AFC Asian Cup: ಏಷ್ಯನ್ ಕಪ್‌ಗೆ ಭಾರತ ಫುಟ್ಬಾಲ್ ತಂಡ ಪ್ರಕಟ; ಟೀಮ್ ಸೇರಿಕೊಂಡ ಸಮದ್
ಕನ್ನಡ ಸುದ್ದಿ  /  ಕ್ರೀಡೆ  /  Afc Asian Cup: ಏಷ್ಯನ್ ಕಪ್‌ಗೆ ಭಾರತ ಫುಟ್ಬಾಲ್ ತಂಡ ಪ್ರಕಟ; ಟೀಮ್ ಸೇರಿಕೊಂಡ ಸಮದ್

AFC Asian Cup: ಏಷ್ಯನ್ ಕಪ್‌ಗೆ ಭಾರತ ಫುಟ್ಬಾಲ್ ತಂಡ ಪ್ರಕಟ; ಟೀಮ್ ಸೇರಿಕೊಂಡ ಸಮದ್

AFC Asian Cup: ಎಎಫ್‌ಸಿ ಏಷ್ಯನ್ ಕಪ್‌ನಲ್ಲಿ ಭಾರತ ಐದನೇ ಬಾರಿಗೆ ಆಡಲು ಸಜ್ಜಾಗಿದೆ. ಕತಾರ್‌ನಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಛೆಟ್ರಿ ಬಳಗವು ಆರಂಭಿಕ ಬಿ ಗುಂಪಿನ ಪಂದ್ಯವನ್ನು ಜನವರಿ 13ರಂದು ಆಡಲಿದೆ.

ಸಹಲ್ ಅಬ್ದುಲ್ ಸಮದ್
ಸಹಲ್ ಅಬ್ದುಲ್ ಸಮದ್

ಮುಂಬರುವ ಎಎಫ್‌ಸಿ ಏಷ್ಯನ್ ಕಪ್‌ಗೆ (AFC Asian Cup) 26 ಸದಸ್ಯರ ಭಾರತ ಫುಟ್ಬಾಲ್ ತಂಡವನ್ನು ಪ್ರಕಟಿಸಲಾಗಿದೆ. ಪ್ರಮುಖ ಮಿಡ್‌ಫೀಲ್ಡರ್‌ಗಳು ಗಾಯದ ಸಮಸ್ಯೆ ಅನುಭವಿಸುತ್ತಿದ್ದು, ಸಹಲ್ ಅಬ್ದುಲ್ ಸಮದ್ ತಂಡ ಸೇರಿಕೊಂಡಿದ್ದಾರೆ. ಅತ್ತ ಫಿಟ್‌ನೆಸ್‌ಗೆ ಸಮಸ್ಯೆಗಳಿಂದಾಗಿ ಜೆಕ್ಸನ್ ಸಿಂಗ್ ಮತ್ತು ಗ್ಲಾನ್ ಮಾರ್ಟಿನ್ಸ್ ಗೂಡಾ ಹೊರಗುಳಿದಿದ್ದಾರೆ.

ನವೆಂಬರ್‌ನಲ್ಲಿ ಭುಜದ ಗಾಯಕ್ಕೆ ತುತ್ತಾದ ಟಾಪ್ ಡಿಫೆನ್ಸಿವ್ ಮಿಡ್‌ಫೀಲ್ಡರ್ ಜೆಕ್ಸನ್ ತಂಡ ಸೇರಿಕೊಳ್ಳುವ ಕುರಿತು ಮೊದಲೇ ಅನುಮಾನಗಳಿದ್ದವು. ಮತ್ತೊಂದೆಡೆ ಈ ತಿಂಗಳ ಆರಂಭದಲ್ಲಿ ಗಾಯಾಳುವಾಗಿದ್ದ ಸಮದ್ ರಾಷ್ಟ್ರೀಯ ತಂಡ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಭಾರತೀಯ ಹಿರಿಯ ಪುರುಷರ ತಂಡದ ಮುಖ್ಯ ಕೋಚ್ ಇಗೊರ್ ಸ್ಟಿಮ್ಯಾಕ್ ತಂಡವನ್ನು ಪ್ರಕಟಿಸಿದ್ದಾರೆ. ಸುನಿಲ್ ಛೆಟ್ರಿ ನಾಯಕತ್ವದಲ್ಲಿ ತಂಡ ಎಎಫ್‌ಸಿ ಏಷ್ಯನ್ ಕಪ್‌ ಆಡಲಿದೆ.

ಇದನ್ನೂ ಓದಿ | 2034ರ ಫಿಫಾ ವಿಶ್ವಕಪ್‌ಗೆ ಭಾರತ ಸಹ ಆತಿಥ್ಯ ವಹಿಸುತ್ತಾ? ಸೌದಿ ಫುಟ್ಬಾಲ್ ಫೆಡರೇಶನ್ ಅಧ್ಯಕ್ಷರ ಸ್ಪಷ್ಟನೆ ಹೀಗಿದೆ

