ಕನ್ನಡ ಸುದ್ದಿ  /  Sports  /  Fans Troll Sania Mirza After Real Mentor Virat Kohli Delivers Motivational Speech To Smriti Mandhana And Co

WPL 2023: ಕೊಹ್ಲಿಯಿಂದ RCBಗೆ ಗೆಲುವು.. ಮೆಂಟರ್​​ ಆಗಿ ಏನ್​ ಮಾಡ್ತಿದ್ದೀರಾ? ಸಾನಿಯಾ ಮಿರ್ಜಾ ಫುಲ್​ ಟ್ರೋಲ್​!

Saniya Mirza Troll: ಸತತ ಐದು ಸೋಲುಗಳಿಂದ ಹೊರ ಬಂದಿರುವ RCB, ಮುಂದಿನ ಪಂದ್ಯಗಳಲ್ಲೂ ಅದೇ ಗೆಲುವು ಮುಂದುವರೆಸುವ ವಿಶ್ವಾಸದಲ್ಲಿದೆ. ಆದರೆ ಯುಪಿ ವಿರುದ್ಧ ಪಂದ್ಯ ಮುಕ್ತಾಯವಾದ ಬೆನ್ನಲ್ಲೇ ಆರ್​​ಸಿಬಿ ಮೆಂಟರ್​​​ ಆಗಿ ನೇಮಕಗೊಂಡಿರುವ ಸಾನಿಯಾ ಮಿರ್ಜಾ ಅವರನ್ನು ಟ್ರೋಲ್​ ಮಾಡಲಾಗುತ್ತಿದೆ.

ಸಾನಿಯಾ ಮಿರ್ಜಾ
ಸಾನಿಯಾ ಮಿರ್ಜಾ

ಸತತ ಸೋಲುಗಳಿಂದ ಹೊರ ಬಂದಿರುವ ರಾಯಲ್ ಚಾಲೆಂಜರ್ಸ್​​ ಬೆಂಗಳೂರು (Royal Challengers Bangalore), ಗೆಲುವಿನ ಲಯಕ್ಕೆ ಮರಳಿದೆ. ಮಾರ್ಚ್​​ 15ರಂದು ಡಿವೈ ಪಾಟೀಲ್​ ಸ್ಟೇಡಿಯಂನಲ್ಲಿ ನಡೆದ ಯುಪಿ ವಾರಿಯರ್ಸ್ (UP Warriorz)​​ ವಿರುದ್ದದ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲಿಸಿದೆ. ಇದರೊಂದಿಗೆ ಪ್ಲೇ ಆಫ್​ ಕನಸನ್ನೂ ಜೀವಂತವಾಗಿಟ್ಟುಕೊಂಡಿದೆ. ಆದರೆ, ಆರ್​​ಸಿಬಿ ಮೆಂಟರ್​ ಸಾನಿಯಾ ಮಿರ್ಜಾ (Sania Mirza) ಅವರನ್ನು ಸಖತ್ ಟ್ರೋಲ್ ಮಾಡಲಾಗುತ್ತಿದೆ.

ಈ ಪಂದ್ಯಕ್ಕೂ ಮುನ್ನ ವಿರಾಟ್​ ಕೊಹ್ಲಿ ಪ್ರೇರಣೆಯ ಮಾತುಗಳನ್ನಾಡಿ, ತಂಡದ ಗೆಲುವಿಗೆ ಕಾರಣರಾಗಿದ್ದರು. IPLನಲ್ಲಿ ತನಗಾದ ಅನುಭವ ಹಂಚಿಕೊಂಡ ಕೊಹ್ಲಿ, ಮಂಧಾನ ಬಳಗವನ್ನು ಹುರಿದುಂಬಿಸಿದ್ದರು. ಐದು ಪಂದ್ಯಗಳಲ್ಲಿ ಸೋತಿದ್ದೇವೆ ಎಂದು ಕುಗ್ಗಬಾರದು. ತಲೆ ಎತ್ತಿ ಆಡಬೇಕು. ನಾವು ವಿಶ್ವದ ಅತ್ಯದ್ಭುತ ಫ್ಯಾನ್​​ ಬೇಸ್​​​​​​​​​ ಹೊಂದಿದ್ದೇವೆ. ಅವರಿಗಾಗಿ ಕಠಿಣ ಪರಿಶ್ರಮ ಹಾಕಬೇಕು ಎಂದು ಕೊಹ್ಲಿ ಹೇಳಿದರು.

