FIFA World Cup 2022: ಅಮೆರಿಕ-ಇಂಗ್ಲೆಂಡ್ ಪಂದ್ಯ ಡ್ರಾನಲ್ಲಿ ಅಂತ್ಯ; ಪೋಲೆಂಡ್ ವಿರುದ್ಧ ಮತ್ತೆ ಮ್ಯಾಜಿಕ್ ಮಾಡುತ್ತಾ ಸೌದಿ ಅರೇಬಿಯಾ?
ಫಿಫಾ ವಿಶ್ವಕಪ್‌ನಲ್ಲಿ ಇಂದು ಕೂಡ ನಾಲ್ಕು ಪಂದ್ಯಗಳನ್ನು ಆಡಲಾಗುತ್ತಿದ್ದು, ಅಮೆರಿಕ-ಇಂಗ್ಲೆಂಡ್ ನಡುವಿನ ಪಂದ್ಯ ಡ್ರಾ ನಲ್ಲಿ ಅಂತ್ಯಗೊಂಡಿದ್ದರೆ, ಆಸ್ಟ್ರೇಲಿಯಾ-ತುನಿಷಿಯಾ ವಿರುದ್ಧ ಪಂದ್ಯ ಈಗಾಗಲೇ ಆರಂಭವಾಗಿದೆ. ಅರ್ಜೆಂಟೀನಾ ವಿರುದ್ಧ ನಿರ್ಣಾಯಕ ಗೆಲುವು ದಾಖಲಿಸಿದ ಸೌದಿ ಅರೇಬಿಯಾ ಇಂದು ಪೋಲೆಂಡ್ ತಂಡವನ್ನು ಎದುರಿಸಲು ಸಿದ್ಧವಾಗಿದೆ.
ಕತಾರ್: ಫಿಫಾ ವಿಶ್ವಕಪ್‌ನಲ್ಲಿ ಇಂದು ಕೂಡ ನಾಲ್ಕು ಪಂದ್ಯಗಳು ನಡೆಯುತ್ತಿದ್ದು, ಅಮೆರಿಕ-ಇಂಗ್ಲೆಂಡ್ ನಡುವಿನ ಮೊದಲ ಪಂದ್ಯ ಡ್ರಾ ನಲ್ಲಿ ಅಂತ್ಯಗೊಂಡಿದ್ದರೆ, ಆಸ್ಟ್ರೇಲಿಯಾ-ತುನಿಷಿಯಾ ವಿರುದ್ಧ ಪಂದ್ಯ ಆರಂಭವಾಗಿದೆ.
ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 9.30ಕ್ಕೆ ಡೆನ್ಮಾರ್ಕ್ ವಿರುದ್ಧ ಫ್ರಾನ್ಸ್ ಸೆಣಿಸಿದರೆ, ಮೊದಲ ಪಂದ್ಯದಲ್ಲಿ ಅರ್ಜೆಂಟೀನಾ ವಿರುದ್ಧ ನಿರ್ಣಾಯಕ ಗೆಲುವು ದಾಖಲಿಸಿದ ಸೌದಿ ಅರೇಬಿಯಾ ಸಂಜೆ 6.30ಕ್ಕೆ ಪೋಲೆಂಡ್ ತಂಡವನ್ನು ಎದುರಿಸಲು ಸಿದ್ಧವಾಗಿದೆ.
ಈ ವಿಶ್ವಕಪ್‌ನಲ್ಲಿ ಇಲ್ಲಿಯವರೆಗೆ ಎರಡು ಪಂದ್ಯಗಳನ್ನು ಆಡಿರುವ ಇಂಗ್ಲೆಂಡ್, ಒಂದು ಗೆಲುವು ಮತ್ತು ಇನ್ನೊಂದರಲ್ಲಿ ಡ್ರಾದೊಂದಿಗೆ ಬಿ ಗುಂಪಿನಲ್ಲಿ ಅಗ್ರಸ್ಥಾನದಲ್ಲಿತ್ತು. ಇಂದಿನ ಪಂದ್ಯವನ್ನೂ ಇಂಗ್ಲೆಂಡ್ ಡ್ರಾ ನಲ್ಲಿ ಮುಗಿಸಿದೆ. ಇಂದಿನ ಪಂದ್ಯವನ್ನು ಗೆದ್ದಿದ್ದರೆ ಇಂಗ್ಲೆಂಡ್ ಸೂಪರ್ 16 ಸುತ್ತಿಗೆ ಅರ್ಹತೆ ಪಡೆಯುವ ಅವಕಾಶ ಇತ್ತು. ಆದರೆ ಅಮೆರಿಕ ಆಡಿದ ಮೂರು ಪಂದ್ಯಗಳು ಡ್ರಾನಲ್ಲಿ ಅಂತ್ಯಗೊಂಡಿವೆ. ಮತ್ತೊಂದೆಡೆ, ಸೂಪರ್ 16 ರೌಂಡ್ ರೇಸ್‌ನಲ್ಲಿ ನಿಲ್ಲಲು ಅಮೆರಿಕಕ್ಕೆ ಗೆಲುವು ಅನಿವಾರ್ಯವಾಗಿತ್ತು. ಆದರೆ ಇಂದಿನ ಪಂದ್ಯದಲ್ಲಿ ಅದು ಸಾಧ್ಯವಾಗಲಿಲ್ಲ.
