Lionel Messi: ಹೊಸ ಬಾಡಿಗಾರ್ಡ್ ನೇಮಿಸಿಕೊಂಡ ಲಿಯೊನೆಲ್ ಮೆಸ್ಸಿ; ಈತ ಎಂಎಂಎ ಫೈಟರ್, ಮಾಜಿ ಕಮಾಂಡೊ
ಕನ್ನಡ ಸುದ್ದಿ  /  ಕ್ರೀಡೆ  /  Lionel Messi: ಹೊಸ ಬಾಡಿಗಾರ್ಡ್ ನೇಮಿಸಿಕೊಂಡ ಲಿಯೊನೆಲ್ ಮೆಸ್ಸಿ; ಈತ ಎಂಎಂಎ ಫೈಟರ್, ಮಾಜಿ ಕಮಾಂಡೊ

Lionel Messi: ಹೊಸ ಬಾಡಿಗಾರ್ಡ್ ನೇಮಿಸಿಕೊಂಡ ಲಿಯೊನೆಲ್ ಮೆಸ್ಸಿ; ಈತ ಎಂಎಂಎ ಫೈಟರ್, ಮಾಜಿ ಕಮಾಂಡೊ

ಫುಟ್ಬಾಲ್ ಲೋಕದ ದಿಗ್ಗಜ ಲಿಯೊನೆಲ್ ಮೆಸ್ಸಿ ಅವರು ಬಾಡಿಗಾರ್ಡ್​ ನೇಮಕದ ಕುರಿತಂತೆ ಹೆಚ್ಚು ಸುದ್ದಿಯಾಗುತ್ತಿದೆ. ಅವರು ಯಾರು? ಏನು ಎತ್ತ ಎಂಬುದರ ಕುರಿತು ಚರ್ಚೆಯಾಗುತ್ತಿದೆ.

ಹೊಸ ಬಾಡಿಗಾರ್ಡ್ ನೇಮಿಸಿಕೊಂಡ ಲಿಯೊನೆಲ್ ಮೆಸ್ಸಿ.
ಹೊಸ ಬಾಡಿಗಾರ್ಡ್ ನೇಮಿಸಿಕೊಂಡ ಲಿಯೊನೆಲ್ ಮೆಸ್ಸಿ.

ಕಳೆದ ವರ್ಷ ಅರ್ಜೆಂಟೀನಾ ತಂಡಕ್ಕೆ ಫಿಫಾ ವಿಶ್ವಕಪ್ (FIFA Football World Cup 2022) ಗೆದ್ದುಕೊಟ್ಟ ಫುಟ್ಬಾಲ್ ಲೋಕದ ದಿಗ್ಗಜ ಆಟಗಾರ ಲಿಯೊನೆಲ್ ಮೆಸ್ಸಿಗೆ (Lionel Messi) ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಾಗುತ್ತಲೇ ಇದೆ. ವಾರ್ಷಿಕ ಸಾವಿರಾರು ಕೋಟಿ ದುಡಿಯುತ್ತಿರುವ ಮೆಸ್ಸಿಗೆ ಫುಟ್ಬಾಲ್ ಕ್ಲಬ್​​ಗಳು ಅವರು ಕೇಳಿದಷ್ಟು ಹಣ ಕೊಡಲು ಸಿದ್ಧವಾಗಿವೆ. ಕಳೆದ ತಿಂಗಳಷ್ಟೇ ಇಂಟರ್ ಮಿಯಾಮಿ (Inter Miami) ತಂಡದ ಜೊತೆ ಎರಡು ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದರು.

