ಪೆನಾಲ್ಟಿಯನ್ನು ಗೋಲಾಗಿ ಪರಿವರ್ತಿಸಿದ ಸುನಿಲ್ ಛೆಟ್ರಿ; ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ ಗೆಲುವು
ಕನ್ನಡ ಸುದ್ದಿ  /  ಕ್ರೀಡೆ  /  ಪೆನಾಲ್ಟಿಯನ್ನು ಗೋಲಾಗಿ ಪರಿವರ್ತಿಸಿದ ಸುನಿಲ್ ಛೆಟ್ರಿ; ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ ಗೆಲುವು

ಪೆನಾಲ್ಟಿಯನ್ನು ಗೋಲಾಗಿ ಪರಿವರ್ತಿಸಿದ ಸುನಿಲ್ ಛೆಟ್ರಿ; ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ ಗೆಲುವು

India vs Bangladesh: ಏಷ್ಯನ್ ​ಕ್ರೀಡಾಕೂಟದಲ್ಲಿ ಪುರುಷರ ಫುಟ್ಬಾಲ್ ವಿಭಾಗದಲ್ಲಿ ಮೊದಲ ಪಂದ್ಯದಲ್ಲಿ ಸೋಲಿನ ಕಹಿ ಉಂಡಿದ್ದ ಭಾರತ, ಬಾಂಗ್ಲಾ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ.

ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ ಜಯ.
ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ ಜಯ.

ಪ್ರಸ್ತುತ ಚೀನಾದ ಹಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್ ​ಕ್ರೀಡಾಕೂಟದಲ್ಲಿ (Asian Games) ಪುರುಷರ ಫುಟ್ಬಾಲ್ ವಿಭಾಗದಲ್ಲಿ ಮೊದಲ ಪಂದ್ಯದಲ್ಲಿ ಸೋಲಿನ ಕಹಿ ಉಂಡಿದ್ದ ಭಾರತ ಇಂದು (ಸೆಪ್ಟೆಂಬರ್​ 21ರಂದು) ಬಾಂಗ್ಲಾದೇಶ (India vs Bangladesh) ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ. 1-0 ಗೋಲು ಅಂತರದಲ್ಲಿ ಜಯಿಸಿದ ದಾಖಲಿಸಿದ ಸುನಿಲ್ ಛೆಟ್ರಿ ನೇತೃತ್ವದ ಬಳಗ, ನಾಕೌಟ್ ಹಂತದ ಪ್ರವೇಶ ಜೀವಂತವಾಗಿರಿಸಿಕೊಂಡಿದೆ.

ಪಂದ್ಯದಲ್ಲಿ ಉಭಯ ತಂಡಗಳ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಡೆದಿತ್ತು. ಮೊದಲಾರ್ಧದಲ್ಲೂ ಗೋಲು ಸಿಡಿಸಲು ಹೆಣಗಾಡಿದರು. ಇದರೊಂದಿಗೆ ಮೊದಲಾರ್ಧ ಗೋಲು ಇಲ್ಲದೆ, ಅಂತ್ಯ ಕಂಡಿತು. 2ನೇ ಅವಧಿಯಲ್ಲೂ ಎರಡೂ ತಂಡಗಳ ನಡುವೆ ಸಮಬಲದ ಹೋರಾಟ ನಡೆಯಿತು. ಆದರೆ ಕೊನೆಯ ಹಂತ 85ನೇ ನಿಮಿಷದಲ್ಲಿ ಭಾರತ ಗೋಲು ಗಳಿಸಿದ ಜಯಭೇರಿ ಬಾರಿಸಿತು.

85ನೇ ನಿಮಿಷದಲ್ಲಿ ಭಾರತಕ್ಕೆ ಪೆಲಾಲ್ಟಿ ಲಭಿಸಿತು. ಅದನ್ನು ಗೋಲಾಗಿ ಪರಿವರ್ತಿಸಿದ ಕ್ಯಾಪ್ಟನ್ ಸುನಿಲ್ ಚೆಟ್ರಿ, ಗೆಲುವಿನಲ್ಲಿ ಪ್ರಮಖ ಪಾತ್ರವಹಿಸಿದರು. ಈ ಗೆಲುವಿನೊಂದಿಗೆ ಭಾರತ 3 ಅಂಕಗಳನ್ನು ತನ್ನ ಖಾತೆಗೆ ಹಾಕಿಕೊಂಡಿದೆ. 'ಎ' ಗುಂಪಿನ ಈ ಪಂದ್ಯದಲ್ಲಿ ಆರಂಭದಿಂದಲೂ ಉಭಯ ತಂಡಗಳ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಡೆದಿತ್ತು. ಮೊದಲಾರ್ಧದಲ್ಲಿ ಗೋಲು ದಾಖಲಾಗಲಿಲ್ಲ.

2ನೇ ಅವಧಿಯಲ್ಲೂ ನಿಖರ ಪೈಪೋಟಿ ಕಂಡು ಬಂತು. ಕೊನೆಯಲ್ಲಿ ಬಾಂಗ್ಲಾದೇಶ ಸವಾಲನ್ನು ಮೆಟ್ಟಿ ನಿಂತ ಭಾರತ ಗೋಲು ಗಳಿಸಲು ಯಶಸ್ವಿಯಾಯಿತು. ಆದರೆ ಈ ಪಂದ್ಯಕ್ಕೂ ಮುನ್ನ ನಡೆದ ಮೊದಲ ಪಂದ್ಯದಲ್ಲಿ ಅತಿಥೇಯ ಚೀನಾ ವಿರುದ್ಧ ಸುನಿಲ್ ಛೆಟ್ರಿ ಬಳಗ 1-5 ಗೋಲುಗಳ ಅಂತರದ ಹೀನಾಯ ಸೋಲು ಕಂಡಿತ್ತು. ನಾಕೌಟ್​​ ಪ್ರವೇಶಿಸಲು ಈ ಪಂದ್ಯದ ಗೆಲುವು ಅನಿವಾರ್ಯವಾಗಿತ್ತು.

ಜಯದ ಲಯಕ್ಕೆ ಮರಳಿರುವ ಭಾರತ ತನ್ನ ಮುಂದಿನ ಪಂದ್ಯದಲ್ಲೂ ಗೆಲ್ಲುವುದು ಅನಿವಾರ್ಯ. ನಾಕೌಟ್ ಪ್ರವೇಶಿಸಲು ಮ್ಯಾನ್ಮಾರ್ ವಿರುದ್ಧ ನಡೆಯಲಿರುವ ಕೊನೆಯ ಲೀಗ್ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದ್ದು, ಗೆದ್ದರೆ ನಾಕೌಟ್​ ಪ್ರವೇಶಿಸಲಿದೆ. ಗೆಲುವಿನ ಬಳಿಕ ಪ್ರತಿಕ್ರಿಯಿಸಿದ 39 ವರ್ಷದ ಸುನಿಲ್ ಚೆಟ್ರಿ, ಕೇವಲ 5 ದಿನಗಳ ಅಂತರದಲ್ಲಿ 3 ಪಂದ್ಯಗಳನ್ನು ಆಡುವುದು ಸುಲಭವಲ್ಲ. ಸಿದ್ಧತೆಗೆ ಅವಕಾಶ ಸಿಗದಂತಾಗಿದೆ. ಬೇಗ ಹೋಗಿ ಮುಂದಿನ ಪಂದ್ಯಕ್ಕೆ ಸಿದ್ಧರಾಗಬೇಕು ಎಂದು ಹೇಳಿದ್ದಾರೆ.

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.