CSK vs GT: ಟಾಸ್​ ಗೆದ್ದ ಗುಜರಾತ್​ ಬೌಲಿಂಗ್​ ಆಯ್ಕೆ, ಚೆನ್ನೈ ಬ್ಯಾಟಿಂಗ್​​​; ಪ್ಲೇಯಿಂಗ್​​ XI ಹೀಗಿದೆ!
ಕನ್ನಡ ಸುದ್ದಿ  /  ಕ್ರೀಡೆ  /  Csk Vs Gt: ಟಾಸ್​ ಗೆದ್ದ ಗುಜರಾತ್​ ಬೌಲಿಂಗ್​ ಆಯ್ಕೆ, ಚೆನ್ನೈ ಬ್ಯಾಟಿಂಗ್​​​; ಪ್ಲೇಯಿಂಗ್​​ Xi ಹೀಗಿದೆ!

CSK vs GT: ಟಾಸ್​ ಗೆದ್ದ ಗುಜರಾತ್​ ಬೌಲಿಂಗ್​ ಆಯ್ಕೆ, ಚೆನ್ನೈ ಬ್ಯಾಟಿಂಗ್​​​; ಪ್ಲೇಯಿಂಗ್​​ XI ಹೀಗಿದೆ!

16ನೇ ಆವೃತ್ತಿಯ ಐಪಿಎಲ್​ ಮೊದಲ ಪಂದ್ಯದಲ್ಲಿ ಗುಜರಾತ್​ ಟೈಟಾನ್ಸ್​​ ಟಾಸ್​ ಗೆದ್ದಿದ್ದು, ಬೌಲಿಂಗ್​ ಆಯ್ಕೆ ಮಾಡಿಕೊಂಡಿದೆ. ಚೆನ್ನೈ ಸೂಪರ್​ ಕಿಂಗ್ಸ್​ ಮೊದಲು ಬ್ಯಾಟಿಂಗ್​ ನಡೆಸುತ್ತಿದೆ.

ಎಂಎಸ್​ ಧೋನಿ, ಹಾರ್ದಿಕ್​ ಪಾಂಡ್ಯ
ಎಂಎಸ್​ ಧೋನಿ, ಹಾರ್ದಿಕ್​ ಪಾಂಡ್ಯ (Twitter)

16ನೇ ಆವೃತ್ತಿಯ ಐಪಿಎಲ್​​ನ ಉದ್ಘಾಟನಾ​ ಪಂದ್ಯದಲ್ಲಿ ಗುಜರಾತ್​ ಟೈಟಾನ್ಸ್​ (Gujarat Titans) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (Chennai Super Kings)​ ಮುಖಾಮುಖಿಯಾಗುತ್ತಿವೆ. ಹಾಲಿ ಚಾಂಪಿಯನ್​ ಗುಜರಾತ್​​​​​ ಟಾಸ್​ ಗೆದ್ದಿದ್ದು, ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ಇದರೊಂದಿಗೆ ಚೆನ್ನೈ​ ಮೊದಲು ಬ್ಯಾಟಿಂಗ್​ ನಡೆಸುತ್ತಿದೆ.

ಕಳೆದ ವರ್ಷ ಸಿಎಸ್‌ಕೆ ಎದುರು ಆಡಿದ ಎರಡೂ ಪಂದ್ಯಗಳಲ್ಲಿ ಟೈಟನ್ಸ್‌ ಜಯ ದಾಖಲಿಸಿತ್ತು. ಇದೀಗ ಮೂರನೇ ಮುಖಾಮುಖಿಯಲ್ಲೂ ಚೆನ್ನೈಗೆ ಸೋಲುಣಿಸುವ ಲೆಕ್ಕಾಚಾರ ಹಾಕಿಕೊಂಡಿದೆ ಹಾರ್ದಿಕ್​ ಪಡೆ.

ಹಾಲಿ ಚಾಂಪಿಯನ್​ ಗುಜರಾತ್​!