ಕೊಹ್ಲಿ ಸ್ಪೂರ್ತಿಯ ಮಾತುಗಳಿಂದ ಪ್ರೇರಿತಗೊಂಡ ಆರ್​ಸಿಬಿ ಮಹಿಳಾ ತಂಡ, ಯುಪಿ ವಾರಿಯರ್ಸ್​​ ತಂಡವನ್ನು ಸೋಲಿಸಿದೆ. ಸತತ ಐದು ಸೋಲುಗಳಿಂದ ಹೊರ ಬಂದಿರುವ RCB, ಮುಂದಿನ ಪಂದ್ಯಗಳಲ್ಲೂ ಅದೇ ಗೆಲುವು ಮುಂದುವರೆಸುವ ವಿಶ್ವಾಸದಲ್ಲಿದೆ. ಆದರೆ ಯುಪಿ ವಿರುದ್ಧ ಪಂದ್ಯ ಮುಕ್ತಾಯವಾದ ಬೆನ್ನಲ್ಲೇ ಭಾರತದ ಟೆನಿಸ್​​​ ತಾರೆ, ಆರ್​​ಸಿಬಿ ಮೆಂಟರ್​​​ ಆಗಿ ನೇಮಕಗೊಂಡಿರುವ ಸಾನಿಯಾ ಮಿರ್ಜಾ ಅವರನ್ನು ಟ್ರೋಲ್​ ಮಾಡಲಾಗುತ್ತಿದೆ.

15 ವರ್ಷಗಳಿಂದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ನಾಯಕನಾಗಿ ಸಿಹಿ ಕಹಿ ದಿನಗಳನ್ನು ಕಂಡಿರುವ ವಿರಾಟ್​ ಕೊಹ್ಲಿ, ಸ್ಪೂರ್ತಿದಾಯಕ ಮಾತುಗಳನ್ನಾಡಿ ಆರ್​​​ಸಿಬಿ ಗೆಲುವಿನ ರುವಾರಿಯಾಗಿದ್ದಾರೆ. ಆದರೆ ಮೆಂಟರ್ ಆಗಿ ನೇಮಕಗೊಂಡ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ತಮ್ಮ ಕರ್ತವ್ಯವನ್ನು ಮಾಡುತ್ತಿಲ್ಲ ಎಂದು ಟ್ರೋಲ್ ಮಾಡಿದ್ದಾರೆ.

ಇನ್ನೂ ಭರವಸೆ ಇದೆ. ಶೇ.1ರಷ್ಟು ಅವಕಾಶವಿದೆ. ಕೆಲವೊಮ್ಮೆ ಅದು ಸಾಕಷ್ಟು ಒಳ್ಳೆಯದು. ಈ ಮೂರು ಪಂದ್ಯಗಳಲ್ಲಿ ಏನೂ ಆಗದಿದ್ದರೂ, ಮುಂಬರುವ ಟೂರ್ನಿಯಲ್ಲಿ ಗೆದ್ದು ನಾಕೌಟ್ ಹಂತವನ್ನು ತಲೆಎತ್ತಿ ನಡೆಯುವಂತೆ ಮಾಡುವುದು ಮುಖ್ಯ ಎಂದು ಹೇಳಿದ್ದರು. ಆದರೆ ಈ ಕೆಲಸ ಮಾಡಬೇಕಿದ್ದ ಸಾನಿಯಾ ಮಿರ್ಜಾ ಏನು ಮಾಡುತ್ತಿದ್ದಾರೆ.? ಸುಮ್ಮನೆ ದುಡ್ಡು ಕೊಟ್ಟು ಕರೆತರಲಾಗಿದ್ಯಾ? ಅಂತೆಲ್ಲಾ ತರಾಟೆ​ ತೆಗೆದುಕೊಂಡಿದ್ದಾರೆ.

