ಫಿಫಾ ವಿಶ್ವಕಪ್ 2026: ಜೂನ್ 11ರಂದು ಫುಟ್ಬಾಲ್ ಪಂದ್ಯಾವಳಿ ಆರಂಭ; 48 ತಂಡಗಳು ಭಾಗಿ, ನ್ಯೂಜೆರ್ಸಿಯಲ್ಲಿ ಫೈನಲ್
ಕನ್ನಡ ಸುದ್ದಿ  /  ಕ್ರೀಡೆ  /  ಫಿಫಾ ವಿಶ್ವಕಪ್ 2026: ಜೂನ್ 11ರಂದು ಫುಟ್ಬಾಲ್ ಪಂದ್ಯಾವಳಿ ಆರಂಭ; 48 ತಂಡಗಳು ಭಾಗಿ, ನ್ಯೂಜೆರ್ಸಿಯಲ್ಲಿ ಫೈನಲ್

ಫಿಫಾ ವಿಶ್ವಕಪ್ 2026: ಜೂನ್ 11ರಂದು ಫುಟ್ಬಾಲ್ ಪಂದ್ಯಾವಳಿ ಆರಂಭ; 48 ತಂಡಗಳು ಭಾಗಿ, ನ್ಯೂಜೆರ್ಸಿಯಲ್ಲಿ ಫೈನಲ್

FIFA World Cup 2026 schedule: 2026ರ ಫಿಫಾ ವಿಶ್ವಕಪ್ ಆವೃತ್ತಿಯ ಪಂದ್ಯದ ವೇಳಾಪಟ್ಟಿ ಪ್ರಕಟಗೊಂಡಿದೆ. ಫುಟ್ಬಾಲ್‌ ವಿಶ್ವಕಪ್ ಟೂರ್ನಿಯಲ್ಲಿ ಒಟ್ಟು 48 ತಂಡಗಳು ಭಾಗವಹಿಸಲಿದ್ದು, ಒಟ್ಟು 104 ಪಂದ್ಯಗಳು ನಡೆಯಲಿವೆ. ಉದ್ಘಾಟನಾ ಪಂದ್ಯವು ಜೂನ್ 11ರಂದು ಮೆಕ್ಸಿಕೋ ಸಿಟಿಯ ಅಜ್ಟೆಕಾ ಸ್ಟೇಡಿಯಂನಲ್ಲಿ ನಡೆಯಲಿದೆ.

2026ರ ಜೂನ್ 11ರಂದು ಫಿಫಾ ವಿಶ್ವಕಪ್ 2026ರ ಫುಟ್ಬಾಲ್ ಪಂದ್ಯಾವಳಿ ಆರಂಭ
2026ರ ಜೂನ್ 11ರಂದು ಫಿಫಾ ವಿಶ್ವಕಪ್ 2026ರ ಫುಟ್ಬಾಲ್ ಪಂದ್ಯಾವಳಿ ಆರಂಭ (AP)

2026ರ ಫಿಫಾ ವಿಶ್ವಕಪ್‌ಗೆ (FIFA World Cup 2026) ಕೊನೆಯ ಹಂತದ ಸಿದ್ಧತೆಗಳು ನಡೆಯುತ್ತಿವೆ. ಟೂರ್ನಿಗೆ ಇನ್ನೂ ಎರಡು ವರ್ಷಗಳು ಬಾಕಿ ಇರುವಂತೆಯೇ, ವೇಳಾಪಟ್ಟಿ ಅಂತಿಮವಾಗಿದೆ. ಕ್ರೀಡೆಯ ಅದ್ಧೂರಿ ಟೂರ್ನಿಯ ಫೈನಲ್‌ ಪಂದ್ಯಕ್ಕೆ ಸ್ಥಳ ಹಾಗೂ ಮುಹೂರ್ತ ನಿಗದಿಯಾಗಿದ್ದು, ಅಮೆರಿಕದ ನ್ಯೂಜೆರ್ಸಿಯ ಮೆಟ್ಲೈಫ್ ಸ್ಟೇಡಿಯಂ (MetLife Stadium New Jersey) ವಿಶ್ವ ಫುಟ್ಬಾಲ್‌ನ ಅತಿದೊಡ್ಡ ಪಂದ್ಯವಾದ ವಿಶ್ವಕಪ್ ಫೈನಲ್‌ ಪಂದ್ಯಕ್ಕೆ ಆತಿಥ್ಯ ವಹಿಸಲಿದೆ.