ಗುಜರಾತ್​ ಟೈಟಾನ್ಸ್​ ತಂಡವು ಮೊದಲ ಬಾರಿಗೆ ಕಳೆದ ಆವೃತ್ತಿಯಲ್ಲಿ ಐಪಿಎಲ್​ಗೆ ಹೊಸ ಹೆಜ್ಜೆ ಇಟ್ಟಿತು. ಹಲವು ನಿರೀಕ್ಷೆಗಳೊಂದಿಗೆ ಕಣಕ್ಕಿಳಿದ ಈ ತಂಡವು ಮೊದಲ ಆವೃತ್ತಿಯಲ್ಲೇ ಚಾಂಪಿಯನ್​ ಪಟ್ಟ ಅಲಂಕರಿಸಿ, ಗಮನ ಸೆಳೆಯಿತು. ಸದ್ಯ ಪ್ರಶಸ್ತಿ ಉಳಿದಿಕೊಳ್ಳುವ ತವಕದಲ್ಲಿ ಗುಜರಾತ್​ ತಂಡವಿದ್ದು, ತಮ್ಮ ಅಭಿಯಾನವನ್ನು ಯಶಸ್ವಿಯಾಗಿ ಆರಂಭಿಸುವ ಹುರುಪಿನಲ್ಲಿದೆ.

ಚೆನ್ನೈ-ಗುಜರಾತ್​ ಮುಖಾಮುಖಿ

15ನೇ ಆವೃತ್ತಿಯಲ್ಲಿ ಮಿಲಿಯನ್​ ಡಾಲರ್ ಟೂರ್ನಿಯಲ್ಲಿ ಉಭಯ ತಂಡಗಳು ಎರಡು ಬಾರಿ ಮುಖಾಮುಖಿಯಾಗಿವೆ. ಆದರೆ ಈ ಎರಡು ಪಂದ್ಯಗಳಲ್ಲೂ ಗುರು ಧೋನಿಗೆ, ಶಿಷ್ಯ ಹಾರ್ದಿಕ್​ ಚಮಕ್​ ಕೊಟ್ಟಿದ್ದಾರೆ. ಎರಡರಲ್ಲೂ ಗೆದ್ದಿರುವ ಹಾರ್ದಿಕ್​, ಈ ಪಂದ್ಯದಲ್ಲೂ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಕಳೆದ ವರ್ಷ ಚೆನ್ನೈ ಸೂಪರ್​ ಕಿಂಗ್ಸ್​​​ ಕಳಪೆ ಪ್ರದರ್ಶನ ನೀಡಿತ್ತು. ಪರಿಣಾಮ ಲೀಗ್​​ ಹಂತದಲ್ಲೇ ಹೊರಬಿದ್ದಿತ್ತು. ಇದೀಗ ಪುಟಿದೇಳುವ ಆತ್ಮ ವಿಶ್ವಾಸದಲ್ಲಿರುವ ಚೆನ್ನೈ ಶುಭಾರಂಭದ ನಿರೀಕ್ಷೆಯಲ್ಲಿದೆ.

ಧೋನಿಗೆ ಕೊನೆಯ ಐಪಿಎಲ್​

ಎಂಎಸ್​ ಧೋನಿಗೆ ಇದು ಬಹುತೇಕ ಕೊನೆಯ ಐಪಿಎಲ್​. ಹಾಗಾಗಿ ಚೆನ್ನೈೆ ಈ ಟೂರ್ನಿಗೆ ಭಾವನಾತ್ಮಕವಾಗಿಯೂ ಸಜ್ಜಾಗಿದೆ. ಮಹತ್ವದ್ದಾಗಿದೆ. ಧೋನಿ ನಾಯಕತ್ವದಲ್ಲಿ ಚೆನ್ನೈ 9 ಬಾರಿ ಫೈನಲ್​ ಪ್ರವೇಶ ಮಾಡಿದ್ದು, 4 ಬಾರಿ ಚಾಂಪಿಯನ್​ ಪಟ್ಟ ಅಲಂಕರಿಸಿದೆ. ಹಾಗಾಗಿ ಧೋನಿಗೆ ಗೆಲುವಿನ ವಿದಾಯದ ನಿರೀಕ್ಷೆಯಲ್ಲಿದೆ ಚೆನ್ನೈ. ಸದ್ಯಕ್ಕಂತೂ ಧೋನಿ ತಮ್ಮ ತಂಡಕ್ಕೆ ಐದನೇ ಟ್ರೋಫಿ ಜಯಿಸಿಕೊಡುವತ್ತ ಚಿತ್ತ ನೆಟ್ಟಿದ್ದಾರೆ. 