ಮೇಜರ್ ಲೀಗ್ ಸಾಕರ್​​​​​​​ ಸೇರಿ (Major League Soccer) ನಿರೀಕ್ಷೆಗಳನ್ನು ಹೆಚ್ಚಿಸಿದ್ದ ಮೆಸ್ಸಿ, ಇಂಟರ್​ ಮಿಯಾಮಿಗೆ ಸಹಿ ಹಾಕಿದ್ದೇ ಹಾಕಿದ್ದು, ಕ್ಲಬ್​ಗೆ ಟ್ರೋಫಿಗೆ ಗೆದ್ದುಕೊಟ್ಟು ಸ್ಮರಣೀಯವಾಗಿಸಿದರು. ಮೆಸ್ಸಿ ಪ್ರವೇಶಿಸುವುದಕ್ಕೂ ಮುನ್ನ ಅಂಕಪಟ್ಟಿಯಲ್ಲಿ ಕೊನೆಗೆ ಇದ್ದ ಮಿಯಾಮಿ ತಂಡವು, ಅವರ ಪ್ರವೇಶ ನಂತರ ಚಾಂಪಿಯನ್ ಪಟ್ಟಕ್ಕೇರಿತು. ಈಗ ಮೆಸ್ಸಿ ಮತ್ತೊಂದು ವಿಷಯಕ್ಕೆ ಭಾರಿ ಸುದ್ದಿಯಲ್ಲಿದ್ದಾರೆ.

ಹೌದು, ಮೆಸ್ಸಿ ಅವರು ಬಾಡಿಗಾರ್ಡ್​ ನೇಮಕದ ಕುರಿತಂತೆ ಹೆಚ್ಚು ಸುದ್ದಿಯಾಗುತ್ತಿದೆ. ಅವರು ಯಾರು? ಏನು ಎತ್ತ ಎಂಬುದರ ಕುರಿತು ಚರ್ಚೆಯಾಗುತ್ತಿದೆ. ಫುಟ್ಬಾಲ್ ಲೋಕದ ದಿಗ್ಗಜ ಲಿಯೊನೆಲ್ ಮೆಸ್ಸಿ ಅವರು ತಮ್ಮ ರಕ್ಷಣೆಗಾಗಿ ಎಂಎಂಎ ಫೈಟರ್‌ (MMA Fighter) ಹಾಗೂ ಮಾಜಿ ಸೈನಿಕನನ್ನು ತಮ್ಮ ಭದ್ರತೆ ನಿಯೋಜನೆ ಮಾಡಿಕೊಂಡಿದ್ದಾರೆ.ಜೀವ ಬೆದರಿಕೆ ಕರೆಗಳು ಹೆಚ್ಚಾದ್ದರಿಂದ ಬಾಡಿಗಾರ್ಡ್​ ನೇಮಿಸಿಕೊಂಡಿದ್ದಾರೆ. ವಿಶೇಷ ಅಂದರೆ ಇಂಟರ್​ ಮಿಯಾಮಿ ತಂಡವೇ ಈ ಅಂಗರಕ್ಷಕನನ್ನು ನೇಮಿಸಿರುವುದು.

ಬಾಡಿಗಾರ್ಡ್​ ಯಾರು?

ಲಿಯೊನೆಲ್ ಮೆಸ್ಸಿಗೆ ಹಲವು ತಿಂಗಳಿಂದ ಜೀವ ಬೆದರಿಕೆಗಳು ಬರುತ್ತಿವೆ. ಅತ್ಯಂತ ಜನಪ್ರಿಯ ಆಟಗಾರ ಮೆಸ್ಸಿಯನ್ನು ಗುರಿಯಾಗಿಸಿಕೊಂಡು ಪ್ರಾಣ ಬೆದರಿಕೆ ಹಾಕಲಾಗುತ್ತಿದೆ. ಈ ಕಾರಣದಿಂದ ವೈಯಕ್ತಿಕ ಭದ್ರತೆಯನ್ನು ನೇಮಿಸಿಕೊಂಡಿದ್ದಾರೆ. ಮಾಜಿ ಸೈನಿಕ ಮತ್ತು ಎಂಎಂಎ ಫೈಟರ್‌ (Mixed martial arts) ಯಾಸಿನ್‌ ಚುಯೆಕೊ (Yassine Chueko) ಅವರನ್ನು ತಮ್ಮ ಬಾಡಿಗಾರ್ಡ್‌ ಆಗಿ ನೇಮಕ ಆಗಿದ್ದಾರೆ.

