ನಾನು ಹೇಳಿದ್ದು ತುಂಬಾ ಕಡಿಮೆ, ಆದರೂ ನಾನು ಮೌನಿಯಾಗಿದ್ದೇನೆ; ಸಾನಿಯಾ ಮಿರ್ಜಾ ಪೋಸ್ಟ್​ನ ಅರ್ಥವೇನು?
ಕನ್ನಡ ಸುದ್ದಿ  /  ಕ್ರೀಡೆ  /  ನಾನು ಹೇಳಿದ್ದು ತುಂಬಾ ಕಡಿಮೆ, ಆದರೂ ನಾನು ಮೌನಿಯಾಗಿದ್ದೇನೆ; ಸಾನಿಯಾ ಮಿರ್ಜಾ ಪೋಸ್ಟ್​ನ ಅರ್ಥವೇನು?

ನಾನು ಹೇಳಿದ್ದು ತುಂಬಾ ಕಡಿಮೆ, ಆದರೂ ನಾನು ಮೌನಿಯಾಗಿದ್ದೇನೆ; ಸಾನಿಯಾ ಮಿರ್ಜಾ ಪೋಸ್ಟ್​ನ ಅರ್ಥವೇನು?

Sania Mirza : ಹಿಂದೆಂದೂ ನಾನು ಇಷ್ಟು ಹೇಳಲು ಬಯಸಿರಲಿಲ್ಲ. ಆದರೆ ನಾನು ಹೇಳಿರುವುದು ತುಂಬಾ ಅಂದರೆ ತುಂಬಾ ಕಡಿಮೆ. ಆದರೂ ನಾನು ಮೌನಿಯಾಗಿದ್ದೇನೆ ಎಂದು ಇನ್​ಸ್ಟಾಗ್ರಾಂನಲ್ಲಿ ಸಾನಿಯಾ ಮಿರ್ಜಾ ಅಚ್ಚರಿಯ ಸ್ಟೋರಿ ಹಾಕಿದ್ದಾರೆ.

ನಾನು ಹೇಳಿದ್ದು ತುಂಬಾ ಕಡಿಮೆ, ಆದರೂ ನಾನು ಮೌನಿಯಾಗಿದ್ದೇನೆ; ಸಾನಿಯಾ ಮಿರ್ಜಾ ಪೋಸ್ಟ್​ನ ಅರ್ಥವೇನು?
ನಾನು ಹೇಳಿದ್ದು ತುಂಬಾ ಕಡಿಮೆ, ಆದರೂ ನಾನು ಮೌನಿಯಾಗಿದ್ದೇನೆ; ಸಾನಿಯಾ ಮಿರ್ಜಾ ಪೋಸ್ಟ್​ನ ಅರ್ಥವೇನು?

ಮೂರು ತಿಂಗಳ ಹಿಂದೆ ಕನ್ನಡಿಯ ಮುಂದೆ ನಿಂತಿರುವ ಫೋಟೋ ಹಂಚಿಕೊಂಡು ಪ್ರತಿಬಿಂಬ ಎಂದು ಬರೆದುಕೊಂಡಿದ್ದ ಭಾರತದ ಟೆನಿಸ್ ತಾರೆ ಮತ್ತು ಮೂಗುತಿ ಸುಂದರಿ ಹಾಗೂ ಪಾಕಿಸ್ತಾನ ಕ್ರಿಕೆಟ್ ತಂಡದ ಹಿರಿಯ ಕ್ರಿಕೆಟಿಗ ಶೋಯೆಬ್ ಮಲಿಕ್​ಗೆ (shoaib malik) ವಿಚ್ಛೇದನ ನೀಡಿರುವ ಸಾನಿಯಾ ಮಿರ್ಜಾ (Sania Mirza), ಈಗ ಮತ್ತೊಂದು ಅಚ್ಚರಿ ಪೋಸ್ಟ್ ಹಾಕಿದ್ದಾರೆ. ಈ ಬಾರಿ ಇನ್​ಸ್ಟಾಗ್ರಾಂ ಸ್ಟೋರಿ ಹಾಕಿದ್ದು, ಈ ಪೋಸ್ಟ್​ ವೈರಲ್ ಆಗುತ್ತಿದೆ.

ಇನ್​ಸ್ಟಾಗ್ರಾ ಸ್ಟೋರಿಯಲ್ಲಿ ಪೋಸ್ಟ್​ ಹಾಕಿರುವ 37 ವರ್ಷದ ಮಾಜಿ ಟೆನಿಸ್ ಆಟಗಾರ್ತಿ, ಹಿಂದೆಂದೂ ನಾನು ಇಷ್ಟು ಹೇಳಲು ಬಯಸಿರಲಿಲ್ಲ. ಆದರೆ ನಾನು ಹೇಳಿರುವುದು ತುಂಬಾ ಅಂದರೆ ತುಂಬಾ ಕಡಿಮೆ. ಆದರೂ ನಾನು ಮೌನಿಯಾಗಿದ್ದೇನೆ ಎಂದು ಪೋಸ್ಟ್​​ನಲ್ಲಿ ಬರೆದಿದ್ದಾರೆ. ಈ ಪೋಸ್ಟ್ ನೋಡಿರುವ ನೆಟ್ಟಿಗರು ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಪೋಸ್ಟ್ ಇದು ಎಂದು ಪ್ರತಿಕ್ರಿಯಿಸುತ್ತಿದ್ದಾರೆ.

