ತಲೈವಾಸ್‌ಗೆ ಆರನೇ ಸೋಲುಣಿಸಿದ ಗುಜರಾತ್; ಡೆಲ್ಲಿ-ಜೈಪುರ ಪಂದ್ಯ ಡ್ರಾದಲ್ಲಿ ಅಂತ್ಯ; ನವೀನ್‌ಗೆ ಗಂಭೀರ ಗಾಯ
ಕನ್ನಡ ಸುದ್ದಿ  /  ಕ್ರೀಡೆ  /  ತಲೈವಾಸ್‌ಗೆ ಆರನೇ ಸೋಲುಣಿಸಿದ ಗುಜರಾತ್; ಡೆಲ್ಲಿ-ಜೈಪುರ ಪಂದ್ಯ ಡ್ರಾದಲ್ಲಿ ಅಂತ್ಯ; ನವೀನ್‌ಗೆ ಗಂಭೀರ ಗಾಯ

ತಲೈವಾಸ್‌ಗೆ ಆರನೇ ಸೋಲುಣಿಸಿದ ಗುಜರಾತ್; ಡೆಲ್ಲಿ-ಜೈಪುರ ಪಂದ್ಯ ಡ್ರಾದಲ್ಲಿ ಅಂತ್ಯ; ನವೀನ್‌ಗೆ ಗಂಭೀರ ಗಾಯ

Pro Kabaddi League: ದಬಾಂಗ್‌ ಡೆಲ್ಲಿ‌ ತಂಡ ಪ್ರಮುಖ ರೈಡರ್ ನವೀನ್ ಕುಮಾರ್ ಮೊಣಕಾಲಿನ ಗಾಯಕ್ಕೆ ತುತ್ತಾಗಿದ್ದಾರೆ. ಪಂದ್ಯದ ನಡುವೆ ಅವರನ್ನು ಸ್ಟ್ಟ್ರೆಚರ್‌ನಲ್ಲಿ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಲಾಗಿದೆ.

ತಮಿಳ್‌ ತಲೈವಾಸ್‌ ವಿರುದ್ಧ ಗುಜರಾತ್‌ ಜೈಂಟ್ಸ್‌ ಗೆಲುವು
ತಮಿಳ್‌ ತಲೈವಾಸ್‌ ವಿರುದ್ಧ ಗುಜರಾತ್‌ ಜೈಂಟ್ಸ್‌ ಗೆಲುವು (Twitter)

ಪ್ರೊ ಕಬಡ್ಡಿ ಲೀಗ್‌ (Pro Kabaddi League) 10ನೇ ಆವೃತ್ತಿಯ ಬುಧವಾರದ ಪಂದ್ಯದಲ್ಲಿ ಎರಡು ರೋಚಕ ಪಂದ್ಯಗಳು ನಡೆದಿವೆ. ಬಲಿಷ್ಠ ತಂಡಗಳಾದ ಜೈಪುರ್‌ ಪಿಂಕ್‌ ಪ್ಯಾಂಥರ್ಸ್‌ ಮತ್ತು ದಬಾಂಗ್‌ ಡೆಲ್ಲಿ (Jaipur Pink Panthers - Dabang Delhi) ನಡುನಿನ ಪಂದ್ಯವು ರೋಚಕ ಟೈನಲ್ಲಿ ಅಂತ್ಯಗೊಂಡರೆ, ತಮಿಳ್‌ ತಲೈವಾಸ್‌ ಮತ್ತು ಗುಜರಾತ್‌ ಜೈಂಟ್ಸ್‌ (Tamil Thalaivas- Gujarat Giants) ನಡುವಿನ ಎರಡನೇ ಪಂದ್ಯದಲ್ಲಿ ಫಜಲ್‌ ಅತ್ರಾಚಲಿ ನೇತೃತ್ವದ ಗುಜರಾತ್‌ ತಂಡವು 33-30 ಅಂತರದಿಂದ ಗೆದ್ದು ಬೀಗಿದೆ.

