ಪ್ರೋ ಹಾಕಿ ಲೀಗ್ ಪಂದ್ಯ: ಭಾರತದ ವಿರುದ್ಧ 4-1 ಗೋಲುಗಳಿಂದ ಗೆದ್ದು ಬೀಗಿದ ಹಾಲಿ ಚಾಂಪಿಯನ್ ಜರ್ಮನಿ
ಕನ್ನಡ ಸುದ್ದಿ  /  ಕ್ರೀಡೆ  /  ಪ್ರೋ ಹಾಕಿ ಲೀಗ್ ಪಂದ್ಯ: ಭಾರತದ ವಿರುದ್ಧ 4-1 ಗೋಲುಗಳಿಂದ ಗೆದ್ದು ಬೀಗಿದ ಹಾಲಿ ಚಾಂಪಿಯನ್ ಜರ್ಮನಿ

ಪ್ರೋ ಹಾಕಿ ಲೀಗ್ ಪಂದ್ಯ: ಭಾರತದ ವಿರುದ್ಧ 4-1 ಗೋಲುಗಳಿಂದ ಗೆದ್ದು ಬೀಗಿದ ಹಾಲಿ ಚಾಂಪಿಯನ್ ಜರ್ಮನಿ

ಎಫ್‌ಐಎಚ್ ಹಾಕಿ ಪ್ರೊ ಲೀಗ್ 2024-25 (ಪುರುಷರ) ಪಂದ್ಯದಲ್ಲಿ ಆಕ್ರಮಣಕಾರಿ ಪ್ರದರ್ಶನ ತೋರಿದ ಜರ್ಮನಿ ತಂಡವು ಭಾರತ ತಂಡವನ್ನು 4-1ರಿಂದ ಮಣಿಸಿತು.

ಪ್ರೋ ಹಾಕಿ ಲೀಗ್ ಪಂದ್ಯ: ಭಾರತದ ವಿರುದ್ಧ 4-1 ಗೋಲುಗಳಿಂದ ಗೆದ್ದು ಬೀಗಿದ ಹಾಲಿ ಚಾಂಪಿಯನ್ ಜರ್ಮನಿ
ಪ್ರೋ ಹಾಕಿ ಲೀಗ್ ಪಂದ್ಯ: ಭಾರತದ ವಿರುದ್ಧ 4-1 ಗೋಲುಗಳಿಂದ ಗೆದ್ದು ಬೀಗಿದ ಹಾಲಿ ಚಾಂಪಿಯನ್ ಜರ್ಮನಿ

ಭುವನೇಶ್ವರ, ಫೆ 18: ಭುವನೇಶ್ವರದ ಐಕಾನಿಕ್ ಕಳಿಂಗ ಹಾಕಿ ಕ್ರೀಡಾಂಗಣದಲ್ಲಿ ನಡೆದ ಎಫ್‌ಐಎಚ್ ಹಾಕಿ ಪ್ರೊ ಲೀಗ್ 2024-25 (ಪುರುಷರ) ಪಂದ್ಯದಲ್ಲಿ ಹಾಲಿ ವಿಶ್ವ ಚಾಂಪಿಯನ್ ಜರ್ಮನಿ ತಂಡವು ಭಾರತವನ್ನು 4-1 ಗೋಲುಗಳಿಂದ ಸೋಲಿಸಿತು. ಫ್ಲೋರಿಯನ್ ಸ್ಪೆರ್ಲಿಂಗ್ (7ನೇ ನಿಮಿಷ), ಥೀಸ್ ಪ್ರಿಂಜ್ (14), ಮೈಕೆಲ್ ಸ್ಟ್ರುಥಾಫ್ (48) ಮತ್ತು ರಾಫೆಲ್ ಹಾರ್ಟ್‌ಕೋಫ್ (55) ಅವರು ಗೋಲು ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಆದರೆ ಗುರ್ಜಂತ್ ಸಿಂಗ್ (13') ಭಾರತದ ಏಕೈಕ ಗೋಲು ಗಳಿಸಿದರು.

ಉಭಯ ತಂಡಗಳ ನಡುವಿನ ಪೈಪೋಟಿ ಪಂದ್ಯವು ಆರಂಭದಿಂದಲೇ ತೀವ್ರವಾಗಿತ್ತು. ಭಾರತ ಸೋತರೂ ಕೊನೆಯ ಕ್ಷಣದರೆಗೂ ಹೋರಾಟ ನಡೆಸಿತು. ದಾಳಿಗೆ ಪ್ರತಿದಾಳಿ ನಡೆಸುವ ಮೂಲಕ ಎದುರಾಳಿಗೆ ತಂಡಕ್ಕೆ ಪ್ರತಿ ನಿಮಿಷದಲ್ಲೂ ಭೀತಿ ಸೃಷ್ಟಿಸಿತ್ತು. ಆದರೆ ರಕ್ಷಣೆ ವಿಚಾರದಲ್ಲಿ ಭಾರತವು ಮಾಡಿದ ಕೆಲವೊಂದು ದೋಷಗಳು ಪಂದ್ಯ ಕಳೆದುಕೊಳ್ಳುವಂತೆ ಮಾಡಿತು. ಪ್ಯಾರಿಸ್ ಒಲಿಂಪಿಕ್ಸ್​​ನಲ್ಲಿ ಕಂಚಿನ ಪದಕ ವಿಜೇತ ಭಾರತ ತಂಡ ಪ್ರೊ ಲೀಗ್‌ನಲ್ಲಿ ಆಡಿದ 2 ಪಂದ್ಯಗಳಲ್ಲಿ 2ನೇ ಸೋಲು ಕಂಡಿದೆ.

