ರಾಷ್ಟ್ರಮಟ್ಟದ ಪವರ್‌ಲಿಫ್ಟಿಂಗ್ ಚಾಂಪಿಯನ್​ಶಿಪ್​​; ಬೆಂಗಳೂರಿನ ದೇವಿಕಾ ದೇಸಾಯಿ, ದಿಶಾ ಮೋಹನ್ ಆಯ್ಕೆ
ಕನ್ನಡ ಸುದ್ದಿ  /  ಕ್ರೀಡೆ  /  ರಾಷ್ಟ್ರಮಟ್ಟದ ಪವರ್‌ಲಿಫ್ಟಿಂಗ್ ಚಾಂಪಿಯನ್​ಶಿಪ್​​; ಬೆಂಗಳೂರಿನ ದೇವಿಕಾ ದೇಸಾಯಿ, ದಿಶಾ ಮೋಹನ್ ಆಯ್ಕೆ

ರಾಷ್ಟ್ರಮಟ್ಟದ ಪವರ್‌ಲಿಫ್ಟಿಂಗ್ ಚಾಂಪಿಯನ್​ಶಿಪ್​​; ಬೆಂಗಳೂರಿನ ದೇವಿಕಾ ದೇಸಾಯಿ, ದಿಶಾ ಮೋಹನ್ ಆಯ್ಕೆ

National Powerlifting Championship: ರಾಜಸ್ಥಾನದಲ್ಲಿ ನಡೆಯುವ ರಾಷ್ಟ್ರಮಟ್ಟದ ಪವರ್​ಲಿಫ್ಟಿಂಗ್​ ಚಾಂಪಿಯನ್​ಶಿಪ್​ಗೆ ಬೆಂಗಳೂರಿನ ದೇವಿಕಾ ದೇಸಾಯಿ, ದಿಶಾ ಮೋಹನ್ ಆಯ್ಕೆಯಾಗಿದ್ದಾರೆ.

ರಾಷ್ಟ್ರಮಟ್ಟದ ಪವರ್‌ಲಿಫ್ಟಿಂಗ್ ಚಾಂಪಿಯನ್​ಶಿಪ್​​; ಬೆಂಗಳೂರಿನ ದೇವಿಕಾ ದೇಸಾಯಿ, ದಿಶಾ ಮೋಹನ್ ಆಯ್ಕೆ
ರಾಷ್ಟ್ರಮಟ್ಟದ ಪವರ್‌ಲಿಫ್ಟಿಂಗ್ ಚಾಂಪಿಯನ್​ಶಿಪ್​​; ಬೆಂಗಳೂರಿನ ದೇವಿಕಾ ದೇಸಾಯಿ, ದಿಶಾ ಮೋಹನ್ ಆಯ್ಕೆ

ಬೆಂಗಳೂರು: ರಾಜಸ್ಥಾನದ ಗಂಗಾನಗರದಲ್ಲಿ ಜೂನ್​ 6ರಿಂದ ಮೂರು ದಿನಗಳ ಕಾಲ ನಡೆಯಲಿರುವ ರಾಷ್ಟ್ರಮಟ್ಟದ ಪವರ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ - 2024ಗೆ ಬೆಂಗಳೂರಿನಿಂದ ಇಬ್ಬರು ಆಯ್ಕೆ ಆಗಿದ್ದಾರೆ. ಬೆಂಗಳೂರಿನ ಬಾಲಾರ್ಕ ಫಿಟ್‌ನೆಸ್ ಸೆಂಟರ್‌ನ ದೇವಿಕಾ ದೇಸಾಯಿ ಹಾಗೂ ದಿಶಾ ಮೋಹನ್ ಅವರು ಈ ಸ್ಪರ್ಧೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲಿದ್ದಾರೆ.

ದೇವಿಕಾ ದೇಸಾಯಿ 84+ ಕೆಜಿ ಸಬ್ ಜೂನಿಯರ್ ವಿಭಾಗದಲ್ಲಿ ಬೆಂಗಳೂರು ಜಿಲ್ಲಾ ಮಟ್ಟದ ಪವರ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್‌‌ನಲ್ಲಿ ಚಿನ್ನದ ಪದಕದ ಜೊತೆಗೆ ಸ್ಟ್ರಾಂಗ್ ವಿಮೆನ್ ಸಬ್ ಜೂನಿಯರ್ ಪ್ರಶಸ್ತಿ ಕೂಡ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆ ಆಗಿದ್ದರು. ಬಳಿಕ ರಾಜ್ಯಮಟ್ಟದಲ್ಲಿ ಚಿನ್ನ ಪಡೆಯುವ ಮೂಲಕ ರಾಷ್ಟ್ರಮಟ್ಟದ ಪವರ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್‌ಗೆ ಆಯ್ಕೆ ಆಗಿದ್ದಾರೆ.

