ಪ್ಯಾರಿಸ್ ಒಲಿಂಪಿಕ್ಸ್ ಆರಂಭದ ನಂತರ ಸ್ಕೇಟ್​​ ಬೋರ್ಡಿಂಗ್​ಗೆ ಡೂಡಲ್ ಗೌರವ ಕೊಟ್ಟಿದ್ದೇಕೆ ಗೂಗಲ್​? ಇಲ್ಲಿದೆ ವಿವರ
ಕನ್ನಡ ಸುದ್ದಿ  /  ಕ್ರೀಡೆ  /  ಪ್ಯಾರಿಸ್ ಒಲಿಂಪಿಕ್ಸ್ ಆರಂಭದ ನಂತರ ಸ್ಕೇಟ್​​ ಬೋರ್ಡಿಂಗ್​ಗೆ ಡೂಡಲ್ ಗೌರವ ಕೊಟ್ಟಿದ್ದೇಕೆ ಗೂಗಲ್​? ಇಲ್ಲಿದೆ ವಿವರ

ಪ್ಯಾರಿಸ್ ಒಲಿಂಪಿಕ್ಸ್ ಆರಂಭದ ನಂತರ ಸ್ಕೇಟ್​​ ಬೋರ್ಡಿಂಗ್​ಗೆ ಡೂಡಲ್ ಗೌರವ ಕೊಟ್ಟಿದ್ದೇಕೆ ಗೂಗಲ್​? ಇಲ್ಲಿದೆ ವಿವರ

Google Doodle: ಒಲಿಂಪಿಕ್ಸ್ ವೇಳಾಪಟ್ಟಿಯ ಪ್ರಕಾರ ಇಂದು (ಜುಲೈ 27) ಈ ಕ್ರೀಡಾಕೂಟವು ಹೊಸ ಸ್ಕೇಟ್​ ಬೋರ್ಡಿಗ್ ಸ್ಪರ್ಧೆಗಳೊಂದಿಗೆ ಪ್ರಾರಂಭವಾದ ಕಾರಣ ಗೂಗಲ್ ಡೂಡಲ್ ಗೌರವ ನೀಡಿದೆ.

ಪ್ಯಾರಿಸ್ ಒಲಿಂಪಿಕ್ಸ್ ಆರಂಭದ ನಂತರ ಸ್ಕೇಟ್​​ ಬೋರ್ಡಿಂಗ್​ಗೆ ಡೂಡಲ್ ಗೌರವ ಕೊಟ್ಟಿದ್ದೇಕೆ ಗೂಗಲ್
ಪ್ಯಾರಿಸ್ ಒಲಿಂಪಿಕ್ಸ್ ಆರಂಭದ ನಂತರ ಸ್ಕೇಟ್​​ ಬೋರ್ಡಿಂಗ್​ಗೆ ಡೂಡಲ್ ಗೌರವ ಕೊಟ್ಟಿದ್ದೇಕೆ ಗೂಗಲ್

ಪ್ಯಾರಿಸ್​​ನಲ್ಲಿ ನಡೆಯುತ್ತಿರುವ 2024ರ ಬೇಸಿಗೆ ಒಲಿಂಪಿಕ್ಸ್​ ಜುಲೈ 26ರ ಶುಕ್ರವಾರ ವರ್ಣರಂಜಿತ ಚಾಲನೆ ಪಡೆಯಿತು. ಇಂದು ಅಂದರೆ ಜುಲೈ 27ರ ಶನಿವಾರ ಡಿ ಲಾ ಕಾಂಕಾರ್ಡ್​​ನಲ್ಲಿ ಜರುಗುವ ಸ್ಕೇಟ್​ ಬೋರ್ಡಿಂಗ್ ಸ್ಫರ್ಧೆಗಳೊಂದಿಗೆ ಒಲಿಂಪಿಕ್ಸ್​ ಪ್ರಾರಂಭವಾಗಲಿದೆ. ಈ ಕ್ರೀಡೆ ಹೊಸದಾಗಿ ಸೇರ್ಪಡೆಗೊಂಡ ಕಾರಣ ಈ ಸ್ಫರ್ಧೆಗಳ ಅನಿಮೇಟೆಡ್ ಗೂಗಲ್ ಡೂಡಲ್ ಮೂಲಕ ಗೌರವ ನೀಡಿದೆ. ಇಲ್ಲಿ ಆನಿಮೇಟೆಡ್ ಸ್ಪರ್ಧಿಗಳ ಗುಂಪು ಸ್ಕೇಟಿಂಗ್ ಮಾಡುತ್ತಿರುವುದನ್ನು ತೋರಿಸಲಾಗಿದೆ.

