ಅಪ್ಪನ ತೋಳುಗಳಲ್ಲಿ ಬಂಧಿಯಾಗಿ ಕಣ್ಣೀರಿಟ್ಟ ಗುಕೇಶ್, ಅಮ್ಮನಿಗೆ ಕರೆ ಮಾಡಿ ಭಾವುಕ; 8ನೇ ವಯಸ್ಸಿನಲ್ಲಿ ಕಂಡಿದ್ದ ಕನಸು ನನಸು!
ಕನ್ನಡ ಸುದ್ದಿ  /  ಕ್ರೀಡೆ  /  ಅಪ್ಪನ ತೋಳುಗಳಲ್ಲಿ ಬಂಧಿಯಾಗಿ ಕಣ್ಣೀರಿಟ್ಟ ಗುಕೇಶ್, ಅಮ್ಮನಿಗೆ ಕರೆ ಮಾಡಿ ಭಾವುಕ; 8ನೇ ವಯಸ್ಸಿನಲ್ಲಿ ಕಂಡಿದ್ದ ಕನಸು ನನಸು!

ಅಪ್ಪನ ತೋಳುಗಳಲ್ಲಿ ಬಂಧಿಯಾಗಿ ಕಣ್ಣೀರಿಟ್ಟ ಗುಕೇಶ್, ಅಮ್ಮನಿಗೆ ಕರೆ ಮಾಡಿ ಭಾವುಕ; 8ನೇ ವಯಸ್ಸಿನಲ್ಲಿ ಕಂಡಿದ್ದ ಕನಸು ನನಸು!

ಡಿಂಗ್ ಲಿರೆನ್ ವಿರುದ್ಧದ ಐತಿಹಾಸಿಕ ಗೆಲುವಿನ ನಂತರ ಡಿ ಗುಕೇಶ್ ತಮ್ಮ ತಂದೆಯೊಂದಿಗೆ ಭಾವನಾತ್ಮಕ ಕ್ಷಣವನ್ನು ಹೊಂದಿದ್ದರು ಮತ್ತು ಅವರ ತೋಳುಗಳ ಮೇಲೆ ಅಳುತ್ತಿರುವುದು ಕಂಡುಬಂದಿದೆ.

ಅಪ್ಪನ ತೋಳುಗಳಲ್ಲಿ ಬಂಧಿಯಾಗಿ ಕಣ್ಣೀರಿಟ್ಟ ಗುಕೇಶ್, ಅಮ್ಮನಿಗೆ ಕರೆ ಮಾಡಿ ಭಾವುಕ; 8ನೇ ವಯಸ್ಸಿನಲ್ಲಿ ಕಂಡಿದ್ದ ಕನಸು ನನಸು!
ಅಪ್ಪನ ತೋಳುಗಳಲ್ಲಿ ಬಂಧಿಯಾಗಿ ಕಣ್ಣೀರಿಟ್ಟ ಗುಕೇಶ್, ಅಮ್ಮನಿಗೆ ಕರೆ ಮಾಡಿ ಭಾವುಕ; 8ನೇ ವಯಸ್ಸಿನಲ್ಲಿ ಕಂಡಿದ್ದ ಕನಸು ನನಸು!

ವಿಶ್ವ ಚೆಸ್ ಚಾಂಪಿಯನ್ ಶಿಪ್ 2024 ನಿರ್ಣಾಯಕ 14 ನೇ ಪಂದ್ಯದಲ್ಲಿ ಚೀನಾದ ಡಿಂಗ್ ಲಿರೆನ್​ರನ್ನು ಸೋಲಿಸುವ ಮೂಲಕ ಭಾರತದ 18 ವರ್ಷದ ಗುಕೇಶ್ ದೊಮ್ಮರಾಜು ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅತ್ಯಂತ ಕಿರಿಯ ವಿಶ್ವ ಚೆಸ್ ಚಾಂಪಿಯನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇನ್ನೇನು ಪಂದ್ಯ ಟೈ ಬ್ರೇಕರ್​ಗೆ ಹೋಗಬೇಕು ಎನ್ನುವಾಗ 55ನೇ ನಿಮಿಷದಲ್ಲಿ ಡಿಂಗ್ ಲಿರೆನ್ ಮಾಡಿದ ಎಡವಟ್ಟಿನ ಲಾಭ ಪಡೆದ ಗುಕೇಶ್ ಅವರು​ 7.5-6.5 ಅಂತರದಲ್ಲಿ ಜಯ ಸಾಧಿಸಿದ್ದಾರೆ. ಜಯದ ನಗೆ ಬೀರಿದ ಬೆನ್ನಲ್ಲೇ ಕಣ್ಣೀರು ಹಾಕಿದರು. ಗುಕೇಶ್ ಭಾವುಕ ಕ್ಷಣದ ವಿಡಿಯೋ, ಫೋಟೋಗಳು ವೈರಲ್ ಆಗುತ್ತಿವೆ.

