ಕನ್ನಡ ಸುದ್ದಿ  /  Sports  /  He Made Only 1 Mistake Irfan S Huge Remark On Rohit After Ind Vs Nz 2nd Odi

Irfan huge remark on Rohit: ಭಾರತ-ಕಿವೀಸ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ರೋಹಿತ್ ಒಂದು ತಪ್ಪು ಮಾಡಿದ್ರು: ಇರ್ಫಾನ್ ಪಠಾಣ್

ರಾಯ್ಪುರದಲ್ಲಿ ನಿನ್ನೆ(ಜ.21) ನಡೆದಿದ್ದ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಒಂದೇ ಒಂದು ತಪ್ಪು ಮಾಡಿದ್ದಾರೆ ಎಂದು ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಹೇಳಿದ್ದಾರೆ. ಈ ಪಂದ್ಯದಲ್ಲಿ ರೋಹಿತ್ ಅರ್ಧ ಶತಕ ಸಿಡಿಸಿದ್ದರು.

ಇರ್ಫಾನ್ ಪಠಾಣ್ ಮತ್ತು ರೋಹಿತ್ ಶರ್ಮಾ
ಇರ್ಫಾನ್ ಪಠಾಣ್ ಮತ್ತು ರೋಹಿತ್ ಶರ್ಮಾ

ಮುಂಬೈ: ರಾಯ್‌ಪುರದ ಶಾಹೀದ್ ವೀರ್ ನಾರಾಯಣ ಸಿಂಗ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತ 8 ವಿಕೆಟ್ ಗಳ ಗೆಲುವು ಸಾಧಿಸುವ ಮೂಲಕ ಸರಣಿಯನ್ನು ಕೈವಶ ಮಾಡಿಕೊಂಡಿತ್ತು.

ಈ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅರ್ಧ ಶತಕದ ಕಾಣಿಕೆಯನ್ನು ನೀಡಿದ್ದರು. ರೋಹಿತ್ ಈ ಎರಡನೇ ಏಕದಿನ ಪಂದ್ಯದಲ್ಲಿ 48ನೇ ಅರ್ಧ ಶತಕ ಸಿಡಿಸಿದರು.

ಆದರೆ ನಾಯಕ ಶರ್ಮಾ ಬಗ್ಗೆ ಟೀಂ ಇಂಡಿಯಾದ ಮಾಜಿ ಆಲ್ರೌಂಡರ್ ಇರ್ಫಾನ್ ಪಠಾಣ್ ಮಾತನಾಡಿದ್ದು, ಕಿವೀಸ್ ವಿರುದ್ಧದ ಪಂದ್ಯದಲ್ಲಿ ಹಿಟ್ ಮ್ಯಾನ್ ಒಂದೇ ಒಂದು ತಪ್ಪು ಮಾಡಿದ್ದಾರೆ ಎಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ.

ಭಾರತದ ಬ್ಯಾಟರ್‌ ಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಪಠಾಣ್, ಇತ್ತೀಚೆಗೆ ನ್ಯೂಜಿಲೆಂಡ್ ಮತ್ತು ಟೀಂ ಇಂಡಿಯಾ ನಡುವೆ ಮುಕ್ತಾಯಗೊಂಡ 2ನೇ ಏಕದಿನ ಪಂದ್ಯದಲ್ಲಿ ಭಾರತದ ನಾಯಕ ಒಂದೇ ಒಂದು ತಪ್ಪು ಮಾಡಿದ್ದಾರೆ ಎಂಬುದನ್ನ ಸ್ಟಾರ್ ಸ್ಫೋರ್ಟ್ಸ್ ಗೆ ತಿಳಿಸಿದ್ದಾರೆ.

ರೋಹಿತ್ ಶರ್ಮಾ ಅವರು ಫಾರ್ಮ್ ಬಗ್ಗೆ ಹೆಚ್ಚು ಚಿಂತಿಸಬಾರದು ಎಂದು ನಾನು ಪದೇ ಪದೆ ಹೇಳುತ್ತಿದ್ದೇನೆ. ನ್ಯೂಜಿಲೆಂಡ್ ವಿರುದ್ಧ ಚೇಸಿಂಗ್ ಮಾಡುವಾಗ ಅವರ ಮೊದಲ ಅರ್ಧಶತಕ ಮತ್ತು ಇದು ಸರಿಯಾದ ಸಮಯದಲ್ಲಿ ಬಂದಿದೆ.

