ಕನ್ನಡ ಸುದ್ದಿ  /  Sports  /  Hardik Pandya Tweet Goes Viral After Bumrah Officially Ruled Out

Hardik Pandya On Bumrah: ಬುಮ್ರಾ T20 ವಿಶ್ವಕಪ್‌ನಿಂದ ಹೊರಹೋಗ್ತಿದ್ದಂತೆ ಹಾರ್ದಿಕ್‌ ಪಾಂಡ್ಯ ಟ್ವಿಟ್‌ ವೈರಲ್..‌.

ಬುಮ್ರಾ ಟೂರ್ನಿಯಿಂದ ನಿರ್ಗಮಿಸುತ್ತಿದ್ದಂತೆ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಟ್ವಿಟರ್‌ನಲ್ಲಿ ಪೋಸ್ಟ್ ಹಾಕಿದ್ದು, ಸದ್ಯ ಆ ಪೋಸ್ಟ್‌ ವೈರಲ್‌ ಆಗಿದೆ.

ಬುಮ್ರಾ T20 ವಿಶ್ವಕಪ್‌ನಿಂದ ಹೋರಹೋಗ್ತಿದ್ದಂತೆ ಹಾರ್ದಿಕ್‌ ಪಾಂಡ್ಯ ಟ್ವಿಟ್‌ ವೈರಲ್..‌
ಬುಮ್ರಾ T20 ವಿಶ್ವಕಪ್‌ನಿಂದ ಹೋರಹೋಗ್ತಿದ್ದಂತೆ ಹಾರ್ದಿಕ್‌ ಪಾಂಡ್ಯ ಟ್ವಿಟ್‌ ವೈರಲ್..‌

ಯಾರ್ಕರ್‌ಮನ್ ಜಸ್ಪ್ರೀತ್ ಬುಮ್ರಾ ಗಾಯದ ಕಾರಣ ಮುಂದಿನ ತಿಂಗಳು ಪ್ರಾರಂಭವಾಗುವ T20 ವಿಶ್ವಕಪ್‌ನಿಂದ ಅಧಿಕೃತವಾಗಿ ಹೊರಗುಳಿದಿದ್ದರಿಂದ ಭಾರತೀಯ ಕ್ರಿಕೆಟ್ ತಂಡಕ್ಕೆ ದೊಡ್ಡ ಆಘಾತವಾಗಿದೆ. ಐಸಿಸಿ ಟಿ20 ವಿಶ್ವಕಪ್ ತಂಡದಿಂದ ಬುಮ್ರಾ ಅವರನ್ನು ಕೈಬಿಡಲಾಗಿದೆ ಎಂಬ ವಿಚಾರವನ್ನು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಬುಮ್ರಾ ಟೂರ್ನಿಯಿಂದ ನಿರ್ಗಮಿಸಿರುವುದು ಭಾರತಕ್ಕೆ ದೊಡ್ಡ ಹೊಡೆತವಾಗಿದೆ. ಬುಮ್ರಾ ಪುರುಷರ T20I ಕ್ರಿಕೆಟ್‌ನಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಮೂರನೇ ಬೌಲರ್ ಆಗಿದ್ದಾರೆ. ಬುಮ್ರಾ ಟೂರ್ನಿಯಿಂದ ನಿರ್ಗಮಿಸುತ್ತಿದ್ದಂತೆ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಟ್ವಿಟರ್‌ನಲ್ಲಿ ಪೋಸ್ಟ್ ಹಾಕಿದ್ದು, ಸದ್ಯ ಆ ಪೋಸ್ಟ್‌ ವೈರಲ್‌ ಆಗಿದೆ.

ಪಾಂಡ್ಯ ತಮ್ಮ ಪೋಸ್ಟ್‌ನಲ್ಲಿ, "ನನ್ನ ಜಸ್ಸಿ ನನ್ನಂತೆಯೆ ಬಲವಾಗಿಯೇ ಕಮ್‌ಬ್ಯಾಕ್‌ ಮಾಡುತ್ತಾರೆ" ಎಂದು ಬರೆದುಕೊಂಡಿದ್ದಾರೆ.

ಈ ಹಿಂದೆಯೂ ಬುಮ್ರಾ ಬೆನ್ನು ನೋವಿನಿಂದ ಬಳಲುತ್ತಿದ್ದರು. ಇದೇ ಕಾರಣಕ್ಕೆ 2019ರಲ್ಲಿ ಮೂರು ತಿಂಗಳು ಹೊರಗಿದ್ದರು. ಆದರೆ ಈ ಬಾರಿ ನಾಲ್ಕರಿಂದ ಆರು ತಿಂಗಳು ಹೊರಗೆ ಇರಬೇಕಾಗಬಹುದು. ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ಗಾಗಿ 14 ಪಂದ್ಯಗಳನ್ನು ಆಡಿರುವ ಬುಮ್ರಾ, ಈ ವರ್ಷ ಭಾರತಕ್ಕಾಗಿ ಎಲ್ಲ ಮೂರು ಫಾರ್ಮೆಟ್‌ಗಳಲ್ಲಿ ಐದೈದು ಪಂದ್ಯಗಳನ್ನು ಆಡಿದ್ದಾರೆ.