ಚದುರಂಗ ಚತುರ ಗುಕೇಶ್ ಈ ಸಾಧನೆಗೈದ ವಿಶ್ವದ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ. ಅಲ್ಲದೆ, ವಿಶ್ವನಾಥನ್ ಆನಂದ್ ಬಳಿಕ ಈ ಪ್ರಶಸ್ತಿ ಗೆದ್ದ ಭಾರತದ ಎರಡನೇ ಆಟಗಾರನೂ ಹೌದು. ಆದರೆ ಗುಕೇಶ್ ಪ್ರಶಸ್ತಿ ಗೆಲ್ಲುವ ಕನಸು ಇವತ್ತು, ನಿನ್ನೆಯದ್ದಲ್ಲ, ತನ್ನ 8ನೇ ವಯಸ್ಸಿನಲ್ಲಿ ಕಂಡಿದ್ದ ಕನಸು ಇದು. ಹೌದು, ವಿಶ್ವ ಚೆಸ್ ಚಾಂಪಿಯನ್​ ಗೆಲ್ಲಬೇಕೆಂದು ತನ್ನ 8ನೇ ವಯಸ್ಸಿನಲ್ಲೇ ಕನಸು ಕಂಡಿದ್ದರಂತೆ. ಇದೀಗ ಆ ಕನಸು ನನಸಾಗಿದೆ. ಇದೇ ವೇಳೆ ತನ್ನ ಜೊತೆಗಿದ್ದ ತಂದೆಯನ್ನು ಗಟ್ಟಿಯಾಗಿ ಅಪ್ಪಿಕೊಂಡು ಕಣ್ಣೀರು ಹಾಕಿದ್ದಾರೆ. ಅಮ್ಮನಿಗೆ ಕರೆ ಮಾಡಿ ಸಂತೋಷ ಹಂಚಿಕೊಂಡಿದ್ದಾರೆ. ಕೋಚ್​​ಗಳನ್ನು ತಬ್ಬಿಕೊಂಡು ಕಣ್ಣೀರು ಸುರಿಸಿದ್ದಾರೆ.

ಮೆಂಟಲ್ ಕಂಡೀಷನಿಂಗ್ ತರಬೇತುದಾರ ಪ್ಯಾಡಿ ಅಪ್ಟನ್ ಅವರೊಂದಿಗೆ ಸ್ಥಳದಲ್ಲಿ ಅವರ ತಂದೆ ರಜನಿಕಾಂತ್ ಸಹ ಹಾಜರಿದ್ದರು. ಮಗ ಜಯದ ನಗೆ ಬೀರುತ್ತಿದ್ದಂತೆ ಅವರ ಖುಷಿಗೆ ಪಾರವೇ ಇರಲಿಲ್ಲ. ಗೆದ್ದ ಬಳಿಕ ಗುಕೇಶ್ ರೂಮ್​ನಿಂದ ಓಡೋಡಿ ಬಂದು ತನ್ನ ತಂದೆಯನ್ನು ಗಟ್ಟಿಯಾಗಿ ಅಪ್ಪಿಕೊಂಡರು. ಆನಂದಭಾಷ್ಪ ಸುರಿಸಿ ಅವರ ತೋಳುಗಳಲ್ಲಿ ಬಂಧಿಯಾದರು. ಅವರ ತಂದೆ ಕೂಡ ತೀವ್ರ ಭಾವುಕರಾದರು. ಬಳಿಕ ಪಕ್ಕದಲ್ಲೇ ಇದ್ದ ಕೋಚಿಂಗ್ ಸಿಬ್ಬಂದಿಯನ್ನು ತಬ್ಬಿಕೊಂಡು ಮತ್ತೆ ಕಣ್ಣೀರು ಸುರಿಸಿದರು. ಗುಕೇಶ್ ತಂಡದ ಕಾರನ್ನು ಹತ್ತಿದರೂ ಅವರ ಕಣ್ಣಲ್ಲಿ ನೀರು ಜಿನುಗುತ್ತಲೇ ಇತ್ತು. ಇದೇ ವೇಳೆ ತಮ್ಮ ತಾಯಿಗೆ ಕರೆ ಮಾಡಿ ಸಂತೋಷವನ್ನು ಹಂಚಿಕೊಂಡರು.