ಇಂದು ಪುರುಷರ ಸ್ಕೇಟ್ ಬೋರ್ಡಿಂಗ್​ ಈವೆಂಟ್​​ಗಳಿದ್ದು, 2 ಸುತ್ತುಗಳನ್ನು ಹೊಂದಿದೆ. ಪುರುಷರ ಸ್ಟ್ರೀಟ್ ಪ್ರಿಲಿಮ್ಸ್ ಅನ್ನು ಮಧ್ಯಾಹ್ನ ನಿಗದಿಪಡಿಸಿದ್ದರೆ, ಅಂತಿಮ ಸುತ್ತನ್ನು ಸಂಜೆ ನಿಗದಿಪಡಿಸಲಾಗಿದೆ. ಸ್ಕೇಟ್ ಬೋರ್ಡಿಂಗ್​ 4 ಹೊಸ ಕ್ರೀಡೆಗಳಲ್ಲಿ ಒಂದಾಗಿದೆ. ಇದರೊಂದಿಗೆ ಬ್ರೇಕಿಂಗ್, ಸರ್ಫಿಂಗ್ ಮತ್ತು ಸ್ಪೋರ್ಟ್ಸ್ ಕ್ಲೈಂಬಿಂಗ್ ಅನ್ನೂ ಸಾಂಪ್ರದಾಯಿಕ ಒಲಿಂಪಕ್ಸ್​ ಕ್ರೀಡೆಗಳೊಂದಿಗೆ ಸೇರಿಸಲಾಗಿದೆ.

ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದ 32 ಕ್ರೀಡಾ ವಿಭಾಗಗಳಲ್ಲಿ 329 ಸ್ಪರ್ಧೆಗಳಲ್ಲಿ ಸ್ಪರ್ಧಿಸಲು 206 ದೇಶಗಳ 10,500ಕ್ಕೂ ಅಧಿಕ ಕ್ರೀಡಾಪಟುಗಳು ಫ್ರೆಂಚ್ ರಾಜಧಾನಿಯಲ್ಲಿ ಒಟ್ಟುಗೂಡಿದ್ದಾರೆ. ಕ್ರೀಡಾಕೂಟವು ಜುಲೈ 26 ರಂದು ಪ್ರಾರಂಭವಾಗಿದ್ದು, ಆಗಸ್ಟ್ 11 ರಂದು ಕೊನೆಗೊಳ್ಳಲಿದೆ.

2024ರ ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಸ್ಪರ್ಧಿಸಲಿರುವ ಭಾರತೀಯರು

ಶೂಟಿಂಗ್: ಪೃಥ್ವಿರಾಜ್ ತೊಂಡೈಮನ್, ಸಂದೀಪ್ ಸಿಂಗ್, ಸ್ವಪ್ನಿಲ್ ಕುಸಲೆ, ಐಶ್ವರಿ ಪ್ರತಾಪ್ ಸಿಂಗ್ ತೋಮರ್, ಎಲವೇನಿಲ್ ವಲರಿವನ್, ಸಿಫ್ಟ್ ಕೌರ್ ಸಾಮ್ರಾ, ರಾಜೇಶ್ವರಿ ಕುಮಾರಿ, ಸರಬ್ಜೋತ್ ಸಿಂಗ್, ಅರ್ಜುನ್ ಬಾಬುಟಾ, ರಮಿತಾ ಜಿಂದಾಲ್, ಮನು ಭಾಕರ್, ಅನೀಶ್ ಭನ್ವಾಲಾ, ಅಂಜುಮ್ ಮೌದ್ಗಿಲ್, ಅರ್ಜುನ್ ಚೀಮಾ, ಇಶಾ ಸಿಂಗ್, ರಿದಮ್ ಸಾಂಗ್ವಾನ್, ವಿಜಯ್ವೀರ್ ಸಿಧು, ರೈಜಾ ಧಿಲ್ಲಾನ್, ಅನಂತ್ಜೀತ್ ಸಿಂಗ್.

