ಚಾಂಪಿಯನ್ಸ್ ಲೀಗ್ ಕ್ವಾರ್ಟರ್ ಫೈನಲ್ ಡ್ರಾ; ಹಾಲಿ ಚಾಂಪಿಯನ್ ಮ್ಯಾಂಚೆಸ್ಟರ್ ಸಿಟಿಗೆ ರಿಯಲ್ ಮ್ಯಾಡ್ರಿಡ್ ಎದುರಾಳಿ
Champions League quarterfinal draw: 2023/24ರ ಯುಇಎಫ್ಎ ಚಾಂಪಿಯನ್ಸ್ ಲೀಗ್ ಕ್ವಾರ್ಟರ್ ಫೈನಲ್ ಪಂದ್ಯಗಳು ಏಪ್ರಿಲ್ 9ರಿಂದ ಆರಂಭವಾಗಲಿದೆ. ಈಗಾಗಲೇ ಡ್ರಾ ನಡೆದಿದ್ದು, ಎಂಟರ ಘಟ್ಟದಲ್ಲಿ ಯಾವ ತಂಡವು ಯಾರ ವಿರುದ್ಧ ಸೆಣಸಲಿದೆ ಎಂಬುದು ಸ್ಪಷ್ಟವಾಗಿದೆ.

ಯುಇಎಫ್ಎ ಚಾಂಪಿಯನ್ಸ್ ಲೀಗ್ ಡ್ರಾವನ್ನು (Champions League draw) ಘೋಷಿಸಿದೆ. ಮಾರ್ಚ್ 15ರ ಶುಕ್ರವಾರ ಕ್ವಾರ್ಟರ್ ಫೈನಲ್ ಮತ್ತು ಸೆಮಿಫೈನಲ್ ಹಂತಗಳಿಗೆ ಡ್ರಾ ಮಾಡಲಾಗಿದ್ದು, ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮ್ಯಾಂಚೆಸ್ಟರ್ ಸಿಟಿ (Manchester City) 14 ಬಾರಿಯ ಯುರೋಪಿಯನ್ ಚಾಂಪಿಯನ್ ರಿಯಲ್ ಮ್ಯಾಡ್ರಿಡ್ ತಂಡವನ್ನು ಎದುರಿಸಲಿದೆ. 14 ಋತುವಿನಲ್ಲಿ ಇದೇ ಮೊದಲ ಬಾರಿಗೆ ಚಾಂಪಿಯನ್ಸ್ ಲೀಗ್ ಕ್ವಾರ್ಟರ್ ಫೈನಲ್ ಪ್ರವೇಶಿಸಿರುವ ಪ್ರಸ್ತುತ ಪ್ರೀಮಿಯರ್ ಲೀಗ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಆರ್ಸೆನಲ್, ಬೇರನ್ ಮುನಿಚ್ ತಂಡವನ್ನು ಎದುರಿಸಲಿದೆ.
ಅತ್ತ ಪ್ಯಾರಿಸ್ ಸೇಂಟ್ ಜರ್ಮನ್ (ಪಿಎಸ್‌ಜಿ) ಬಾರ್ಸಿಲೋನಾವನ್ನು ಎದುರಿಸಲಿದೆ. ಅದರಂತೆಯೇ ಮತ್ತೊಂದು ಕ್ವಾರ್ಟರ್ ಫೈನಲ್‌ನಲ್ಲಿ ಅಟ್ಲೆಟಿಕೊ ಮ್ಯಾಡ್ರಿಡ್ ತಂಡವು ಬೊರುಸ್ಸಿಯಾ ಡಾರ್ಟ್ಮಂಡ್ ತಂಡವನ್ನು ಎದುರಿಸಲಿದೆ.