ಜನವರಿ 5ರ ಸೋಮವಾರ 2026ರ ಫಿಫಾ ವಿಶ್ವಕಪ್ ಆವೃತ್ತಿಯ ಪಂದ್ಯದ ವೇಳಾಪಟ್ಟಿಯನ್ನು ಫಿಫಾ ಪ್ರಕಟಿಸಿದೆ. ಟೂರ್ನಿಯಲ್ಲಿ ಒಟ್ಟು 48 ತಂಡಗಳು ಭಾಗವಹಿಸಲಿದ್ದು, ಒಂದು ಟ್ರೋಫಿಗಾಗಿ ಕಾದಾಡಲಿವೆ. ಒಟ್ಟು 104 ಪಂದ್ಯಗಳು ನಡೆಯಲಿದ್ದು, ಸಿದ್ದತೆಗಳು ನಡೆಯುತ್ತಿವೆ.

ಇದನ್ನೂ ಓದಿ | ಪ್ಲೀಸ್ ಸ್ಯಾಲರಿ ಕೊಡಿ; ಐಎಸ್ಎಲ್ ಪಂದ್ಯದ ಮಧ್ಯೆಯೇ ವೇತನ ನೀಡುವಂತೆ ಬ್ಯಾನರ್ ಹಿಡಿದ ಹೈದರಾಬಾದ್ ಎಫ್​ಸಿ ಸಿಬ್ಬಂದಿ

ಫಿಫಾ ವಿಶ್ವಕಪ್ 2026, ಜಾಗತಿಕ ಕ್ರೀಡಾಕೂಟದ ಅತಿದೊಡ್ಡ ಆವೃತ್ತಿಯಾಗಿದೆ. ಫಿಫಾ ವಿಶ್ವಕಪ್ ಪಂದ್ಯಗಳು ಯುಎಸ್ಎ, ಕೆನಡಾ ಮತ್ತು ಮೆಕ್ಸಿಕೊ ದೇಶಗಳ ಜಂಟಿ ಆತಿಥ್ಯದಲ್ಲಿ ಒಟ್ಟು 16 ನಗರಗಳಲ್ಲಿ ನಡೆಯಲಿದೆ.

ಯಾವ ದೇಶದಲ್ಲಿ ಎಷ್ಟು ಪಂದ್ಯಗಳು

ವಿಶ್ವಕಪ್ ಫೈನಲ್ ಪಂದ್ಯವು ಜುಲೈ 19ರಂದು ನ್ಯೂಜೆರ್ಸಿಯಲ್ಲಿ ನಡೆಯಲಿದೆ. ಈಸ್ಟ್ ರುದರ್ ಫೋರ್ಡ್‌ನಲ್ಲಿರುವ ಮೆಟ್‌ಲೈಫ್ ಕ್ರೀಡಾಂಗಣವು ಅಮೆರಿಕದ ನ್ಯಾಷನಲ್ ಫುಟ್ಬಾಲ್ ಲೀಗ್‌ನಲ್ಲಿ ನ್ಯೂಯಾರ್ಕ್ ಜೈಂಟ್ಸ್ ಮತ್ತು ನ್ಯೂಯಾರ್ಕ್ ಜೆಟ್‌ ತಂಡಗಳ ತವರು ಮೈದಾನವಾಗಿದೆ. ಸಹ-ಆತಿಥೇಯ ದೇಶ ಕೆನಡಾದಲ್ಲಿ ಹತ್ತು ಗುಂಪು ಹಂತದ ಪಂದ್ಯಗಳು ಸೇರಿದಂತೆ 13 ಪಂದ್ಯಗಳಿಗೆ ಆತಿಥ್ಯ ವಹಿಸಲಿದೆ. ಅತ್ತ ಮೆಕ್ಸಿಕೊ ಸಿಟಿ, ಗ್ವಾಡಲಜರ ಮತ್ತು ಮಾಂಟೆರಿಯಲ್ಲಿ ಗ್ರೂಪ್ ಹಂತದಲ್ಲಿ ಹತ್ತು ಪಂದ್ಯಗಳು ಸೇರಿದಂತೆ 3 ಪಂದ್ಯಗಳಿಗೆ ಮೆಕ್ಸಿಕೊ ಆತಿಥ್ಯ ವಹಿಸಲಿದೆ.

ಇದನ್ನೂ ಓದಿ | ಡಬ್ಲ್ಯುಟಿಸಿಯಲ್ಲಿ ಅಧಿಕ ರನ್; ಕಳಪೆ ಪ್ರದರ್ಶನದ ನಡುವೆಯೂ ವಿರಾಟ್ ಕೊಹ್ಲಿ ದಾಖಲೆ ಮುರಿದ ರೋಹಿತ್ ಶರ್ಮಾ

2026ರ ವಿಶ್ವಕಪ್ ಟೂರ್ನಿಯು ಅಮೆರಿಕದ 11 ನಗರಗಳಲ್ಲಿ ನಡೆಯಲಿದೆ. ಟೊರೊಂಟೊ, ಮೆಕ್ಸಿಕೊ ಸಿಟಿ ಮತ್ತು ಲಾಸ್ ಏಂಜಲೀಸ್ ನಗರಗಳಲ್ಲಿ ಫಿಫಾ ವಿಶ್ವಕಪ್‌ನ ಆಯಾ ದೇಶಗಳ ಆರಂಭಿಕ ಪಂದ್ಯಗಳಿಗೆ ಆತಿಥ್ಯ ನೀಡುತ್ತಿವೆ.

