FIFA World Cup 2022: ಕಾಲ್ಚೆಂಡು ಕದನದಲ್ಲಿ ಇಂದು ಫ್ರಾನ್ಸ್ ಫೈಟ್, ಮೆಸ್ಸಿ ಬಳಗಕ್ಕೂ ಪೋಲೆಂಡ್ ಸವಾಲು
ಕನ್ನಡ ಸುದ್ದಿ  /  ಕ್ರೀಡೆ  /  Fifa World Cup 2022: ಕಾಲ್ಚೆಂಡು ಕದನದಲ್ಲಿ ಇಂದು ಫ್ರಾನ್ಸ್ ಫೈಟ್, ಮೆಸ್ಸಿ ಬಳಗಕ್ಕೂ ಪೋಲೆಂಡ್ ಸವಾಲು

FIFA World Cup 2022: ಕಾಲ್ಚೆಂಡು ಕದನದಲ್ಲಿ ಇಂದು ಫ್ರಾನ್ಸ್ ಫೈಟ್, ಮೆಸ್ಸಿ ಬಳಗಕ್ಕೂ ಪೋಲೆಂಡ್ ಸವಾಲು

ಇಂದಿನ ಪಂದ್ಯಗಳುಟುನೀಶಿಯಾ ಮತ್ತು ಫ್ರಾನ್ಸ್ಆಸ್ಟ್ರೇಲಿಯಾ ವಿರುದ್ಧ ಡೆನ್ಮಾರ್ಕ್ಪೋಲೆಂಡ್ ಮತ್ತು ಅರ್ಜೆಂಟೀನಾಸೌದಿ ಅರೇಬಿಯಾ ವಿರುದ್ಧ ಮೆಕ್ಸಿಕೋ

16ರ ಸುತ್ತಿಗೆ ಅರ್ಹತೆಗಾಗಿ ಅರ್ಜೆಂಟೀನಾ ತಂಡವು ಪೋಲೆಂಡ್ ಅನ್ನು ಎದುರಿಸುತ್ತಿದೆ
16ರ ಸುತ್ತಿಗೆ ಅರ್ಹತೆಗಾಗಿ ಅರ್ಜೆಂಟೀನಾ ತಂಡವು ಪೋಲೆಂಡ್ ಅನ್ನು ಎದುರಿಸುತ್ತಿದೆ (AP)

ಈಗಾಗಲೇ 16ರ ಸುತ್ತಿನಲ್ಲಿ ಸ್ಥಾನ ಕಾಯ್ದಿರಿಸಿಕೊಂಡಿರುವ ಹಾಲಿ ಚಾಂಪಿಯನ್ ಫ್ರಾನ್ಸ್, ಇಂದು ಕತಾರ್‌ನ ಎಜುಕೇಶನ್ ಸಿಟಿ ಸ್ಟೇಡಿಯಂನಲ್ಲಿ ನಡೆಯಲಿರುವ ಫಿಫಾ ವಿಶ್ವಕಪ್ 2022ರ ಡಿ ಗುಂಪಿನ ತಮ್ಮ ಅಂತಿಮ ಹಣಾಹಣಿಯಲ್ಲಿ ಟುನೀಶಿಯಾವನ್ನು ಎದುರಿಸಲಿದೆ. ಇದೇ ಗುಂಪಿನ ಮತ್ತೊಂದು ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ಡೆನ್ಮಾರ್ಕ್ ತಂಡವನ್ನು ಅಲ್ ಜನೌಬ್ ಸ್ಟೇಡಿಯಂನಲ್ಲಿ ಎದುರಿಸಲಿದೆ. ಈ ಎರಡೂ ತಂಡಗಳು ಟುನೀಶಿಯಾ ಜೊತೆಗೆ ಎರಡನೇ ಸ್ಥಾನವನ್ನು ಭದ್ರಪಡಿಸಲು ಎದುರು ನೋಡುತ್ತಿವೆ.

