ಗೂಳಿಗಳಿಗೆ 8ನೇ ಸೋಲು; ದಬಾಂಗ್ ಡೆಲ್ಲಿ ವಿರುದ್ಧ ಡಲ್ ಹೊಡೆದ ಬೆಂಗಳೂರು ಬುಲ್ಸ್, ಅಂಕಪಟ್ಟಿಯಲ್ಲಿ ಯಾವ ಸ್ಥಾನ?
PKL Season 11: ಪ್ರೊ ಕಬಡ್ಡಿ ಲೀಗ್ 11ನೇ ಆವೃತ್ತಿಯಲ್ಲಿ ದಬಾಂಗ್ ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ 35-25 ಅಂಕಗಳ ಅಂತರದಿಂದ ಸೋಲಿಗೆ ಶರಣಾಗಿದೆ. ಇದು ಬೆಂಗಳೂರು ತಂಡದ 8ನೇ ಸೋಲು ಇದಾಗಿದೆ.
ಪ್ರೊ ಕಬಡ್ಡಿ ಲೀಗ್ 11ನೇ ಆವೃತ್ತಿಯಲ್ಲಿ (PKL Season 11) ಬೆಂಗಳೂರು ಬುಲ್ಸ್ ತಂಡದ (Bengaluru bulls) ಕೆಟ್ಟ ಪ್ರದರ್ಶನ ಮುಂದುವರೆಸಿದೆ. ಈವರೆಗೂ 10 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು, 8ರಲ್ಲಿ ಹೀನಾಯ ಸೋಲನುಭವಿಸಿದೆ. ಇಂದು (ನವೆಂಬರ್ 16ರ ಶನಿವಾರ) ನಡೆದ ತನ್ನ 10ನೇ ಪಂದ್ಯದಲ್ಲಿ ದಬಾಂಗ್ ಡೆಲ್ಲಿ (Dabang Delhi KC) ವಿರುದ್ಧ 35-25 ಅಂಕಗಳ ಅಂತರದಿಂದ ಸೋಲಿಗೆ ಶರಣಾಯಿತು. ಇದಕ್ಕೂ ಮುನ್ನ ಡೆಲ್ಲಿ ವಿರುದ್ಧ ಗೆದ್ದಿದ್ದ ಬುಲ್ಸ್, ಈ ಪಂದ್ಯದಲ್ಲಿ ಡಲ್ ಹೊಡೆಯಿತು.
ಮಿಂಚದ ಪರ್ದೀಪ್ ನರ್ವಾಲ್
ಶಹೀದ್ ವಿಜಯ್ ಸಿಂಗ್ ಪಥಿಕ್ ಕ್ರೀಡಾ ಕಾಂಪ್ಲೆಕ್ಸ್ನಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ಪರ ಅಶು ಮಲಿಕ್ ಅದ್ಭುತ ಪ್ರದರ್ಶನ ನೀಡಿದರು. ಎರಡು ಬೋನಸ್ ಸೇರಿ 14 ಅಂಕ ಪಡೆದರು. ಆ ಮೂಲಕ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಆದರೆ ಬೆಂಗಳೂರು ಬುಲ್ಸ್ ಪರ ಯಾರೂ ಉತ್ತಮ ಪ್ರದರ್ಶನ ನೀಡಲಿಲ್ಲ. ನಿತೀಶ್ ರಾವಲ್ 7, ಪರ್ದೀಪ್ ನರ್ವಾಲ್ 5 ಅಂಕ ಪಡೆದರಷ್ಟೆ. ಪರ್ದೀಪ್ ಮಿಂಚಿದ್ದರೆ ಗೆಲ್ಲುವ ಸಾಧ್ಯತೆ ಇತ್ತು. ಮತ್ತೊಂದೆಡೆ ಉಳಿದವರು ಸಹ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಈ ಸೋಲಿನೊಂದಿಗೆ ಬುಲ್ಸ್ 11ನೇ ಸ್ಥಾನದಲ್ಲಿದೆ, ಗೆದ್ದ ಡೆಲ್ಲಿ 5ನೇ ಸ್ಥಾನದಲ್ಲಿದೆ.
