ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ಕಬಡ್ಡಿ ವಿಶ್ವಕಪ್ ಅನಧಿಕೃತ ಎಂದ ಐಕೆಎಫ್; ಭಾರತ ತಂಡದ ವಿರುದ್ಧ ಕ್ರಮಕ್ಕೆ ಆಗ್ರಹ
ಕನ್ನಡ ಸುದ್ದಿ  /  ಕ್ರೀಡೆ  /  ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ಕಬಡ್ಡಿ ವಿಶ್ವಕಪ್ ಅನಧಿಕೃತ ಎಂದ ಐಕೆಎಫ್; ಭಾರತ ತಂಡದ ವಿರುದ್ಧ ಕ್ರಮಕ್ಕೆ ಆಗ್ರಹ

ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ಕಬಡ್ಡಿ ವಿಶ್ವಕಪ್ ಅನಧಿಕೃತ ಎಂದ ಐಕೆಎಫ್; ಭಾರತ ತಂಡದ ವಿರುದ್ಧ ಕ್ರಮಕ್ಕೆ ಆಗ್ರಹ

ಮಾರ್ಚ್ 17ರಿಂದ 23ರವರೆಗೆ ಇಂಗ್ಲೆಂಡ್‌ನ ವೆಸ್ಟ್ ಮಿಡ್ಲ್ಯಾಂಡ್‌ನಲ್ಲಿ ಕಬಡ್ಡಿ ವಿಶ್ವಕಪ್ 2025 ಆಯೋಜನೆಯಾಗಿದೆ. ಆದರೆ, ಇದು ಅಧಿಕೃತ ಟೂರ್ನಿ ಅಲ್ಲ ಎಂದು ಅಂತಾರಾಷ್ಟ್ರೀಯ ಕಬಡ್ಡಿ ಫೆಡರೇಶನ್ ಘೋಷಿಸಿದೆ. ಪಂದ್ಯಾವಳಿಯಲ್ಲಿ ಭಾಗವಹಿಸಲು ಹೋಗಿರುವ ಭಾರತ ತಂಡದ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಐಕೆಎಫ್ ಹೇಳಿದೆ.

ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ಕಬಡ್ಡಿ ವಿಶ್ವಕಪ್ ಅನಧಿಕೃತ ಎಂದ ಐಕೆಎಫ್; ಕ್ರಮಕ್ಕೆ ಆಗ್ರಹ
ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ಕಬಡ್ಡಿ ವಿಶ್ವಕಪ್ ಅನಧಿಕೃತ ಎಂದ ಐಕೆಎಫ್; ಕ್ರಮಕ್ಕೆ ಆಗ್ರಹ (@WolvesCouncil/X)

ಇಂಗ್ಲೆಂಡ್ ಆತಿಥ್ಯದಲ್ಲಿ ನಡೆಯುತ್ತಿರುವ ಕಬಡ್ಡಿ ವಿಶ್ವಕಪ್ ಪಂದ್ಯಾವಳಿಯು ಅಧಿಕೃತ ಟೂರ್ನಿ ಅಲ್ಲ ಎಂದು ಅಂತಾರಾಷ್ಟ್ರೀಯ ಕಬಡ್ಡಿ ಫೆಡರೇಶನ್ (ಐಕೆಎಫ್) ಬುಧವಾರ (ಮಾ. 19) ಘೋಷಿಸಿದೆ. ಇದೇ ವೇಳೆ ಪಂದ್ಯಾವಳಿಯಲ್ಲಿ ಭಾಗವಹಿಸಲು ಹೋಗಿರುವ ತಂಡದ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಕ್ರೀಡೆಯ ಭಾರತೀಯ ಉನ್ನತ ಸಂಸ್ಥೆಗೆ ಐಕೆಎಫ್ ಹೇಳಿದೆ. ಇಂಗ್ಲೆಂಡ್‌ನಲ್ಲಿ ಮಾರ್ಚ್ 17ರಂದು ಫುಟ್ಬಾಲ್‌ ವಿಶ್ವಕಪ್‌ ಹೆಸರಿನಲ್ಲಿ ಟೂರ್ನಿ ಆರಂಭವಾಗಿದ್ದು, ಮಾರ್ಚ್‌ 23ರವರೆಗೆ ನಡೆಯಲಿದೆ. ಈ ಪಂದ್ಯಾವಳಿಯನ್ನು ಇಂಗ್ಲೆಂಡ್ ಕಬಡ್ಡಿ ಅಸೋಸಿಯೇಷನ್ ಮತ್ತು ಬ್ರಿಟಿಷ್ ಕಬಡ್ಡಿ ಲೀಗ್ (ಬಿಕೆಎಲ್) ವಿಶ್ವ ಕಬಡ್ಡಿ ಫೆಡರೇಶನ್ ಆಶ್ರಯದಲ್ಲಿ ಆಯೋಜಿಸುತ್ತಿದೆ.