8 ವಯಸ್ಸಿನಲ್ಲೇ ಕನಸು ಕಂಡಿದ್ದೆ ಎಂದ ಗುಕೇಶ್

ಗೆಲುವಿನ ನಂತರ ಮಾತನಾಡಿದ ಗುಕೇಶ್, ಲಿರೆನ್ ಅವರು ಎಸಗಿದ ಪ್ರಮಾದ ತಮ್ಮ ಜೀವನದ 'ಅತ್ಯುತ್ತಮ ಕ್ಷಣ' ಎಂದು ಹೇಳಿದ್ದಾರೆ. ಇದೇ ವೇಳೆ ಲಿರೆನ್ ಅವರಿಗೆ ಗೌರವ ಸಲ್ಲಿಸಿದ್ದಾರೆ. ಅವರನ್ನು 'ಇತಿಹಾಸದ ಅತ್ಯುತ್ತಮ ಆಟಗಾರರಲ್ಲಿ ಒಬ್ಬರು' ಎಂದು ಕರೆದಿರುವ ಗುಕೇಶ್, 'ನಿಜವಾದ ವಿಶ್ವ ಚಾಂಪಿಯನ್' ಎಂದು ಸೋತಿರುವ ಲಿರೆನ್ ಅವರನ್ನು ಶ್ಲಾಘಿಸಿದ್ದಾರೆ. ನಾನು 8 ವರ್ಷಗಳ ಹಿಂದೆಯೇ ಈ ಪ್ರಶಸ್ತಿ ಗೆಲ್ಲುವ ಕನಸು ಕಂಡಿದ್ದೆ. ಭಾರತ 11 ವರ್ಷಗಳ ಹಿಂದೆ ಈ ಪ್ರಶಸ್ತಿ ಗೆದ್ದಿತ್ತು. ಈ ಪ್ರಶಸ್ತಿಯನ್ನು ಮರಳಿ ಭಾರತಕ್ಕೆ ಗೆಲ್ಲುಕ್ಕಿಂತ ಉತ್ತಮವಾದುದು ಯಾವುದೂ ಇಲ್ಲ ಎಂದು ಅವರು ಹೇಳಿದ್ದಾರೆ.

ಸೋಲಿಗೆ ಪಶ್ಚಾತ್ತಾಪ ಇಲ್ಲವೆಂದ ಲಿರೆನ್

ತನ್ನ ಪ್ರಮಾದದ ಬಗ್ಗೆ ಮಾತನಾಡಿದ ಲಿರೆನ್, ನಾನು ತಪ್ಪು ಮಾಡಿದ್ದೇನೆ ಎಂದು ಅರಿತುಕೊಳ್ಳಲು ನನಗೆ ಸ್ವಲ್ಪ ಸಮಯ ಹಿಡಿಯಿತು ಎಂದು ಹೇಳಿದರು. ನಾನು ವರ್ಷದಲ್ಲಿ ನನ್ನ ಅತ್ಯುತ್ತಮ ಟೂರ್ನಿಯನ್ನು ಆಡಿದ್ದೇನೆ ಎಂದು ನಾನು ಭಾವಿಸುತ್ತೇನೆ. ನಾನು ಉತ್ತಮವಾಗಿರಬಹುದು, ಆದರೆ ನಿನ್ನೆಯ ಅದೃಷ್ಟ ಪರಿಗಣಿಸಿದರೆ, ಕೊನೆಯಲ್ಲಿ ಸೋಲುವುದು ನ್ಯಾಯಯುತ ಫಲಿತಾಂಶವಾಗಿದೆ. ನನಗೆ ಯಾವ ಪಶ್ಚಾತ್ತಾಪವೂ ಇಲ್ಲ ಎಂದು ಹೇಳಿದ್ದಾರೆ.

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.