ಏಷ್ಯನ್ ಕಪ್‌ನಲ್ಲಿ ಭಾರತ ಐದನೇ ಬಾರಿಗೆ ಆಡಲು ಸಜ್ಜಾಗಿದೆ. ಕತಾರ್‌ನಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಛೆಟ್ರಿ ಬಳಗವು ಆರಂಭಿಕ ಬಿ ಗುಂಪಿನ ಪಂದ್ಯವನ್ನು ಜನವರಿ 13ರಂದು ಆಡಲಿದೆ. ಅಲ್ ರಯಾನ್‌ನ ಅಹ್ಮದ್ ಬಿನ್ ಅಲಿ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ವಿರುದ್ಧ ಅಭಿಯಾನ ಆರಂಭಿಸಲಿದೆ. ಜನವರಿ 18ರಂದು ಅದೇ ಮೈದಾನದಲ್ಲಿ ಉಜ್ಬೇಕಿಸ್ತಾನವನ್ನು ಎದುರಿಸಲಿದೆ. ಆ ಬಳಿಕ ಜನವರಿ 23 ರಂದು ಸಿರಿಯಾ ವಿರುದ್ಧ ಅಲ್ ಖೋರ್‌ನ ಅಲ್ ಬೇಟ್ ಕ್ರೀಡಾಂಗಣದಲ್ಲಿ ಆಡಲಿದೆ.

ಭಾರತ ತಂಡಕ್ಕೆ ಕತಾರ್‌ನಲ್ಲಿ ಆಡಿದ ಅನುಭವವಿದೆ. 2022 ಫಿಫಾ ವಿಶ್ವಕಪ್ ಅರ್ಹತಾ ಪಂದ್ಯಗಳಲ್ಲಿ ನಾಲ್ಕು ಪಂದ್ಯಗಳನ್ನು ತಂಡ ಇಲ್ಲಿ ಆಡಿದೆ. ಇದಲ್ಲದೆ, ಕತಾರ್‌ನಲ್ಲಿ ನಡೆದ 2011ರ ಎಎಫ್‌ಸಿ ಏಷ್ಯನ್ ಕಪ್‌ನಲ್ಲಿ ಛೆಟ್ರಿ ಮತ್ತು ಗುರುಪ್ರೀತ್ ಸಿಂಗ್ ಸಂಧು ಭಾರತ ತಂಡದ ಭಾಗವಾಗಿದ್ದರು.

ಇದನ್ನೂ ಓದಿ | ಒಲಿಂಪಿಕ್ಸ್ ಸಿದ್ಧತೆ; ಭಾರತದಲ್ಲಿ ಕುಸ್ತಿ ಚಟುವಟಿಕೆ ಪುನರಾರಂಭಿಸಲು ಕ್ರೀಡಾ ಸಚಿವಾಲಯಕ್ಕೆ ಬಜರಂಗ್ ಪುನಿಯಾ ಒತ್ತಾಯ

ಭಾರತ ತಂಡ ಹೀಗಿದೆ

ಗೋಲ್‌ಕೀಪರ್‌ಗಳು: ಅಮರಿಂದರ್ ಸಿಂಗ್, ಗುರುಪ್ರೀತ್ ಸಿಂಗ್ ಸಂಧು, ವಿಶಾಲ್ ಕೈತ್.

ಡಿಫೆಂಡರ್ಸ್: ಆಕಾಶ್ ಮಿಶ್ರಾ, ಲಾಲ್ಚುಂಗ್ನುಂಗಾ, ಮೆಹ್ತಾಬ್ ಸಿಂಗ್, ನಿಖಿಲ್ ಪೂಜಾರಿ, ಪ್ರೀತಮ್ ಕೋಟಾಲ್, ರಾಹುಲ್ ಭೇಕೆ, ಸಂದೇಶ್ ಜಿಂಗನ್, ಸುಭಾಶಿಶ್ ಬೋಸ್.

ಮಿಡ್‌ಫೀಲ್ಡರ್‌ಗಳು: ಅನಿರುದ್ಧ್ ಥಾಪಾ, ಬ್ರಾಂಡನ್ ಫೆರ್ನಾಂಡಿಸ್, ದೀಪಕ್ ತಂಗ್ರಿ, ಲಾಲೆಂಗ್ಮಾವಿಯಾ ರಾಲ್ಟೆ, ಲಿಸ್ಟನ್ ಕೊಲಾಕೊ, ನವೋರೆಮ್ ಮಹೇಶ್ ಸಿಂಗ್, ಸಹಲ್ ಅಬ್ದುಲ್ ಸಮದ್, ಸುರೇಶ್ ಸಿಂಗ್ ವಾಂಗ್ಜಮ್, ಉದಾಂತ ಸಿಂಗ್.

ಫಾರ್ವರ್ಡ್ಸ್: ಇಶಾನ್ ಪಂಡಿತ, ಲಾಲಿಯನ್‌ಜುವಾಲಾ ಚಾಂಗ್ಟೆ, ಮನ್‌ವಿರ್ ಸಿಂಗ್, ರಾಹುಲ್ ಕನ್ನೊಲಿ ಪ್ರವೀಣ್, ಸುನಿಲ್ ಛೆಟ್ರಿ, ವಿಕ್ರಮ್ ಪರತಾಪ್ ಸಿಂಗ್.

ವಿಡಿಯೋ ನೋಡಿ | ಕಾಟೇರ ಸಂಭ್ರಮ; ಬಿರಿಯಾನಿ ತಿಂದು ಕುಣಿದು ಕುಪ್ಪಳಿಸಿದ ಡಿ ಬಾಸ್ ಫ್ಯಾನ್ಸ್

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.