ಕನ್ನಡ ಸುದ್ದಿ  /  Sports  /  Cristiano Ronaldo Fined And Suspended For Two Games

Cristiano Ronaldo fined: ಫುಟ್ಬಾಲ್ ಲೆಜೆಂಡ್ ರೊನಾಲ್ಡೊಗೆ ದಂಡ, ಎರಡು ಪಂದ್ಯಗಳಿಂದ ಅಮಾನತು ಶಿಕ್ಷೆ

ಅಸೋಸಿಯೇಷನ್‌ ವಿಧಿಸಿರುವ ಎರಡು ಪಂದ್ಯಗಳ ನಿಷೇಧವು, ಫುಟ್ಬಾಲ್‌ ವಿಶ್ವಕಪ್‌ಗೆ ಅನ್ವಯಿಸುವುದಿಲ್ಲ. ಅವರು ಪೋರ್ಚುಗಲ್ ತಂಡದ ಪರ ಈ ವಿಶ್ವಕಪ್‌ನಲ್ಲಿ ಆಡಬಹುದು. ಇಂದಿನ ಪಂದ್ಯದಲ್ಲಿಯೂ ಘಾನಾ ವಿರುದ್ಧ ರೊನಾಲ್ಡೊ ಕಣಕ್ಕಿಳಿಯಲಿದ್ದಾರೆ. ರೊನಾಲ್ಡೊ ಮುಂದೆ ಕ್ಲಬ್‌ ಪರ ಆಡುವಾಗ, ಈ ನಿಷೇಧ ಅನ್ವಯವಾಗುತ್ತದೆ. ಕ್ಲಬ್‌ ಯಾವುದೇ ದೇಶದ್ದಾದರೂ, ಆ ತಂಡದ ಪರ ಆಡುವಾಗ ನಿಷೇಧವನ್ನು ವರ್ಗಾಯಿಸಲಾಗುತ್ತದೆ.

ಕ್ರಿಸ್ಟಿಯಾನೊ ರೊನಾಲ್ಡೊ
ಕ್ರಿಸ್ಟಿಯಾನೊ ರೊನಾಲ್ಡೊ (REUTERS)

ಲಂಡನ್ : ಫುಟ್ಬಾಲ್‌ ಅಂದಾಕ್ಷಣ ಮೊದಲು ನೆನಪಾಗೋ ಹೆಸರು ರೊನಾಲ್ಡೊ. ಇವರಿಗಿರುವ ಅಭಿಮಾನಿ ಬಳಗ, ಭಹುಷಃ ವಿಶ್ವದಲ್ಲಿ ಯಾವ ವ್ಯಕ್ತಿಗೂ ಇಲ್ಲವೆಂಬಂತೆ ತೋರುತ್ತದೆ. ಇವರ ಆಟವನ್ನು ನೋಡಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಲ್ಲುತ್ತಾರೆ. ಆದರೆ ಈ ನಡುವೆ ರೊನಾಲ್ಡೊ ಅಭಿಮಾನಿಗಳಿಗೆ ಶಾಕಿಂಗ್‌ ಸುದ್ದಿಯೊಂದು ಎದುರಾಗಿದೆ.

ಫುಟ್ಬಾಲ್‌ನ ಸ್ಟಾರ್ ಹಾಗೂ ಲೆಜೆಂಡ್‌ ಆಟಗಾರ ಮತ್ತು ಮ್ಯಾಂಚೆಸ್ಟರ್ ಯುನೈಟೆಡ್ ಮಾಜಿ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊಗೆ ಫುಟ್‌ಬಾಲ್ ಅಸೋಸಿಯೇಷನ್ ​​(FA) ಎರಡು ಪಂದ್ಯಗಳ ನಿಷೇಧ ಮತ್ತು 50,000 ಪೌಂಡ್‌ ದಂಡ(ಸರಿಸುಮಾರು 50 ಲಕ್ಷ ರೂಪಾಯಿ)ವನ್ನು ವಿಧಿಸಿದೆ. ಇದಕ್ಕೆ ಕಾರಣ, ಈ ವರ್ಷದ ಆರಂಭದಲ್ಲಿ ರೊನಾಲ್ಡೋ ಅವರು ಅಭಿಮಾನಿಯೊಬ್ಬರ ಮೊಬೈಲ್ ಫೋನ್‌ಗೆ ಹಾನಿ ಮಾಡಿರುವುದು.