“ವಿಶ್ವ ಕಬಡ್ಡಿ ಫೆಡರೇಶನ್ ಎಂದು ತನ್ನನ್ನು ತಾನೇ ಕರೆದುಕೊಂಡಿರುವ ಫೆಡರೇಷನ್‌ ಆಶ್ರಯದಲ್ಲಿ ಯುಕೆಯಲ್ಲಿ ನಡೆಯುತ್ತಿರುವ ಕಬಡ್ಡಿ ವಿಶ್ವಕಪ್ 2025 ಹೇಳಲಾಗಿರುವ ಪಂದ್ಯಾವಳಿಯನ್ನು ಒಲಿಂಪಿಕ್ ಕೌನ್ಸಿಲ್ ಆಫ್ ಏಷ್ಯಾ (ಒಸಿಎ) ಗುರುತಿಸಿರುವಂತೆ ಕಬಡ್ಡಿ ಕ್ರೀಡೆಯ ಅಂತಾರಾಷ್ಟ್ರೀಯ ಆಡಳಿತ ಮಂಡಳಿಯಾದ ಅಂತಾರಾಷ್ಟ್ರೀಯ ಕಬಡ್ಡಿ ಫೆಡರೇಶನ್ ಅಧಿಕೃತಗೊಳಿಸಿಲ್ಲ,” ಎಂದು ಐಕೆಎಫ್ ಹೇಳಿಕೆಯಲ್ಲಿ ತಿಳಿಸಿದೆ.

ಒಸಿಎ, ಐಕೆಎಫ್ ಮತ್ತು ಏಷ್ಯನ್ ಕಬಡ್ಡಿ ಫೆಡರೇಶನ್ (ಎಕೆಎಫ್) 1990ರಿಂದ ಏಷ್ಯನ್ ಕ್ರೀಡಾಕೂಟದಲ್ಲಿ ಪುರುಷರು ಮತ್ತು ಮಹಿಳೆಯರಿಗೆ ಕಬಡ್ಡಿ ಪದಕ ಸ್ಪರ್ಧೆ ಮತ್ತು ಇತರ ಅಂತಾರಾಷ್ಟ್ರೀಯ ಕಬಡ್ಡಿ ಪಂದ್ಯಾವಳಿಗಳ ನಿರ್ವಹಣೆಯ ಮೇಲ್ವಿಚಾರಣೆ ನಡೆಸುತ್ತವೆ. 2020ರಲ್ಲಿ ಕಬಡ್ಡಿ ವಿಶ್ವಕಪ್‌ನಲ್ಲಿ ಭಾಗವಹಿಸಲು 'ಭಾರತೀಯ ತಂಡ' ಪಾಕಿಸ್ತಾನಕ್ಕೆ ಭೇಟಿ ನೀಡಿದಾಗ ಇದೇ ರೀತಿಯ ಘಟನೆ ನಡೆದಿತ್ತು. ಅಮೆಚೂರ್ ಕಬಡ್ಡಿ ಫೆಡರೇಶನ್ ಆಫ್ ಇಂಡಿಯಾ (ಎಕೆಎಫ್ಐ) ಮತ್ತು ಕ್ರೀಡಾ ಸಚಿವಾಲಯವು ಪಂದ್ಯಾವಳಿಗೆ ತೆರಳಲು ಯಾವುದೇ ತಂಡವನ್ನು ಅಂತಿಮಗೊಳಿಸಿಲ್ಲ ಎಂದು ಹೇಳಿತ್ತು.