ಈ ನಡುವೆ ಗ್ರೂಪ್ Cಯ ಅಂತಿಮ ಪಂದ್ಯದಲ್ಲಿ ಭಾರತೀಯರ ಫೇವರೆಟ್‌ ಅರ್ಜೆಂಟೀನಾ ತಂಡವು ಪೋಲೆಂಡ್ ತಂಡವನ್ನು 974 ಸ್ಟೇಡಿಯಂನಲ್ಲಿ ಎದುರಿಸಲಿದೆ. ಮತ್ತೊಂದು ಅಮೋಘ ಗೆಲುವನ್ನು ದಾಖಲಿಸುವ ಮೂಲಕ, ಮೆಸ್ಸಿ ಬಳಗ 16ರ ಸುತ್ತಿಗೆ ಅರ್ಹತೆ ಪಡೆಯುವ ಗುರಿಯನ್ನು ಹೊಂದಿದೆ. ಏತನ್ಮಧ್ಯೆ, ಲುಸೇಲ್ ಕ್ರೀಡಾಂಗಣದಲ್ಲಿ ನಡೆಯುವ ಸೆಣಸಾಟದಲ್ಲಿ ಅರ್ಜೆಂಟೀನಾಗೆ ಶಾಕ್‌ ನೀಡಿದ್ದ ಸೌದಿ ಅರೇಬಿಯಾ, ಮೆಕ್ಸಿಕೋವನ್ನು ಎದುರಿಸುತ್ತಿದೆ.

ಸಿ ಗುಂಪಿನಿಂದ ಇದುವರೆಗೆ ಯಾವುದೇ ತಂಡವು ನಾಕೌಟ್‌ಗೆ ಅರ್ಹತೆ ಪಡೆದಿಲ್ಲ. ಈ ಗುಂಪಿನಲ್ಲಿ ನಾಲ್ಕು ಅಂಕಗಳೊಂದಿಗೆ ಪೋಲೆಂಡ್ ಅಗ್ರಸ್ಥಾನದಲ್ಲಿದೆ. ಅರ್ಜೆಂಟೀನಾ ಮೂರು ಅಂಕಗಳೊಂದಿಗೆ ನಂತರದ ಸ್ಥಾನದಲ್ಲಿದೆ. ಸೌದಿ ಅರೇಬಿಯಾ ಕೂಡಾ ಮೂರು ಪಾಯಿಂಟ್‌ಗಳನ್ನು ಹೊಂದಿದ್ದರೂ, ಕಡಿಮೆ ಗೋಲುಗಳ ಲೆಕ್ಕಾಚಾರದ ಪ್ರಕಾರ ಲಿಯೋನೆಲ್ ಮೆಸ್ಸಿ ಬಳಗಕ್ಕಿಂತ ಕೆಳಗಿದೆ. ಅತ್ತ ಮೆಕ್ಸಿಕೊ ಒಂದು ಅಂಕದೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿ ಕೂತಿದೆ. ಹೀಗಾಗಿ ಇಂದಿನ ಪಂದ್ಯ ಪ್ರತಿ ತಂಡಕ್ಕೂ ಮಹತ್ವದ್ದು.

ಇಂದಿನ ಪಂದ್ಯಗಳು ಯಾವುವು?

ಟುನೀಶಿಯಾ ಮತ್ತು ಫ್ರಾನ್ಸ್

ಆಸ್ಟ್ರೇಲಿಯಾ ವಿರುದ್ಧ ಡೆನ್ಮಾರ್ಕ್

ಪೋಲೆಂಡ್ ಮತ್ತು ಅರ್ಜೆಂಟೀನಾ

ಸೌದಿ ಅರೇಬಿಯಾ ವಿರುದ್ಧ ಮೆಕ್ಸಿಕೋ

ಇಂದಿನ ಫಿಫಾ ವಿಶ್ವಕಪ್ 2022 ಪಂದ್ಯಗಳು ಎಲ್ಲಿ ನಡೆಯುತ್ತವೆ?

ಟುನೀಶಿಯಾ ಮತ್ತು ಫ್ರಾನ್ಸ್ ನಡುವಿನ ಪಂದ್ಯವು ಕತಾರ್‌ನ ಎಜುಕೇಶನ್ ಸಿಟಿ ಸ್ಟೇಡಿಯಂನಲ್ಲಿ ನಡೆಯಲಿದೆ. ಆಸ್ಟ್ರೇಲಿಯಾ ಮತ್ತು ಡೆನ್ಮಾರ್ಕ್ ನಡುವಿನ ಇಂದಿನ ಎರಡನೇ ಪಂದ್ಯವು ಅಲ್ ಜನೌಬ್ ಸ್ಟೇಡಿಯಂ ನಡೆಯಲಿದೆ. ಪೋಲೆಂಡ್ ಹಾಗೂ ಅರ್ಜೆಂಟೀನಾ ಪಂದ್ಯವು ಸ್ಟೇಡಿಯಂ 974ನಲ್ಲಿ ನಡೆದರೆ, ಸೌದಿ ಅರೇಬಿಯಾ ಮತ್ತು ಮೆಕ್ಸಿಕೋ ಪಂದ್ಯವು ಲುಸೇಲ್ ಸ್ಟೇಡಿಯಂನಲ್ಲಿ ನಡೆಯಲಿದೆ.

