Team India Fined: ಕಿವೀಸ್ ವಿರುದ್ಧ ಮೊದಲ ಏಕದಿನ ಪಂದ್ಯ; ಟೀಂ ಇಂಡಿಯಾಗೆ ಭಾರಿ ದಂಡ!
ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾಗೆ ಭಾರಿ ದಂಡ ವಿಧಿಸಲಾಗಿದೆ. ನಾಯಕ ರೋಹಿತ್ ಶರ್ಮಾ ಸ್ಲೋ ಓವರ್ ರೇಟ್ ತಪ್ಪನ್ನು ಒಪ್ಪಿಕೊಂಡಿದ್ದಾರೆ.
ಹೈದರಾಬಾದ್: ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಗೆದ್ದು ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಹೈದರಾಬಾದ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಭಾರತ 12 ರನ್‌ಗಳಿಂದ ಕಿವೀಸ್ ತಂಡವನ್ನು ಸೋಲಿಸಿತ್ತು.
ಟ್ರೆಂಡಿಂಗ್ ಸುದ್ದಿ
ಆದರೆ ಈ ಪಂದ್ಯದಲ್ಲಿ ನಿಧಾನಗತಿಯ ಓವರ್ ರೇಟ್ ನಿಂದಾಗಿ ಭಾರತ ತಂಡಕ್ಕೆ ಐಸಿಸಿ ಭಾರಿ ದಂಡ ವಿಧಿಸಿದೆ. ನಾಯಕ ರೋಹಿತ್ ಶರ್ಮಾ ಜೊತೆಗೆ ತಂಡದ ಉಳಿದ ಆಟಗಾರರ ಪಂದ್ಯ ಶುಲ್ಕದಲ್ಲಿ ಶೇ.60ರಷ್ಟು ಕಡಿತಗೊಳಿಸಲಾಗಿದೆ.
ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ನಿಗದಿತ ಓವರ್ ಗಿಂತ ಮೂರು ಓವರ್ ಕಡಿಮೆ ಬೌಲಿಂಗ್ ಮಾಡಿತ್ತು. ಪ್ರತಿ ಓವರ್‌ಗೆ ಶೇ.20ರಷ್ಟು ಪಂದ್ಯ ಶುಲ್ಕ ಕಡಿತ. ಆ ಎಣಿಕೆಯಲ್ಲಿ ಮೂರು ಓವರ್‌ಗಳಿರುವುದರಿಂದ ಶೇ.60ರಷ್ಟು ದಂಡ ವಿಧಿಸಲಾಗಿದೆ ಎಂದು ಐಸಿಸಿ ಬಹಿರಂಗಪಡಿಸಿದೆ.
‘ಬುಧವಾರ ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ನಿಧಾನಗತಿಯ ಓವರ್ ರೇಟ್‌ನಿಂದಾಗಿ ನಾವು ಭಾರತ ತಂಡದ ಪಂದ್ಯ ಶುಲ್ಕವನ್ನು ಶೇ. 60 ರಷ್ಟು ಕಡಿತಗೊಳಿಸಿದ್ದೇವೆ.
ಮ್ಯಾಚ್ ರೆಫರಿಯಾಗಿ ಕಾರ್ಯನಿರ್ವಹಿಸಿದ ಜಾವಗಲ್ ಶ್ರೀನಾಥ್ ಈ ದಂಡ ವಿಧಿಸಿದ್ದಾರೆ. ನಿಗದಿತ ಸಮಯಕ್ಕಿಂತ ಮೂರು ಓವರ್‌ಗಳು ಬೌಲ್ ಆಗಿರುವುದು ಕಂಡುಬಂದಿದೆ ಎಂದು ಐಸಿಸಿ ಹೇಳಿಕೆಯಲ್ಲಿ ತಿಳಿಸಿದೆ.
ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಕೂಡ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಹೀಗಾಗಿ ತನಿಖೆಯ ಅಗತ್ಯವಿಲ್ಲ ಎಂದು ಹೇಳಿದೆ.
ಮೊದಲ ಏಕದಿನ ಪಂದ್ಯವನ್ನು ಗೆದ್ದು ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿರುವ ಟೀಂ ಇಂಡಿಯಾ ಇದೀಗ ರಾಯಪುರದಲ್ಲಿ ನಡೆಯಲಿರುವ ಎರಡನೇ ಏಕದಿನ ಪಂದ್ಯಕ್ಕೆ ಸಿದ್ಧತೆ ನಡೆಸಿದೆ. ಈಗಾಗಲೇ ಇತ್ತಂಡಗಳು ರಾಯಪುರಕ್ಕೆ ಆಗಮಿಸಿದ್ದು, ಅಭ್ಯಾಸ ನಡೆಸಿವೆ.
ಟೀಂ ಇಂಡಿಯಾ ನೀಡಿದ್ದ 350 ರನ್ ಗಳ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ ಗೆ ಟಾಪ್ ಬ್ಯಾಟರ್ ಗಳು ಕೈಕೊಟ್ಟರು. ಆದರೆ ಕೊನೆಯಲ್ಲಿ ಬ್ರೇಸ್‌ವೆಲ್ ಮತ್ತು ಸ್ಯಾಂಟ್ನರ್ ಗುರಿಯ ಸಮೀಪಕ್ಕೆ ಬಂದರೂ ಜಯ ಪಡೆಯಲು ಸಾಧ್ಯವಾಗಲಿಲ್ಲ.
ಒಂದು ಹಂತದಲ್ಲಿ ಕಿವೀಸ್ ಗೆಲ್ಲುತ್ತದೆ ಎಂದು ಎಲ್ಲರೂ ಭಾವಿಸಿದ್ದರು. ಕೊನೆಯ ಓವರ್‌ನಲ್ಲಿ 20 ರನ್‌ಗಳ ಅಗತ್ಯವಿದ್ದ ಬ್ರೇಸ್‌ವೆಲ್ ಮೊದಲ ಎಸೆತದಲ್ಲಿ ಸಿಕ್ಸರ್ ಬಾರಿಸಿದರು. ಆದರೂ ಶಾರ್ದೂಲ್ ಠಾಕೂರ್ ಅವರನ್ನು ಮುಂದಿನ ಎಸೆತದಲ್ಲಿ ಯಾರ್ಕರ್ ಮೂಲಕ ಔಟ್ ಮಾಡಿದರು. ಆ ಬಳಿಕ ಗೆಲುವು ಭಾರತದ ಪಾಲಾಯಿತು.