ಅಥ್ಲೆಟಿಕ್ಸ್: ಅಕ್ಷದೀಪ್ ಸಿಂಗ್, ಪ್ರಿಯಾಂಕಾ ಗೋಸ್ವಾಮಿ, ವಿಕಾಸ್ ಸಿಂಗ್, ಪರಮ್ಜೀತ್ ಬಿಶ್ತ್, ಅವಿನಾಶ್ ಸಾಬ್ಲೆ, ನೀರಜ್ ಚೋಪ್ರಾ, ಪಾರುಲ್ ಚೌಧರಿ, ರಾಮ್ ಬಾಬು, ಪ್ರಿಯಾಂಕಾ ಗೋಸ್ವಾಮಿ, ಸೂರಜ್ ಪನ್ವಾರ್, ಮುಹಮ್ಮದ್ ಅನಾಸ್, ಮುಹಮ್ಮದ್ ಅಜ್ಮಲ್, ಅಮೋಜ್ ಜಾಕೋಬ್, ಸಂತೋಷ್ ತಮಿಳರಸನ್, ರಾಜೇಶ್ ರಮೇಶ್, ಜ್ಯೋತಿಕಾ ಶ್ರೀ ದಂಡಿ, ಶುಭಾ ವೆಂಕಟೇಶನ್, ವಿಠ್ಠಲ ರಾಮರಾಜ್, ಪೂವಮ್ಮ ಎಂ.ಆರ್. ಅಂಕಿತಾ ಧ್ಯಾನಿ.

ಕುಸ್ತಿ: ಆಂಟಿಮ್ ಪಂಗಲ್, ನಿಖತ್ ಜರೀನ್, ಪ್ರೀತಿ ಪವಾರ್, ಲವ್ಲಿನಾ ಬೊರ್ಗೊಹೈನ್, ಕಿಶೋರ್ ಜೆನಾ, ವಿನೇಶ್ ಫೋಗಟ್, ಅಂಶು ಮಲಿಕ್, ರೀತಿಕಾ ಹೂಡಾ, ನಿಶಾ ದಹಿಯಾ, ಅಮನ್ ಸೆಹ್ರಾವತ್.

ಬಾಕ್ಸಿಂಗ್: ನಿಶಾಂತ್ ದೇವ್, ಅಮಿತ್ ಪಂಗಲ್, ಜೈಸ್ಮಿನ್ ಲಂಬೋರಿಯಾ,

ಆರ್ಚರಿ: ಧೀರಜ್ ಬೊಮ್ಮದೇವರ, ಭಜನ್ ಕೌರ್, ತರುಣ್ದೀಪ್ ರಾಯ್, ಪ್ರವೀಣ್ ಜಾಧವ್, ದೀಪಿಕಾ ಕುಮಾರಿ, ಅಂಕಿತಾ ಭಕತ್

ಸೇಲಿಂಗ್: ವಿಷ್ಣು ಸರವಣನ್, ನೇತ್ರಾ ಕುಮನನ್

ಈಕ್ವೆಸ್ಟ್ರಿಯನ್: ಅನುಷ್ ಅಗರ್ವಾಲ್.

ಟೇಬಲ್ ಟೆನಿಸ್: ಶರತ್ ಕಮಲ್, ಹರ್ಮೀತ್ ದೇಸಾಯಿ, ಮಾನವ್ ಠಕ್ಕರ್, ಮಣಿಕಾ ಬಾತ್ರಾ, ಶ್ರೀಜಾ ಅಕುಲಾ, ಅರ್ಚನಾ ಕಾಮತ್

ಟೆನಿಸ್: ರೋಹನ್ ಬೋಪಣ್ಣ/ ಎನ್ ಶ್ರೀರಾಮ್ ಬಾಲಾಜಿ

ರೋಯಿಂಗ್: ಬಲರಾಜ್ ಪನ್ವಾರ್

ಬ್ಯಾಡ್ಮಿಂಟನ್: ಪಿ.ವಿ.ಸಿಂಧು, ಎಚ್.ಎಸ್.ಪ್ರಣಯ್, ಲಕ್ಷ್ಯ ಸೇನ್, ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ-ಚಿರಾಗ್ ಶೆಟ್ಟಿ, ಅಶ್ವಿನಿ ಪೊನ್ನಪ್ಪ-ತನಿಶಾ ಕ್ರಾಸ್ತೋ,

ಗಾಲ್ಫ್: ಶುಭಂಕರ್ ಶರ್ಮಾ, ಗಗನ್​ಜೀತ್ ಭುಲ್ಲರ್, ಅದಿತಿ ಅಶೋಕ್, ದೀಕ್ಷಾ ದಾಗರ್,

ವೇಟ್​ಲಿಫ್ಟಿಂಗ್: ಮೀರಾಬಾಯಿ ಚಾನು

ಜೂಡೋ: ತುಲಿಕಾ ಮಾನ್

ಈಜು: ಶ್ರೀಹರಿ ನಟರಾಜ್, ಧಿನಿಧಿ ದೇಸಿಂಗು

ಇನ್ನಷ್ಟು ಕ್ರಿಕೆಟ್​ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ಯಾರಿಸ್ ಒಲಿಂಪಿಕ್ಸ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.