ಕನ್ನಡ ಸುದ್ದಿ  /  Sports  /  Fifa World Cup 2022 Schedule Today

FIFA World Cup 2022: ಫುಟ್ಬಾಲ್ ವಿಶ್ವಕಪ್‌ನಲ್ಲಿ ಇಂದಿನ ಪಂದ್ಯಗಳಾವುವು? ಇಲ್ಲಿದೆ ಲೈವ್ ಸ್ಟ್ರೀಮಿಂಗ್ ವಿವರ

ಅತಿಥೇಯ ಕತಾರ್ ಅಭಿಮಾನಿಗಳಿಗೆ ಇಂದು ಭರ್ಜರಿ ಮನರಂಜನೆ ಸಿಗಲಿದೆ. ಏಕೆಂದರೆ ಅತಿಥೇಯರ ತಂಡ ಕೂಡಾ ಇಂದಿನ ಪಂದ್ಯದಲ್ಲಿ ಆಡಲಿದೆ. ವಿಶ್ವಕಪ್ 2022ರ ಆರಂಭಿಕ ಪಂದ್ಯದಲ್ಲಿ ಸೋಲನ್ನು ಅನುಭವಿಸಿದ ಬಳಿಕ, ಮಧ್ಯಪ್ರಾಚ್ಯ ರಾಷ್ಟ್ರವು ಇಂದಿನ ಪಂದ್ಯದಲ್ಲಿ ಪುಟಿದೇಳಲು ಎದುರು ನೋಡುತ್ತಿದೆ.

ವಿಶ್ವಕಪ್‌ನಲ್ಲಿ ಇಂದು ನಾಲ್ಕು ಪಂದ್ಯಗಳು ನಡೆಯಲಿವೆ
ವಿಶ್ವಕಪ್‌ನಲ್ಲಿ ಇಂದು ನಾಲ್ಕು ಪಂದ್ಯಗಳು ನಡೆಯಲಿವೆ (REUTERS)

ಕತಾರ್‌: ಫಿಫಾ ವಿಶ್ವಕಪ್‌ನಲ್ಲಿ ನಿನ್ನೆ ನಡೆದ ಪಂದ್ಯಗಳಲ್ಲಿ ಗೋಲ್ ಮೆಷಿನ್ ಕ್ರಿಸ್ಟಿಯಾನೊ ರೊನಾಲ್ಡೊ ನೇತೃತ್ವದ ಪೋರ್ಚುಗಲ್‌ ಗೆಲುವಿನ ಆರಂಭ ಪಡೆಯಿತು. ಮತ್ತೊಂದೆಡೆ ಬಲಿಷ್ಠ ಬ್ರೆಜಿಲ್‌ ತಂಡ ಕೂಡಾ ವಿಜಯದ ಅಭಿಯಾನ ಆರಂಭಿಸಿತು. ಇಂದು ಕೂಡಾ ಫಿಫಾ ವಿಶ್ವಕಪ್‌ನಲ್ಲಿ ಅಭಿಮಾನಿಗಳಿಗೆ ಭರಪೂರ ಮನರಂಜನೆ ದೊರಕಲಿದೆ. ನಿನ್ನೆಯಂತೆಯೇ ಒಟ್ಟು ನಾಲ್ಕು ಪಂದ್ಯಗಳು ಇಂದು ನಡೆಯಲಿವೆ.

ಅತಿಥೇಯ ಕತಾರ್ ಅಭಿಮಾನಿಗಳಿಗೆ ಇಂದು ಭರ್ಜರಿ ಮನರಂಜನೆ ಸಿಗಲಿದೆ. ಏಕೆಂದರೆ ಅತಿಥೇಯರ ತಂಡ ಕೂಡಾ ಇಂದಿನ ಪಂದ್ಯದಲ್ಲಿ ಆಡಲಿದೆ. ವಿಶ್ವಕಪ್ 2022ರ ಆರಂಭಿಕ ಪಂದ್ಯದಲ್ಲಿ ಸೋಲನ್ನು ಅನುಭವಿಸಿದ ಬಳಿಕ, ಮಧ್ಯಪ್ರಾಚ್ಯ ರಾಷ್ಟ್ರವು ಇಂದಿನ ಪಂದ್ಯದಲ್ಲಿ ಪುಟಿದೇಳಲು ಎದುರು ನೋಡುತ್ತಿದೆ.