ವೈಭವದ ಉದ್ಘಾಟನಾ ಸಮಾರಂಭ

ಮೂರು ವರ್ಷಗಳ ಬಳಿಕ ಐಪಿಎಲ್‌ ಮತ್ತೆ ತನ್ನ ಹಳೆಯ ಹೋಮ್‌ ಅಂಡ್‌ ಅವೇ ಮಾದರಿಯಲ್ಲಿ ಆಯೋಜನೆಯಾಗುತ್ತಿದೆ. 16ನೇ ಆವೃತ್ತಿಯ ಟೂರ್ನಿಯನ್ನೂ ಅದ್ಧೂರಿಯಾಗಿ ಪ್ರಾರಂಭಿಸಲಾಗಿದೆ. ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಪಂದ್ಯಕ್ಕೂ ಮುನ್ನ ವೈಭವದ ಉದ್ಘಾಟನಾ ಸಮಾರಂಭ ಆಯೋಜಿಸಲಾಯಿತು. ಬಾಲಿವುಡ್‌ ತಾರೆಯರಾದ ಅರ್ಜಿತ್‌ ಸಿಂಗ್‌, ತಮನ್ನಾ ಭಾಟಿಯಾ ಮತ್ತು ರಷ್ಮಿಕಾ ಮಂದಣ್ಣ ಉದ್ಘಾಟನಾ ಸಮಾರಂಭದಲ್ಲಿ ಪ್ರೇಕ್ಷಕರು ರಂಜಿಸಿದರು.

ಚೆನ್ನೈ ಸೂಪರ್ ಕಿಂಗ್ಸ್ (ಪ್ಲೇಯಿಂಗ್ XI)

ಡೆವೊನ್ ಕಾನ್ವೇ, ಋತುರಾಜ್ ಗಾಯಕ್ವಾಡ್, ಬೆನ್ ಸ್ಟೋಕ್ಸ್, ಅಂಬಟಿ ರಾಯುಡು, ಮೊಯಿನ್ ಅಲಿ, ಶಿವಂ ದುಬೆ, ಎಂಎಸ್ ಧೋನಿ (ನಾಯಕ, ವಿಕೆಟ್​ ಕೀಪರ್​), ರವೀಂದ್ರ ಜಡೇಜಾ, ಮಿಚೆಲ್ ಸ್ಯಾಂಟ್ನರ್, ದೀಪಕ್ ಚಾಹರ್, ರಾಜವರ್ಧನ್ ಹಂಗರ್ಗೇಕರ್.

ಗುಜರಾತ್ ಟೈಟಾನ್ಸ್ (ಪ್ಲೇಯಿಂಗ್ XI)

ವೃದ್ಧಿಮಾನ್ ಸಹಾ (ವಿಕೆಟ್​ ಕೀಪರ್​), ಶುಭ್ಮನ್ ಗಿಲ್, ಕೇನ್ ವಿಲಿಯಮ್ಸನ್, ಹಾರ್ದಿಕ್ ಪಾಂಡ್ಯ (ನಾಯಕ), ವಿಜಯ್ ಶಂಕರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಮೊಹಮ್ಮದ್ ಶಮಿ, ಜೋಶುವಾ ಲಿಟಲ್, ಯಶ್ ದಯಾಳ್​, ಅಲ್ಜಾರಿ ಜೋಸೆಫ್

ಗುಜರಾತ್ ಟೈಟಾನ್ಸ್ ಸಬ್​​ಸ್ಟಿಸ್ಟೂಟ್​: ಬಿ ಸಾಯಿ ಸುದರ್ಶನ್, ಜಯಂತ್ ಯಾದವ್, ಮೋಹಿತ್ ಶರ್ಮಾ, ಅಭಿನವ್ ಮನೋಹರ್, ಕೆಎಸ್ ಭರತ್

ಚೆನ್ನೈ ಸೂಪರ್ ಕಿಂಗ್ಸ್ ಸಬ್​​ಸ್ಟಿಸ್ಟೂಟ್​: ತುಷಾರ್ ದೇಶಪಾಂಡೆ, ಸುಭ್ರಾಂಶು ಸೇನಾಪತಿ, ಶೇಕ್ ರಶೀದ್, ಅಜಿಂಕ್ಯ ರಹಾನೆ, ನಿಶಾಂತ್ ಸಿಂಧು

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.