ಕನ್ನಡ ಸುದ್ದಿ  /  ಕ್ರೀಡೆ  /  ಫಿಫಾ ವಿಶ್ವಕಪ್​ ಅರ್ಹತಾ ಸುತ್ತಿನಲ್ಲಿ ಸೋಲು; ಭಾರತ ಫುಟ್ಬಾಲ್ ತಂಡದ ಹೆಡ್​ಕೋಚ್ ಸ್ಥಾನದಿಂದ ಇಗೊರ್ ಸ್ಟಿಮ್ಯಾಕ್ ವಜಾ

ಫಿಫಾ ವಿಶ್ವಕಪ್​ ಅರ್ಹತಾ ಸುತ್ತಿನಲ್ಲಿ ಸೋಲು; ಭಾರತ ಫುಟ್ಬಾಲ್ ತಂಡದ ಹೆಡ್​ಕೋಚ್ ಸ್ಥಾನದಿಂದ ಇಗೊರ್ ಸ್ಟಿಮ್ಯಾಕ್ ವಜಾ

Head Coach Igor Stimac Sacked : ಭಾರತೀಯ ಪುಟ್ಬಾಲ್ ತಂಡದ ಹೆಡ್​ಕೋಚ್ ಇಗೊರ್ ಸ್ಟಿಮ್ಯಾಕ್ ಅವರನ್ನು ಆಲ್​ ಇಂಡಿಯನ್ ಫುಟ್ಬಾಲ್ ಫೆಡರೇಷನ್ (AIFF) ವಜಾಗೊಳಿಸಿದೆ.

ಫಿಫಾ ವಿಶ್ವಕಪ್​ ಅರ್ಹತಾ ಸುತ್ತಿನಲ್ಲಿ ಸೋಲು; ಭಾರತ ಫುಟ್ಬಾಲ್ ತಂಡದ ಹೆಡ್​ಕೋಚ್​ನಿಂದ ಇಗೊರ್ ಸ್ಟಿಮ್ಯಾಕ್ ವಜಾ
ಫಿಫಾ ವಿಶ್ವಕಪ್​ ಅರ್ಹತಾ ಸುತ್ತಿನಲ್ಲಿ ಸೋಲು; ಭಾರತ ಫುಟ್ಬಾಲ್ ತಂಡದ ಹೆಡ್​ಕೋಚ್​ನಿಂದ ಇಗೊರ್ ಸ್ಟಿಮ್ಯಾಕ್ ವಜಾ

ನಿರಾಶಾದಾಯಕ ಫಿಫಾ ವಿಶ್ವಕಪ್ 2026 ಅರ್ಹತಾ (FIFA World Cup Qualifiers) ಅಭಿಯಾನದ ನಂತರ ಆಲ್​ ಇಂಡಿಯನ್ ಫುಟ್ಬಾಲ್ ಫೆಡರೇಷನ್ (All India Football Federation) ಜೂನ್ 17ರಂದು ಸೋಮವಾರ ಭಾರತೀಯ ಪುರುಷರ ಫುಟ್ಬಾಲ್ ತಂಡದ (Indian Football Team) ಮುಖ್ಯಕೋಚ್​ ಇಗೊರ್ ಸ್ಟಿಮ್ಯಾಕ್ (Igor Stimac Sacked) ಅವರನ್ನು ವಜಾಗೊಳಿಸಿದೆ. 1998ರ ಫಿಫಾ ವಿಶ್ವಕಪ್‌ನಲ್ಲಿ ಆಟಗಾರನಾಗಿ ಕಂಚಿನ ಪದಕ ಗೆದ್ದಿದ್ದ ಸ್ಟಿಮ್ಯಾಕ್, ಸ್ಟೀಫನ್ ಕಾನ್‌ಸ್ಟಂಟೈನ್ ನಿರ್ಗಮನದ ನಂತರ 2019ರ ಮೇ 15ರಂದು ಬ್ಲೂ ಟೈಗರ್ಸ್‌ ಜವಾಬ್ದಾರಿ ವಹಿಸಿಕೊಂಡಿದ್ದರು.

ಮುಖ್ಯಕೋಚ್​ ಇಗೊರ್ ಸ್ಟಿಮ್ಯಾಕ್ ಅವರ ಐದು ವರ್ಷಗಳ ಆಳ್ವಿಕೆ ಕೊನೆಗೊಂಡಿದೆ. ಅವರ ಮಾರ್ಗದರ್ಶನದಲ್ಲಿ ಫಿಫಾ ವಿಶ್ವಕಪ್ 2026 ಅರ್ಹತಾ ಪಂದ್ಯಗಳ ಮೂರನೇ ಸುತ್ತಿಗೆ ಭಾರತ ಪ್ರವೇಶಿಸಲು ವಿಫಲವಾಯಿತು. ಇಗೋರ್​ ಅಧಿಕಾರಾವಧಿಯಲ್ಲಿ ಭಾರತದ ಫಿಫಾ ಶ್ರೇಯಾಂಕವು 2019ರಲ್ಲಿ ನಡೆದ ಎಎಫ್​ಸಿ ಏಷ್ಯನ್ ಕಪ್ ನಂತರ 101 ತಲುಪಿತ್ತು. 2023ರಲ್ಲಿ 99ನೇ ಶ್ರೇಯಾಂಕ ಪಡೆಯಿತು. ಇದೀಗ 121ನೇ ಸ್ಥಾನಕ್ಕೆ ಕುಸಿದಿದೆ.