ಖ್ಯಾತ ಫುಟ್ಬಾಲ್‌ ಕ್ಲಬ್‌ ಮ್ಯಾಂಚೆಸ್ಟರ್ ಯುನೈಟೆಡ್, ಕಳೆದ ಮಂಗಳವಾರವಷ್ಟೇ 37 ವರ್ಷ ವಯಸ್ಸಿನ ರೊನಾಲ್ಡೊ ಅವರನ್ನು ತನ್ನ ಒಪ್ಪಂದದಿಂದ ಬಿಡುಗಡೆ ಮಾಡಿದೆ. ಈ ವರ್ಷ ಏಪ್ರಿಲ್ 9ರಂದು, ಗೂಡಿಸನ್ ಪಾರ್ಕ್‌ನಲ್ಲಿ ನಡೆದ ಪಂದ್ಯದಲ್ಲಿ ಎವರ್ಟನ್‌ ತಂಡದ ವಿರುದ್ಧ 1-0 ಅಂತರದಲ್ಲಿ ಸೋಲಿಗೆ ಶರಣಾದ ಬಳಿಕ, ರೊನಾಲ್ಡೋ ವಾಗ್ವಾದ ನಡೆಸಿದ್ದರು. ಸ್ಕೈ ಸ್ಪೋರ್ಟ್ಸ್ ಪ್ರಕಾರ,‌ ರೊನಾಲ್ಡೊಗೆ ಮರ್ಸಿಸೈಡ್ ಪೊಲೀಸರು ಎಚ್ಚರಿಕೆ ಕೂಡಾ ನೀಡಿದ್ದರು. ಈ ವೇಳೆ ಅಭಿಮಾನಿಯೊಬ್ಬರ ಮೊಬೈಲ್‌ ಫೋನ್‌ ಅನ್ನು ರೊನಾಲ್ಡೊ ಹಾಳು ಮಾಡಿದ್ದರು.

ಫುಟ್ಬಾಲ್‌ ಅಸೋಸಿಯೇಷನ್‌ ರೊನಾಲ್ಡೊ ವಿರುದ್ಧ ಅನುಚಿತ ವರ್ತನೆಯ ಆರೋಪವನ್ನೂ ಹೊರಿಸಿದೆ. ಹೀಗಾಗಿ ಸ್ವತಂತ್ರ ಸಮಿತಿಯು ಅವರಿಗೆ ಅಮಾನತು ಶಿಕ್ಷೆ ಮತ್ತು ದಂಡವನ್ನು ನೀಡಿದೆ. ಅಲ್ಲದೆ, ತನ್ನ ನಡತೆ ಅಸಮರ್ಪಕ ಎಂದು ರೊನಾಲ್ಡೊ ಕೂಡಾ ಒಪ್ಪಿಕೊಂಡಿದ್ದಾರೆ.

ಫುಟ್ಬಾಲ್‌ ವಿಶ್ವಕಪ್‌ನಲ್ಲಿ ರೊನಾಲ್ಡೊ ಆಡಬಹುದು

ಅಸೋಸಿಯೇಷನ್‌ ವಿಧಿಸಿರುವ ಎರಡು ಪಂದ್ಯಗಳ ನಿಷೇಧವು, ಫುಟ್ಬಾಲ್‌ ವಿಶ್ವಕಪ್‌ಗೆ ಅನ್ವಯಿಸುವುದಿಲ್ಲ. ಅವರು ಪೋರ್ಚುಗಲ್ ತಂಡದ ಪರ ಈ ವಿಶ್ವಕಪ್‌ನಲ್ಲಿ ಆಡಬಹುದು. ಇಂದಿನ ಪಂದ್ಯದಲ್ಲಿಯೂ ಘಾನಾ ವಿರುದ್ಧ ರೊನಾಲ್ಡೊ ಕಣಕ್ಕಿಳಿಯಲಿದ್ದಾರೆ. ರೊನಾಲ್ಡೊ ಮುಂದೆ ಕ್ಲಬ್‌ ಪರ ಆಡುವಾಗ, ಈ ನಿಷೇಧ ಅನ್ವಯವಾಗುತ್ತದೆ. ಕ್ಲಬ್‌ ಯಾವುದೇ ದೇಶದ್ದಾದರೂ, ಆ ತಂಡದ ಪರ ಆಡುವಾಗ ನಿಷೇಧವನ್ನು ವರ್ಗಾಯಿಸಲಾಗುತ್ತದೆ.

