Raina on MS Dhoni: 'ನಾನು ಮೊದಲು ಮಾಹಿಗಾಗಿ ಆಡಿದ್ದೇನೆ, ನಂತರ ನನ್ನ ದೇಶಕ್ಕಾಗಿ ಆಡಿದೆ'; ರೈನಾ ಅಚ್ಚರಿಯ ಹೇಳಿಕೆ
ರೈನಾ ಅವರು ನಿವೃತ್ತಿ ಘೋಷಿಸಿದ ವಯಸ್ಸು ದೊಡ್ಡದೇನಲ್ಲ. ಹೀಗಾಗಿ ಅವರ ನಿರ್ಧಾರವು ಅಭಿಮಾನಿಗಳನ್ನು ದಿಗ್ಭ್ರಮೆಗೊಳಿಸಿತು. ಇವರಿಬ್ಬರೂ ನಿವೃತ್ತಿಯಾಗಿ ಎರಡು ವರ್ಷಗಳು ಕಳೆದಿವೆ. ಇದೀಗ ರೈನಾ ತಮ್ಮ ಅಂತಾರಾಷ್ಟ್ರೀಯ ವೃತ್ತಿಜೀವನವನ್ನು ಕೊನೆಗೊಳಿಸುವ ತಮ್ಮ ನಿರ್ಧಾರದ ಬಗ್ಗೆ ಹೇಳಿಕೊಂಡಿದ್ದಾರೆ.
ಅದು 2020ರ ಆಗಸ್ಟ್ 15. ಸಂಜೆ ವೇಳೆ ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ದಿಢೀರನೆ ಇನ್‌ಸ್ಟಾಗ್ರಾಮ್ ಪೋಸ್ಟ್ ಮೂಲಕ ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿಯನ್ನು ನೀಡಿದರು. ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸುವುದಾಗಿ ಹೇಳಿದರು. ಇದು ಭಾರತದ ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿಯಾಗಿದ್ದರೆ, ಧೋನಿ ನಿವೃತ್ತಿಯ ಬೆನ್ನಲ್ಲೇ ಬಂದ ಮತ್ತೊಂದು ಸುದ್ದಿ ಅಭಿಮಾನಿಗಳಿಗೆ ಅಚ್ಚರಿಯ ಮೇಲೆ ಅಚ್ಚರಿ ಮೂಡಿಸಿತ್ತು. ಅದುವೇ ಸುರೇಶ್ ರೈನಾ ಅವರ ಪೋಸ್ಟ್.
ಧೋನಿ ಅವರು ಸಾಮಾಜಿಕ ಮಾಧ್ಯಮದಲ್ಲಿ ನಿವೃತ್ತಿ ಘೋಷಿಸಿದ ಸರಿಸುಮಾರು 30 ನಿಮಿಷಗಳ ಬಳಿಕ ಬಂದ ಆ ಸುದ್ದಿ ತೀರಾ ಅನಿರೀಕ್ಷಿತ. ಆ ಸಮಯದಲ್ಲಿ 33 ವರ್ಷ ವಯಸ್ಸಿನವರಾಗಿದ್ದ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅವಿಭಾಜ್ಯ ಅಂಗವಾಗಿದ್ದ ಸುರೇಶ್ ರೈನಾ ಕೂಡಾ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು. ತಮ್ಮ ಮಾರ್ಗದರ್ಶಕನ ಹಾದಿಯಲ್ಲೇ ರೈನಾ ಕೂಡಾ ಸಾಗಿದರು. ಅದಕ್ಕೂ ಮುಂಚೆ ಸುರೇಶ್ ರೈನಾ 2018ರಲ್ಲಿ ಇಂಗ್ಲೆಂಡ್ ವಿರುದ್ಧದ ಏಕದಿನ ಪಂದ್ಯದದಲ್ಲಿ ಕೊನೆಯ ಬಾರಿಗೆ ಭಾರತ ತಂಡದಲ್ಲಿ ಕಾಣಿಸಿಕೊಂಡಿದ್ದರು.
ರೈನಾ ಅವರು ನಿವೃತ್ತಿ ಘೋಷಿಸಿದ ವಯಸ್ಸು ದೊಡ್ಡದೇನಲ್ಲ. ಹೀಗಾಗಿ ಅವರ ನಿರ್ಧಾರವು ಅಭಿಮಾನಿಗಳನ್ನು ದಿಗ್ಭ್ರಮೆಗೊಳಿಸಿತು. ಇವರಿಬ್ಬರೂ ನಿವೃತ್ತಿಯಾಗಿ ಎರಡು ವರ್ಷಗಳು ಕಳೆದಿವೆ. ಇದೀಗ ರೈನಾ ತಮ್ಮ ಅಂತಾರಾಷ್ಟ್ರೀಯ ವೃತ್ತಿಜೀವನವನ್ನು ಕೊನೆಗೊಳಿಸುವ ತಮ್ಮ ನಿರ್ಧಾರದ ಬಗ್ಗೆ ಹೇಳಿಕೊಂಡಿದ್ದಾರೆ. ಈ ಬಗ್ಗೆ ಸ್ಪೋರ್ಟ್ಸ್ ಟಾಕ್‌ಗೆ ನೀಡಿದ ಸಂದರ್ಶನದ ವೇಳೆ, ಧೋನಿ ಅವರ ಘೋಷಣೆಯ ಬೆನ್ನಲ್ಲೇ ರೈನಾ ಅವರ ನಿವೃತ್ತಿಯ ಹಿಂದಿನ ಕಾರಣವನ್ನು ಕೇಳಲಾಯಿತು.