ನೆದರ್ಲ್ಯಾಂಡ್ಸ್, ಸೆನೆಗಲ್, ಇಂಗ್ಲೆಂಡ್ ಮತ್ತು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ ಕೂಡಾ ಇಂದಿನ ಫಿಫಾ ವಿಶ್ವಕಪ್ ಗುಂಪು ಹಂತದ ಪಂದ್ಯಗಳಲ್ಲಿ ಭಾಗವಹಿಸಲಿವೆ. ಇಂದಿನ ನಾಲ್ಕು ಗುಂಪು ಹಂತದ ಪಂದ್ಯಗಳ ಲೈವ್ ಸ್ಟ್ರೀಮಿಂಗ್ ಕುರಿತ ವಿವರಗಳು ಇಲ್ಲಿವೆ.

ಇಂದಿನ ಪಂದ್ಯಗಳು ಯಾವುವು?

ಇಂದು ಒಟ್ಟು ನಾಲ್ಕು ಪಂದ್ಯಗಳು ನಡೆಯಲಿವೆ. ಇದರಲ್ಲಿ ಕೊನೆಯ ಪಂದ್ಯವು ಭಾರತೀಯ ಕಾಲಮಾನದ ಪ್ರಕಾರ ನಾಳೆ(ಇಂದು ಮಧ್ಯರಾತ್ರಿ) ನಡೆಯಲಿದೆ. ಇಂದಿನ ಮೊದಲ ಪಂದ್ಯದಲ್ಲಿ ವೇಲ್ಸ್ ಮತ್ತು ಇರಾನ್ ತಂಡಗಳು ಕಣಕ್ಕಿಳಿದರೆ, ಎರಡನೇ ಪಂದ್ಯದಲ್ಲಿ ಕತಾರ್ ಹಾಗೂ ಸೆನೆಗಲ್ ಹೋರಾಡಲಿವೆ. ಮೂರನೇ ಪಂದ್ಯದಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧ ಈಕ್ವೆಡಾರ್ ಕಣಕ್ಕಿಳಿದರೆ, ಅಂತಿಮ ಪಂದ್ಯದಲ್ಲಿ ಇಂಗ್ಲೆಂಡ್‌ಗೆ ಯುಎಸ್ಎ ಸವಾಲೆಸೆಯಲಿದೆ.

ಪಂದ್ಯದ ಸಮಯ ಯಾವುದು?

ಇಂದು ಒಟ್ಟು ನಾಲ್ಕು ಪಂದ್ಯಗಳು ನಡೆಯುತ್ತಿವೆ. ಇವುಗಳಲ್ಲಿ ಮೊದಲ ಮೂರು ಪಂದ್ಯಗಳು ಭಾರತೀಯ ಕಾಲಮಾನದ ಪ್ರಕಾರ ಇಂದು, ಅಂದರೆ ನವೆಂಬರ್ 25ರಂದು ನಡೆಯಲಿದೆ. ಆದರೆ ಸಂಜೆಯ ಅಂತಿಮ ಪಂದ್ಯ ಭಾರತೀಯ ಕಾಲಮಾನದ ಪ್ರಕಾರ ಮಧ್ಯರಾತ್ರಿಯ ಬಳಿಕ ನಡೆಯಲಿದೆ.

ಭಾರತದಲ್ಲಿ ವೇಲ್ಸ್ ಮತ್ತು ಇರಾನ್ ನಡುವಿನ ಪಂದ್ಯವು ಮಧ್ಯಾಹ್ನ 3.30ಕ್ಕೆ ಆರಂಭವಾಗುತ್ತದೆ. ಕತಾರ್ ಮತ್ತು ಸೆನೆಗಲ್ ಪಂದ್ಯ ಸಂಜೆ 6.30ಕ್ಕೆ ನಡೆಯಲಿದೆ. ನೆದರ್ಲ್ಯಾಂಡ್ಸ್ ಮತ್ತು ಈಕ್ವೆಡಾರ್ ಪಂದ್ಯ ರಾತ್ರಿ 9.30ಕ್ಕೆ ಆರಂಭವಾದರೆ, ಇಂಗ್ಲೆಂಡ್ ವಿರುದ್ಧದ ಯುಎಸ್ಎ ಪಂದ್ಯವು ಮಧ್ಯರಾತ್ರಿ 12:30ಕ್ಕೆ ನಡೆಯಲಿದೆ.