ಪ್ರಸ್ತುತ ಟೂರ್ನಿಯಲ್ಲಿ ಬುಲ್ಸ್ ಪ್ರದರ್ಶನ
ತೆಲುಗು ಟೈಟಾನ್ಸ್ ವಿರುದ್ಧ 37-29 ರಿಂದ ಸೋಲು
ಗುಜರಾತ್ ಜೈಂಟ್ಸ್ ವಿರುದ್ಧ 36-32 ರಿಂದ ಸೋಲು
ಯುಪಿ ಯೋಧಾಸ್ ವಿರುದ್ಧ 57-36 ರಿಂದ ಸೋಲು
ಪುಣೇರಿ ಪಲ್ಟನ್ ವಿರುದ್ಧ 22-36 ರಿಂದ ಸೋಲು
ದಬಾಂಗ್ ಡೆಲ್ಲಿ ವಿರುದ್ಧ 34-32 ರಿಂದ ಗೆಲುವು
ತೆಲುಗು ಟೈಟಾನ್ಸ್ ವಿರುದ್ಧ 35-38 ರಿಂದ ಸೋಲು
ತಮಿಳ್ ತಲೈವಾಸ್ ವಿರುದ್ಧ 36-32 ರಿಂದ ಗೆಲುವು
ಬೆಂಗಾಲ್ ವಾರಿಯರ್ಸ್ ವಿರುದ್ಧ 29-40 ರಿಂದ ಸೋಲು
ಜೈಪುರ ಪಿಂಕ್ ಪ್ಯಾಂಥರ್ಸ್ ವಿರುದ್ಧ 32-39 ರಿಂದ ಸೋಲು
ದಬಾಂಗ್ ಡೆಲ್ಲಿ ವಿರುದ್ಧ 35-25 ರಿಂದ ಸೋಲು
ತಂಡಗಳು | ಪಂದ್ಯ | ಗೆಲುವು | ಸೋಲು | ಟೈ | ಸ್ಕೋರ್ ವ್ಯತ್ಯಾಸ | ಅಂಕ |
---|---|---|---|---|---|---|
ಹರಿಯಾಣ ಸ್ಟೀಲರ್ಸ್ | 9 | 7 | 2 | 0 | 52 | 36 |
ಯು ಮುಂಬಾ | 10 | 6 | 3 | 1 | -3 | 34 |
ಪುಣೇರಿ ಪಲ್ಟನ್ | 9 | 5 | 2 | 2 | 59 | 33 |
ಪಾಟ್ನಾ ಪೈರೇಟ್ಸ್ | 10 | 6 | 4 | 0 | 33 | 33 |
ದಬಾಂಗ್ ಡೆಲ್ಲಿ KC | 11 | 5 | 5 | 1 | 5 | 32 |
ಜೈಪುರ ಪಿಂಕ್ ಪ್ಯಾಂಥರ್ಸ್ | 9 | 5 | 3 | 1 | 37 | 30 |
ತಮಿಳು ತಲೈವಾಸ್ | 10 | 4 | 5 | 1 | 31 | 27 |
ತೆಲುಗು ಟೈಟಾನ್ಸ್ | 9 | 5 | 4 | 0 | -40 | 27 |
ಯುಪಿ ಯೋಧಾಸ್ | 9 | 4 | 5 | 0 | 23 | 25 |
ಬೆಂಗಾಲ್ ವಾರಿಯರ್ಜ್ | 10 | 3 | 5 | 2 | -47 | 23 |
ಬೆಂಗಳೂರು ಬುಲ್ಸ್ | 10 | 2 | 8 | 0 | -73 | 13 |
ಗುಜರಾತ್ ಜೈಂಟ್ಸ್ | 10 | 2 | 8 | 0 | -77 | 12 |