ಜೈಪುರ ಪಿಂಕ್ ಪ್ಯಾಂಥರ್ಸ್ ತಂಡವು ದಬಾಂಗ್ ಡೆಲ್ಲಿ ವಿರುದ್ಧ ಡ್ರಾ ಸಾಧಿಸುವಲ್ಲಿ ಯಶಸ್ವಿಯಾಯ್ತು. ಒಂದು ಹಂತದಲ್ಲಿ ತಂಡವು ಬರೋಬ್ಬರಿ 13 ಅಂಕಗಳ ಹಿನ್ನಡೆಯಲ್ಲಿತ್ತು. ಆದರೆ, ಫೀನಿಕ್ಸ್‌ನತ್ತೆ ಎದ್ದು ಬಂದ ತಂಡ, ಕೊನೆಗೂ ಡೆಲ್ಲಿಯ ಗೆಲುವಿಗೆ ಅವಕಾಶ ನೀಡಲಿಲ್ಲ.

ನವೀನ್‌ಗೆ ಗಾಯ

ಅತ್ತ ಡೆಲ್ಲಿ‌ ತಂಡ ಪ್ರಮುಖ ರೈಡರ್ ನವೀನ್ ಕುಮಾರ್ ಮೊಣಕಾಲಿನ ಗಾಯಕ್ಕೆ ತುತ್ತಾದರು. ಇದು ತಂಡದ ಹಿನ್ನಡೆಗೆ ಕಾರಣವಾಯ್ತು. ಉಭಯ ತಂಡಗಳ ನಡುವಿನ ಅಂಕವು 7-14 ಆಗಿದ್ದಾಗ, ನವೀನ್‌ ಮೊಣಕಾಲಿಗೆ ಗಾಯವಾಯ್ತು. ಅವರನ್ನು ಸ್ಟ್ಟ್ರೆಚರ್‌ನಲ್ಲಿ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಲಾಯ್ತು. ಗಂಭೀರ ಗಾಯಗೊಂಡ ಹಿನ್ನಲೆಯಲ್ಲಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಸದ್ಯ ಅವರು ಮುಂದಿನ ಪಂದ್ಯಗಳಿಗೆ ಲಭ್ಯರಾಗುವ ಕುರಿತು ಇನ್ನಷ್ಟೇ ಮಾಹಿತಿ ಲಭಿಸಬೇಕಿದೆ.

ಇದನ್ನೂ ಓದಿ | PKL 10: ಯುವ ಆಟಗಾರ ಪಂಕಜ್ ಖಡಕ್ ರೇಡಿಂಗ್; ಪಾಟ್ನಾ ಪೈರೇಟ್ಸ್ ಕೋಟೆ ಕೆಡವಿದ ಪುಣೇರಿ ಪಲ್ಟನ್

ಸದ್ಯ ಜೈಪುರ ತಂಡವು ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದರೆ, ಡೆಲ್ಲಿ ಏಳನೇ ಸ್ಥಾನದಲ್ಲಿದೆ.

ದಿನದ ಎರಡನೇ ಪಂದ್ಯದಲ್ಲಿ ಗುಜರಾತ್‌ ಮೇಲುಗೈ ಸಾಧಿಸಿತು. ತಲೈವಾಸ್‌ ಪರ ರೈಡಿಂಗ್‌ನಲ್ಲಿ ಮಿಂಚಿದ ಅಜಿಂಕ್ಯಾ ಪವಾರ್‌, ಸೂಪರ್‌ 10 ಪೂರ್ಣಗೊಳಿಸಿದರು. ಆದರೆ, ತಂಡದ ಗೆಲುವು ಸಾಧ್ಯವಾಗಲಿಲ್ಲ. ಅತ್ತ ಜೈಂಟ್ಸ್‌ ಪರ ರಾಕೇಶ್‌ ರೈಡಿಂಗ್‌ನಲ್ಲಿ 9 ಅಂಕ ಕಲೆ ಹಾಕಿದರೆ, ಫಜಲ್‌ ಅತ್ರಾಚಲಿ ಮೂರು ಟ್ಯಾಕಲ್‌ ಪಾಯಿಂಟ್‌ ತಮ್ಮದಾಗಿಸಿದರು. ಪಂದ್ಯದಲ್ಲಿ ಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡ ತಂಡ, ಪ್ರಸಕ್ತ ಆವೃತ್ತಿಯಲ್ಲಿ 5ನೇ ಗೆಲುವು ದಾಖಲಿಸಿತು. ಅಲ್ಲದೆ ಅಂಕಪಟ್ಟಿಯಲ್ಲಿ ಸದ್ಯ ಮೂರನೇ ಸ್ಥಾನಕ್ಕೇರಿತು.

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.