ಕ್ವಾರ್ಟರ್ ಫೈನಲ್ ಪಂದ್ಯಗಳ ಮೊದಲ ಹಂತವು ಏಪ್ರಿಲ್ 9 ಮತ್ತು 10ರಂದು ನಡೆಯಲಿದೆ. ಆ ಬಳಿಕ ಎರಡನೇ ಹಂತವು ಏಪ್ರಿಲ್ 16 ಮತ್ತು 17ರಂದು ನಡೆಯಲಿದೆ. ಸೆಮಿಫೈನಲ್‌ನ ಮೊದಲ ಹಂತವು ಏಪ್ರಿಲ್ 30 ಮತ್ತು ಮೇ 1ರಂದು ನಡೆದರೆ, ಎರಡನೇ ಹಂತವು ಮೇ 7 ಮತ್ತು 8ರಂದು ನಡೆಯಲಿದೆ. ಚಾಂಪಿಯನ್ಸ್ ಲೀಗ್ ಟೂರ್ನಿಯ ಫೈನಲ್ ಪಂದ್ಯವು ಜೂನ್ 1ರಂದು ಲಂಡನ್‌ನ ವೆಂಬ್ಲೆ ಸ್ಟೇಡಿಯಂನಲ್ಲಿ ನಡೆಯಲಿದೆ.
UEFA ಚಾಂಪಿಯನ್ಸ್ ಲೀಗ್ ಕ್ವಾರ್ಟರ್‌ಫೈನಲ್ ಸಂಪೂರ್ಣ ಡ್ರಾ ಪಟ್ಟಿ ಹೀಗಿದೆ
ಆರ್ಸೆನಲ್ ಎಫ್‌ಸಿ (ಇಂಗ್ಲೆಂಡ್) vs ಬೇಯರ್ನ್ ಮ್ಯೂನಿಚ್ (ಜರ್ಮನ್)
ಅಟ್ಲೆಟಿಕೊ ಮ್ಯಾಡ್ರಿಡ್ (ಸ್ಪೇನ್) vs ಬೊರುಸ್ಸಿಯಾ ಡಾರ್ಟ್ಮಂಡ್ (ಜರ್ಮನ್)
ರಿಯಲ್ ಮ್ಯಾಡ್ರಿಡ್ (ಸ್ಪೇನ್) vs ಮ್ಯಾಂಚೆಸ್ಟರ್ ಸಿಟಿ (ಇಂಗ್ಲೆಂಡ್)
ಪ್ಯಾರಿಸ್ ಸೇಂಟ್-ಜರ್ಮನ್ (ಫ್ರಾನ್ಸ್) vs ಬಾರ್ಸಿಲೋನಾ (ಸ್ಪೇನ್)
ಸೆಮಿಫೈನಲ್ ಡ್ರಾ
- ಸೆಮಿಫೈನಲ್ 1
ಅಟ್ಲೆಟಿಕೊ ಮ್ಯಾಡ್ರಿಡ್ (ಸ್ಪೇನ್) ಅಥವಾ ಬೊರುಸ್ಸಿಯಾ ಡಾರ್ಟ್ಮಂಡ್ (ಜರ್ಮನ್) vs ಪ್ಯಾರಿಸ್ ಸೇಂಟ್-ಜರ್ಮನ್ (ಫ್ರಾನ್ಸ್) ಅಥವಾ ಬಾರ್ಸಿಲೋನಾ (ಸ್ಪೇನ್)
- ಸೆಮಿಫೈನಲ್ 2
ಆರ್ಸೆನಲ್ ಎಫ್‌ಸಿ (ಇಂಗ್ಲೆಂಡ್) ಅಥವಾ ಬೇಯರ್ನ್ ಮ್ಯೂನಿಚ್ (ಜರ್ಮನ್) vs ರಿಯಲ್ ಮ್ಯಾಡ್ರಿಡ್ (ಸ್ಪೇನ್) ಅಥವಾ ಮ್ಯಾಂಚೆಸ್ಟರ್ ಸಿಟಿ (ಇಂಗ್ಲೆಂಡ್)
ಇದನ್ನೂ ಓದಿ | ಚಾಂಪಿಯನ್ಸ್ ಲೀಗ್ ಪಂದ್ಯದ ವೇಳೆ ಮ್ಯಾಂಚೆಸ್ಟರ್ ಸಿಟಿ ಆಟಗಾರನಿಗೆ ಗಂಭೀರ ಗಾಯ; ಬೆರಳು ಮುರಿದುಕೊಂಡ ಮ್ಯಾಥ್ಯೂಸ್
ಇನ್ನಷ್ಟು ಕ್ರೀಡಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
(This Football News first appeared in Hindustan Times Kannada website. To read more Sports stories please logon to kannada.hindustantimes.com)

ವಿಭಾಗ