ಇಂಟರ್ ಮಿಯಾಮಿ ಪರ ಆಡುವಾಗ ಹೆಚ್ಚು ಸದ್ದು ಮಾಡಿದ್ದೇ ಮೆಸ್ಸಿ ಅಂಗರಕ್ಷಕ. ಮೆಸ್ಸಿ ಎಲ್ಲೇ ಹೋದರು, ಬಂದರು ಅವರ ಹಿಂದೆಯೇ ಇರುತ್ತಿದ್ದರು. ತುಂಬಾ ಅಲರ್ಟ್​ ಆಗಿ ಓಡಾಡುತ್ತಿದ್ದರು. ಯಾರನ್ನೂ ಹತ್ತಿರಕ್ಕೂ ಬಿಟ್ಟುಕೊಳ್ಳುತ್ತಿರಲಿಲ್ಲ. ಮೈದಾನದಲ್ಲಿ ಆಡುವಾಗಲೂ ಅವರು ಓಡಿದತ್ತ ಇವರೂ ಸಹ ಹೋಗುತ್ತಿದ್ದರು. ಹಾಗಾಗಿ ಎಲ್ಲರಿಗೂ ಕುತೂಹಲ ಹೆಚ್ಚಾಗಿತ್ತು.

ಮೆಸ್ಸಿಯ ಅಂಗರಕ್ಷಕ ಯಾಸಿನ್ ಚುಯೆಕೊ. ಅವರು ಅಮೆರಿಕದ ನೌಕಾಪಡೆಯ ಮಾಜಿ ಅಧಿಕಾರಿ ಜೊತೆಗೆ ಫೈಟರ್​​. ವೃತ್ತಿಪರ ಮಿಶ್ರ ಸಮರ ಕಲೆಯಲ್ಲಿ (MMA) ಪರಿಣಿತರಾಗಿರುವ ಚುಯೆಕೊ ಅವರು, ಯುನೈಟೆಡ್ ಸ್ಟೇಟ್ಸ್ ಸೈನಿಕನಾಗಿ ಇರಾಕ್ ಮತ್ತು ಅಫ್ಘಾನಿಸ್ತಾನದಲ್ಲಿ ಸೇವೆ ಸಲ್ಲಿಸಿದ್ದಾರೆ. ಆದರೆ ಅವರಿಗೆ ವೇತನ ಕೋಟಿಗಳಲ್ಲಿ ಇರಲಿದೆ ಎಂದು ಅಂದಾಜಿಸಲಾಗಿದೆ. ಆದರೆ ಎಷ್ಟೆಂದು ಬಹಿರಂಗಗೊಂಡಿಲ್ಲ.

ಗುಂಡಿನ ದಾಳಿ ನಡೆದಿತ್ತು!

ಕೆಲ ತಿಂಗಳ ಹಿಂದಷ್ಟೇ ಮೆಸ್ಸಿ ಕುಟುಂಬಕ್ಕೆ ಸಂಬಂಧಿಸಿದ ಸೂಪರ್‌ ಮಾರ್ಕೆಟ್‌ ಮೇಲೆ ಗುಂಡಿನ ದಾಳಿ ನಡೆದಿತ್ತು. ಇತ್ತೀಚೆಗೆ ಮೆಸ್ಸಿಗೆ ಜೀವ ಬೆದರಿಕೆ ಕರೆಗಳು ಬಂದಿದ್ದವು. ಹಾಗಾಗು ಯಾಸಿನ್‌ ಚುಯೆಕೊ ಅವರನ್ನ ಬಾಡಿ ಗಾರ್ಡ್‌ ಆಗಿ ನೇಮಿಸಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.