ಚುನಾಯಿತ ಸಂಸ್ಥೆ ಇಲ್ಲ

ಕುತೂಹಲಕಾರಿ ಸಂಗತಿಯೆಂದರೆ, 2018ರಿಂದ ಭಾರತೀಯ ಒಕ್ಕೂಟವು ಕಬಡ್ಡಿಗೆ ಚುನಾಯಿತ ಸಂಸ್ಥೆಯನ್ನು ಹೊಂದಿಲ್ಲದ ಕಾರಣ ಎಕೆಎಫ್ಐ ಅನ್ನು 2024ರಲ್ಲಿ ಐಕೆಎಫ್ ಅಮಾನತುಗೊಳಿಸಿದೆ. ನ್ಯಾಯಾಲಯದಿಂದ ನೇಮಕಗೊಂಡ ಆಡಳಿತಾಧಿಕಾರಿಯಾಗಿರುವ (ನಿವೃತ್ತ) ನ್ಯಾಯಮೂರ್ತಿ ಎಸ್ ಪಿ ಗರ್ಗ್ ಅವರು ಈಗ ಐದು ವರ್ಷಗಳಿಂದ ಸಂಸ್ಥೆಯ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಇತ್ತೀಚೆಗಷ್ಟೇ, ಎಕೆಎಫ್ಐ ಆಡಳಿತವನ್ನು ಚುನಾಯಿತ ಸಂಸ್ಥೆಗೆ ಹಸ್ತಾಂತರಿಸುವಂತೆ ಸುಪ್ರೀಂ ಕೋರ್ಟ್ ಗರ್ಗ್ ಅವರನ್ನು ಕೇಳಿತ್ತು.

ಭಾರತ ತಂಡವನ್ನು ಎಕೆಎಫ್ಐ ಕಳುಹಿಸಿಲ್ಲ

ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ಕಬಡ್ಡಿ ವಿಶ್ವಕಪ್‌ಗೆ ತೆರಳಿರುವ ಭಾರತೀಯ ತಂಡವನ್ನು ಕ್ರೀಡೆಯ ರಾಷ್ಟ್ರೀಯ ಸಂಸ್ಥೆಯಾದ ಎಕೆಎಫ್ಐ ಕಳುಹಿಸಿಲ್ಲ ಎಂದು ಐಕೆಎಫ್ ಹೇಳಿದೆ. "ಒಸಿಎ, ಐಕೆಎಫ್, ಎಕೆಎಫ್ ಮತ್ತು ಅಮೆಚೂರ್ ಕಬಡ್ಡಿ ಫೆಡರೇಶನ್ ಆಫ್ ಇಂಡಿಯಾ (ಎಕೆಎಫ್ಐ) ವಿಶ್ವ ಕಬಡ್ಡಿ ಫೆಡರೇಶನ್ ಅಥವಾ ಅದರ ಯಾವುದೇ ಚಟುವಟಿಕೆಗಳೊಂದಿಗೆ ಯಾವುದೇ ವ್ಯವಹಾರ ಹೊಂದಿಲ್ಲ. ಯುನೈಟೆಡ್ ಕಿಂಗ್‌ಡಮ್‌ನಲ್ಲಿ ನಡೆಯುವ ಕಬಡ್ಡಿ ವಿಶ್ವಕಪ್‌ನಲ್ಲಿ ಭಾರತ ತಂಡ ಎಂದು ಹೇಳಿಕೊಂಡಿರುವ ತಂಡವು ಭಾರತದಲ್ಲಿ ಕಬಡ್ಡಿ ಕ್ರೀಡೆಯ ಅಧಿಕೃತವಾಗಿ ಮಾನ್ಯತೆ ಪಡೆದ ರಕ್ಷಕ ಸಂಸ್ಥೆಯಾದ ಎಕೆಎಫ್ಐನಿಂದ ಯಾವುದೇ ಅನುಮತಿ ಅಥವಾ ಮಾನ್ಯತೆಯನ್ನು ಹೊಂದಿಲ್ಲ ಎಂದು ಐಕೆಎಫ್‌ಗೆ ಎಕೆಎಫ್ಐ ತಿಳಿಸಿದೆ.

Jayaraj

TwittereMail
ಜಯರಾಜ್‌ ಅಮಿನ್: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್‌ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಈಟಿವಿ ಭಾರತ್, ಇನ್‌ಶಾರ್ಟ್ಸ್‌ ವಿವಿಧ ವಿಭಾಗಗಳಲ್ಲಿ ಒಟ್ಟು 6 ವರ್ಷಗಳ ಅನುಭವ. ಕಲೆ, ಸಾಹಿತ್ಯ, ಭೂಗೋಳದ ಬಗ್ಗೆ ಹೆಚ್ಚು ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಹೊಸಮೊಗ್ರು ನಿವಾಸಿ.
Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.