ಪದಕ ಬೇಟೆಯಾಡಿದ ಹುಬ್ಬಳ್ಳಿ ಶೂಟಿಂಗ್ ಅಕಾಡೆಮಿ; ಎರಡು ಚಿನ್ನ ಸೇರಿ 6 ಪದಕಕ್ಕೆ ಮುತ್ತಿಕ್ಕಿದ ಶೂಟರ್ಗಳು
Hubballi News: ಹುಬ್ಬಳ್ಳಿ ಶೂಟಿಂಗ್ ಅಕಾಡೆಮಿಯ ಶೂಟರ್ಗಳು 2 ಚಿನ್ನ ಸೇರಿ 6 ಪದಕಗಳನ್ನು ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಹುಬ್ಬಳ್ಳಿ: ಗೋವಾದಲ್ಲಿ ಇತ್ತೀಚೆಗೆ ‘ನ್ಯಾಷನಲ್ ರೈಪಲ್ ಅಸೋಸಿಯೇಷನ್ ಆಪ್ ಇಂಡಿಯಾ’ (ಎನ್ಆರ್ಎಐ) ಆಯೋಜಿಸಿದ್ದ ‘0832 ಇಂಡಿಯಾ ಓಪನ್ (ರೈಫಲ್/ಪಿಸ್ತೂಲ್) ಸ್ಪರ್ಧೆ’ಯಲ್ಲಿ 'ಹುಬ್ಬಳ್ಳಿ ಶೂಟಿಂಗ್ ಆಕಾಡೆಮಿಯ ಶೂಟರ್ಗಳು 2 ಚಿನ್ನ ಸೇರಿದಂತೆ ಒಟ್ಟು 6 ಪದಕ ಗೆದ್ದುಕೊಂಡಿದ್ದಾರೆ.
ಪ್ಯಾರಾ ಶೂಟರಗಳಾದ ಶಂಕರಲಿಂಗ ಬಟವಳಿ 50 ಮೀಟರ್ ಪ್ರೋನ್ ವಿಭಾಗದಲ್ಲಿ ಮತ್ತು ಚಿನ್ನ- 10 ಮೀಟರ್ ಸ್ಟಾಂಡಿಂಗ್ ವಿಭಾಗದಲ್ಲಿ -ಬೆಳ್ಳಿ ಗೆದ್ದಿದ್ದಾರೆ.
ಸಚಿನ್ ಸಿದ್ದಣ್ಣವರ ಅವರು 10 ಮೀಟರ್ ಸ್ಟ್ಯಾಂಡಿಂಗ್ ವಿಭಾಗದಲ್ಲಿ ಚಿನ್ನ ಮತ್ತು 50 ಮೀ ಪ್ರೋನ್ ವಿಭಾಗದಲ್ಲಿ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಪಿಸ್ತೂಲ್ (ಐಎಸ್ಎಸ್ಎಫ್) ಮಹಿಳಾ ಯೂತ್ ವಿಭಾಗದಲ್ಲಿ ಐಶ್ವರ್ಯ ಬಾಳೆಹೊಸೂರ್ 10 ಮೀ ಪಿಸ್ತೂಲ್ ವಿಭಾಗದಲ್ಲಿ ಬೆಳ್ಳಿ ಹಾಗೂ ಜಯಶ್ರೀ ಪಾಟೀಲ್ ಅವರು 50 ಮೀಟರ್ ಮಾಸ್ಟರ್ ಪ್ರಿಪಿಸ್ತೂಲ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದಾರೆ.
ಅಕಾಡೆಮಿಯ ಮುಖ್ಯ ಕೋಚ್ ಆದ ರವಿಚಂದ್ರ ಬಾಳೆಹೊಸೂರ್ ತಮ್ಮ ಶೂಟರ್ಗಳಾದ ಸಾಧನೆಗೆ ಹರ್ಷ ವ್ಯಕ್ತಪಡಿಸಿದ್ದು, ಮುಂದಿನ ಹಂತಕ್ಕೆ ತಯಾರಿ ನಡೆಸುವುದಾಗಿ ತಿಳಿಸಿದ್ದಾರೆ.