ಮತ್ತೊಂದು ಪಂದ್ಯ ತುನಿಷಿಯಾ -ಆಸ್ಟ್ರೇಲಿಯಾ ನಡುವಿನ ಪಂದ್ಯ ನಡೆಯುತ್ತಿದೆ. ಪಂದ್ಯದ ಮೊದಲಾರ್ಧದಲ್ಲಿ ಆಸ್ಟ್ರೇಲಿಯಾ 1-0 ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿತ್ತು. ಈ ಎರಡು ತಂಡಗಳು ಇನ್ನೂ ವಿಶ್ವಕಪ್‌ಗೆ ಅರ್ಹತೆ ಪಡೆದಿಲ್ಲ. ಫ್ರಾನ್ಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ 4-1 ಗೋಲುಗಳ ಅಂತರದಿಂದ ಹೀನಾಯವಾಗಿ ಸೋತಿತ್ತು. ತುನಿಷಿಯಾ ವಿರುದ್ಧ ಪಂದ್ಯವನ್ನು ಗೆದ್ದು ಹಿಂದಿನ ಸೋಲಿನ ಕಹಿಯನ್ನು ಮರೆಯಲು ಆಸೀಸ್ ತಂಡ ಎದುರು ನೋಡುತ್ತಿದೆ. ಇನ್ನ ತುನಿಷಿಯಾ ಸ್ಟಾರ್ ಆಟಗಾರ್ತಿ ಎಲಿಸ್ ಸ್ಕೆರಿ ಮೇಲೆ ಹೆಚ್ಚು ಅವಲಂಬಿತವಾಗಿದೆ.
ಇಂದು ಸಂಜೆ 6.30ಕ್ಕೆ ಸೌದಿ ಅರೇಬಿಯಾ ಪೋಲೆಂಡ್ ವಿರುದ್ಧ ಸೆಣಸಲಿದೆ. ಈ ವಿಶ್ವಕಪ್‌ನಲ್ಲಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾದ ಅರ್ಜೆಂಟೀನಾ ವಿರುದ್ಧ ಸೌದಿ ಅರೇಬಿಯಾ ಭರ್ಜರಿ ಜಯ ಸಾಧಿಸಿತ್ತು. ಆ ಮೂಲಕ ಸಿ ಗುಂಪಿನಲ್ಲಿ ಅಗ್ರ ಸ್ಥಾನದಲ್ಲಿ ಉಳಿದಿದೆ. ಪೋಲೆಂಡ್ ವಿರುದ್ಧದ ಪಂದ್ಯದಲ್ಲೂ ಗೆಲುವಿನ ಪಯಣ ಮುಂದುವರಿಸಲು ಸೌದಿ ಅರೇಬಿಯಾ ಸಿದ್ದತೆಗಳನ್ನು ಮಾಡಿಕೊಳ್ಳುವ ಮೂಲಕ ಮೊದಲ ಬಾರಿಗೆ ವಿಶ್ವಕಪ್ ನ ಸೂಪರ್ 16 ಸುತ್ತಿಗೆ ಪ್ರವೇಶಿಸಲು ಆಶಿಸುತ್ತಿದೆ. ಆದರೆ ಸೌದಿ ಅರೇಬಿಯಾ ಪೋಲೆಂಡ್ ನಿಂದ ಕಠಿಣ ಪೈಪೋಟಿ ಎದುರಿಸುವ ಸಾಧ್ಯತೆ ಇದೆ.
ಇಂದು ನಡೆಯಲಿರುವ ನಾಲ್ಕನೇ ಪಂದ್ಯದಲ್ಲಿ ಡೆನ್ಮಾರ್ಕ್ ಫ್ರಾನ್ಸ್ ತಂಡವನ್ನು ಎದುರಿಸಲಿದೆ. ಡಿ ಗುಂಪಿನಲ್ಲಿ ಫ್ರಾನ್ಸ್ ಅಗ್ರಸ್ಥಾನದಲ್ಲಿದೆ. ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯ ವಿರುದ್ಧ 4-1 ಅಂತರದ ಜಯ ದಾಖಲಿಸಿತ್ತು. ಆ ವೇಗವನ್ನು ಇಂದಿನ ಪಂದ್ಯದಲ್ಲೂ ಮುಂದುವರಿಸಲು ಫ್ರಾನ್ಸ್ ಅಭಿಮಾನಿಗಳು ಬಯಸಿದ್ದಾರೆ. ಇಲ್ಲಿಯವರೆಗೆ, ಫ್ರಾನ್ಸ್ ಮತ್ತು ಡೆನ್ಮಾರ್ಕ್ ವಿಶ್ವಕಪ್‌ನಲ್ಲಿ ಎರಡು ಬಾರಿ ಮುಖಾಮುಖಿಯಾಗಿದ್ದು, ಫ್ರಾನ್ಸ್ ಎರಡೂ ಬಾರಿ ಗೆದ್ದಿದೆ.
ಇದು ಫಿಫಾ ವಿಶ್ವಕಪ್‌ನ ಏಳನೇ ದಿನದ ವೇಳಾಪಟ್ಟಿ.
ಇಂಗ್ಲೆಂಡ್ vs ಅಮೆರಿಕ (0-0)
ತುನಿಷಿಯಾ vs ಆಸ್ಟ್ರೇಲಿಯಾ (ಪ್ರಗತಿಯಲ್ಲಿ)
ಸೌದಿ ಅರೇಬಿಯಾ vs ಪೋಲೆಂಡ್ 6.30 PM
ಫ್ರಾನ್ಸ್ vs ಡೆನ್ಮಾರ್ಕ್ 9.30 PM