20 ದಿನಗಳಿಂದ ತಂಡದಲ್ಲಿರುವ ಸಾನಿಯಾ ಮಿರ್ಜಾ 1 ಪಂದ್ಯವನ್ನೂ ಗೆಲ್ಲಿಸಿಕೊಡಲು ಸಾಧ್ಯವಾಗಲಿಲ್ಲ. ಆದರೆ ಕೊಹ್ಲಿ ಜಸ್ಟ್​ 20 ನಿಮಿಷಗಳಲ್ಲಿ ಒಂದು ಪಂದ್ಯವನ್ನು ಗೆಲ್ಲಿಸಿಕೊಟ್ಟಿದ್ದಾರೆ. ಆದರೆ, ನಿಮ್ಮ ಕೆಲಸವೇನು? ಏನು ಮಾಡುತ್ತಿದ್ದೀರಾ.? ಎಲ್ಲಿದ್ದೀರಾ ಎಂದೆಲ್ಲಾ ಟ್ವಿಟರ್​​​ನಲ್ಲಿ ಫುಲ್​ರೋಸ್ಟ್​ ಮಾಡುತ್ತಿದ್ದಾರೆ. ಟೆನಿಸ್ ಪ್ಲೇಯರ್​​​ನ ಮೆಂಟರ್​​​ ಆಗಿ ನೇಮಿಸಿದರೆ ಹೀಗೆಯೇ ಆಗುತ್ತದೆ. ಕ್ರಿಕೆಟ್​​ನಲ್ಲಿ ಅದ್ಭುತ ಸಾಧನೆ ಮಾಡಿದ ಮಾಜಿ ಕ್ರಿಕೆಟರ್​​ಗಳನ್ನು ಮೆಂಟರ್​​ ಆಗಿ ನೇಮಕ ಮಾಡುವ ಅಗತ್ಯ ಇರಲಿಲ್ಲವೇ ಎಂದು ಫ್ರಾಂಚೈಸಿಯನ್ನೂ ನೆಟ್ಟಿಗರು ಕ್ಲಾಸ್​ ತೆಗೆದುಕೊಂಡಿದ್ದಾರೆ.

ಟ್ರೋಲ್​ಗೆ ಒಳಗಾಗಿದ್ದ ಮಂಧಾನ!

ಸತತ ಐದು ಪಂದ್ಯಗಳಲ್ಲಿ ಸೋಲು ಕಾಣುತ್ತಿದ್ದಂತೆ ನಾಯಕಿ ಸ್ಮೃತಿ ಮಂಧಾನ ಕೂಡ ಟ್ರೋಲ್​ ದಾಳಿಗೆ ಒಳಗಾಗಿದ್ದರು. ಕ್ಯಾಪ್ಟನ್ಸಿ ಜೊತೆಗೆ ಬ್ಯಾಟಿಂಗ್​ ಕಳಪೆ ಪ್ರದರ್ಶನ ನೀಡುತ್ತಿದ್ದೀರಾ.? 3.40 ಕೋಟಿ ನೀರಲ್ಲಿ ಹೋಮ ಮಾಡಿದ್ದೀರಾ.? ಹೀಗೆ ಸತತ ಸೋಲಿನಿಂದ ಕಂಗೆಟ್ಟಿದ್ದ ಆರ್​ಸಿಬಿಯ ಕೆಲ ಅಭಿಮಾನಿಗಳು ನಾಯಕಿ ಸ್ಮೃತಿ ಮಂಧಾನಾ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್​ ಮಾಡಿದ್ದರು.

ಸ್ಮೃತಿ ಮಂಧಾನಾ ತುಂಬಾ ಕೆಟ್ಟ ನಾಯಕಿ. ಅವರ ನಿರ್ಧಾರಗಳು ಕಳಪೆಯಾಗಿವೆ. ಅವರಿಗೆ ನಾಯಕತ್ವದ ಯಾವುದೇ ಅರ್ಹತೆಗಳಿಲ್ಲ. ಯಾವ ಆಟಗಾರ್ತಿಯರನ್ನು ಯಾವ ಕ್ರಮಾಂಕದಲ್ಲಿ ಆಡಿಸಬೇಕು ಎನ್ನುವ ತಿಳುವಳಿಕೆಯೇ ಇಲ್ಲ. ಅವರಿಗೆ ನೀಡಿದ ಹಣ ನೀರಲ್ಲಿ ಹೋಮ ಮಾಡಿದಂತಾಗಿದೆ ಎಂದು ನೆಟ್ಟಿಗರು ಕ್ಲಾಸ್​ ತೆಗೆದುಕೊಂಡಿದ್ದರು.