ಉದ್ಘಾಟನಾ ಪಂದ್ಯದಲ್ಲಿ ಮೆಕ್ಸಿಕೊ ಕಣಕ್ಕೆ

ಫುಟ್ಬಾಲ್‌ ವಿಶ್ವಕಪ್ 2026ರ ಉದ್ಘಾಟನಾ ಪಂದ್ಯವು ಜೂನ್ 11ರಂದು ಮೆಕ್ಸಿಕೋ ಸಿಟಿಯ ಅಜ್ಟೆಕಾ ಸ್ಟೇಡಿಯಂನಲ್ಲಿ ನಡೆಯಲಿದೆ. 1970 ಮತ್ತು 1986ರ ನಂತರ ಮೂರು ಪ್ರತ್ಯೇಕ ಆವೃತ್ತಿಗಳಲ್ಲಿ ಫಿಫಾ ವಿಶ್ವಕಪ್ ಪಂದ್ಯಗಳನ್ನು ಆಯೋಜಿಸಿದ ಮೊದಲ ಸ್ಥಳ ಎಂಬ ಹೆಗ್ಗಳಿಕೆಗೆ ಅಜ್ಟೆಕಾ ಪಾತ್ರವಾಗಲಿದೆ. 1970 ಮತ್ತು 1986ರ ಫಿಫಾ ವಿಶ್ವಕಪ್‌ಗಳ ಫೈನಲ್ ಪಂದ್ಯಗಳನ್ನು ಅಜ್ಟೆಕಾದಲ್ಲಿ ನಡೆಸಲಾಗಿತ್ತು.

ಇದನ್ನೂ ಓದಿ | ಟಿ20 ವಿಶ್ವಕಪ್‌ಗೆ ವಿರಾಟ್ ಕೊಹ್ಲಿ-ರೋಹಿತ್ ಶರ್ಮಾ ಇಲ್ಲದ ಭಾರತ ತಂಡ‌ವನ್ನು ನೋಡುವುದೇ ಕಷ್ಟ ಕಷ್ಟ!

ಅಟ್ಲಾಂಟಾ ಮತ್ತು ಡಲ್ಲಾಸ್ ಸೆಮಿಫೈನಲ್‌ ಪಂದ್ಯಗಳಿಗೆ ಆತಿಥ್ಯ ವಹಿಸಲಿದ್ದು, ಮೂರನೇ ಸ್ಥಾನಕ್ಕಾಗಿ ನಡೆಯುವ ಪಂದ್ಯವು ಮಿಯಾಮಿಯಲ್ಲಿ ನಡೆಯಲಿದೆ. ಲಾಸ್ ಏಂಜಲೀಸ್, ಕಾನ್ಸಾಸ್ ಸಿಟಿ, ಮಿಯಾಮಿ ಮತ್ತು ಬೋಸ್ಟನ್ ಮೈದಾನಗಳು ವಿಶ್ವಕಪ್‌ ಕ್ವಾರ್ಟರ್ ಫೈನಲ್ ಪಂದ್ಯಗಳಿಗೆ ಆತಿಥ್ಯ ವಹಿಸಲಿವೆ.

2026ರ ಫಿಫಾ ವಿಶ್ವಕಪ್ ಪಂದ್ಯಾವಳಿಯು 2024ರ ಕತಾರ್ ವಿಶ್ವಕಪ್‌ಗಿಂತ ಹೇಗೆ ಭಿನ್ನ?

2026ರ ಫಿಫಾ ವಿಶ್ವಕಪ್‌ನ ಪಂದ್ಯಾವಳಿಯಲ್ಲಿ 16 ಹೆಚ್ಚುವರಿ ತಂಡಗಳು ಭಾಗವಹಿಸುತ್ತವೆ. 2022ರ ಕತಾರ್ ಪಂದ್ಯಾವಳಿಯಲ್ಲಿ 32 ತಂಡಗಳು ಭಾಗವಹಿಸಿದ್ದವು. ಈ ಬಾರಿ 48 ತಂಡಗಳು ಭಾಗವಹಿಸಲಿವೆ.

(This copy first appeared in Hindustan Times Kannada website. To read more like this please logon to kannada.hindustantime.com)

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.