ಸುನಿಲ್ ಛೆಟ್ರಿಗೆ ವಿದಾಯದ ಪಂದ್ಯ, ಗೊಗೊಯ್-ಹಮ್ಮದ್ ಔಟ್; ಫಿಫಾ ವಿಶ್ವಕಪ್​ ಕ್ವಾಲಿಫೈಯರ್‌ಗೆ ಭಾರತ ತಂಡ ಪ್ರಕಟ
ಕನ್ನಡ ಸುದ್ದಿ  /  ಕ್ರೀಡೆ  /  ಸುನಿಲ್ ಛೆಟ್ರಿಗೆ ವಿದಾಯದ ಪಂದ್ಯ, ಗೊಗೊಯ್-ಹಮ್ಮದ್ ಔಟ್; ಫಿಫಾ ವಿಶ್ವಕಪ್​ ಕ್ವಾಲಿಫೈಯರ್‌ಗೆ ಭಾರತ ತಂಡ ಪ್ರಕಟ

ಸುನಿಲ್ ಛೆಟ್ರಿಗೆ ವಿದಾಯದ ಪಂದ್ಯ, ಗೊಗೊಯ್-ಹಮ್ಮದ್ ಔಟ್; ಫಿಫಾ ವಿಶ್ವಕಪ್​ ಕ್ವಾಲಿಫೈಯರ್‌ಗೆ ಭಾರತ ತಂಡ ಪ್ರಕಟ

India vs Kuwait Football match : ಕೋಲ್ಕತಾದಲ್ಲಿ ನಡೆಯಲಿರುವ ಕುವೈತ್​ ವಿರುದ್ಧದ ಫಿಫಾ ವಿಶ್ವಕಪ್​ ಕ್ವಾಲಿಫೈಯರ್​ ಪಂದ್ಯಕ್ಕೆ ಭಾರತ ತಂಡವನ್ನು ಮುಖ್ಯ ಕೋಚ್ ಇಗೊರ್ ಸ್ಟಿಮಾಕ್ ಪ್ರಕಟಿಸಿದ್ದಾರೆ.

ಸುನಿಲ್ ಛೆಟ್ರಿಗೆ ವಿದಾಯದ ಪಂದ್ಯ, ಗೊಗೊಯ್-ಹಮ್ಮದ್ ಔಟ್; ಫಿಫಾ ವಿಶ್ವಕಪ್​ ಕ್ವಾಲಿಫೈಯರ್‌ಗೆ ಭಾರತ ತಂಡ ಪ್ರಕಟ
ಸುನಿಲ್ ಛೆಟ್ರಿಗೆ ವಿದಾಯದ ಪಂದ್ಯ, ಗೊಗೊಯ್-ಹಮ್ಮದ್ ಔಟ್; ಫಿಫಾ ವಿಶ್ವಕಪ್​ ಕ್ವಾಲಿಫೈಯರ್‌ಗೆ ಭಾರತ ತಂಡ ಪ್ರಕಟ

ಜೂನ್ 6 ರಂದು ಕುವೈತ್ ವಿರುದ್ಧದ ಫಿಫಾ ವಿಶ್ವಕಪ್ ಅರ್ಹತಾ ಪಂದ್ಯಕ್ಕೆ ಅಖಿಲ ಭಾರತ ಫುಟ್ಬಾಲ್ ಫೆಡರೇಶನ್‌ 27 ಸದಸ್ಯರ ಫುಟ್ಬಾಲ್ ತಂಡ ಪ್ರಕಟಿಸಿದೆ. ಫಾರ್ವರ್ಡ್ ಆಟಗಾರ ಪಾರ್ಥಿಬ್ ಗೊಗೊಯ್ ಮತ್ತು ಡಿಫೆಂಡರ್ ಮುಹಮ್ಮದ್ ಹಮ್ಮದ್ ಗಾಯದ ಕಾರಣ ಅವಕಾಶ ಪಡೆಯಲು ವಿಫಲರಾಗಿದ್ದಾರೆ. ಮತ್ತೊಂದೆಡೆ 19 ವರ್ಷಗಳ ಕಾಲ ಭಾರತ ತಂಡಕ್ಕೆ ಸೇವೆ ಸಲ್ಲಿಸಿದ ಸುನಿಲ್​ ಛೆಟ್ರಿಗೆ ಇದು ವಿದಾಯದ ಪಂದ್ಯವಾಗಿದೆ.

