ಇಂಗ್ಲೆಂಡ್ vs ಸ್ಪೇನ್ ಯುರೋ ಕಪ್ ಫೈನಲ್ ಪಂದ್ಯ; ಯಾವಾಗ ಮತ್ತು ಎಲ್ಲಿ, ಭಾರತದಲ್ಲಿ ವೀಕ್ಷಿಸುವುದೇಗೆ? ಇಲ್ಲಿದೆ ವಿವರ
England vs Spain: 2024ರ ಯುರೋ ಕಪ್ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ಮತ್ತು ಸ್ಪೇನ್ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯವನ್ನು ಎಲ್ಲಿ, ಯಾವಾಗ, ಎಲ್ಲಿ ವೀಕ್ಷಿಸಬೇಕು ಎಂಬುದರ ಮಾಹಿತಿ ಇಲ್ಲಿದೆ.

ಯುರೋ ಕಪ್ 2024 ಅಂತಿಮ ಘಟ್ಟಕ್ಕೆ ಬಂದು ನಿಂತಿದೆ. ಜೂನ್ 15 ರಿಂದ ಆರಂಭಗೊಂಡ ಮಹತ್ವದ ಟೂರ್ನಿ ಸರಿಯಾಗಿ ಒಂದು ತಿಂಗಳು ಅಂದರೆ ಜುಲೈ 14ಕ್ಕೆ ಮುಕ್ತಾಯಗೊಳ್ಳಲಿದೆ. ಅಂದರೆ ಶನಿವಾರ ರಾತ್ರಿ. ಆದರೆ ಭಾರತೀಯ ಕಾಲಮಾನದ ಪ್ರಕಾರ ಜುಲೈ 15ರ 12.30 (AM)ರಲ್ಲಿ ಜರುಗುವ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಇಂಗ್ಲೆಂಡ್ ಮತ್ತು ಸ್ಪೇನ್ ತಂಡಗಳು ಮುಖಾಮುಖಿಯಾಗಲಿವೆ. ಮೊದಲ ಸೆಮಿಫೈನಲ್ನಲ್ಲಿ ಫ್ರಾನ್ಸ್ ವಿರುದ್ಧ ಸ್ಪೇನ್ 2-1 ಗೋಲುಗಳ ಅಂತರದಿಂದ ಗೆದ್ದು ಬೀಗಿತ್ತು. 2ನೇ ಸೆಮೀಸ್ನಲ್ಲಿ ನೆದರ್ಲೆಂಡ್ಸ್ ಮಣಿಸಿದ ಇಂಗ್ಲೆಂಡ್ ಫೈನಲ್ಗೇರಿದೆ.
ಯುರೋ 2024 ಫೈನಲ್ ಯಾವಾಗ?
ಯುರೋ 2024 ಫೈನಲ್ ಪಂದ್ಯ ಜುಲೈ 14, ರಾತ್ರಿ 9:00ಕ್ಕೆ ನಡೆಯಲಿದೆ. ಭಾರತೀಯ ಕಾಲಮಾನದಲ್ಲಿ ಜುಲೈ 15, 12:30 AMಗೆ ಜರುಗಲಿದೆ.
ಫೈನಲ್ ಪಂದ್ಯ ನಡೆಯುವ ಮೈದಾನ ಯಾವುದು?
ಬರ್ಲಿನ್ ಒಲಿಂಪಿಯಾ ಸ್ಟೇಡಿಯನ್‌ನಲ್ಲಿ ಫೈನಲ್ ನಡೆಯಲಿದೆ. ಇದು ಒಟ್ಟು 74,000 ಪ್ರೇಕ್ಷಕರ ಸಾಮರ್ಥ್ಯ ಹೊಂದಿದೆ.
ಭಾರತದಲ್ಲಿ ಎಲ್ಲಿ ವೀಕ್ಷಿಸಬಹುದು?
ಸ್ಪೇನ್‌ನಲ್ಲಿ ಈ ಪಂದ್ಯವನ್ನು RTVE ನಲ್ಲಿ ಲೈವ್ ಆಗಿ ವೀಕ್ಷಿಸಬಹುದು. ಆದರೆ ಬಿಬಿಸಿ ಮತ್ತು ಐಟಿವಿ ಎರಡರಲ್ಲೂ ಯುಕೆ ಮತ್ತು ಐರ್ಲೆಂಡ್ನಲ್ಲಿ ವೀಕ್ಷಿಸಬಹುದು. ಇತರ ಪ್ರದೇಶಗಳಲ್ಲಿ ಪ್ರಸಾರಕರ ಸಂಪೂರ್ಣ ಪಟ್ಟಿಯನ್ನು ಇಲ್ಲಿ ಕಾಣಬಹುದು. ಭಾರತ ಮತ್ತು ಭಾರತೀಯ ಉಪಖಂಡದಲ್ಲಿ ಸೋನಿ ಸ್ಪೋರ್ಟ್ಸ್ ನೆಟ್ವರ್ಕ್ನಲ್ಲಿ ಪಂದ್ಯವನ್ನು ವೀಕ್ಷಿಸಬಹುದು.
ಸ್ಪೇನ್ ವಿರುದ್ಧ ಇಂಗ್ಲೆಂಡ್ ದಾಖಲೆ ಏನು?
- ಇದು (ಈ ಫೈನಲ್) ಯುರೋಪಿಯನ್ ಚಾಂಪಿಯನ್‌ಶಿಪ್‌ನಲ್ಲಿ ಸ್ಪೇನ್ ವಿರುದ್ಧ ಇಂಗ್ಲೆಂಡ್ಗೆ ಮೂರನೇ ಮುಖಾಮುಖಿಯಾಗಿದೆ. ಹಿಂದಿನ ಎರಡು ಪಂದ್ಯಗಳಲ್ಲಿ ಇಂಗ್ಲೆಂಡ್ ಗೆದ್ದಿದೆ.