ಸತತ ಗೋಲು ಗಳಿಸಿದ ಜರ್ಮನಿ

ಪಂದ್ಯದ ಆರಂಭದಲ್ಲೇ ಜರ್ಮನಿ ಮೇಲುಗೈ ಸಾಧಿಸಿತು. ಫ್ಲೋರಿಯನ್ ಸ್ಪರ್ಲಿಂಗ್ 7ನೇ ನಿಮಿಷದಲ್ಲೇ ಗೋಲು ಗಳಿಸಿದರು. ಭಾರತವೂ ಅದ್ಭುತ ಪ್ರದರ್ಶನದೊಂದಿಗೆ 13ನೇ ನಿಮಿಷದಲ್ಲಿ ಗೋಲು ಗಳಿಸಿ 1-1 ಸಮಬಲಗೊಳಿಸಿತು. ಅದರ ಮರು ನಿಮಿಷದಲ್ಲೇ ಥಿಯಸ್‌ ಪ್ರಿಂಝ್ ಅವರು ಗೋಲು ಬಾರಿಸಿ ಜರ್ಮನಿಗೆ ಮುನ್ನಡೆ ಒದಗಿಸಿದರು. ಅಲ್ಲದೆ, ಮೊದಲ ಕ್ವಾರ್ಟರ್​ ಜರ್ಮನಿ 2-1 ರಿಂದ ಮುನ್ನಡೆಯೊಂದಿಗೆ ಮುಗಿಯಿತು. ಆದರೆ ಆ ಬಳಿಕ ಭಾರತ ಗೋಲು ಗಳಿಸಲು ಹರಸಾಹಸಪಟ್ಟಿತು. ಆದರೆ ಸಾಧ್ಯವಾಗಲಿಲ್ಲ.

2ನೇ ಕ್ವಾರ್ಟರ್‌ನ ಆರಂಭದಿಂದಲೂ ಭಾರತ ಆಕ್ರಮಣಕಾರಿ ದಾಳಿ ಪ್ರದರ್ಶಿಸಿತು. ಆದರೆ ಪ್ರಾಬಲ್ಯ ಮೆರೆಯಲು ವಿಫಲವಾಯಿತು. ಮೂರನೇ ಕ್ವಾರ್ಟರ್​​ನಲ್ಲೂ ಗೋಲು ಗಳಿಸಲು ಮತ್ತೆ ಸಾಧ್ಯವಾಗಲಿಲ್ಲ. ಮೈಕೆಲ್‌ ಸ್ಟ್ರುತೋಫ್‌ 48ನೇ ನಿಮಿಷ ಗೋಲು ಗಳಿಸುವ ಮೂಲಕ ಜರ್ಮನಿ ತಂಡವನ್ನು 3-1ಕ್ಕೆ ಏರಿಸಿದರೆ, ಇದಾದ ಏಳು ನಿಮಿಷಗಳಲ್ಲಿ ರಫೇಲ್ ಹಾರ್ಟ್‌ಕೊಫ್ ಗೋಲು ಬಾರಿಸಿ ತಮ್ಮ ತಂಡದ ಗೆಲುವಿನ ಅಂತರವನ್ನು 4-1ಕ್ಕೆ ಹೆಚ್ಚಿಸುವಲ್ಲಿ ಯಶಸ್ವಿಯಾದರು.

ಗೋಲು ಗಳಿಸುವ ಅವಕಾಶ ಕಳೆದುಕೊಂಡ ಭಾರತ

ಎರಡನೇ ಕ್ವಾರ್ಟರ್‌ನ 29ನೇ ನಿಮಿಷದಲ್ಲಿ ದಿಲ್‌ಪ್ರೀತ್ ಅಸಾಂಪ್ರದಾಯಿಕ ಹೊಡೆತದಿಂದ ಗೋಲು ಗಳಿಸಲು ವಿಫಲರಾದರು. ಮೂರನೇ ಕ್ವಾರ್ಟರ್‌ನಲ್ಲೂ ಪಂದ್ಯ ರೋಮಾಂಚಕವಾಗಿಯೇ ಸಾಗಿತು. 38 ನೇ ನಿಮಿಷದಲ್ಲಿ ಭಾರತಕ್ಕೆ ಗೋಲು ಗಳಿಸುವ ಅತ್ಯುತ್ತಮ ಅವಕಾಶ ಸಿಕ್ಕಿತು. ಅಲ್ಲೂ ಗೋಲು ಬರಲಿಲ್ಲ. ಅತ್ತ ಗೋಲು ಗಳಿಸಲು ವಿಫಲವಾಗಿದ್ದರ ಜೊತೆಗೆ ರಕ್ಷಣೆಯನ್ನು ಮಾಡುವುದರಲ್ಲೂ ವಿಫಲವಾಯಿತು. ಹೀಗಾಗಿ ಪಂದ್ಯವನ್ನು ಕಳೆದುಕೊಳ್ಳುವಂತಾಯಿತು.

Prasanna Kumar P N

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner

ವಿಭಾಗ

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.