ಫ್ರೆಂಚ್ ಓಪನ್ 2025: ದಿನಾಂಕ, ಸಮಯ, ಸ್ಟಾರ್ ಆಟಗಾರರು ಹಾಗೂ ನೇರಪ್ರಸಾರ ವಿವರ
French Open 2025: ಮಣ್ಣಿನ ಕೋರ್ಟ್‌ನಲ್ಲಿ ನಡೆಯುವ ವಿಶ್ವದ ಏಕೈಕ ಗ್ರ್ಯಾಂಡ್ ಸ್ಲ್ಯಾಮ್ ಟೆನಿಸ್ ಟೂರ್ನಿ ಫ್ರೆಂಚ್ ಓಪನ್. ಈ ಬಾರಿ ಮೇ 25ರಂದು ಆರಂಭವಾಗಿದ್ದು, ಜೂನ್ 8ರಂದು ಪುರುಷರ ಸಿಂಗಲ್ಸ್ ಫೈನಲ್ ಪಂದ್ಯದೊಂದಿಗೆ ಕೊನೆಗೊಳ್ಳಲಿದೆ.

ಫ್ರಾನ್ಸ್‌ನ ರಾಜಧಾನಿ, ಪ್ರೇಮನಗರ ಪ್ಯಾರಿಸ್‌ನಲ್ಲಿ 2025ರ ಫ್ರೆಂಚ್ ಓಪನ್ (French Open) ಪಂದ್ಯಾವಳಿ ಆರಂಭವಾಗಿದೆ. ಇದು ಈ ವರ್ಷದ ಎರಡನೇ ಗ್ರ್ಯಾಂಡ್ ಸ್ಲ್ಯಾಮ್ ಟೂರ್ನಿ. ಮೇ 25ರ ಭಾನುವಾರ ಪ್ರತಿಷ್ಠಿತ ಟೆನಿಸ್ ಟೂರ್ನಿ ಆರಂಭವಾಗಿದ್ದು, ಜಾಗತಿಕ ಟೆನಿಸ್ ತಾರೆಗಳ ಸಮಾಗಮವಾಗಿದೆ. ಟೂರ್ನಿಯ ಆರಂಭದೊಂದಿಗೆ ಟೆನಿಸ್ ಸಂಭ್ರಮ ಕೂಡಾ ಉತ್ತುಂಗಕ್ಕೇರಿದೆ. ಎರಡು ವಾರಗಳ ಕಾಲ ಪ್ರೇಮನಗರಿಯಲ್ಲಿ ಟೆನಿಸ್ ಟೂರ್ನಮೆಂಟ್ ಪರ್ವ ಜೋರಾಗಿ ನಡೆಯಲಿದೆ. ನಗರದ ಐತಿಹಾಸಿಕ ಸ್ಟೇಡ್ ರೋಲ್ಯಾಂಡ್ ಗ್ಯಾರೋಸ್ ಟೆನಿಸ್ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯಲಿದೆ.
ಗ್ರ್ಯಾಂಡ್ ಸ್ಲ್ಯಾಮ್ ಟೆನಿಸ್ ಟೂರ್ನಿಗಳಲ್ಲಿ ಮಣ್ಣಿನ ಕೋರ್ಟ್‌ನಲ್ಲಿ ನಡೆಯುವ ಏಕೈಕ ಟೂರ್ನಿ ಇದಾಗಿದೆ. ಹೀಗಾಗಿ ಇದು ಪ್ರತಿಷ್ಠಿತ ಟೂರ್ನಿಯೂ ಹೌದು. ಈ ಬಾರಿ ಜೂನ್ 8ರಂದು ಪುರುಷರ ಸಿಂಗಲ್ಸ್ ಫೈನಲ್ ಪಂದ್ಯ ನಡೆಯಲಿದ್ದು, ಪಂದ್ಯಾವಳಿ ಕೊನೆಗೊಳ್ಳಲಿದೆ.
ಫ್ರೆಂಚ್ ಓಪನ್ 2025: ದಿನಾಂಕ, ಸಮಯ ಹಾಗೂ ವೇಳಾಪಟ್ಟಿ
ಬೆಳಗ್ಗಿನ ಅವಧಿಯ ಪಂದ್ಯಗಳು ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 2:30ಕ್ಕೆ ಆರಂಭವಾಗಲಿದ್ದು, ರಾತ್ರಿಯ ಪಂದ್ಯಗಳು 11:45ರ ನಂತರ ಇರಲಿದೆ.
