲು

ಕಾಕತಾಳೀಯ ಎಂಬಂತೆ ಈ ಅಂಪೈರ್​​ಗಳ ಸಮಿತಿಯೇ ಸೇವೆ ಸಲ್ಲಿಸಿದ ಪ್ರಮುಖ ಐಸಿಸಿ ಟೂರ್ನಿಗಳ ಟೀಮ್​​ ಇಂಡಿಯಾ, ಸೋಲು ಕಂಡಿದೆ. ಅದರಲ್ಲೂ ಸೆಮಿಫೈನಲ್​, ಫೈನಲ್​​​​ ಪಂದ್ಯಗಳಲ್ಲೇ ಎಂಬುದು ವಿಶೇಷ. 2017ರಿಂದ ಈವರೆಗೂ ಭಾರತ 3ನೇ ಬಾರಿಗೆ ಐಸಿಸಿ ಟೂರ್ನಮೆಂಟ್​ವೊಂದರಲ್ಲಿ ಫೈನಲ್ ಪ್ರವೇಶಿಸಿದೆ. 2017ರ ಚಾಂಪಿಯನ್ಸ್ ಟ್ರೋಫಿಯ ಫೈನಲ್ (ICC Champions Trophy 2017) ಪಂದ್ಯವನ್ನು ಆಡಿತ್ತು. ನಂತರ 2021ರಲ್ಲಿ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ  (WTC 2021) ಆಡಿತ್ತು. ಈಗ ಮತ್ತೊಮ್ಮೆ ಡಬ್ಲ್ಯುಟಿಸಿ ಫೈನಲ್​ ಪ್ರವೇಶಿಸಿದೆ.

ಕಾಕತಾಳೀಯ ಎಂಬಂತೆ ಡಬ್ಲ್ಯಟಿಸಿ ಫೈನಲ್​​ಗೆ ಆಯ್ಕೆಯಾದ ಆನ್ ಫೀಲ್ಡ್ ಅಂಪೈರ್‌, ಟಿವಿ ಅಂಪೈರ್​ಗಳ ತಂಡವು, ಕಳೆದ 6 ವರ್ಷಗಳಲ್ಲಿ ಭಾರತ ಆಡಿದ ಎಲ್ಲಾ ನಾಕೌಟ್ ಪಂದ್ಯಗಳಲ್ಲೂ ಸೇವೆ ಸಲ್ಲಿಸಿದ್ದಾರೆ. ದುರಾದೃಷ್ಟ ಅಂದರೆ ಎಲ್ಲದರಲ್ಲೂ ಭಾರತ ಸೋತಿದೆ. ಇಂಗ್ಲೆಂಡ್​ನ ಅಂಪೈರ್ ರಿಚರ್ಡ್ ಕೆಟಲ್‌ಬರೋ, ಈ 2017ರ ಚಾಂಪಿಯನ್ಸ್ ಟ್ರೋಫಿ ಫೈನಲ್, 2019 ರ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಆನ್ ಫೀಲ್ಡ್ ಅಂಪೈರ್ ಆಗಿದ್ರು. ಕಳೆದ ಡಬ್ಲ್ಯಟಿಸಿ ಫೈನಲ್‌ನಲ್ಲೂ ಟಿವಿ ಅಂಪೈರ್‌ ಆಗಿ ಸೇವೆ ಸಲ್ಲಿಸಿದ್ರು. ಈ ಮೂರು ನಾಕೌಟ್​​ಗಳಲ್ಲೂ ಭಾರತ ಪರಾಭವಗೊಂಡಿತ್ತು.

ರಿಚರ್ಡ್ ಇಲ್ಲಿಂಗ್‌ವರ್ತ್‌ 2021ರ ಡಬ್ಲ್ಯುಟಿಸಿ ಫೈನಲ್ ಮತ್ತು 2019ರ ಸೆಮಿಫೈನಲ್‌ನಲ್ಲಿ ಆನ್ ಫೀಲ್ಡ್ ಅಂಪೈರ್ ಆಗಿದ್ರು. ಅದೇ ರೀತಿ, ಕ್ರಿಸ್ ಗಫ್ನಿ 2022ರ ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ (T20 World Cup 2022) ಟಿವಿ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದರು. ಈ ಪಂದ್ಯದಲ್ಲಿ ಶ್ರೀಲಂಕಾದ ಕುಮಾರ್ ಧರ್ಮಸೇನಾ ಫೀಲ್ಡ್ ಅಂಪೈರ್ ಆಗಿ ಸೇವೆ ಸಲ್ಲಿಸಿದ್ರು.

ಬದಲಾಗುತ್ತಾ ಹಿಂದಿನ ಇತಿಹಾಸ?

ಒಂದು ಪಂದ್ಯದ ಸೋಲು ಗೆಲುವನ್ನು ಅಂಪೈರಿಂಗ್​ ನಿಭಾಯಿಸುವವರ ಕೈಯಲ್ಲಿ ನಿರ್ಧಾರವಾಗುವುದಿಲ್ಲ. ಏಕೆಂದರೆ ಮೈದಾನದಲ್ಲಿ ಉಭಯ ತಂಡಗಳ ಆಟಗಾರರು ನೀಡುವ ಪ್ರದರ್ಶನದ ಮೇಲೆ ನಿಂತಿರುತ್ತದೆ. ಹಾಗಾಗಿ ಈ ಸಲವಾದರೂ ಟೀಮ್​ ಇಂಡಿಯಾ, ಐಸಿಸಿ ಟ್ರೋಫಿ ಗೆದ್ದು 10 ವರ್ಷಗಳಿಂದ ಭಾರತ ಕ್ರಿಕೆಟ್ ಎದುರಿಸುತ್ತಿರುವ ಐಸಿಸಿ ಟ್ರೋಫಿಗಳ ಬರ ನೀಗಿಸುತ್ತಾ ಎಂಬುದನ್ನು ಕಾದು ನೋಡೋಣ.