ಹಿರಿಯ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರು ಪಾಕಿಸ್ತಾನದ ನಟಿ ಸನಾ ಜಾವೆದ್​ ಅವರನ್ನು ವಿವಾಹವಾದ ನಂತರ ಸಾನಿಯಾ ಮಿರ್ಜಾ ಅವರೊಂದಿನ 13 ವರ್ಷದ ದಾಂಪತ್ಯ ಜೀವನಕ್ಕೆ ತೆರೆ ಬಿದ್ದಿತ್ತು. ವಿಚ್ಛೇದನಕ್ಕೂ ಮುನ್ನ ಇದೇ ವಿಚಾರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹಲವು ಊಹಾಪೋಹ ಸುದ್ದಿಗಳು ಹರಿದಾಡಿದ್ದವು. ಕಳೆದ ವರ್ಷವೇ ಈ ಜೋಡಿ ವಿಚ್ಛೇದನ ಪಡೆದಿತ್ತು ಎಂದು ಕೆಲವರು ಹೇಳಿದ್ದರೆ, ಇನ್ನೂ ಕೆಲವರು ವಿಚ್ಛೇದನ ನೀಡದೆಯೇ ಮದುವೆಯಾಗಿದ್ದಾರೆ ಎಂದು ಹೇಳಿದ್ದರು.

ವಿಚ್ಛೇದನ ಸ್ಪಷ್ಟಪಡಿಸಿದ್ದ ಸಾನಿಯಾ ತಂದೆ

ಆದರೆ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿದ ಸಾನಿಯಾ ಮಿರ್ಜಾ ಅವರ ಕುಟುಂಬವೇ ಅಧಿಕೃತ ಹೇಳಿಕೆ ನೀಡುವ ಮೂಲಕ ಸ್ಪಷ್ಟಪಡಿಸಿತ್ತು. ಸಾನಿಯಾ ಅವರ ತಂದೆ ಪಿಟಿಐಗೆ ಪ್ರತಿಕ್ರಿಯಿಸಿ ನನ್ನ ಮಗಳು ಶೋಯೆಬ್​ ಮಲಿಕ್​ಗೆ ಖುಲಾ ನೀಡಿದ್ದಾಳೆ ಎಂದಿದ್ದರು. ಖುಲಾ ಎಂದರೆ ಇಸ್ಲಾಂನಲ್ಲಿ ಸ್ತ್ರೀಯರೇ ಪತಿಗೆ ನೀಡುವ ವಿಚ್ಛೇದನ. ಇದು ಸಮ್ಮತಿಯ ವಿಚ್ಛೇದನವೂ ಹೌದು. ಪತಿಯೊಂದಿಗೆ ಜೀವನ ಮುಂದುವರೆಸಲು ಇಷ್ಟವಿಲ್ಲ ಎಂದರೆ ಹೀಗೆ ವಿಚ್ಛೇದನ ನೀಡಬಹುದು.

2010ರಲ್ಲಿ ಸಾನಿಯಾ-ಮಲಿಕ್ ಮದುವೆ

ಶೋಯೆಬ್‌ ಮಲಿಕ್‌ ಮತ್ತು ಸಾನಿಯಾ ಮಿರ್ಜಾ ಜೋಡಿ 2010ರಲ್ಲಿ ವಿವಾಹವಾಗಿದ್ದರು. ಹೈದರಾಬಾದ್‌ನ ತಾಜ್‌ ಕೃಷ್ಣಾ ಹೋಟೆಲ್‌ನಲ್ಲಿ ಮುಸ್ಲಿಂ ಸಂಪ್ರದಾಯದಂತೆ ಮದುವೆಯಾಗಿದ್ದರು. ಈ ಜೋಡಿಗೆ ಇಜಾನ್‌ ಎಂಬ ಪುತ್ರನೂ ಇದ್ದಾನೆ. ಮಲಿಕ್​ಗೆ ಡಿವೋರ್ಸ್ ಕೊಟ್ಟ ಬಳಿಕ ಸಾನಿಯಾ ದುಬೈನಲ್ಲೇ ವಾಸಿಸುತ್ತಿದ್ದಾರೆ. 2023ರ ಆಸ್ಟ್ರೇಲಿಯನ್ ಓಪನ್​ ಸಾನಿಯಾ ಪಾಲಿಗೆ ಕೊನೆಯ ಟೆನಿಸ್ ಟೂರ್ನಿ. ಕರ್ನಾಟಕದ ರೋಹನ್ ಬೋಪಣ್ಣ ಅವರೊಂದಿಗೆ ಮಿಶ್ರ ಡಬಲ್ಸ್​​ನಲ್ಲಿ ಕಣಕ್ಕಿಳಿದಿದ್ದ​ ಸಾನಿಯಾ ರನ್ನರ್​ ಅಪ್ ಆಗಿದ್ದರು.

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.