ಘಟನೆಯ ಬಳಿಕ, ರೊನಾಲ್ಡೊ ಇನ್ಸ್‌ಟಾಗ್ರಾಂ ಮೂಲಕ ಕ್ಷಮೆಯಾಚಿಸಿದ್ದಾರೆ. "ನಾವು ಎದುರಿಸುತ್ತಿರುವಂತಹ ಕಷ್ಟಕರ ಕ್ಷಣಗಳಲ್ಲಿ ನಮ್ಮ ಭಾವನೆಗಳನ್ನು ನಿಯಂತ್ರಿಸುವುದು ಸುಲಭದ ಕೆಲಸವಲ್ಲ" ಎಂದು ರೊನಾಲ್ಡೋ ಹೇಳಿದ್ದಾರೆ.

“ಆದರೂ, ನಾವು ಎಂದಿಗೂ ಗೌರವಯುತವಾಗಿ ನಡೆದುಕೊಳ್ಳಬೇಕು. ತಾಳ್ಮೆಯಿಂದಿರಬೇಕು. ಸುಂದರವಾದ ಆಟವನ್ನು ಪ್ರೀತಿಸುವ ಎಲ್ಲಾ ಯುವಕರಿಗೆ ಮಾದರಿಯಾಗಬೇಕು. ನನ್ನ ಪ್ರಕೋಪಕ್ಕೆ ನಾನು ಕ್ಷಮೆಯಾಚಿಸಲು ಬಯಸುತ್ತೇನೆ. ಸಾಧ್ಯವಾದರೆ, ಓಲ್ಡ್ ಟ್ರಾಫರ್ಡ್‌ನಲ್ಲಿ ನ್ಯಾಯಯುತ ಆಟ ಮತ್ತು ಕ್ರೀಡಾ ಮನೋಭಾವದ ಸಂಕೇತವಾಗಿ ಪಂದ್ಯವನ್ನು ವೀಕ್ಷಿಸಲು ನಾನು ಈ ಬೆಂಬಲಿಗರನ್ನು ಆಹ್ವಾನಿಸಲು ಬಯಸುತ್ತೇನೆ,” ಎಂದು ರೊನಾಲ್ಡೋ ಹೇಳಿದ್ದಾರೆ.

ರೊನಾಲ್ಡೊ ಈ ಹಿಂದೆಯೇ ಫುಟ್ಬಾಲ್‌ ಅಸೋಸಿಯೇಷನ್‌ ಆರೋಪವನ್ನು ಒಪ್ಪಿಕೊಂಡಿದ್ದರು. ಆದರೆ ಅಮಾನತು ಶಿಕ್ಷೆಯನ್ನು ತಪ್ಪಿಸಲು ವೈಯಕ್ತಿಕ ವಿಚಾರಣೆಗೆ ವಿನಂತಿಸಿದ್ದರು. ನವೆಂಬರ್ 8 ರಂದು ನಡೆದ ಸ್ವತಂತ್ರ ವಿಚಾರಣೆಗೆ ಅವರು ಹಾಜರಾಗಿದ್ದರು. ಅವರ ಮನವಿಗಳನ್ನು ತಿರಸ್ಕರಿಸಿದ ಸಮಿತಿಯು, ಇದು “ಅವರ ಯೋಗಕ್ಷೇಮದ ಬಗ್ಗೆ ಭಯ ಅಥವಾ ಕಾಳಜಿಗಿಂತ ಹೆಚ್ಚಾಗಿ, ಹತಾಶೆಯಿಂದ ಹುಟ್ಟಿದ ಕ್ರಿಯೆ” ಎಂದು ಅಸೋಸಿಯೇಷನ್ ಉಲ್ಲೇಖಿಸಿದೆ.

ಪೋರ್ಚುಗೀಸ್ ಸೂಪರ್‌ಸ್ಟಾರ್ ಪ್ರಸ್ತುತ ಕತಾರ್‌ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್‌ನಲ್ಲಿ ಭಾಗವಹಿಸುತ್ತಿದ್ದಾರೆ. ಅಲ್ಲಿ ಅವರ ತಂಡವು ಇಂದು ಘಾನಾ ವಿರುದ್ಧ ತಮ್ಮ ಅಭಿಯಾನವನ್ನು ಪ್ರಾರಂಭಿಸಲಿದೆ.

ವಿಭಾಗ