ದಿಶಾ ಮೋಹನ್ 57 ಕೆಜಿ ಸಬ್ ಜೂನಿಯರ್ ವಿಭಾಗದಲ್ಲಿ ಬೆಂಗಳೂರು ಜಿಲ್ಲಾ ಮಟ್ಟದ ಪವರ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆ ಆಗಿದ್ದರು. ಅಲ್ಲದೆ ರಾಜ್ಯಮಟ್ಟದಲ್ಲಿ ಚಿನ್ನದ ಪದಕ ಪಡೆಯುವ ಮೂಲಕ ರಾಷ್ಟಮಟ್ಟದ ಪವರ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್‌ಗೆ ಆಯ್ಕೆ ಆಗಿದ್ದಾರೆ.

ದೇವಿಕಾ ದೇಸಾಯಿ ಹಾಗೂ ದಿಶಾ ಮೋಹನ್ ಇಬ್ಬರೂ ಬಾಲಾರ್ಕ ಫಿಟ್‌ನೆಸ್ ಸೆಂಟರ್‌ನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಪವರ್‌ಲಿಫ್ಟಿಂಗ್ ಚಾಂಪಿಯನ್ ವಿಶ್ವನಾಥ್ ಭಾಸ್ಕರ ಗಾಣಿಗ ಅವರಿಂದ ತರಬೇತಿ ಪಡೆಯುತ್ತಿದ್ದಾರೆ.

ಟೋಕಿಯೊ ಒಲಿಂಪಿಕ್ಸ್​​ ಪದಕ ಪಟ್ಟಿಯಲ್ಲಿ ಭಾರತಕ್ಕೆ ಎಷ್ಟನೇ ಸ್ಥಾನ?

2020ರ ಟೋಕಿಯೊ ಒಲಿಂಪಿಕ್ಸ್​​ನಲ್ಲಿ ಭಾರತ ಒಟ್ಟು 7 ಪದಕಕ್ಕೆ ಮುತ್ತಿಕ್ಕಿತ್ತು. ಮೆಡಲ್ ಪಟ್ಟಿಯಲ್ಲಿ ಒಟ್ಟು 48ನೇ ಸ್ಥಾನದಲ್ಲಿತ್ತು. ಒಂದು ಚಿನ್ನ, 2 ಬೆಳ್ಳಿ ಮತ್ತು 4 ಕಂಚಿನ ಪದಕಗಳನ್ನು ಗೆದ್ದು ಭಾರತ. ಈ ಬಾರಿ ಈ ಸಂಖ್ಯೆಯನ್ನು ವಿಸ್ತರಿಸಲು ಸನ್ನದ್ಧಗೊಂಡಿದೆ. ಪದಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದ ಅಮೆರಿಕ 113 ಪದಕ ಗೆದ್ದಿತ್ತು. 39 ಚಿನ್ನ, 41 ಬೆಳ್ಳಿ, 33 ಕಂಚು ಪದಕ ಗೆದ್ದಿತ್ತು. ಚೀನಾ ಎರಡನೇ ಸ್ಥಾನದಲ್ಲಿತ್ತು. 38 ಚಿನ್ನ, 32 ಬೆಳ್ಳಿ, 18 ಕಂಚಿನ ಪದಕಗಳಿಗೆ ಮುತ್ತಿಕ್ಕಿತ್ತು. ಜಪಾನ್ 27 ಚಿನ್ನ, 14 ಬೆಳ್ಳಿ, 17 ಬೆಳ್ಳಿ ಪದಕಗಳೊಂದಿಗೆ 3ನೇ ಸ್ಥಾನ ಪಡೆದಿತ್ತು.

ಪ್ಯಾರಿಸ್ ಒಲಿಂಪಿಕ್ಸ್ ಪ್ರಾರಂಭ ಯಾವಾಗ? ಸ್ಪರ್ಧಿಗಳೆಷ್ಟು?

ಬಹುನಿರೀಕ್ಷಿತ ಪ್ಯಾರಿಸ್ ಒಲಿಂಪಿಕ್​ (ಸಮ್ಮರ್​) ಆರಂಭಕ್ಕೆ ಎರಡು ತಿಂಗಳಷ್ಟೇ ಬಾಕಿ ಉಳಿದಿದೆ. 2024ರ ಜುಲೈ 26 ರಿಂದ 2024ರ ಆಗಸ್ಟ್​ 11 ವರೆಗೂ ಈ ಕ್ರೀಡಾಕೂಟ ನಡೆಯಲಿದೆ. ಫ್ರಾನ್ಸ್​ನ ಪ್ಯಾರಿಸ್​ನಲ್ಲಿ ನಡೆಯುವ ಈ ಒಲಿಂಪಿಕ್​ನಲ್ಲಿ 32 ಕ್ರೀಡೆಗಳಲ್ಲಿ 329 ಈವೆಂಟ್​​ಗಳು ಜರುಗಲಿದ್ದು, ವಿವಿಧ ದೇಶಗಳಿಂದ 10,500 ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ. ಜಾರ್ಡಿನ್ಸ್ ಡು ಟ್ರೋಕಾಡೆರೊ ಮತ್ತು ಸೀನ್​​ನಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಸ್ಟೇಡ್ ಡಿ ಫ್ರಾನ್ಸ್​ನಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ.

 

 

 

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.