ಕೋಲ್ಕತಾದಲ್ಲಿ ನಡೆಯಲಿರುವ ಪಂದ್ಯಕ್ಕೆ ತಂಡವನ್ನು ಮುಖ್ಯ ಕೋಚ್ ಇಗೊರ್ ಸ್ಟಿಮಾಕ್ ಪ್ರಕಟಿಸಿದ್ದಾರೆ. ಒಟ್ಟು 32 ಆಟಗಾರರು ಭುವನೇಶ್ವರದಲ್ಲಿ ಬೀಡುಬಿಟ್ಟಿದ್ದು, ಅವರಲ್ಲಿ ಫುರ್ಬಾ ಲಚೆನ್ಪಾ, ಪಾರ್ಥಿಬ್, ಇಮ್ರಾನ್ ಖಾನ್, ಹಮ್ಮದ್ ಮತ್ತು ಜಿತಿನ್ ಎಂಎಸ್ ಅವರನ್ನು ಶಿಬಿರದಿಂದ ಬಿಡುಗಡೆ ಮಾಡಲಾಗಿದೆ. ‘ಅವರೆಲ್ಲರೂ ತುಂಬಾ ವೃತ್ತಿಪರರು ಮತ್ತು ಕಠಿಣ ಪರಿಶ್ರಮಿಗಳು. ವಿಶೇಷವಾಗಿ ಜಿತಿನ್ ಮತ್ತು ಪಾರ್ಥಿಬ್ ಅವರ ಸ್ಥಾನ ತುಂಬುದು ನಿಜವಾಗಿಯೂ ಕಠಿಣವಾಗಿದೆ ಎಂದು ತಿಳಿಸಿದ್ದಾರೆ.

ಜೂನ್ 6ರಂದು ಕುವೈತ್ ವಿರುದ್ಧ ಭಾರತ ಸೆಣಸಾಟ

'ಪಾರ್ಥಿಬ್ ಮತ್ತು ಹಮ್ಮದ್ ಕೆಲವು ದಿನಗಳಿಂದ ಸಣ್ಣ ಗಾಯಗಳಿಂದ ಬಳಲುತ್ತಿದ್ದಾರೆ. ಹಾಗಾಗಿ ಅವರಿಗೆ 7-14 ದಿನಗಳ ವಿಶ್ರಾಂತಿಯ ಅಗತ್ಯ ಇದೆ ಎಂದು ಅವರು ಗಾಯಗಳ ಸ್ವರೂಪವನ್ನು ನಿರ್ದಿಷ್ಟಪಡಿಸದೆ ಹೇಳಿದ್ದಾರೆ. ಉಳಿದ ಆಟಗಾರರು ಮೇ 29 ರವರೆಗೆ ಭುವನೇಶ್ವರದಲ್ಲಿ ತರಬೇತಿ ಮುಂದುವರಿಸಲಿದ್ದು, ನಂತರ ಕೋಲ್ಕತ್ತಾಗೆ ಪ್ರಯಾಣ ಬೆಳೆಸಲಿದ್ದಾರೆ. ಬ್ಲೂ ಟೈಗರ್ಸ್ ಜೂನ್ 6 ರಂದು ವಿವೇಕಾನಂದ ಯುವ ಭಾರತಿ ಕ್ರಿರಂಗನ್​ ಮೈದಾನದಲ್ಲಿ ಕುವೈತ್ ತಂಡದ ವಿರುದ್ಧ ಸೆಣಸಲಿದೆ.

ಕುವೈತ್ ವಿರುದ್ಧದ ಪಂದ್ಯದ ನಂತರ ಭಾರತ ತಂಡ ಜೂನ್ 11 ರಂದು ಕತಾರ್ ವಿರುದ್ಧ ಎ ಗುಂಪಿನ ಕೊನೆಯ ಪಂದ್ಯವನ್ನಾಡಲಿದೆ. ಭಾರತ ಪ್ರಸ್ತುತ 4 ಪಂದ್ಯಗಳಿಂದ ನಾಲ್ಕು ಅಂಕಗಳೊಂದಿಗೆ ಗುಂಪಿನಲ್ಲಿ 2ನೇ ಸ್ಥಾನದಲ್ಲಿದೆ. ಗುಂಪಿನಲ್ಲಿ ಅಗ್ರ 2 ತಂಡಗಳು ಫಿಫಾ ವಿಶ್ವಕಪ್ ಅರ್ಹತಾ ಸುತ್ತಿನ 3ನೇ ಸುತ್ತಿಗೆ ಅರ್ಹತೆ ಪಡೆಯುತ್ತವೆ. ಹಾಗೆ 2027ರಲ್ಲಿ ಸೌದಿ ಅರೇಬಿಯಾದಲ್ಲಿ ನಡೆಯುವ ಎಎಫ್​ಸಿ ಏಷ್ಯನ್ ಕಪ್​​ಗೆ ತಮ್ಮ ಸ್ಥಾನ ಕಾಯ್ದಿರಿಸುತ್ತವೆ.