ಸ್ಟಿಮ್ಯಾಕ್‌ ಕೋಚಿಂಗ್ ಅಡಿಯಲ್ಲಿ ಭಾರತ ಗೆದ್ದಿದ್ದೆಷ್ಟು?

ತಕ್ಷಣವೇ ಜಾರಿಗೆ ಬರುವಂತೆ ಸ್ಟಿಮ್ಯಾಕ್‌ ಅವರನ್ನು ತಮ್ಮ ಜವಾಬ್ದಾರಿಗಳಿಂದ ಮುಕ್ತಿಗೊಳಿಸಲಾಗಿದೆ. ಸ್ಟಿಮ್ಯಾಕ್ ಅವರು ರಾಷ್ಟ್ರೀಯ ತಂಡಕ್ಕೆ ಸಲ್ಲಿಸಿದ ಸೇವೆಗಾಗಿ ಧನ್ಯವಾದ ಅರ್ಪಿಸುತ್ತೇವೆ ಮುಂದಿನ ಪ್ರಯತ್ನಗಳಲ್ಲಿ ಅವರಿಗೆ ಶುಭ ಹಾರೈಸುವುದಾಗಿ ಎಐಎಫ್ಎಫ್​ ವೆಬ್‌ಸೈಟ್‌ನಲ್ಲಿ ಹೇಳಿಕೆ ತಿಳಿಸಿದೆ. 56 ವರ್ಷದ ಸ್ಟಿಮ್ಯಾಕ್ ಅವರ ಕೋಚಿಂಗ್ ಅಡಿಯಲ್ಲಿ ಭಾರತ ತಂಡವು 53 ಪಂದ್ಯಗಳನ್ನು ಆಡಿದೆ.

ಟ್ರೆಂಡಿಂಗ್​ ಸುದ್ದಿ

ಈ ಪೈಕಿ 20 ಸೋಲು, 19 ಗೆಲುವು ಸಾಧಿಸಿದೆ. 14 ಪಂದ್ಯಗಳು ಡ್ರಾ ಸಾಧಿಸಿದ್ದು, ತಂಡವು 71 ಗೋಲು ಗಳಿಸಿದೆ. ಹಾಗೆಯೇ 76 ಗೋಲು ಬಿಟ್ಟುಕೊಟ್ಟಿದೆ. ಶೇ.35.8ರಷ್ಟು ಗೆಲುವಿನ ದಾಖಲೆಗೆ ಬಿಟ್ಟುಕೊಟ್ಟಿದೆ. ಈ ಐದು ವರ್ಷಗಳ ಅವಧಿಯಲ್ಲಿ ರಾಷ್ಟ್ರೀಯ ತಂಡದ ಅನೇಕ ವೈಫಲ್ಯಗಳ ಹೊರತಾಗಿಯೂ ವಿಶ್ವಕಪ್ ಅರ್ಹತಾ ಸುತ್ತಿನ ಮೂರನೇ ಸುತ್ತನ್ನು ತಲುಪಲು ಸಾಧ್ಯವಾಗದಿರುವುದು ಎಐಎಫ್ಎಫ್ ಕೆಂಗಣ್ಣಿಗೆ ಗುರಿಯಾಗಿತ್ತು.

ಸ್ಟಿಮ್ಯಾಕ್ ಅವರ ಮಾರ್ಗದರ್ಶನದಲ್ಲಿ 2 ಸ್ಯಾಫ್​ ಚಾಂಪಿಯನ್‌ಶಿಪ್‌, ಒಂದು ಇಂಟರ್‌ಕಾಂಟಿನೆಂಟಲ್ ಕಪ್ ಮತ್ತು ತ್ರಿ-ರಾಷ್ಟ್ರಗಳ ಸರಣಿ ಸೇರಿದಂತೆ 4 ಪ್ರಮುಖ ಟೂರ್ನಿ ಗೆದ್ದಿದೆ. ಈ ಸಾಧನೆ ಮಾಡಿದ ಭಾರತದ ಮೊದಲ ಕೋಚ್​ ಎನಿಸಿಕೊಂಡಿದ್ದಾರೆ. ಆದಾಗ್ಯೂ, ಭಾರತ ತಂಡವು ಈ ವರ್ಷ ಎಎಫ್‌ಸಿ ಏಷ್ಯನ್ ಕಪ್‌ನಲ್ಲಿ ಆಸ್ಟ್ರೇಲಿಯಾ, ಸಿರಿಯಾ ಮತ್ತು ಉಜ್ಬೇಕಿಸ್ತಾನ್ ವಿರುದ್ಧ ಸೋತಿತು.