"ನಾವು ಒಟ್ಟಿಗೆ ಹಲವು ಪಂದ್ಯಗಳಲ್ಲಿ ಆಡಿದ್ದೇವೆ. ಭಾರತ ಮತ್ತು ಸಿಎಸ್‌ಕೆ ತಂಡದ ಪರ ಧೋನಿ ಅವರೊಂದಿಗೆ ಆಡಲು ನಾನು ತುಂಬಾ ಅದೃಷ್ಟಶಾಲಿಯಾಗಿದ್ದೆ. ನಮಗೆ ಅಭಿಮಾನಿಗಳಿಂದ ಅತೀವ ಪ್ರೀತಿ ಸಿಕ್ಕಿತು. ನಾನು ಗಾಜಿಯಾಬಾದ್‌ನವನು, ಧೋನಿ ರಾಂಚಿಯವರು. ನಾನು ಮೊದಲು ಮಾಹಿಗಾಗಿ ಆಡಿದ್ದೆ, ನಂತರ ದೇಶಕ್ಕಾಗಿ ಆಡಿದ್ದೇನೆ. ಅದು ನಮ್ಮಿಬ್ಬರ ನಡುವಿನ ಬಂಧ. ನಾವು ಅನೇಕ ಫೈನಲ್ ಪಂದ್ಯಗಳಲ್ಲಿ ಆಡಿದ್ದೇವೆ. ವಿಶ್ವಕಪ್ ಗೆದ್ದಿದ್ದೇವೆ. ಅವರೊಬ್ಬ ಮಹಾನ್ ನಾಯಕ ಮತ್ತು ಅತ್ಯದ್ಭುತ ವ್ಯಕ್ತಿ,” ಎಂದು ರೈನಾ ವಿವರಿಸಿದ್ದಾರೆ.
ರೈನಾ ಕೊನೆಯದಾಗಿ 2021ರ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಕೊನೆಯ ಬಾರಿಗೆ ಆಡಿದ್ದರು. ಅವರು 2022ರಲ್ಲೂ ಐಪಿಎಲ್‌ನಲ್ಲಿ ಆಡುವ ಇರಾದೆಯಿಂದ ಮೆಗಾ ಹರಾಜಿನಲ್ಲಿ ಹೆಸರು ನೋಂದಾಯಿಸಿಕೊಂಡಿದ್ದರು. ಅವರ ಮೂಲ ಬೆಲೆ 2 ಕೋಟಿಗೆ ಖರೀದಿಸಲು ಯಾವುದೇ ಫ್ರಾಂಚೈಸಿಗಳು ಮುಂದಾಗಲಿಲ್ಲ. ಅಲ್ಲಿಗೆ ಅವರ ದೇಶೀಯ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನ ಅಂತ್ಯವಾಯ್ತು.
ಭಾರತದ 2011ರ ವಿಶ್ವಕಪ್ ವಿಜಯದಲ್ಲಿ ರೈನಾ ಪ್ರಮುಖ ಪಾತ್ರ ವಹಿಸಿದ್ದರು. ಕೆಳ ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಕೊಡುಗೆ ನೀಡಿದ್ದರು. ತಮ್ಮ 13 ವರ್ಷಗಳ ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ ಸ್ಟಾರ್ ಎಡಗೈ ಬ್ಯಾಟರ್ 18 ಟೆಸ್ಟ್, 226 ಏಕದಿನ ಹಾಗೂ 78 ಟಿ20 ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ.
ಇದನ್ನೂ ಓದಿ
R Sridhar: 'ಭಾರತದಲ್ಲಿ ರೋಹಿತ್ ಬಣ ಮತ್ತು ಕೊಹ್ಲಿ ಬಣವಿತ್ತು; ಶಾಸ್ತ್ರಿ ಇಬ್ಬರನ್ನೂ ಕರೆದು ಬುದ್ಧಿ ಹೇಳಿದರು'; ಮಾಜಿ ಕೋಚ್ ಹೇಳಿದ್ದೇನು?
ರೋಹಿತ್ ಹಾಗೂ ಕೊಹ್ಲಿ ನಡುವಿನ ಸಂಬಂಧ ಸ್ವಲ್ಪಮಟ್ಟಿಗೆ ಹಳಸಿತ್ತು ಎಂಬ ಬಗ್ಗೆ ಮಾಹಿತಿ ಲಭಿಸಿದೆ. ಈ ಬಗ್ಗೆ ಭಾರತದ ಮಾಜಿ ಫೀಲ್ಡಿಂಗ್ ಕೋಚ್ ಆರ್ ಶ್ರೀಧರ್ ಅವರು ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ. ರೋಹಿತ್ ಮತ್ತು ಕೊಹ್ಲಿ ನಡುವಿನ ಸ್ನೇಹ ಸಂಬಂಧ ಹೇಗೆ ಹಳಸಿತು ಎಂಬುದನ್ನು ಅವರು ಬಹಿರಂಗಪಡಿಸಿದ್ದಾರೆ. ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