ಸುನಿಲ್ ಛೆಟ್ರಿಗೆ ವಿದಾಯದ ಪಂದ್ಯ

39ರ ಹರೆಯದ ಛೆಟ್ರಿ ಮೇ 17ರಂದು ಅಂತಾರಾಷ್ಟ್ರೀಯ ಫುಟ್ಬಾಲ್​ಗೆ ವಿದಾಯ ಘೋಷಿಸಿದ್ದರು. ಕುವೈತ್ ವಿರುದ್ಧದ ಪಂದ್ಯವು ಅವರ 19 ವರ್ಷಗಳ ವೃತ್ತಿಜೀವನಕ್ಕೆ ತೆರೆ ಎಳೆಯಲಿದೆ. ಈ ಅವಧಿಯಲ್ಲಿ ಅವರು 94 ಗೋಲುಗಳೊಂದಿಗೆ ಭಾರತದ ಅಗ್ರ ಗೋಲ್ ಸ್ಕೋರರ್ ಎನಿಸಿಕೊಂಡಿದ್ದಾರೆ. 151 ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಅವರು ತಮ್ಮ ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನಾಡಲು ಕಣಕ್ಕಿಳಿಯಲಿದ್ದಾರೆ.

ಅಂತಾರಾಷ್ಟ್ರೀಯ ಫುಟ್ಬಾಲ್​​ನ ಸಕ್ರಿಯ ಆಟಗಾರರ ಪೈಕಿ ಕ್ರಿಸ್ಟಿಯಾನೊ ರೊನಾಲ್ಡೊ ಮತ್ತು ಲಿಯೋನೆಲ್ ಮೆಸ್ಸಿ ನಂತರ ಅತಿ ಹೆಚ್ಚು ಗೋಲ್ ಸ್ಕೋರರ್​ಗಳ ಪಟ್ಟಿಯಲ್ಲಿ ಛೆಟ್ರಿ ಮೂರನೇ ಸ್ಥಾನದಲ್ಲಿದ್ದಾರೆ. ಛೆಟ್ರಿ ಪ್ರಸ್ತುತ ಸಾರ್ವಕಾಲಿಕ ಅಂತಾರಾಷ್ಟ್ರೀಯ ಗೋಲ್ ಸ್ಕೋರರ್​​ಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ.

ಕುವೈತ್ ವಿರುದ್ಧದ ಹಣಾಹಣಿಗೆ ಭಾರತ ತಂಡ ಇಂತಿದೆ

ಗೋಲ್ ಕೀಪರ್ಸ್: ಗುರ್ಪ್ರೀತ್ ಸಿಂಗ್ ಸಂಧು, ಅಮರಿಂದರ್ ಸಿಂಗ್, ವಿಶಾಲ್ ಕೈತ್.

ಡಿಫೆಂಡರ್ಸ್: ಅಮೆ ರಾನವಾಡೆ, ಅನ್ವರ್ ಅಲಿ, ಜಯ್ ಗುಪ್ತಾ, ಲಾಲ್ಚುಂಗ್ನುಂಗಾ, ಮೆಹತಾಬ್ ಸಿಂಗ್, ನರೇಂದರ್, ನಿಖಿಲ್ ಪೂಜಾರಿ, ರಾಹುಲ್ ಭೆಕೆ, ಸುಭಾಶಿಶ್ ಬೋಸ್.

ಮಿಡ್ ಫೀಲ್ಡರ್ಸ್: ಅನಿರುದ್ಧ್ ಥಾಪಾ, ಬ್ರಾಂಡನ್ ಫರ್ನಾಂಡಿಸ್, ಎಡ್ಮಂಡ್ ಲಾಲ್ರಿಂಡಿಕಾ, ಜೀಕ್ಸನ್ ಸಿಂಗ್ ತೌನೋಜಮ್, ಲಾಲಿಯನ್ಜುವಾಲಾ ಚಾಂಗ್ಟೆ, ಲಿಸ್ಟನ್ ಕೊಲಾಕೊ, ಮಹೇಶ್ ಸಿಂಗ್ ನೌರೆಮ್, ನಂದಕುಮಾರ್ ಶೇಖರ್, ಸಹಲ್ ಅಬ್ದುಲ್ ಸಮದ್, ಸುರೇಶ್ ಸಿಂಗ್ ವಾಂಗ್ಜಾಮ್.

ಫಾರ್ವರ್ಡ್ಸ್: ಡೇವಿಡ್ ಲಾಲ್ಹನ್ಸಂಗ, ಮನ್ವೀರ್ ಸಿಂಗ್, ರಹೀಮ್ ಅಲಿ, ಸುನಿಲ್ ಛೆಟ್ರಿ, ವಿಕ್ರಮ್ ಪ್ರತಾಪ್ ಸಿಂಗ್.

 

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.