- 25-27 ಮೇ: ಪುರುಷರ ಮತ್ತು ಮಹಿಳೆಯರ ಸಿಂಗಲ್ಸ್ ಮೊದಲ ಸುತ್ತು
- 27 ಮೇ: ಪುರುಷರ ಡಬಲ್ಸ್ ಆರಂಭ
- 28-29 ಮೇ: ಪುರುಷ ಮತ್ತು ಮಹಿಳಾ ಸಿಂಗಲ್ಸ್ ಎರಡನೇ ಸುತ್ತು
- 28 ಮೇ: ಮಹಿಳಾ ಡಬಲ್ಸ್ ಮತ್ತು ಮಿಶ್ರ ಡಬಲ್ಸ್ ಆರಂಭ
- 30-31 ಮೇ: ಪುರುಷ ಮತ್ತು ಮಹಿಳಾ ಸಿಂಗಲ್ಸ್ ಮೂರನೇ ಸುತ್ತು
- 1-2 ಜೂನ್: ಪುರುಷ ಮತ್ತು ಮಹಿಳಾ ಸಿಂಗಲ್ಸ್ ನಾಲ್ಕನೇ ಸುತ್ತು
- 3-4 ಜೂನ್: ಪುರುಷ ಮತ್ತು ಮಹಿಳಾ ಸಿಂಗಲ್ಸ್ ಕ್ವಾರ್ಟರ್ ಫೈನಲ್
- 3 ಜೂನ್: ವೀಲ್‌ಚೇರ್ ಪಂದ್ಯಾವಳಿ ಆರಂಭ
- 5 ಜೂನ್: ಮಹಿಳಾ ಸಿಂಗಲ್ಸ್ ಸೆಮಿಫೈನಲ್
- 6 ಜೂನ್: ಪುರುಷರ ಸಿಂಗಲ್ಸ್ ಸೆಮಿಫೈನಲ್
- 7 ಜೂನ್: ಮಹಿಳಾ ಸಿಂಗಲ್ಸ್ ಫೈನಲ್
- 8 ಜೂನ್: ಪುರುಷರ ಸಿಂಗಲ್ಸ್ ಫೈನಲ್
ಫ್ರೆಂಚ್ ಓಪನ್ 2025 ನೇರಪ್ರಸಾರ ಮತ್ತು ಲೈವ್ ಸ್ಟ್ರೀಮಿಂಗ್ ವಿವರಗಳು
2025ರ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯು ಭಾರತದಲ್ಲಿ ಟಿವಿ ಮೂಲಕ ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರವಾಗಲಿದೆ. ಇದೇ ವೇಳೆ ಫ್ಯಾನ್‌ಕೋಡ್ ಮತ್ತು ಸೋನಿಲಿವ್ ಅಪ್ಲಿಕೇಶನ್ ಹಾಗೂ ವೆಬ್‌ಸೈಟ್‌ನಲ್ಲಿ ಆನ್‌ಲೈನ್ ಮೂಲಕ ನೇರಪ್ರಸಾರ ವೀಕ್ಷಿಸಬಹುದು.
ಸ್ಟಾರ್ ಆಟಗಾರರು (ಪುರುಷರ ಸಿಂಗಲ್ಸ್)
- ಜಾನಿಕ್ ಸಿನ್ನರ್
- ಕಾರ್ಲಸ್ ಅಲ್ಕರಾಜ್
- ಅಲೆಕ್ಸಾಂಡರ್ ಜ್ವೆರೆವ್
- ಟೇಲರ್ ಫ್ರಿಟ್ಜ್
- ಜ್ಯಾಕ್ ಡ್ರೇಪರ್
- ನೊವಾಕ್ ಜೊಕೊವಿಕ್
ಮಹಿಳೆಯರ ಸಿಂಗಲ್ಸ್
- ಅರಿನಾ ಸಬಲೆಂಕಾ
- ಕೊಕೊ ಗೌಫ್
- ಜೆಸ್ಸಿಕಾ ಪೆಗುಲಾ
- ಜಾಸ್ಮಿನ್ ಪಯೋಲಿನಿ
- ಇಗಾ ಸ್ವಿಯಾಟೆಕ್
- ಮಿರ್ರಾ ಆಂಡ್ರೀವಾ
ಇದನ್ನೂ ಓದಿ | ಸೋಲಿನೊಂದಿಗೆ ಮಲೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಅಭಿಯಾನ ಮುಗಿಸಿದ ಕಿಡಂಬಿ ಶ್ರೀಕಾಂತ್