ಪಂದ್ಯದ ಸಮಯ ಯಾವುದು?

ಟುನೀಶಿಯಾ vs ಫ್ರಾನ್ಸ್ ಮತ್ತು ಆಸ್ಟ್ರೇಲಿಯಾ vs ಡೆನ್ಮಾರ್ಕ್ ಪಂದ್ಯಗಳು, ಭಾರತೀಯ ಕಾಲಮಾನದ ಪ್ರಕಾರ ಇಂದು ಸಂಜೆ 8:30ಕ್ಕೆ ನಿಗದಿಪಡಿಸಲಾಗಿದೆ. ಮತ್ತೊಂದೆಡೆ ಪೋಲೆಂಡ್ ಮತ್ತು ಅರ್ಜೆಂಟೀನಾ ಹಾಗೂ ಸೌದಿ ಅರೇಬಿಯಾ ಮತ್ತು ಮೆಕ್ಸಿಕೋ ನಡುವಿನ ಪಂದ್ಯಗಳು ಇಂದು ತಡರಾತ್ರಿ 12:30ಕ್ಕೆ ನಡೆಯಲಿದೆ. ಕತಾರ್‌ನಲ್ಲಿ ಅದು ಈ ದಿನಕ್ಕೆ ಸೇರಿದರೆ, ಭಾರತೀಯ ಕಾಲಮಾನದ ಪ್ರಕಾರ ಇದು ಗುರುವಾರಕ್ಕೆ ಸೇರುತ್ತದೆ.

ಇಂದಿನ ಪಂದ್ಯಗಳ ಲೈವ್ ಸ್ಟ್ರೀಮಿಂಗ್ ವಿವರ

ಇಂದಿನ ಎಲ್ಲಾ ನಾಲ್ಕು ಪಂದ್ಯಗಳು Sports18 ಮತ್ತು Sports18 HD ಚಾನೆಲ್‌ಗಳಲ್ಲಿ ಪ್ರಸಾರ ಮಾಡಲಾಗುತ್ತದೆ. ಇದರೊಂದಿಗೆ ಈ ಪಂದ್ಯಗಳನ್ನು ಜಿಯೋ ಸಿನಿಮಾ ಅಪ್ಲಿಕೇಶನ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಮಾಡಲಾಗುತ್ತದೆ. ಇಷ್ಟೇ ಅಲ್ಲದೆ https://www.hindustantimes.com/sports/football ನಲ್ಲಿ ಲೈವ್‌ ಅಪ್ಡೇಟ್‌ ಅನ್ನು ನೀವು ಅನುಸರಿಸಬಹುದು.

ನಿನ್ನೆಯ ಪಂದ್ಯದ ಫಲಿತಾಂಶ

ನಿನ್ನೆ ನಡೆದ ಪಂದ್ಯದಲ್ಲಿ ಈಕ್ವೆಡಾರ್‌ ತಂಡದ ವಿರುದ್ಧ ಸೆನೆಗಲ್‌ ಜಯ ಗಳಿಸಿದರೆ, ಅತಿಥೇಯ ಕತಾರ್‌ ವಿರುದ್ಧ ನೆದರ್ಲೆಂಡ್ಸ್‌ 2-0 ಗೋಲುಗಳಿಂದ ಜಯಭೇರಿ ಬಾರಿಸಿತು. ಮತ್ತೊಂದೆಡೆ ಇರಾನ್‌ ವಿರುದ್ಧ ಯುಎಸ್‌ಎ ಜಯ ಸಾಧಿಸಿದರೆ, ವೇಲ್ಸ್‌ ವಿರುದ್ಧ ಇಂಗ್ಲೆಂಡ್‌ 3-0 ಅಂತರದಿಂದ ಗೆದ್ದು ಬೀಗಿತು.

Whats_app_banner

ವಿಭಾಗ

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.