ಚೆಂಡು ಆತನ ಪ್ಯಾಡ್‌ಗೆ ತಾಗಿದಾಗ ರೋಹಿತ್ ಒಂದೇ ಒಂದು ತಪ್ಪು ಮಾಡಿದರು. ಅಲ್ಲಿ ಎಲ್ ಬಿ ಡಬ್ಲ್ಯೂ ಬಿದ್ದಾಗ ಅಪೀಲ್ ಮಾಡುವ ಅವಕಾಶ ಇತ್ತು, ಅವರು ಡಿಆರ್‌ಎಸ್ ತೆಗೆದುಕೊಳ್ಳಲು ಬಯಸಿದ್ದರೂ ತೆಗೆದುಕೊಳ್ಳಲಿಲ್ಲ. ಇದನ್ನು ಹೊರತುಪಡಿಸಿ, ಅವರು ಸಂಪೂರ್ಣ ನಿಯಂತ್ರಣದಲ್ಲಿದ್ದಾರೆ. ಆಫ್ ಸೈಡ್ ಮತ್ತು ಲೆಗ್ ಸೈಡ್‌ನಲ್ಲಿ ಅದ್ಭುತ ಹೊಡೆತಗಳನ್ನು ನೋಡುತ್ತಿದ್ದೇವೆ ಎಂದು ಪಠಾಣ್ ಸ್ಟಾರ್ ಸ್ಪೋರ್ಟ್ಸ್‌ ಜೊತೆ ಮಾತನಾಡುವಾಗ ಹೇಳಿದ್ದಾರೆ.

ರಾಯ್‌ಪುರದಲ್ಲಿ ನ್ಯೂಜಿಲೆಂಡ್ ವಿರುದ್ಧ 8 ವಿಕೆಟ್‌ಗಳ ಜಯ ಸಾಧಿಸಲು ಆತಿಥೇಯರ ವಿರುದ್ಧ ಆರಂಭಿಕ ರೋಹಿತ್ 50 ಎಸೆತಗಳಲ್ಲಿ 51 ರನ್ ಗಳಿಸಿ ಟೀಂ ಇಂಡಿಯಾದ ಅಗ್ರ ಸ್ಕೋರರ್ ಎನಿಸಿದರು.

ರಾಯ್‌ಪುರದಲ್ಲಿ ಜಗತ್ತಿನ ನಂಬರ್ ಒನ್ ಏಕದಿನ ತಂಡವಾದ ನ್ಯೂಜಿಲೆಂಡ್ ವಿರುದ್ಧ ರೋಹಿತ್ ಸೊಗಸಾದ ಅರ್ಧ ಶತಕವನ್ನು ಗಳಿಸಿರುವುದನ್ನು ನೋಡಿ ಸಂತಸಗೊಂಡಿರುವ ಮಾಜಿ ಆಲ್ ರೌಂಡರ್ ಪಠಾಣ್, ಮುಂಬರುವ ಪಂದ್ಯಗಳಲ್ಲಿ ಮತ್ತಷ್ಟು ಒಳ್ಳೆಯ ಬ್ಯಾಟಿಂಗ್ ಮೈಲಿಗಲ್ಲು ಸಾಧಿಸಲಿ ಎಂದು ಭಾರತ ತಂಡದ ನಾಯಕನಿಗೆ ಶುಭ ಕೋರಿದ್ದಾರೆ.

ಸ್ಕೋರ್‌ಬೋರ್ಡ್‌ನ ಒತ್ತಡ ಇಲ್ಲದಿದ್ದರೂ ರೋಹಿತ್ ಅರ್ಧಶತಕ ಗಳಿಸಿದ್ದಾರೆ. ಮುಂದೆ ಅವರಿಗೆ ಅವಕಾಶ ಸಿಕ್ಕರೆ, ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿರುವ ಕಾರಣ ಅವರು ಸಾಧನೆಯನ್ನು ಇನ್ನಷ್ಟು ದೊಡ್ಡದಾಗಿ ಮಾಡುತ್ತಾರೆ ಎಂದು ಇರ್ಫಾನ್ ಪಠಾಣ್ ಹೇಳಿದ್ದಾರೆ.