ಟಿ20 ವಿಶ್ವಕಪ್‌ಗೆ ಬುಮ್ರಾ ಬದಲಿ ಆಟಗಾರನನ್ನು ಬಿಸಿಸಿಐ ಶೀಘ್ರದಲ್ಲೇ ಪ್ರಕಟಿಸಲಿದೆ. 2022ರ ಟಿ20 ವಿಶ್ವಕಪ್‌ನಿಂದ ಹೊರಗುಳಿದ ಭಾರತದ ಎರಡನೇ ಆಟಗಾರ ಬುಮ್ರಾ. ಇದಕ್ಕೂ ಮುನ್ನ ಆಲ್‌ರೌಂಡರ್ ರವೀಂದ್ರ ಜಡೇಜಾ ಈಗಾಗಲೇ ಟೂರ್ನಿಯಿಂದ ಹೊರಗುಳಿದಿದ್ದಾರೆ.

ಸೂಪರ್‌ 12 ಹಂತದಲ್ಲಿ ಆಡುವ ತಂಡಗಳು ಯಾವುವು? ಆಟಗಾರರ ಪಟ್ಟಿ ನೋಡ ಬನ್ನಿ

ಗ್ರೂಪ್‌ ಎ

ಅಫ್ಘಾನಿಸ್ತಾನ

ಮೊಹಮ್ಮದ್ ನಬಿ (ನಾಯಕ), ನಜಿಬುಲ್ಲಾ ಝದ್ರಾನ್, ರಹಮಾನುಲ್ಲಾ ಗುರ್ಬಾಜ್, ಅಜ್ಮತುಲ್ಲಾ ಒಮರ್ಜೈ, ದರ್ವಿಶ್ ರಸೂಲಿ, ಫರೀದ್ ಅಹ್ಮದ್ ಮಲಿಕ್, ಫಜಲ್ ಹಕ್ ಫಾರೂಕಿ, ಹಜರತುಲ್ಲಾ ಝಜೈ, ಇಬ್ರಾಹಿಂ ಝದ್ರಾನ್, ಮುಜೀಬ್ ಉರ್ ರಹಮದ್, ನವೀನ್ ಉಲ್ ಹಕ್, ಖೈಸ್ ಅಹ್ಮದ್, ರಶೀದ್ ಖಾನ್, ಸಲೀಂ ಸಫಿ

ಆಸ್ಟ್ರೇಲಿಯಾ

ಆರನ್ ಫಿಂಚ್ (ನಾಯಕ), ಆಷ್ಟನ್ ಅಗರ್, ಪ್ಯಾಟ್ ಕಮಿನ್ಸ್, ಟಿಮ್ ಡೇವಿಡ್, ಜೋಶ್ ಹ್ಯಾಜಲ್‌ವುಡ್, ಜೋಶ್ ಇಂಗ್ಲಿಸ್, ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ಕೇನ್ ರಿಚರ್ಡ್ಸನ್, ಸ್ಟೀವನ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಮಾರ್ಕಸ್ ಸ್ಟೊಯಿನಿಸ್, ಮ್ಯಾಥ್ಯೂ ವೇಡ್, ಡೇವಿಡ್ ವಾರ್ನರ್, ಆಡಮ್ ಝಂಪಾ.

ಇಂಗ್ಲೆಂಡ್

ಜೋಸ್ ಬಟ್ಲರ್ (ನಾಯಕ), ಮೊಯಿನ್ ಅಲಿ, ಹ್ಯಾರಿ ಬ್ರೂಕ್, ಸ್ಯಾಮ್ ಕರಾನ್, ಕ್ರಿಸ್ ಜೋರ್ಡಾನ್, ಲಿಯಾಮ್ ಲಿವಿಂಗ್‌ಸ್ಟನ್, ಡೇವಿಡ್ ಮಲನ್, ಆದಿಲ್ ರಶೀದ್, ಫಿಲ್ ಸಾಲ್ಟ್, ಬೆನ್ ಸ್ಟೋಕ್ಸ್, ರೀಸ್ ಟೋಪ್ಲಿ, ಡೇವಿಡ್ ವಿಲ್ಲಿ, ಕ್ರಿಸ್ ವೋಕ್ಸ್, ಮಾರ್ಕ್ ವುಡ್, ಅಲೆಕ್ಸ್ ಹೇಲ್ಸ್.