- 1980ರ ಟೂರ್ನಿಯ ಗುಂಪು ಹಂತದಲ್ಲಿ ಇಂಗ್ಲೆಂಡ್ 2-1 ಗೋಲುಗಳಿಂದ ಸ್ಪೇನ್ ತಂಡವನ್ನು ಸೋಲಿಸಿತ್ತು. ಆದರೂ ಎರಡು ತಂಡಗಳು ಲೀಗ್ನಿಂದ ಹೊರಬಿದ್ದಿದ್ದವು.
- 1996ರಲ್ಲಿ ತಂಡಗಳು ವೆಂಬ್ಲಿಯಲ್ಲಿ 16ರ ಘಟ್ಟದಲ್ಲಿ ಮುಖಾಮುಖಿಯಾಗಿದ್ದವು. ಗೋಲುರಹಿತ ಡ್ರಾ ನಂತರ ಇಂಗ್ಲೆಂಡ್ ಪೆನಾಲ್ಟಿಯಲ್ಲಿ ಗೆದ್ದಿತು.
- ವಿಶ್ವಕಪ್‌ನಲ್ಲೂ 2 ಬಾರಿ ಉಭಯ ತಂಡಗಳು ಮುಖಾಮುಖಿಯಾಗಿವೆ. 1950ರಲ್ಲಿ ರಿಯೊ ಡಿ ಜನೈರೊದಲ್ಲಿ ನಡೆದ ಗುಂಪು ಹಂತದಲ್ಲಿ ಸ್ಪೇನ್ 1-0ರಲ್ಲಿ ಜಯಿಸಿತ್ತು. 1982ರಲ್ಲಿ ಉಭಯ ತಂಡಗಳು ಸೆಣಸಾಟ ನಡೆಸಿದ್ದವು. ಈ ಪಂದ್ಯ ಡ್ರಾನಲ್ಲಿ ಅಂತ್ಯ ಕಂಡಿತ್ತು.
- ಇಂಗ್ಲೆಂಡ್ 2018 ನೇಷನ್ಸ್ ಲೀಗ್‌ನಲ್ಲಿ 3-2 ಗೆಲುವು ಸಾಧಿಸಿದೆ. ಆದರೆ ಅದಕ್ಕೂ ಮೊದಲು ಉಭಯ ತಂಡಗಳ 10 ಮುಖಾಮುಖಿಯಲ್ಲಿ ಎರಡನ್ನು ಮಾತ್ರ ಗೆದ್ದಿದೆ (ಪೆನಾಲ್ಟಿ ಹೊರತುಪಡಿಸಿ).
ಇದನ್ನೂ ಓದಿ: ಜಾಂಟಿ ರೋಡ್ಸ್‌ಗೆ ಸಿಕ್ಕಿದ್ರು ಸಹೋದರ; ಸೂಪರ್ಮ್ಯಾನ್ನಂತೆ ಹಾರಿ ಕಣ್ಮನ ಸೆಳೆಯುವ ಕ್ಯಾಚ್ ಹಿಡಿದ ರವಿ ಬಿಷ್ಣೋಯ್
ವರ್ಷ | ವಿಜೇತ | ಸ್ಕೋರ್ | ರನ್ನರ್ ಅಪ್ |
---|---|---|---|
2024 | - | - | - |
2021 | ಇಟಲಿ | 3–2 | ಇಂಗ್ಲೆಂಡ್ |
2016 | ಪೋರ್ಚುಗಲ್ | 1-0 | ಫ್ರಾನ್ಸ್ |
2012 | ಸ್ಪೇನ್ | 4-0 | ಇಟಲಿ |
2008 | ಸ್ಪೇನ್ | 1-0 | ಜರ್ಮನಿ |
2004 | ಗ್ರೀಸ್ | 1-0 | ಪೋರ್ಚುಗಲ್ |
2000 | ಫ್ರಾನ್ಸ್ | 2-1 | ಇಟಲಿ |
1996 | ಜರ್ಮನಿ | 2-1 | ಜೆಕಿಯಾ |
1992 | ಡೆನ್ಮಾರ್ಕ್ | 2-0 | ಜರ್ಮನಿ |
1988 | ನೆದರ್ಲೆಂಡ್ಸ್ | 2-0 | ಸೋವಿಯತ್ ಒಕ್ಕೂಟ |
1984 | ಫ್ರಾನ್ಸ್ | 2-0 | ಸ್ಪೇನ್ |
1980 | ವೆಸ್ಟ್ ಜರ್ಮನಿ | 2-1 | ಬೆಲ್ಜಿಯಂ |
1976 | ಜೆಕೊಸ್ಲೊವಾಕಿಯಾ | 2-2 | ವೆಸ್ಟ್ ಜರ್ಮನಿ |
1972 | ವೆಸ್ಟ್ ಜರ್ಮನಿ | 3-0 | ಸೋವಿಯತ್ ಒಕ್ಕೂಟ |
1968 | ಇಟಲಿ | 2-0 | ಯುಗೊಸ್ಲಾವಿಯ |
1964 | ಸ್ಪೇನ್ | 2-1 | ಸೋವಿಯತ್ ಒಕ್ಕೂಟ |
1960 | ಸೋವಿಯತ್ ಒಕ್ಕೂಟ | 2-1 | ಯುಗೊಸ್ಲಾವಿಯ |