ಪಂದ್ಯ ನಡೆಯುವ ಸ್ಥಳ ಯಾವುದು?

ವೇಲ್ಸ್ ಮತ್ತು ಇರಾನ್ ನಡುವಿನ ಮೊದಲ ಪಂದ್ಯ ಅಹ್ಮದ್ ಬಿನ್ ಅಲಿ ಸ್ಟೇಡಿಯಂನಲ್ಲಿ ನಡೆಯಲಿದೆ. ಕತಾರ್ ಹಾಗೂ ಸೆನೆಗಲ್ ನಡುವಿನ ಪಂದ್ಯವು ಅಲ್ ತುಮಾಮಾ ಕ್ರೀಡಾಂಗಣದಲ್ಲಿ ನಡೆಯಲಿದೆ. ಈಕ್ವೆಡಾರ್ ವಿರುದ್ಧ ನೆದರ್ಲ್ಯಾಂಡ್ಸ್ ಪಂದ್ಯಕ್ಕೆ ಖಲೀಫಾ ಅಂತಾರಾಷ್ಟ್ರೀಯ ಸ್ಟೇಡಿಯಂ ಆತಿಥ್ಯ ವಹಿಸಿದರೆ, ಇಂಗ್ಲೆಂಡ್ ಮತ್ತು ಯುಎಸ್ಎ ಪಂದ್ಯಕ್ಕೆ ಅಲ್ ಬೈಟ್ ಸ್ಟೇಡಿಯಂ ಸಿದ್ಧಗೊಂಡಿದೆ.

ಇಂದಿನ ಪಂದ್ಯಗಳ ಲೈವ್ ಸ್ಟ್ರೀಮಿಂಗ್ ವಿವರ

ಇಂದಿನ ಎಲ್ಲಾ ನಾಲ್ಕು ಪಂದ್ಯಗಳು Sports18 ಮತ್ತು Sports18 HD ಚಾನೆಲ್‌ಗಳಲ್ಲಿ ಪ್ರಸಾರ ಮಾಡಲಾಗುತ್ತದೆ. ಇದರೊಂದಿಗೆ ಈ ಪಂದ್ಯಗಳನ್ನು ಜಿಯೋ ಸಿನಿಮಾ ಅಪ್ಲಿಕೇಶನ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಮಾಡಲಾಗುತ್ತದೆ.

ಗುರುವಾರದ ಪಂದ್ಯಗಳ ಫಲಿತಾಂಶ

ವಿಶ್ವಕಪ್‌ನಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ ಪೋರ್ಚುಗಲ್ ರೋಚಕ ಜಯದೊಂದಿಗೆ ಅಭಿಯಾನ ಆರಂಭಿಸಿದೆ. ಮತ್ತೊಂದೆಡೆ ಫುಟ್ಬಾಲ್‌ನ ಅತ್ಯಂತ ಯಶಸ್ವಿ ತಂಡ ಬ್ರೆಜಿಲ್‌ ಕೂಡಾ ಜಯದೊಂದಿಗೆ ವಿಶ್ವಕಪ್‌ ಪಯಣ ಆರಂಭಿಸಿದೆ. ಕ್ಯಾಮರೂನ್ ವಿರುದ್ಧ ಸ್ವಿಟ್ಜರ್ಲೆಂಡ್‌ಗೆ ಗೆಲುವಿನ ಆರಂಭ ಕಂಡರೆ, ಉರುಗ್ವೆ ಮತ್ತು ದಕ್ಷಿಣ ಕೊರಿಯಾ ನಡುವಿನ ಪಂದ್ಯವು ಯಾವುದೇ ಗೋಲುಗಳಿಲ್ಲದೆ ನೀರಸ ಡ್ರಾದಲ್ಲಿ ಅಂತ್ಯವಾಯ್ತು.

ಈ ಬಾರಿ ಫುಟ್ಬಾಲ್‌ ವಿಶ್ವಕಪ್‌ನಲ್ಲಿ ಒಟ್ಟು 32 ತಂಡಗಳು ಭಾಗವಹಿಸುತ್ತಿವೆ.

ವಿಭಾಗ