ನ್ಯೂಜಿಲೆಂಡ್

ಕೇನ್ ವಿಲಿಯಮ್ಸನ್ (ನಾಯಕ), ಟಿಮ್ ಸೌಥಿ, ಇಶ್ ಸೋಧಿ, ಮಿಚೆಲ್ ಸ್ಯಾಂಟ್ನರ್, ಗ್ಲೆನ್ ಫಿಲಿಪ್ಸ್, ಜಿಮ್ಮಿ ನೀಶಮ್, ಡೇರಿಲ್ ಮಿಚೆಲ್, ಆಡಮ್ ಮಿಲ್ನೆ, ಮಾರ್ಟಿನ್ ಗಪ್ಟಿಲ್, ಲಾಚ್ಲಾನ್ ಫರ್ಗುಸನ್, ಡೆವೊನ್ ಕಾನ್ವೇ, ಮಾರ್ಕ್ ಚಾಪ್ಮನ್, ಮೈಕಲ್ ಬ್ರೇಸ್‌ವೆಲ್, ಟ್ರೆಂಟ್ ಬೌಲ್ಟ್ , ಫಿನ್‌ ಅಲೆನ್‌

ಗ್ರೂಪ್‌ ಬಿ

ಭಾರತ

ರೋಹಿತ್ ಶರ್ಮಾ (ನಾಯಕ), ಕೆ ಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ಆರ್ ಅಶ್ವಿನ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್.

ಬಾಂಗ್ಲಾದೇಶ

ಶಕೀಬ್ ಅಲ್ ಹಸನ್, ಸಬ್ಬಿರ್ ರೆಹಮಾನ್, ಮೆಹಿದಿ ಹಸನ್ ಮಿರಾಜ್, ಅಫೀಫ್ ಹೊಸೈನ್, ಮೊಸಾಡೆಕ್ ಹೊಸೈನ್, ಲಿಟ್ಟನ್ ದಾಸ್,ಯಾಸಿರ್ ಅಲಿ, ನೂರುಲ್ ಹಸನ್, ಮುಸ್ತಾಫಿಜುರ್ ರೆಹಮಾನ್, ಸೈಫುದ್ದೀನ್, ತಸ್ಕಿನ್ ಅಹ್ಮದ್, ಎಬಾಡೋತ್ ಹೊಸೈನ್, ಹಸನ್ ಮಹಮೂದ್, ನಜ್ಮುಲ್ ಹೊಸೈನ್, ನಸುಮ್ ಅಹ್ಮದ್

ಪಾಕಿಸ್ತಾನ

ಬಾಬರ್ ಅಜಮ್ (ನಾಯಕ), ಶಾದಾಬ್ ಖಾನ್, ಆಸಿಫ್ ಅಲಿ, ಹೈದರ್ ಅಲಿ, ಹಾರಿಸ್ ರೌಫ್, ಇಫ್ತಿಕರ್ ಅಹ್ಮದ್, ಖುಷ್ದಿಲ್ ಶಾ, ಮೊಹಮ್ಮದ್ ಹಸ್ನೈನ್, ಮೊಹಮ್ಮದ್ ನವಾಜ್, ಮೊಹಮ್ಮದ್ ರಿಜ್ವಾನ್, ಮೊಹಮ್ಮದ್ ವಾಸಿಂ, ನಸೀಮ್ ಶಾ, ಶಾಹೀನ್ ಶಾ ಅಫ್ರಿದಿ, ಶಾನ್ ಮಸೂದ್, ಉಸ್ಮಾನ್ ಮಸೂದ್.

ದಕ್ಷಿಣ ಆಫ್ರಿಕಾ

ಟೆಂಬಾ ಬವುಮಾ (ನಾಯಕ), ಕ್ವಿಂಟನ್ ಡಿ ಕಾಕ್, ಹೆನ್ರಿಚ್ ಕ್ಲಾಸೆನ್, ರೀಜಾ ಹೆಂಡ್ರಿಕ್ಸ್, ಕೇಶವ್ ಮಹಾರಾಜ್, ಐಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ಲುಂಗಿ ಎನ್‌ಗಿಡಿ, ಅನ್ರಿಚ್ ನಾರ್ಟ್ಜೆ, ವೇಯ್ನ್ ಪಾರ್ನೆಲ್, ಡ್ವೈನ್ ಪ್ರಿಟೋರಿಯಸ್, ಕಗಿಸೊ ರಬಾಡ, ರಿಲ್ಲಿ ಟ್ರಿಸ್ಟಾನ್‌ಜೌಸಿ, ತಬ್ರಾಸೌಸಿ, ಟಾಬ್ರಾಸೌಸಿ ಸ್ಟಬ್ಸ್.