RCB vs DC, WPL 2023: ಆಡಿದ ಎಲ್ಲಾ ಐದು ಪಂದ್ಯಗಳಲ್ಲೂ ಸೋಲು; ಈ ತಂಡಕ್ಕೆ ಏನಾಗಿದೆ?
- ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ವಿಮೆನ್ಸ್ ಪ್ರೀಮಿಯರ್ ಲೀಗ್‌ನ(WPL) ನಲ್ಲಿ ಆಡಿದ ಐದು ಪಂದ್ಯಗಳಲ್ಲಿ ಕನಿಷ್ಠ ಒಂದು ಪಂದ್ಯವನ್ನು ಕೂಡಾ ಗೆಲ್ಲಲು ವಿಫಲವಾಗಿದೆ. ನಿನ್ನೆಯ ಪಂದ್ಯದಲ್ಲಿ ಆರ್‌ಸಿಬಿ ತಂಡವನ್ನು ಡೆಲ್ಲಿ ಕ್ಯಾಪಿಟಲ್ಸ್ ಆರು ವಿಕೆಟ್‌ಗಳಿಂದ ಸೋಲಿಸಿತು. ತಂಡವು ಟೂರ್ನಿಯ ಪ್ಲೇ ಆಫ್ ರೇಸ್‌ನಿಂದ ಬಹುತೇಕ ಹೊರಬಿದ್ದಿದೆ.

(1 / 5)
ಆರ್‌ಸಿಬಿ ನೀಡಿದ 151 ರನ್‌ಗಳ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್, ಆರು ವಿಕೆಟ್‌ಗಳಿಂದ ಮತ್ತು ಎರಡು ಎಸೆತಗಳು ಬಾಕಿ ಇರುವಂತೆಯೇ ಪಂದ್ಯ ಗೆದ್ದಿತು. ಆ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸತತ ಐದನೇ ಸೋಲಿಗೆ ಶರಣಾಯಿತು. ನಾಯಕಿ ಸ್ಮೃತಿ ಮಂಧನ ಕಳಪೆ ಫಾರ್ಮ್ ಮತ್ತೆ ಮುಂದುವರೆಯಿತು. ಆದರೆ ಎಲ್ಲಿಸ್ ಪೆರ್ರಿ ರಿಚಾ ಘೋಷ್ ಡೆತ್ ಓವರ್‌ಗಳಲ್ಲಿ ಸ್ಫೋಟಕ ಆಟವಾಡಿದರು. ಪೆರ್ರಿ ಅರ್ಧ ಶತಕ ಗಳಿಸಿದರು. ಆದರೆ, ಡೆಲ್ಲಿ ತಂಡವು ಚಾಣಾಕ್ಷತನದಿಂದ ಆಡಿ ಕೊನೆಯ ಓವರ್‌ನಲ್ಲಿ ಗುರಿ ಬೆನ್ನತ್ತಿತು.(AFP)
(3 / 5)
ಡೆಲ್ಲಿ ತಂಡವು ಶಫಾಲಿ ವರ್ಮಾ ಅವರನ್ನು ಬೇಗನೆ ಕಳೆದುಕೊಂಡರೆ, ಕ್ಯಾಪ್ಟನ್ ಮೆಗ್ ಲ್ಯಾನಿಂಗ್‌ಗೆ ಆರ್ಭಟಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಆಲಿಸ್ ಕ್ಯಾಪ್ಸೆ ಉತ್ತಮ ಆಟವಾಡಿದರು.(PTI)
ಇತರ ಗ್ಯಾಲರಿಗಳು